ETV Bharat / sukhibhava

ನಿಮಿಷದಲ್ಲೇ ಮಂಕಿಪಾಕ್ಸ್​ ರೋಗ ಪತ್ತೆ! ಹೊಸ ವಿಧಾನ ಕಂಡು ಹಿಡಿದ ವಿಜ್ಞಾನಿಗಳು

ಸಾಂಕ್ರಾಮಿಕ ಮಂಕಿಪಾಕ್ಸ್​ ರೋಗ ಪತ್ತೆಗೆ ಹೊಸ ವಿಧಾನ ಕಂಡು ಹಿಡಿಯಲಾಗಿದೆ.

Monkeypox disease can be detected in minutes; Scientists have discovered a new method

author img

By

Published : Apr 19, 2023, 3:54 PM IST

ಮಂಕಿ ಪಾಕ್ಸ್/ಎಂಪಾಕ್ಸ್​​​ ರೋಗವನ್ನು ಇದೇ ಮೊದಲ ಬಾರಿಗೆ ರ್ಯಾಪಿಡ್​ ಪರೀಕ್ಷೆಯಲ್ಲಿ ಪತ್ತೆ ಮಾಡುವ ವಿಧಾನವನ್ನು ಅಮೆರಿಕದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ನಿಮಿಷದಲ್ಲಿ ನ್ಯಾನೋಪಾರ್ಟಿಕಲ್ಸ್​ ಮೂಲಕ ಸಾಂಕ್ರಾಮಿಕ ರೋಗವನ್ನು ಕಂಡುಹಿಡಿಯಬಹುದು. ಸದ್ಯ ಇದನ್ನು ಸ್ವಾಬ್​ ಪರೀಕ್ಷೆ ಮೂಲಕ ಪ್ರಯೋಗಾಲಯದಲ್ಲಿ ಪತ್ತೆ ಮಾಡಲಾಗಿದ್ದು, ಇದಕ್ಕೆ ಹಲವು ದಿನಗಳು ಬೇಕಾಗಬಹುದು. ಈ ಸಮಯದಲ್ಲಿ ಇದು ಹೆಚ್ಚು ಹರಡುವ ಸಾಧ್ಯತೆ ಇದ್ದು ಶೀಘ್ರ ಪತ್ತೆ ವಿಧಾನಕ್ಕೆ ವಿಜ್ಞಾನಿಗಳು ಮುಂದಾಗಿದ್ದಾರೆ

ಆದರೆ, ಆಯ್ದ ಮೊಲೆಕ್ಯೂಲರ್​ ಸೆನ್ಸಾರ್​ ಮೂಲಕ ಪತ್ತೆ ಮಾಡುವ ವಿಧಾನವನ್ನು ಪೆನ್ಸಿಲ್ವೇನಿಯಾ ಸ್ಟೇಟ್​ ಯುನಿವರ್ಸಿಟಿ ಕಂಡುಹಿಡಿದಿದೆ. ಇದಕ್ಕೆ ಪಾಲಿಮೆರ್ಸೆ ಚೈನಾ ರಿಯಕ್ಷನ್​ (ಪಿಸಿಆರ್​) ತಂತ್ರಜ್ಞಾನ ಬಳಕೆ ಮಾಡಲಾಗುವುದು ಎಂದು ಸಂಶೋದನಾ ವರದಿ ತಿಳಿಸಿದೆ

ಮೊದಲ ಶೀಘ್ರ​ ಪರೀಕ್ಷೆ ಮೂಲಕ ಮಂಕಿಪಾಕ್ಸ್​ ವೈರಸ್​ ಅನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂಬುದು ಮುಖ್ಯ ಎಂದು ಪ್ರೊ.ದಿಪಂಜನ್​ ಪಾನ್​ ತಿಳಿಸಿದ್ದಾರೆ. ರೋಗಕಾರಕ ಮಾದರಿ ಮೂಲಕ ಸೂಕ್ಷ್ಮ ಪತ್ತೆ ಅಭಿವೃದ್ಧಿಗೆ ಆಸಕ್ತಿ ಹೊಂದಿದ್ದೇವೆ. ಈ ಪರಿಕಲ್ಪನೆಯನ್ನು ಮಂಕಿಪಾಕ್ಸ್​ ರೋಗಕಾರಕ ಮೂಲಕ ಅಳವಡಿಸಲಾಗುವುದು. ಶೀಘ್ರಗತಿಯ ನ್ಯೂಕ್ಲಿಕ್​ ಆ್ಯಸಿಡ್​ ಪರೀಕ್ಷೆಯ ತುರ್ತಿದೆ. ಈ ತಂತ್ರಜ್ಞಾನದ ಫಲಿತಾಂಶವು ಸಾರ್ವಜನಿಕರ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಹೊಂದಿದೆ.

ಪ್ರಮುಖವಾಗಿ, ಆನುವಂಶಿಕ ಅನುಕ್ರಮಗಳನ್ನು ಗುರಿಯಾಗಿಸಲು ಬಳಸುವ ಅಣುಗಳ ಸ್ವಲ್ಪ ಮಾರ್ಪಾಡಿನೊಂದಿಗೆ, ಇತರ ವೈರಸ್‌ಗಳು, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳನ್ನು ನಿರ್ದಿಷ್ಟವಾಗಿ ಪತ್ತೆ ಹಚ್ಚಲು ಅದೇ ವಿಧಾನವನ್ನು ಇದಕ್ಕೂ ಅನ್ವಯಿಸಬಹುದು. ಹೊಸ ತಂತ್ರಕ್ಕೆ ದುಬಾರಿ ಉಪಕರಣ ಅಥವಾ ನುರಿತ ಸಿಬ್ಬಂದಿಯ ಅಗತ್ಯವಿಲ್ಲ. ಭವಿಷ್ಯದ ರೋಗಕಾರಕಗಳಿಗೆ ಇದನ್ನು ಸರಿಹೊಂದಿಸಬಹುದು ಎಂದು ಅಧ್ಯಯನ ಹೇಳುತ್ತದೆ.

ಮಂಕಿಪಾಕ್ಸ್​ ವೈರಸ್​​ ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ. ಸಿಡುಬು ರೀತಿಯ ಗುಣಲಕ್ಷಣವನ್ನು ಇದು ಹೊಂದಿದ್ದು, ಅದಕ್ಕಿಂತ ಕಡಿಮೆ ಗಂಭೀರತೆ ಹೊಂದಿದೆ. ಮೇ 2022ರಲ್ಲಿ ಈ ವೈರಸ್​ 100ಕ್ಕೂ ಹೆಚ್ಚು ದೇಶಗಳಲ್ಲಿ ಭೀತಿ ಮೂಡಿಸಿದ್ದು, ಜಗತ್ತಿನಾದ್ಯಂತ ಸುಮಾರು 86,900 ಸೋಂಕು ಪ್ರಕರಣ ದಾಖಲಾಗಿತ್ತು. ಇದರಲ್ಲಿ ಜಾಗತಿಕವಾಗಿ ಕಂಡುಬಂದ 3ನೇ 1ರಷ್ಟು ಪ್ರಕರಣ ಅಮೆರಿಕದಲ್ಲಿ ವರದಿ ಆಗಿತ್ತು.

ಪ್ರಸ್ತುತ, ಚಿಕಿತ್ಸೆ ಮತ್ತು ಎರಡು ಡೋಸ್​ ಲಸಿಕೆಗಳು ಈ ಸೋಂಕನ್ನು ಸಾಕಷ್ಟು ಪ್ರಮಾಣದಲ್ಲಿ ತಡೆಯುವಲ್ಲಿ ಸಾಧ್ಯವಾಗಿಲ್ಲ. ಇದನ್ನು ಶೀಘ್ರದಲ್ಲಿ ಪತ್ತೆ ಮಾಡುವುದು ಒಂದೇ ಪರಿಹಾರವಾಗಿದೆ. ಮಂಕಿಪಾಕ್ಸ್‌ಗೆ​ ಪಿಸಿಆರ್​ ಒಂದೇ ಪತ್ತೆ ಪರೀಕ್ಷೆಯನ್ನು ಎಫ್​ಡಿಎ ಅನುಮತಿಸಿದೆ. ಶೀಘ್ರ ಪತ್ತೆಗೆ ಲೆಸಿಯನ್​ ಸ್ವಾಬ್​ ಮಾದರಿ ಪಡೆಯಲಾಗುತ್ತಿದೆ. ಇದರ ಫಲಿತಾಂಶದ ಹೊತ್ತಿಗೆ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ ಕಾಣಬಹುದಾಗಿದೆ.

ಏನಿದು ಮಂಕಿಪಾಕ್ಸ್​?: ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. 1958ರಲ್ಲಿ ಇದನ್ನು ಮೊದಲ ಬಾರಿಗೆ ಮಂಗಗಳಲ್ಲಿ ಕಂಡು ಹಿಡಿಯಲಾಗಿತ್ತು. ಹೀಗಾಗಿ, ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. 1970ರಲ್ಲಿ ಮೊದಲ ಬಾರಿಗೆ ಕಾಂಗೋದ ಬಾಲಕನಲ್ಲಿ ರೋಗ ಪತ್ತೆಯಾಗಿತ್ತು. ಈಗಾಗಲೇ ಮಂಕಿಪಾಕ್ಸ್ 20ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, 200 ಪ್ರಕರಣಗಳು ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ತಿಳಿಸಿದೆ.

ಇದನ್ನೂ ಓದಿ: ಪ್ರಸ್ತುತ ಲಸಿಕೆಗಿಂತ ಟಿ-ಸೆಲ್​ ಕೋವಿಡ್​ ಲಸಿಕೆ ಹೆಚ್ಚು ಪರಿಣಾಮಕಾರಿ; ಭಾರತೀಯ ಅಮೆರಿಕನ್​ ಸಂಶೋಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.