ಹೈದರಾಬಾದ್: ಕನಿಷ್ಠ 60 ಪ್ರತಿಶತದಷ್ಟು ಜನರು ಮಾಸ್ಕ್ ಧರಿಸಲು ಪ್ರಾರಂಭಿಸಿದರೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೊನಾ ವೈರಸ್ ಹರಡುವಿಕೆಯನ್ನು ತಪ್ಪಿಸಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
"ಒಟ್ಟು ಜನಸಂಖ್ಯೆಯ ಶೇ 60ರಷ್ಟು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ನಿಯಮ ಪಾಲಿಸಿದರೆ ಸಾಮೂಹಿಕ ವ್ಯಾಕ್ಸಿನೇಷನ್ ಇಲ್ಲದೇ ವೈರಸ್ ಹರಡುವುದನ್ನು ತಡೆಯಬಹುದು" ಎಂದು ಯುಎಸ್ನ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಂಡನ್ ಸ್ಕೂಲ್ ಆಫ್ ಇಂಜಿನಿಯರಿಂಗ್ನ ಮೌರಿಜಿಯೊ ಪೊರ್ಫಿರಿ ಹೇಳಿದರು.
ಚೋಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನಕ್ಕಾಗಿ, ಕೋವಿಡ್-19 ನಿಯಮಗಳನ್ನು ಪಾಲಿಸುವ ಜನರನ್ನು ಸಂಶೋಧನೆಗೆ ಒಳಪಡಿಸಲಾಯಿತು.
ಹೆಚ್ಚಿನ ಸಂಖ್ಯೆಯ ಸೋಂಕುಗಳಿಂದ ಬಳಲುತ್ತಿರುವ ರಾಜ್ಯಗಳು ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳನ್ನು ಕಡಿಮೆ ಅನುಸರಿಸುತ್ತವೆ ಎಂದು ಅಧ್ಯಯನ ತಂಡವು ತಿಳಿಸಿದೆ.
ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದರ ಜೊತೆಗೆ, ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ವ್ಯಾಪಕವಾಗಿ ಅನುಸರಿಸಬೇಕು ಎಂದು ಅಧ್ಯಯನ ಸೂಚಿಸಿದೆ.