ನ್ಯೂಯಾರ್ಕ್: ಅಮೆರಿಕದ ನಾಯಿಗಳಲ್ಲಿ ನಿಗೂಢ ಉಸಿರಾಟ ಸಮಸ್ಯೆಗೆ ಪ್ರಮುಖ ಕಾರಣ ವಿಚಿತ್ರ ಬ್ಯಾಕ್ಟೀರಿಯಾ ಆಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಮೆರಿಕದೆಲ್ಲೆಡೆ ಅನೇಕ ಶ್ವಾನಗಳು ನಿಗೂಢವಾದ ಶ್ವಾಸಕೋಶದ ಅನಾರೋಗ್ಯಕ್ಕೆ ಒಳಗಾಗಿವೆ.
ಈ ಅನಾರೋಗ್ಯದಿಂದ ಕೆಲವು ನಾಯಿಗಳು ಸಾವನ್ನಪ್ಪಿವೆ. ಈ ಸಮಸ್ಯೆ ಕಾಣಿಸಿಕೊಂಡ ನಾಯಿಗಳಲ್ಲಿ ವಾರಗಳ ಕಾಲ ಕೆಮ್ಮೆ, ಕಣ್ಣಿನಲ್ಲಿ ನೀರು ಮತ್ತು ಸೀನುವಿಕೆ ಲಕ್ಷಣಗಳು ಗೋಚರವಾಗಿವೆ.
ಈ ಸಂಬಂದ ಯುಕೆಯ ನ್ಯೂ ಹ್ಯಾಂಪ್ಸೈರ್ ಯುನಿವರ್ಸಿಟಿ ಸಂಶೋಧಕರು ಅಧ್ಯಯನ ನಡೆಸಿದ್ದು, ಇದಕ್ಕೆ ಕಾರಣ ಬ್ಯಾಕ್ಟೀರಿಯಾ ಸೋಂಕು ಆಗಿದೆ ಎಂದಿದ್ದಾರೆ. ಇದು ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗಿದ್ದು, ನಾಯಿಗಳ ಪ್ರತಿರಕ್ಷಣಾ ವ್ಯವಸ್ಥೆಗೆ ಅಡ್ಡಿ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.
ಕಳೆದ ವರ್ಷ ಸೋಂಕಿಗೆ ಒಳಗಾಗಿದ್ದ 30 ನಾಯಿಗಳ ಅನುವಂಶಿಕ ಕ್ರಮವನ್ನು ರೋಗದ ಮಾದರಿಯನ್ನು ಸಂಗ್ರಹಿಸಲಾಗಿದೆ. ರೊಹಡೆ ದ್ವೀಪ ಕಳೆದ ವರ್ಷ ಸೋಂಕಿಗೆ ಗುರಿಯಾಗಿದ್ದ ನಾಯಿಗಳ ಮಾದರಿ ಮತ್ತು ಈ ವರ್ಷ ಮೆಸಚ್ಯೂಸೆಟ್ನಲ್ಲಿ ಸೋಂಕಿಗೆ ಗುರಿಯಾಗಿರುವ ನಾಯಿ ಮಾದರಿಗಳನ್ನು ಅಭ್ಯಾಸ ಮಾಡಲಾಗಿದೆ.
ಈ ವೇಳೆ ರೋಗಕ್ಕೆ ಕಾರಣ ಫಂಕೆ ಬ್ಯಾಕ್ಟಿರೀಯಾ ಅನ್ನೋದು ತಿಳಿದು ಬಂದಿದೆ ಎಂದು ನ್ಯೂ ಹ್ಯಾಂಪ್ಸೈರ್ ಯುನಿವರ್ಸಿಟಿಯ ಡೇವಿಡ್ ನೀಡ್ಲೆ ತಿಳಿಸಿದ್ದಾರೆ.
ಸಾಮಾನ್ಯ ಬ್ಯಾಕ್ಟೀರಿಯಾಗಳಿಗಿಂತ ಗಾತ್ರದಲ್ಲಿ ಇದು ಸಣ್ಣದಾಗಿದ್ದು, ಇದು ತಳಿಗಳನ್ನು ಪತ್ತೆ ಮಾಡುವುದು ಕಷ್ಟವಾಗಿದ್ದು, ಇದೊಂದು ವಿಚಿತ್ರ ಬ್ಯಾಕ್ಟೀರಿಯಾವಾಗಿದೆ. ಈ ಸೂಕ್ಷ್ಮಾಣುವು ಇದೀಗ ಹೊಸ ರೋಗಕ್ಕೆ ಕಾರಣವಾಗಿದ್ದು, ಇದು ನಾಯಿಗಳ ಮೈಕ್ರೋಬಯೋಮ್ ಸಂಯೋಜನೆಯಿಂದ ವಿಕಸಿತವಾಗಬಹುದು ಎಂದಿದ್ದಾರೆ.
ಮನುಷ್ಯರಂತೆ ನಾಯಿಗಳಲ್ಲಿ ಕೂಡ ಹಾನಿಕಾರಕವಲ್ಲದ ಹಲವು ವಿಧದ ಮತ್ತು ಇತರೆ ಸೂಕ್ಷ್ಮಾಣುಗಳು ದೇಹದ ಒಳಗೆ ಮತ್ತು ಹೊರಗೆ ಜೀವಿಸುತ್ತವೆ. ಕರುಳಿನಲ್ಲಿ ಅವು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಆರಂಭಿಕ ಅನುಕ್ರಮವು ತಿಳಿದಿರುವ ವೈರಲ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ರೋಗಕಾರಕಗಳಿಲ್ಲ ಎಂದು ತೋರಿಸಿದೆ ಎಂದಿದ್ದಾರೆ. ಆದಾಗ್ಯೂ 30 ಮಾದರಿ ಪೈಕಿ 21ರಲ್ಲಿ ಒಂದು ವಿಲಕ್ಷಣ ಬ್ಯಾಕ್ಟೀರಿಯಾದ ಜಾತಿಯಿಂದ ಕೆಲವು ಆನುವಂಶಿಕತೆ ಹೊಂದಿದೆ ಎಂದು ನೀಡ್ಲೆ ತಿಳಿಸಿದ್ದಾರೆ.
ಸಂಶೋಧನಾ ಲೇಖನವನ್ನು ಪ್ರಕಟಿಸುವ ಮೊದಲು ತಂಡವು ಅಧ್ಯಯನದ ಫಲಿತಾಂಶಗಳನ್ನು ಹಂಚಿಕೊಂಡಿದೆ. ಇದೇ ವೇಳೆ ತಂಡವು ನಾಯಿಗಳು ಉಸಿರಾಟದ ಸಮಸ್ಯೆ ಎದುರಿಸುವಾಗ ಪಶುವೈದ್ಯರಿಗೆ ಕೆಲವು ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ನಿಗೂಢ ವೈರಸ್: ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿರುವ ಶಾಲಾ ಮಕ್ಕಳು