ETV Bharat / sukhibhava

ಬ್ರೆಜಿಲ್​​ನಲ್ಲಿ ಜಾನ್ಸನ್ & ಜಾನ್ಸನ್​ ಕೋವಿಡ್​ ಲಸಿಕೆ ಪ್ರಯೋಗ ಸ್ಥಗಿತ: ಕಾರಣವೇನು ಗೊತ್ತೇ? - ಬ್ರೆಜಿಲ್​​ನಲ್ಲಿ ಕೋವಿಡ್​ ಲಸಿಕೆ ಪ್ರಯೋಗ ಸ್ಥಗಿತ

ಜಾನ್ಸನ್​ ಕಂಪನಿ ತಯಾರಿಸಿರುವ ಕೋವಿಡ್​ ಲಸಿಕೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ ಸುಮಾರು 60,000 ಜನರ ಮೇಲೆ ಕ್ಲಿನಿಕಲ್​ ಪ್ರಯೋಗ ನಡೆಸಲಾಯಿತು. ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟವರಿಗೆ ವಿವರಿಸಲಾಗದ ಕಾಯಿಲೆಗಳು ಕಾಣಿಸಿಕೊಂಡಿವೆ. ಹೀಗಾಗಿ, ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಸಂಸ್ಥೆ ಬ್ರೆಜಿಲಿಯನ್ ಆರೋಗ್ಯ ಕಣ್ಗಾವಲು ಸಂಸ್ಥೆ (ಅನ್ವಿಸಾ) ತಿಳಿಸಿದೆ.

Covid-19 vaccine
ಕೋವಿಡ್ ಲಸಿಕೆ
author img

By

Published : Oct 14, 2020, 8:22 AM IST

ಬ್ರೆಸಿಲಿಯಾ: ಅಮೆರಿಕ ಮೂಲದ ಬಹುರಾಷ್ಟ್ರೀಯ ಜಾನ್ಸನ್ ಅಂಡ್​​ ಜಾನ್ಸನ್​ನ ಔಷಧೀಯ ವಿಭಾಗ ಜಾನ್ಸೆನ್ - ಸಿಲಾಗ್ ಕಂಪನಿಯು ಬ್ರೆಜಿಲ್‌ನಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಜಾನ್ಸನ್​ ಕಂಪನಿ ತಯಾರಿಸಿರುವ ಕೋವಿಡ್​ ಲಸಿಕೆಯ ಮೂರನೇ ಹಾಗೂ ಅಂತಿಮ ಹಂತದಲ್ಲಿ ಸುಮಾರು 60,000 ಜನರ ಮೇಲೆ ಕ್ಲಿನಿಕಲ್​ ಪ್ರಯೋಗ ನಡೆಸಲಾಯಿತು. ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟವರಿಗೆ ವಿವರಿಸಲಾಗದ ಕಾಯಿಲೆಗಳು ಕಾಣಿಸಿಕೊಂಡಿವೆ. ಹೀಗಾಗಿ, ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಸಂಸ್ಥೆ ಬ್ರೆಜಿಲಿಯನ್ ಆರೋಗ್ಯ ಕಣ್ಗಾವಲು ಸಂಸ್ಥೆ (ಅನ್ವಿಸಾ) ತಿಳಿಸಿದೆ.

ವಿಎಸಿ 31518ಸಿಒವಿ 3001 ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ನಿರ್ಧರಿಸುವ ಪರೀಕ್ಷೆ ವೇಳೆ ವಿದೇಶದಲ್ಲಿ ಸ್ವಯಂ ಸೇವಕರಲ್ಲಿ ಗಂಭೀರವಾದ ಪ್ರತಿಕೂಲ ಲಕ್ಷಣಗಳು ಗೋಚರಿಸಿದ್ದರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಾನ್ಸೆನ್ - ಸಿಲಾಗ್ ಅನ್ವಿಸಾಗೆ ಸೂಚಿಸಿದೆ.

ಸ್ವಯಂಸೇವಕರ ಆರೋಗ್ಯ ಸ್ಥಿತಿ ಗೌಪ್ಯವಾಗಿಡಲಾಗಿರುವುದರಿಂದ ಕಂಪನಿಯು ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.

ಉತ್ತಮ ಕ್ಲಿನಿಕಲ್ ಅಭ್ಯಾಸ ಕಾರ್ಯ ವಿಧಾನಗಳ ಭಾಗವಾಗಿ ಸ್ವತಂತ್ರ ಸುರಕ್ಷತಾ ಸಮಿತಿಯು ಸಮಸ್ಯೆಯ ಕಾರಣದ ಬಗ್ಗೆ ತನಿಖೆ ನಡೆಸುವವರೆಗೆ ಪ್ರಯೋಗಗಳು ಪುನರಾರಂಭಗೊಳ್ಳುವುದಿಲ್ಲ ಎಂದು ಹೇಳಿದೆ.

ವ್ಯಕ್ತಿಗೆ ಒಮ್ಮೆ ನೀಡಿದರೆ ಸೋಂಕು ಬಾರದಂತೆ ತಡೆಯುವ ಲಸಿಕೆಯನ್ನು (ಸಿಂಗಲ್‌ ಶಾಟ್‌ ವ್ಯಾಕ್ಸಿನ್‌) ಜಾನ್ಸ್‌ನ್‌ ಕಂಪನಿ ಅಭಿವೃದ್ಧಿಪಡಿಸಿತ್ತು. ಲಸಿಕೆಯ ಪ್ರಯೋಗಕ್ಕೆ ಒಳಗಾದವರಿಗೆ ವಿವರಿಸಲಾರದ ಕಾಯಿಲೆಗಳು ಗೋಚರಿಸಿರುವುದರಿಂದ ಅ.12ರಿಂದ ಪ್ರಾಯೋಗಿಕ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಲಸಿಕೆಯ ಪ್ರಯೋಗ ಮೂರನೇ ಹಂತದಲ್ಲಿ ಇತ್ತು. ಡಿಸೆಂಬರ್‌ ಅಂತ್ಯದವರೆಗೂ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಬೇಕಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.