ETV Bharat / sukhibhava

ಮನೆಯಲ್ಲೇ ಇರುವ ತಾಯಂದಿರಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತಜ್ಞರ ಸಲಹೆ - ತಾಯಂದಿರ ಆರೋಗ್ಯದ ಗುಟ್ಟು

ದಿನವಿಡೀ ತನ್ನ ಗಂಡ ಮಕ್ಕಳಿಗಾಗಿ ಮನೆಯಲ್ಲೇ ದುಡಿಯುವ ತಾಯಿ, ತನ್ನ ದೇಹದ ಆರೋಗ್ಯ ಹಾಗೂ ಮನಸ್ಸಿನ ಆರೋಗ್ಯಕ್ಕಾಗಿ ಯಾವ ರೀತಿಯ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ಫೋರ್ಟಿಸ್​ ಆಸ್ಪತ್ರೆಯ ಡಾ.ಆಕಾಂಕ್ಷಾ ಪಾಂಡೆ ಈ ಕೆಳಗೆ ವಿವರಿಸಿದ್ದಾರೆ.

mothers who stay at home must-maintain mental health
ಮನೆಯಲ್ಲೇ ಇರುವ ತಾಯಂದಿರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು
author img

By

Published : May 8, 2022, 6:38 PM IST

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಅಮ್ಮಂದಿರ ದಿನ. ಪ್ರತಿಯೊಂದು ಕುಟುಂಬದ ಅಡಿಪಾಯವೇ ಅಮ್ಮ, ಮನೆ ಮಂದಿಗೋಸ್ಕರ ಏನೆಲ್ಲಾ ಸವಾಲು, ಸಮಸ್ಯೆಗಳಿದ್ದರೂ ಎಲ್ಲವನ್ನೂ ಎದುರಿಸಿ ಅವರಿಗೋಸ್ಕರ ಬದುಕುವ ತಾಯಿಗೆ ಬಿಡುವೆನ್ನುವುದೇ ಇಲ್ಲ. ಮನೆಯವರಿಗೋಸ್ಕರ ದುಡಿಯುತ್ತಿರುವ ಅಮ್ಮನಿಗೆ ಸಂಬಳವಿಲ್ಲ, ರಜೆ ಇಲ್ಲ, ಮನೆಯಲ್ಲಿಯೇ ಇದ್ದು ಇದ್ದು ಕೆಲವೊಮ್ಮೆ ಆಕೆಗೆ ಮಾನಸಿಕ ಆರೋಗ್ಯ ಕಾಡಬಹುದು.

ಈ ಬಗ್ಗೆ ಮನೆಯವರು ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸದಲ್ಲಿ ಮುಳುಗುತ್ತಾರೆ. ಸ್ವತಃ ಅಮ್ಮನೇ ತನ್ನ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ದುಡಿಯುತ್ತಲೇ ಇರುತ್ತಾಳೆ. ಕೆಲವೊಮ್ಮೆ ಇದು ತಾಯಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಹಾಗಾಗಿ ಸ್ವತಃ ಅಮ್ಮನೇ ತನ್ನ ಮಾನಸಿಕ ಆರೋಗ್ಯಕ್ಕಾಗಿ ಒಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು ಎಂದು ಫೋರ್ಟಿಸ್‌ ಆಸ್ಪತ್ರೆ ಕನ್ಸಲ್ಟೆಂಟ್‌ ಕ್ಲಿನಿಕಲ್‌ ಸೈಕಾಲಜಿ ಡಾ.ಆಕಾಂಕ್ಷಾ ಪಾಂಡೆ ಮನೆಯಲ್ಲಿಯೇ ಇರುವ ತಾಯಂದಿರಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಮನೆಯಲ್ಲೇ ಇದ್ದರೆ ಖಿನ್ನತ ಗ್ಯಾರಂಟಿ: ಹಿಂದೆಲ್ಲಾ ತಾಯಂದಿರು ಹೊರಗಡೆ ಕೆಲಸಕ್ಕೆ ಹೋಗುವುದು ತೀರಾ ಕಡಿಮೆ, ಮನೆಯಲ್ಲಿಯೇ ಮನೆಯವರಿಗೋಸ್ಕರ ದುಡಿಯುತ್ತಿದ್ದರು. ಮನೆಯಿಂದ ಹೊರಹೋಗುವುದು ಅಪರೂಪದಲ್ಲಿ ಅಪರೂಪ. ಇದು ಅವರ ಮನಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮನೆಯಲ್ಲಿಯೇ ಇದ್ದು ಅವರ ಮನಸ್ಸು ಹೊರ ಪ್ರಪಂಚಕ್ಕೆ ತೆರೆದುಕೊಂಡಿರುವುದಿಲ್ಲ. ಗಂಡ, ಮಕ್ಕಳು ತಾಯಿಗೆ ಗಮನ ನೀಡದೇ ಹೋದಾಗ ತಾಯಿಯ ಮನಸ್ಸು ಘಾಸಿಗೊಳ್ಳುತ್ತದೆ. ಇದು ಖಿನ್ನತೆಗೆ ತಿರುಗಬಹುದು. ಇದು ಮನೆಯವರಿಗೆ ವಿಚಿತ್ರ ಅನುಭವ ನೀಡುತ್ತದೆ. ಹೀಗಾಗಿ ತಾಯಿಯನ್ನೂ ಸಹ ನಮ್ಮಂತೆಯೇ ಹೊರ ಪ್ರಪಂಚಕ್ಕೆ ಹೋಗಲು ಉತ್ತೇಜಿಸುತ್ತಿರಬೇಕು ಎಂದಿದ್ದಾರೆ.

ದಿನವನ್ನು ನಿಮ್ಮದಾಗಿಸಿಕೊಳ್ಳಿ: ತಾಯಿಯಾದವರು ಕೇವಲ ಮನೆಯವರ ಜವಾಬ್ದಾರಿ ತೆಗೆದುಕೊಳ್ಳುವುದಷ್ಟೇ ಅಲ್ಲ, ನಿಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ನಿಮ್ಮನ್ನು ನೀವು ಆಕರ್ಷಕವಾಗಿ ಇಟ್ಟುಕೊಳ್ಳುವತ್ತ ಗಮನ ನೀಡಿ. ಮನೆಯಲ್ಲಿಯೇ ಯಾರು ನೋಡಬೇಕು ಎಂಬ ಮನಸ್ಥಿತಿಯಿಂದ ಹೊರ ಬನ್ನಿ, ಪ್ರತಿನಿತ್ಯ ಸ್ನಾನ ಮಾಡಿ, ಮೇಕಪ್‌ ಧರಿಸಿ, ಬೆಳಗ್ಗೆ ಅಥವಾ ಸಂಜೆ ಹೊರಗಡೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಮನಸ್ಸಿಗೆ ಆನಂದ ನೀಡುವುದರ ಜೊತೆಗೆ ಸಮಾಜದೊಂದಿಗೆ ಬೆರೆಯಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ನಿಮಗಾಗಿ ಸಮಯ ಮಾಡಿಕೊಳ್ಳಿ: ತಾಯಿಯಾದವಳಿಗೆ ಮನೆಯವರನ್ನು ನೋಡಿಕೊಳ್ಳುವ ಭರದಲ್ಲಿ ತನ್ನನ್ನೂ ಸಹ ನೋಡಿಕೊಳ್ಳಬೇಕು ಎನ್ನುವುದು ಮರೆತೇ ಹೋಗಿರುತ್ತದೆ. ಈ ತಪ್ಪನ್ನು ಮಾಡದಿರಿ. ಮನೆಯವರಿಗೆ ನೀಡಿದಷ್ಟೇ ಆದ್ಯತೆಯನ್ನು ನಿಮಗೂ ಮೀಸಲಿಡಿ. ನಿಮಗಾಗಿ ವಿಶೇಷ ಸಮಯ ಮಾಡಿಕೊಳ್ಳಿ. ನಿಮ್ಮ ಆರೈಕೆಗೆ ಸಮಯ ಮಾಡಿಕೊಳ್ಳಿ. ಹೆಣ್ಣು ಮಕ್ಕಳು ಮಗುವಾದ ಮೇಲೆ ದಪ್ಪ ಆಗುವುದು, ಒಳ್ಳೆಯ ಬಟ್ಟೆ ಧರಿಸದೇ ಹಾಗೆ ಇರುತ್ತಾರೆ. ಇದರಿಂದ ತಮ್ಮ ದೈಹಿಕ ಆಕಾರ ಬದಲಾಗುವ ಜೊತೆಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳಲು ಅವರೇ ಕಾರಣರಾಗುತ್ತಾರೆ. ಹೀಗಾಗಿ ಮೊದಲು ನಿಮ್ಮ ಆರೈಕೆಗೆ ಆದ್ಯತೆ ನೀಡಿ. ಸಾಧ್ಯವಾದರೆ ಜಿಮ್‌ ಅಥವಾ ಯೋಗದಂಥ ವ್ಯಾಯಾಮ ಕೇಂದ್ರಗಳಿಗೆ ಸೇರಿಕೊಳ್ಳಿ. ಇಡೀ ಮನೆಯನ್ನು ನೀವೋಬ್ಬರೇ ಶುಚಿಗೊಳಿಸಬೇಕೆಂದೇನಿಲ್ಲ ಎಂದು ಡಾಕ್ಟರ್​ ಸಲಹೆ ನೀಡಿದ್ದಾರೆ.

ನಿಮ್ಮ ಮಕ್ಕಳು ಅಥವಾ ಗಂಡನ ಸಹಾಯ ಪಡೆದುಕೊಳ್ಳಬಹುದು. ಇಲ್ಲವೇ ಕೆಲಸಕ್ಕೆ ಜನ ಇಟ್ಟುಕೊಳ್ಳುವುದು ನಿಮಗೆ ನೀವು ಸಮಯ ಕೊಡಲು ಸಾಧ್ಯತೆ ಮಾಡಿಕೊಡುತ್ತದೆ ಎಂದು ತಿಳಿಸಿ ಹಲವು ಟಿಪ್ಸ್ ನೀಡಿದ್ದಾರೆ.

  • ನಿಮ್ಮನ್ನು ನೀವು ಹೈಡ್ರೇಟ್ ಆಗಿರಿಸಲು ಸಾಕಷ್ಟು ನೀರು ಕುಡಿಯಿರಿ.
  • ಆರೋಗ್ಯದ ದೃಷ್ಟಿಯಿಂದ ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ಅಭ್ಯಾಸ ಮಾಡಿರಿ.
  • ಸ್ನೇಹಿತರೊಂದಿಗೆ ಕಾಲ ಕಳೆಯಿರಿ.
  • ನಿಮ್ಮಿಚ್ಛೆಯ ಶಾಪಿಂಗ್‌ಗೆ ತೆರಳಿ

ಹವ್ಯಾಸವನ್ನು ಹುಡುಕಿಕೊಳ್ಳಿ: ಕೆಲ ತಾಯಂದಿರು ತಮ್ಮನ್ನು ಆ್ಯಕ್ವಿವ್‌ ಆಗಿ ಇಟ್ಟುಕೊಳ್ಳಲು ಇಷ್ಟ ಪಡುತ್ತಾರೆ. ಆದರೆ ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ನಿಮಗೆ ಖುಷಿ ನೀಡುವ ಹವ್ಯಾಸಗಳ ಪಟ್ಟಿ ಮಾಡಿ. ನಿಮ್ಮ ಸಮಯಕ್ಕೆ ಹೊಂದಿಕೊಳ್ಳುವ ಹಾಗೂ ನಿಮಗೆ ಇಷ್ಟವೆನಿಸುವ ಹವ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಲು ಹೆಚ್ಚು ಸಹಕಾರಿ. ನೀವು ಏಕಾಂಗಿ ಎನ್ನುವ ಭಾವನೆಯನ್ನು ತೊಡೆದು ಹಾಕುತ್ತದೆ ಎಂದು ತಿಳಿಸಿದ್ದಾರೆ.

ಮನೆಯಲ್ಲೇ ಮಾಡುವ ಕೆಲಸ ಹುಡುಕಿ: ತಾಯಂದಿರಿಗೆ ಹೊರ ಹೋಗಿ ದುಡಿಯಲು ಕಷ್ಟವಾಗಬಹುದು ಅಥವಾ ಮನೆಯವರ ಒತ್ತಡದಿಂದ ಕಚೇರಿಗೆ ಹೋಗಲು ಆಗದಿರಬಹುದು. ಹಾಗೆಂದ ಮಾತ್ರಕ್ಕೆ ಮನೆಯಲ್ಲಿ ಕೇವಲ ಮನೆ ಕೆಲಸ ಮಾಡಿಕೊಂಡೇ ಇರಬೇಕೆಂದೇನಿಲ್ಲ. ಇಂದಿನ ಕಾಲದಲ್ಲಿ ಮನೆಯಿಂದಲೇ ಕೆಲಸ ಮಾಡುವ ಎಷ್ಟೋ ಅವಕಾಶಗಳಿವೆ. ನೀವು ಸಹ ವಿದ್ಯಾವಂತರಾಗಿರುವುದರಿಂದ ನಿಮ್ಮ ವಿದ್ಯೆಯನ್ನು ಇಂಥ ಕೆಲಸ ಮಾಡಲು ಬಳಸಿಕೊಂಡು ಹಣ ಸಂಪಾದಿಸಿ. ಇದು ನೀವು ಸಮಯ ಕಳೆಯಲು ನೆರವು ಮಾಡುತ್ತದೆ. ಜೊತೆಗೆ ದುಡ್ಡಿಗಾಗಿ ಮನೆಯವನ್ನು ಅವಲಂಬಿಸುವ ಕಷ್ಟ ತಪ್ಪಿಸಿ, ನಿಮ್ಮನ್ನು ಸ್ವಾವಲಂಬಿಯಾಗಿಸುತ್ತದೆ ಎಂದಿದ್ದಾರೆ.

ಹೊಸ ಪರಿಚಯವನ್ನು ಮಾಡಿಕೊಳ್ಳಿ: ನಿಮಗೆ ಸ್ನೇಹಿತರಿಲ್ಲ ಎನ್ನುವ ಭಾವನೆ ಇದ್ದರೆ, ಅದಕ್ಕೆ ಬೇಸರವಾಗುವ ಅವಶ್ಯಕತೆ ಇಲ್ಲ. ಮಹಿಳೆಯರಿಗಾಗಿಯೇ ಸಾಕಷ್ಟು ಕ್ಲಬ್‌ಗಳಿವೆ. ಅಲ್ಲಿ ಹೊಸ ಪರಿಚಯ ಮಾಡಿಕೋಳ್ಳಬಹುದು. ಅಥವಾ ಮನೆಯ ಸುತ್ತಮುತ್ತಲಿನವರ ಪರಿಚಯ ಮಾಡಿಕೊಳ್ಳಬಹುದು. ಅವರೊಂದಿಗೆ ನಿಮ್ಮ ದಿನ ಕಳೆಯಬಹುದು ಎನ್ನುತ್ತಾರೆ.

ಈ ಹ್ಯವಾಸಗಳು ಬೇಕು ಎನ್ನುತ್ತಾರೆ ಡಾ. ಆಕಾಂಕ್ಷಾ ಪಾಂಡೆ:

  • ಆಗಾಗ್ಗೆ ಹೊರಹೋಗುವ ಅಭ್ಯಾಸವಿಟ್ಟುಕೊಳ್ಳಿ
  • ನಿಮ್ಮ ಸ್ನೇಹಿತರೊಂದಿಗೆ ಟ್ರಿಪ್‌ ಹೋಗುವುದು
  • ಪ್ರಪಂಚ ಜ್ಞಾನ ತಿಳುವಳಿಕೆಗೆ ಆದ್ಯತೆ ನೀಡುವುದು
  • ಪಾರ್ಟ್‌ಟೈಂ ಕೆಲಸ ಹುಡುಕಿಕೊಳ್ಳುವುದು

ಇದನ್ನೂ ಓದಿ: ದಪ್ಪಾಗಿದ್ದೀರಾ?, ಬೊಜ್ಜು ಕರಗಿಸಲು ಯೋಚಿಸುತ್ತಿದ್ದೀರಾ? ಈ ಯೋಗಾಸನಗಳನ್ನು ತಪ್ಪದೆ ಮಾಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.