ETV Bharat / sukhibhava

ಅತಿಯಾದ ಕುಡಿಯುವಿಕೆ ಸ್ನಾಯು ನಷ್ಟವನ್ನುಂಟು ಮಾಡುತ್ತೆ: ಹೊಸ ಅಧ್ಯಯನ

ಆಲ್ಕೋಹಾಲ್​ ಸೇವನೆ ಸ್ನಾಯು ನಷ್ಟಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದರ ಸಂಬಂಧ ದೊಡ್ಡಮಟ್ಟದ ಅಧ್ಯಯನವೊಂದು ಬ್ರಿಟನ್​ನಲ್ಲಿ ನಡೆಸಲಾಗಿದೆ.

Low muscle mass from excessive drinking
Low muscle mass from excessive drinking
author img

By

Published : Jun 15, 2023, 2:09 PM IST

ಬೆಂಗಳೂರು: ಅತಿ ಹೆಚ್ಚಿನ ಮದ್ಯ ಸೇವನೆ ಲಿವರ್​ ಸಿರೋಸಿಸ್​, ಕ್ಯಾನ್ಸರ್​ ಮತ್ತು ಹೃದಯ ಕಾಯಿಲೆಯಂತಹ ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿತು. ಆದರೆ, ಇದೀಗ ಹೊಸ ಅಧ್ಯಯನವೊಂದು, ಅತಿ ಹೆಚ್ಚು ಮದ್ಯ ಸೇವನೆಯಿಂದ ಇವಷ್ಟೇ ಸಮಸ್ಯೆ ಇಲ್ಲ. ಇದರಿಂದಾಗಿ ಕಡಿಮೆ ಮಾಂಸಖಂಡದ ಮಟ್ಟದೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿಸಿದೆ. ಇದು ಕುಡಿಯದವರು ಮತ್ತು ಮಿತಿಯಲ್ಲಿ ಕುಡಿಯುವವರಿಗೆ ಹೋಲಿಸಿದಾಗ ಹೆಚ್ಚಿದೆ ಎಂದು ಹೇಳಿದೆ.

ಈ ಅಧ್ಯಯನಕ್ಕಾಗಿ ಯುಕೆ ಬಯೋಬ್ಯಾಂಕ್​ನ ದತ್ತಾಂಶಗಳನ್ನು ಬಳಕೆ ಮಾಡಲಾಗಿದೆ. ಬ್ರಿಟನ್​ ಅರ್ಧ ಮಿಲಿಯನ್​ಗಿಂತಲೂ ಹೆಚ್ಚಿನ ಜನರ ಆರೋಗ್ಯ ಮಾಹಿತಿ ಮತ್ತು ಜೀವನಶೈಲಿಯ ದೊಡ್ಡ ಮಟ್ಟದ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. 37ರಿಂದ 73ವರ್ಷದ ವಯೋಮಾನದ 2ಲಕ್ಷ ಜನರ ದತ್ತಾಂಶವನ್ನು ಸೇರಿಸಲಾಗಿದೆ. ಅವರ ಸರಾಸರಿ ಮದ್ಯ ಸೇವನೆ ಮತ್ತು ಸ್ನಾಯುವಿನ ದ್ರವ್ಯರಾಶಿ ಗಮನಿಸಿಲಾಗಿದೆ. ವ್ಯಕ್ತಿಯ ದೈಹಿಕ ಚಟುವಟಿಕೆ ಮಟ್ಟ, ಅವರು ಎಷ್ಟು ಪ್ರಮಾಣದ ಪ್ರೋಟಿನ್​ ಸೇವನೆ ಮಾಡುತ್ತಾರೆ. ಅವರು ಧೂಮಪಾನಿಗಳಾ ಎಂಬುದನ್ನು ಅಧ್ಯಯನದಲ್ಲಿ ತಿಳಿಯಲಾಗಿದೆ.

ವಿಭಿನ್ನ ಅಧ್ಯಯನ: ಅಧ್ಯಯನದಲ್ಲಿ ಪುರುಷರು ಮತ್ತು ಮಹಿಳೆಯ ಲಿಂಗ ಮತ್ತು ದೇಹ ರಚನೆ ವಿಭಿನ್ನತೆ ಹಿನ್ನಲೆ ವಿಶ್ಲೇಷಣೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಕೇವಲ ಬಿಳಿಯರ ದತ್ತಾಂಶವನ್ನು ಮಾತ್ರ ಪಡೆಯಲಾಗಿದೆ. ಅಂಕಿ - ಅಂಶಗಳ ಮಾದರಿಯಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಮದ್ಯ ಸೇವನೆ ಮಾಡುವ ಜನರಲ್ಲಿ ಯಾಕೆ ಸ್ನಾಯುವಿನ ದ್ರವ್ಯರಾಶಿ ವಿಭಿನ್ನವಾಗಿದೆ ಎಂದು ಗಮನಿಸಲಾಗಿದೆ. ಕಾರಣ ದೊಡ್ಡ ಜನರು ಹೆಚ್ಚು ಸ್ನಾಯುಗಳನ್ನು ಹೊಂದಿರುವುದರಿಂದ, ನಾವು ದೇಹದ ಗಾತ್ರಕ್ಕಾಗಿ ಸ್ನಾಯುಗಳನ್ನು ಅಳೆಯುತ್ತೇವೆ.

ಒಟ್ಟಾರೆ, ಹೆಚ್ಚು ಕುಡಿಯುವ ಜನರಲ್ಲಿ ಸ್ನಾಯುಗಳ ಕಡಿಮೆ ಇರುತ್ತದೆ. ಈ ಪರಿಣಾಮದಿಂದ ಪ್ರತಿನಿತ್ಯ ಒಂದು ಯೂನಿಟ್​ ಆಲ್ಕೋಹಾಲ್​ ಸೇವನೆ ಮಾಡುವುದರ ಮೇಲೆ ಈ ಸ್ನಾಯು ಸವೆತ ನಿರ್ಧರಿತವಾಗಿದೆ. ಅತಿ ಹೆಚ್ಚು ಕುಡಿಯುವವರು ಎಂದರೆ ದಿನಕ್ಕೆ 20 ಯೂನಿಟ್​ ಮದ್ಯ ಸೇವನೆ ಮಾಡುವುದಾಗಿದೆ. ಇದು ಎರಡು ಬಾಟೆಲ್​ ವೈನ್​ ಅಥವಾ 10 ಪಿಂಟ್​ ಬಿಯರ್​​ಗೆ ಸಮಯವಾಗಿದೆ. ಇವರಲ್ಲಿ ಕುಡಿಯದವರಿಗಿಂತ 4 ರಿಂದ 5ರಷ್ಟು ಕಡಿಮೆ ಮಾಂಸಖಂಡ ಇರುವುದು ಕಂಡು ಬಂದಿದೆ

ಮಾಂಸ ಖಂಡದ ನಷ್ಟ ಮತ್ತು ಆರೋಗ್ಯ: ಆಲ್ಕೋಹಾಲ್​ ನೇರವಾಗಿ ಸ್ನಾಯು ನಷ್ಟಕ್ಕೆ ಕಾರಣವಾಗುತ್ತದೆ ಎಂಬುದಾಗಿ ನಮ್ಮ ಅಧ್ಯಯನ ತಿಳಿಸುವುದಿಲ್ಲ. ಕಾರಣ, ನಾವು ಇಬ್ಬರೂ ಆಲ್ಕೋಹಾಲ್​​​ ಸೇವನೆ ಮಾಡುವವರು ಮತ್ತು ಸ್ನಾಯುವಿನ ದ್ರವ್ಯರಾಶಿಯನ್ನು ಏಕಕಾಲದಲ್ಲಿ ಅಳತೆ ಮಾಡಿದ್ದೇವೆ. ಇದೇ ಅಧ್ಯಯನದಲ್ಲಿ ಜನರ ಮಾಂಸಖಂಡದ ದ್ರವ್ಯರಾಶಿ ಮೇಲಿನ ಬದಲಾವಣೆಗಳನ್ನು ಪತ್ತೆ ಮಾಡಲಾಗಿದ್ದು, ಇದನ್ನು ಆಲ್ಕೋಹಾಲ್​ ಸೇವನೆಯೊದಿಗೆ ಸಾಮ್ಯತೆ ಮಾಡಲಾಗಿದೆ.

ಈ ಅಧ್ಯಯನದಲ್ಲಿ ನಾವು 70 ಮತ್ತು ಅದರ ಮೇಲ್ಪಟ್ಟ ವರ್ಷದವರ ಫಲಿತಾಂಶವನ್ನು ಗಮನಿಸಿಲ್ಲ. ಈ ವಯೋಮಾನದ ಕೆಲವು ಜನರು ಮಾತ್ರ ಅಧ್ಯಯನದಲ್ಲಿದ್ದರು. ಆಲ್ಕೋಹಾಲ್​ ಅತಿ ಹೆಚ್ಚು ಸೇವನೆಯೂ ವಯಸ್ಸಾದವರಲ್ಲಿ ಇತರ ಅಂಶಗಳೊಂದಿಗೆ ಹೆಚ್ಚಿನ ಪರಿಣಾಮ ಬೀರಬಹುದು. ಇದೇ ಕಾರಣ ವಯಸ್ಸಾದವರಲ್ಲಿ ಹೆಚ್ಚಿನ ಸ್ನಾಯು ನಷ್ಟ ಉಂಟಾಗುತ್ತದೆ.

ಅತಿ ಹೆಚ್ಚಿನ ಮದ್ಯ ಸೇವನೆ ಸ್ನಾಯುವಿನ ದ್ರವ್ಯರಾಶಿ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುತ್ತಿರುವ ಮೊದಲ ಅಧ್ಯಯನ ನಮ್ಮದಲ್ಲ. ಆದರೆ, ಇದು ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪುರುಷ ಮತ್ತು ಮಹಿಳಾ ಆಲ್ಕೋಹಾಲ್​ ಸೇವನೆ ಮಾಡುವವರನ್ನು ಒಳಗೊಂಡಿದೆ. ಆಲ್ಕೋಹಾಲ್​ 75 ವರ್ಷ ದಾಟಿದವರ ಮೇಲೆ ಹೇಗೆ ಸ್ನಾಯುವಿನ ನಷ್ಟಕ್ಕೆ ಕಾರಣವಾಗುತ್ತದೆ ಎಂಬುದನ್ನು ತನಿಖೆ ಮಾಡುವುದು ಭವಿಷ್ಯದ ಅಧ್ಯಯನಕ್ಕೆ ಮುಖ್ಯವಾಗಿದೆ. ನಮ್ಮ ಅಧ್ಯಯನವೂ ಈ ನಿಟ್ಟಿನಲ್ಲಿ ಗಮನಿಸಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಇ ಸಿಗರೇಟ್​ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ ಭಾರತದ ಶೇ 60ರಷ್ಟು ಯುವ ಜನತೆ.. ಕಾದಿದೆ ಗಂಡಾಂತರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.