ಯಾವುದೇ ಕಾರಣಕ್ಕೂ ಬೆಳಗಿನ ತಿಂಡಿಯನ್ನು ತಪ್ಪದೇ ತಿನ್ನಬೇಕು ಎಂಬ ಮಾತುಗಳನ್ನು ಕೇಳಿ ಬೆಳೆದ ನಾವು ಎಂದಿಗೂ ಅದನ್ನು ಮಿಸ್ ಮಾಡುವುದಿಲ್ಲ. ಇದರ ಹಿಂದಿನ ಕಾರಣ ತುಂಬಾ ಸರಳ. ರಾತ್ರಿಯೆಲ್ಲಾ ಉಪವಾಸದಿಂದ ಇರುವ ದೇಹಕ್ಕೆ ದಿನವಿಡಿ ಚೈತನ್ಯ ನೀಡುವುದೇ ಬೆಳಗಿನ ಉಪಹಾರ. ಇದೇ ಕಾರಣಕ್ಕೆ ಬೆಳಗಿನ ತಿಂಡಿಯನ್ನು ಸರಿಯಾಗಿ ತಿನ್ನಬೇಕು. ಜೊತೆಗೆ ಪೋಷಕಾಂಶಯುಕ್ತ ಆಹಾರ ಆಯ್ಕೆ ಮಾಡಿಕೊಳ್ಳಬೇಕು ಎಂಬ ಮಾತುಗಳನ್ನು ಕೇಳಿರುತ್ತೇವೆ.
ಆದರೆ, ಇಂದಿನ ದಿನಗಳಲ್ಲಿ ಬಿಡುವಿಲ್ಲದ ಕೆಲಸಗಳು, ಬ್ಯುಸಿ ಶೆಡ್ಯೂಲ್ಗಳ ಮಧ್ಯೆ ಈ ಬೆಳಗಿನ ತಿಂಡಿ ಬಗ್ಗೆ ಅಷ್ಟಾಗಿ ಕಾಳಜಿ ವಹಿಸುವುದಿಲ್ಲ. ಅಲ್ಲದೆ, ಅದನ್ನು ತಪ್ಪಿಸುವವರ ಸಂಖ್ಯೆ ಕೂಡ ಕಡಿಮೆ ಇಲ್ಲ. ಈ ರೀತಿ ಮಾಡುವುದು ತಪ್ಪು. ಈ ಹಿನ್ನೆಲೆ ಆರೋಗ್ಯಯುತ ಆಹಾರಗಳ ಆಯ್ಜೆಗೆ ಮುಂದಾಗಬೇಕು. ಹಾಗೆಂದ ಮಾತ್ರಕ್ಕೆ ಅತಿ ಹೆಚ್ಚು ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದು ಕೂಡ ತಪ್ಪಾಗುತ್ತದೆ. ಇದರಿಂದ ನಿದ್ದೆ, ಆಲಸ್ಯ ಉಂಟಾಗಬಹುದು. ಅಂತಹ ಕೆಲವು ಆಹಾರಗಳ ಕುರಿತ ಮಾಹಿತಿ ಇಲ್ಲಿದೆ.
ಕಾರ್ನ್ಫ್ಲೆಕ್ಸ್: ಬೆಳಗಿನ ಉಪಹಾರಕ್ಕೆ ಆಯ್ಕೆ ಮಾಡುವುದು ಉತ್ತಮ ಮತ್ತು ಸುಲಭವಾಗಿರುವ ಆಹಾರ ಎಂದರೆ ಧಾನ್ಯಗಳು. ಸಿದ್ದವಾಗಿ ಸಿಗುವ ಈ ಕಾರ್ನ್ಫ್ಲೆಕ್ಸ್ಗಳನ್ನು ಬಟ್ಟಲಿಗೆ ಹಾಕಿ ಅದಕ್ಕೆ ಬೆಚ್ಚಗಿನ ಹಾಲು ಬೆರೆಸಿ, ಜೊತೆಗೆ ಬೇಕಾದಲ್ಲಿ ಜೇನು ತುಪ್ಪ ಸೇರಿಸಿ ತಿನ್ನಬಹುದು. ಇನ್ನು ತೂಕದ ಬಗ್ಗೆ ಕಾಳಜಿ ಹೊಂದಿರುವವರು ಕೊಲೆಸ್ಟ್ರಾಲ್ ಮುಕ್ತ, ಐರನ್ ಮತ್ತು ವಿಟಮಿನ್ ಯುಕ್ತ ಕಾರ್ನ್ಫ್ಲೆಕ್ಸ್ ಆಯ್ಕೆ ಮಾಡುವುದು ಸೂಕ್ತ
ಮ್ಯೂಸ್ಲಿ: ಕಾರ್ನ್ಫ್ಲೆಕ್ಸ್ ರೀತಿಯಲ್ಲೇ ಇದನ್ನು ಬೆಚ್ಚಗಿನ ಹಾಲಿಗೆ ಬೆರೆಸಿ ತಿನ್ನಬಹುದು. ಅಥವಾ ಯೋಗರ್ಟ್ ಜೊತೆ ಸೇವಿಸಬಹುದು. ಇದಕ್ಕೆ ಬೇಕಾದರೆ, ಒಂದೆರಡು ಹಣ್ಣು ಜೊತೆಗೆ ಒಣಹಣ್ಣುಗಳನ್ನು ಕೂಡ ಬೆರೆಸಿ ರುಚಿಯನ್ನು ಸ್ವಾದಿಷ್ಟಗೊಳಿಸಬಹುದು. ಇನ್ನು ಹಣ್ಣು, ನಟ್ಗಳು ಹೊಂದಿರುವ ಮ್ಯೂಸ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ಮೊಟ್ಟೆ: ಮೊಟ್ಟೆಯಲ್ಲಿ ಸಮೃದ್ಧವಾದ ಪ್ರೋಟಿನ್ ಅಂಶ ಇರುವುದರಿಂದ ದಿನವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಬೇಯಿಸಿದ ಅಥವಾ ತರಕಾರಿ ಮಿಶ್ರಿತ ಆಮ್ಲೇಟ್ ಸೇವನೆ ಕೂಡ ಒಳ್ಳೆಯದು.
ಪೀನಟ್ ಬಟರ್ ಮತ್ತು ಬ್ರೆಡ್: ಸಾಮಾನ್ಯ ಬೆಣ್ಣೆಗಿಂತ ಪೀನಟ್ ಬಟರ್ ಹೆಚ್ಚು ಪ್ರಯೋಜನ ಹೊಂದಿದೆ. ಇದಕ್ಕೆ ಗೋಧಿ ಬ್ರೇಡ್ ಆಯ್ಕೆ ಉತ್ತಮವಾಗಿರಲಿದೆ. ಬ್ರೌನ್ ಅಥವಾ ಮಲ್ಟಿ ಗ್ರೇನ್ ಬ್ರೆಡ್ಗೆ ಚಾಕೋಲೆಟ್ ಅನ್ನು ಕೂಡ ಹಚ್ಚಿ ಕೂಡ ತಿನ್ನಬಹುದಾಗಿದೆ.
ಸ್ಮೂಥಿಗಳು: ದೇಹಕ್ಕೆ ನೀರಿನ ಅಂಶದ ಜೊತೆಗೆ ಪೌಷ್ಟಿಕತೆಯನ್ನು ಇವು ನೀಡುತ್ತದೆ. ಮೊಸರು ಅಥವಾ ಹಾಲಿಗೆ ಒಂದು ಚಮಚ ಪೀನಟ್ ಬಟರ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ಶಕ್ತಿ ಸಿಗುತ್ತದೆ.
ಮಸಾಲಾ ಓಟ್ಸ್: ತಕ್ಷಣಕ್ಕೆ ಮಾಡಿಕೊಳ್ಳುವ ಓಟ್ಸ್ ಬಹುತೇಕರ ಅಚ್ಚುಮೆಚ್ಚಿನ ಆಹಾರ. ಈ ಮಸಾಲಾ ಓಟ್ಸ್ ಅನ್ನು ಒಂದು ಕಪ್ ನೀರಿನಲ್ಲಿ 2-3 ನಿಮಿಷ ಬೇಯಿಸಿ, ಬಿಸಿ ಇರುವಾಗಲೇ ತಿನ್ನಬಹುದು. ಇದರಿಂದ ಕೂಡ ದಿನವೀಡಿ ಶಕ್ತಿಯಿಂದ ಇರಲು ಸಾಧ್ಯವಾಗುತ್ತದೆ.
ಜೀವನದಲ್ಲಿ ಆರೋಗ್ಯ ಅತಿ ಮುಖ್ಯವಾಗಿದ್ದು, ಉತ್ತಮ ಆರೋಗ್ಯಯುತ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದು ಅತ್ಯವಶ್ಯವಾಗಿದೆ.
ಇದನ್ನೂ ಓದಿ: ಆರೋಗ್ಯಯುತ ಆಹಾರ ಆಯ್ಕೆ ಜೊತೆಗೆ ಅದನ್ನು ಸರಿಯಾದ ವಿಧಾನದಲ್ಲಿ ಬೇಯಿಸುವುದು ಅವಶ್ಯ