ETV Bharat / sukhibhava

ಬಾಲ್ಯದಲ್ಲಿ ಮಿದುಳಿನ ಬೆಳವಣಿಗೆ ಕುಂಠಿತಕ್ಕೆ ಬಡತನ ಕಾರಣ: ಓದುವಿಕೆಯೇ ಇದಕ್ಕೆ ಔಷಧ

author img

By

Published : Jul 6, 2023, 12:42 PM IST

ಬಡತನದಿಂದಾಗಿ ಅಗತ್ಯ ಪೋಷಕಾಂಶಗಳು ಸಿಗದೇ ಇರುವುದು, ಕುಟುಂಬದ ಹಣಕಾಸಿನ ಸಮಸ್ಯೆಯ ಒತ್ತಡಗಳು ಬಾಲ್ಯದಲ್ಲೇ ಮಕ್ಕಳ ಮಿದುಳಿನ ಅಭಿವೃದ್ಧಿ ಮೇಲೆ ಪರಿಣಾಮ ಬೀರುತ್ತವೆ.

Poverty hamper Brain Development in early age

ಕೇಂಬ್ರಿಡ್ಜ್​: ಬಾಲ್ಯ ಮಿದುಳಿನ ಬೆಳವಣಿಗೆಯ ನಿರ್ಣಾಯಕ ಹಂತ. ಇದು ಅರಿವು ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಉತ್ತೇಜನ ನೀಡುವಲ್ಲಿ ಪ್ರಮುಖವಾಗಿದೆ. ಉತ್ತಮ ಮಿದುಳಿನ ಆರೋಗ್ಯ ನೇರವಾಗಿ ಉತ್ತಮ ಮಾನಸಿಕ ಆರೋಗ್ಯದೊಂದಿಗೆ ಸಂಬಂಧ ಹೊಂದಿದೆ. ಇದು ಒತ್ತಡದ ಸಮಯದಲ್ಲಿ ಸ್ಥಿತಿಸ್ಥಾಪಕತ್ವ ನಿರ್ವಹಣೆಗೆ ಕೂಡ ಕಾರಣವಾಗುತ್ತದೆ.

ಆದರೆ, ಬಡತನದ ಪರಿಣಾಮಕ್ಕೆ ಮಿದುಳಿನ ಬೆಳವಣಿಗೆ ಕುಂಠಿತವಾಗುತ್ತದೆ. ಬಾಲ್ಯದಲ್ಲಿ ಬಡತನದ ಅಪಾಯಗಳು ಮಕ್ಕಳು ಕಡಿಮೆ ಶಿಕ್ಷಣ ಹೊಂದಲು ಕಾರಣವಾಗುತ್ತದೆ. ಇದು ಮಿದುಳಿನ ವಿನ್ಯಾಸ, ಅರಿವಿನ ದುರ್ಬಲತೆ, ನಡವಳಿಕೆಗಳ ಸಮಸ್ಯೆ ಮತ್ತು ಮಾನಸಿಕ ಆರೋಗ್ಯ ಗುಣಲಕ್ಷಣಗಳೊಂದಿಗೆ ಸಂಬಂಧ ಹೊಂದಿದೆ.

ಎಲ್ಲ ಮಕ್ಕಳಿಗೆ ಜೀವನದಲ್ಲಿ ಒಂದೇ ರೀತಿಯ ಅವಕಾಶ ನೀಡುವುದು ಎಷ್ಟು ಮುಖ್ಯ ಎಂಬುದನ್ನು ಇದು ತೋರಿಸುತ್ತದೆ. ಅಸಮಾನತೆಯನ್ನು ತೊಡೆದು ಹಾಕಿ ಉತ್ತಮ ಫಲಿತಾಂಶ ಬರಲು ಸರಿಯಾದ ಮಾಪನಗಳನ್ನು ಅನುಸರಿಸಬೇಕು ಎಂದು ನಮ್ಮ ಅಧ್ಯಯನ ತಿಳಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನವನ್ನು ಸೈಕಾಲಾಜಿಕಲ್​ ಮೆಡಿಸಿನ್ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ. ಬಡತನದಿಂದಾಗುವ ನಕಾರಾತ್ಮಕತೆಯನ್ನು ಕಡಿಮೆ ಮಾಡುವುದರಲ್ಲಿ ಓದುವಿಕೆ ಒಳ್ಳೆಯದು ಎಂದು ಅಧ್ಯಯನ ಕಂಡುಕೊಂಡಿದೆ.

ಸಂಪತ್ತು ಮತ್ತು ಮಿದುಳಿನ ಆರೋಗ್ಯ: ಅಧಿಕ ಆದಾಯದ ಕುಟುಂಬಗಳ ಮಕ್ಕಳು ಭಾಷೆಗಳು ಗ್ರಹಿಕೆ, ಸ್ಮರಣೆ, ಸಾಮಾಜಿಕ ಮತ್ತು ಭಾವನಾತ್ಮಕ ವಿಚಾರದ ಪ್ರಕ್ರಿಯೆಯಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಮಿದುಳಿನ ಹೊರ ಪದರವಾದ ಕಾರ್ಟೆಕ್ಸ್​ ದೊಡ್ಡ ಪದಗಳು ಉತ್ತಮ ಸಾಮಾಜಿಕ ಆರ್ಥಿಕ ಸ್ಥಿತಿ ಹೊಂದಿರುವ ಮಕ್ಕಳಿಗಿಂತ ಬಡ ಮಕ್ಕಳಕಲ್ಲಿ ಹೆಚ್ಚು ದಪ್ಪವಾಗಿದೆ. ಸಂಪತ್ತು ಕೂಡ ಗ್ರೇ ಮ್ಯಾಟರ್​​ ಅಂದರೆ ಮಿದುಳಿ ಹೊರ ಪದರದ ಟಿಶ್ಯೂನೊಂದಿಗೆ ಸಂಬಂಧ ಹೊಂದಿದೆ. ಇದು ಮಿದುಳಿನ ತಾತ್ಕಾಲಿಕ ಮತ್ತು ಮುಂಭಾಗದ ಪ್ರದೇಶವಾಗಿದೆ. ಇದು ಅರಿವಿನ ಕೌಶಲ್ಯ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ. ಸಂಪತ್ತು ಮತ್ತು ಅರಿವಿನ ಸಂಬಂಧವೂ ಬಡ ಕುಟುಂಬದಲ್ಲಿ ಹೆಚ್ಚಿದೆ. ಕಡಿಮೆ ಆದಾಯದ ಕುಟುಂಬದ ಮಕ್ಕಳಲ್ಲಿ ಈ ಹೊರಪದರ ಪ್ರದೇಶದಲ್ಲಿ ದೊಡ್ಡ ವ್ಯತ್ಯಾಸ ಕಾಣಬಹುದು. ಅಧಿಕ ಆದಾಯದ ಕುಟುಂಬದಲ್ಲಿ ಆದಾಯದ ಅಂಶವೂ ಅದೇ ರೀತಿ ಹೊರ ಪದರ ಪ್ರದೇಶದ ಸಣ್ಣ ವ್ಯತ್ಯಾಸವನ್ನು ಕಾಣಬಹುದು.

ಪ್ರಮುಖವಾಗಿ, ಅಧ್ಯಯನದ ಫಲಿತಾಂಶವೊಂದರಲ್ಲಿ ಕಡಿಮೆ ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ತಾಯಿ ತಮ್ಮ ಮಾಸಿಕ ಹಣದಿಂದ ಮಕ್ಕಳಿಗೆ ಉಡುಗೊರೆ ನೀಡಿದಾಗ ಮಗುವಿನ ಮಿದುಳು ಆರೋಗ್ಯದಲ್ಲಿ ಅಭಿವೃದ್ಧಿ ಕಂಡಿದೆ ಎಂದು ತಿಳಿದು ಬಂದಿದೆ. ಸರಾಸರಿ, ಬದಲಾಗುವುದು ಮಿದುಳು (ಪ್ಲಾಸ್ಟಿಸಿಟಿ)ಯಲ್ಲಿ ಪರಿಸರದ ಹೊಂದಾಣಿಕೆಯ ಅಭಿವೃದ್ಧಿ ಕಾಣಬಹುದು. ಇದು ಸುಲಭವಾಗಿ ಅರಿವಿನ ಕೌಶಲ್ಯ ಸುಧಾರಿಸುವುದು ಕಂಡುಬಂದಿದೆ.

ಆತ್ಮಸ್ಥೈರ್ಯವೂ ಕುಂಠಿತ: ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ನಮ್ಮ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ. ಲಂಡನ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ ವರದಿಯಲ್ಲಿ, ಬಡತನ ಜನರು ತಕ್ಷಣದ ಅವಶ್ಯಕತೆ, ಬೆದರಿಕೆಯಿಂದ ತಮ್ಮ ಗಮನವನ್ನು ಬದಲಾಯಿಸುವುದು ಕಂಡುಬಂದಿದೆ. ಅವರು ಭವಿಷ್ಯದ ಯೋಜನೆಗಿಂತ ಇಂದಿನ ಯೋಜನೆಗೆ ಹೆಚ್ಚು ಗಮನ ಹರಿಸುತ್ತಾರೆ. ಅಲ್ಲದೇ, ಅವರು ಅಪಾಯವನ್ನು ಎದುರಿಸಲು ಹೆಚ್ಚು ಹಿಂಜರಿಯುತ್ತಾರೆ. ಕಡಿಮೆ ಸಾಮಾಜಿಕ ಆರ್ಥಿಕ ಕುಟುಂಬದ ಮಕ್ಕಳು ಕಡಿಮೆ ಆತ್ಮಸ್ಥೈರ್ಯ ಹೊಂದಿರುವುದು ಗೊತ್ತಾಗಿದೆ.

ಓದುವಿಕೆಯಿಂದ ತೃಪ್ತಿ: ಬಾಲ್ಯದಲ್ಲಿ ಓದುವಿಕೆ ಅಭ್ಯಾಸವೂ ಸಕಾರಾತ್ಮಕತೆಯೊಂದಿಗೆ ಸಂಬಂಧ ಹೊಂದಿದ್ದು, ಇದು ತೃಪ್ತಿ ಮತ್ತು ಉತ್ತಮ ಅರಿವು, ಮಾನಸಿಕ ಆರೋಗ್ಯ, ಹದಿಹರೆಯದಲ್ಲಿ ಶೈಕ್ಷಣಿಕ ಸಾಧನೆಯೊಂದಿಗೆ ಸಂಬಂದ ಹೊಂದಿದೆ. ಹದಿಹರೆಯದವರ ಮಿದುಳು ಮತ್ತು ಅರಿವಿನ ಅಭಿವೃದ್ಧಿ ಯೋಜನೆಯಡಿ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ಅಮೆರಿಕದ ರಾಷ್ಟ್ರೀಯ ಸಮೂಹ ಅಧ್ಯಯನವು ವಿವಿಧ ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ಮತ್ತು ವಿಭಿನ್ನ ಜನಾಂಗೀಯತೆಯ 10 ಸಾವಿರ ಭಾಗಿದಾರರನ್ನು ಒಳಗೊಂಡಿದೆ. 9ರಿಂದ 13 ವರ್ಷದ ಯುವ ಹದಿಹರೆಯದವರ ದತ್ತಾಂಶದ ಮಾಪನವನ್ನು ಇದು ಒಳಗೊಂಡಿದೆ. ಇದರಲ್ಲಿ ಬಾಲ್ಯದಲ್ಲಿ ಅವರು ಎಷ್ಟು ವರ್ಷಗಳ ಕಾಲ ಓದುವಿಕೆ ತೃಪ್ತಿ ಅನುಭವಿಸಿದರು ಎಂಬ ಮಾಪನ ನಡೆಸಲಾಗಿದೆ.

ಇದನ್ನೂ ಓದಿ: ಅತಿಯಾದ ಆ್ಯಂಟಿಬಯೋಟಿಕ್​ ಬಳಕೆಯಿಂದ ಗಂಭೀರ ಅಡ್ಡ ಪರಿಣಾಮ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.