ಟೋಕಿಯೋ: ಕೋವಿಡ್ 19 ಇರುವಿಕೆ ಕುರಿತು ನಿಮಿಷದಲ್ಲಿ ಪತ್ತೆ ಮಾಡುವ ಹೊಸ ಪರೀಕ್ಷಾ ವಿಧಾನವನ್ನು ಜಪಾನ್ನ ಸಂಶೋಧಕರು ಪತ್ತೆ ಮಾಡಿದ್ದಾರೆ. ಹೊಳೆಯುವ ರಾಸಾಯನಿಕದ ಮೂಲಕ ಈ ಪರೀಕ್ಷೆ ಮಾಡಬಹುದಾಗಿದ್ದು, ಕ್ಷಣ ಮಾತ್ರದಲ್ಲಿ ಫಲಿತಾಂಶ ಪಡೆಯಬಹುದಾಗಿದೆ.
ಜಪಾನ್ ಸೈನ್ಸ್ ಅಂಡ್ ಟೆಕ್ನಾಲಾಜಿ ಏಜೆನ್ಸಿ (ಜೆಎಸ್ಟಿ) ಸಾರ್ಸ್-ಕೋವ್ -2 ಪ್ರೋಟಿನ್ ಪತ್ತೆಗೆ ಕ್ರಸ್ಟಾಸಿಯನ್ ಅಣುಗಳನ್ನು ಬಳಕೆ ಮಾಡಿದ್ದಾರೆ. ಫೈರ್ಫೈಲ್ಸ್ನಿಂದ ಲ್ಯಾಂಟರ್ನ್ ಮೀನಿನವರೆಗೆ ಅನೇಕ ಪ್ರಾಣಿಗಳು ಬೆಳಕನ್ನು ಉತ್ಪಾದಿಸಲು ರಾಸಾಯನಿಕ ಬಿಡುಗಡೆ ಮಾಡುತ್ತದೆ. ಇದೇ ರೀತಿಯ ಪ್ರಕ್ರಿಯೆಗೆ ಲೂಸಿಫೆರೇಸ್ ಮತ್ತು ಲೂಸಿಫೆರೇಸ್ ಕಿಣ್ವಗಳು ಬೇಕಾಗುತ್ತದೆ.
ಐಪಿಟಿ ಸಂಯುಕ್ತಗಳು ಎಂದು ಕರೆಯುವ ಕಡಿಮೆ ಲೂಸಿಫೆರಿನ್‌ಗಳ ವರ್ಗವು ಇತರ ಪ್ರೋಟೀನ್‌ಗಳಿಗೆ ಎದುರಾದಾಗ ಹೊಳೆಯುತ್ತದೆ ಎಂದು ಎಸಿಎಸ್ ಸೆಂಟ್ರಲ್ ಸೈನ್ಸ್ ಜರ್ನಲ್ ವರದಿ ಮಾಡಿದೆ. ಹಿಂದಿನ ಸಂಶೋಧನೆಯು ಐಪಿಟಿ ಲೂಸಿಫೆರಿನ್‌ಗಳು ಹೊಸ ರೀತಿಯ ವೈದ್ಯಕೀಯ ಪರೀಕ್ಷೆಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಿದೆ. ಇದೇ ಮಾದರಿ ಪ್ರೋಟೀನ್ ಇರುವಿಕೆಯ ಬಗ್ಗೆ ಬೆಳಕು ಚಲ್ಲುತ್ತದೆ ಎಂದು ತಿಳಿದು ಬಂದಿದೆ.
ಐಪಿಟಿ ಲೂಸಿಫೆರೇನ್ ಸಾರ್ಸ್ ಕೋವ್ 2 ಪ್ರೋಟಿನ್ ಜೊತೆಗೆ ಪ್ರತಿಕ್ರಿಯಿಸುತ್ತದೆ. ಇದು ವೈರಸ್ ಕಣಗಳು, ಕೋಶಗಳನ್ನು ಆಕ್ರಮಿಸಲು ಮತ್ತು ಕೋವಿಡ್ ಉಂಟುಮಾಡಲು ಅನುವು ಮಾಡಿಕೊಡುತ್ತದೆ. ಮತ್ತು ಹೊಳೆಯುವ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡಿದೆ ಎಂದು ಜೆಎಎಸ್ಟಿಯ ಆರ್ಯೊ ನಿಶಿಹಾರ ಮತ್ತು ರ್ಯೊಯಿ ಕುರಿಟಾ ತಿಳಿಸಿದ್ದಾರೆ.
ತಂಡವೂ ಮೊದಲ ಬಾರಿಗೆ 36 ವಿಧದ ಐಪಿಟಿ ಲೂಸಿಫೆರೇನ್ ಸಾಮರ್ಥ್ಯವನ್ನು ಸ್ಪೈಕ್ ಪ್ರೋಟಿನ್ನ ಏಕ ಘಟಕದ ಪ್ರತಿಕ್ರಿಯೆಯಲ್ಲಿ ತನಿಖೆ ನಡೆಸಿದ್ದಾರೆ. ಬಳಿಕ ಸಂಶೋಧಕರು ಲೂಸಿಫರೇನ್ ಚಟುವಟಿಕೆಯನ್ನು ಸಹಜ ಸ್ಥಿತಿಯಲ್ಲಿನ ಸ್ಪೈಕ್ ಪ್ರೋಟಿನ್ನೊಂದಿಗೆ ಪರೀಕ್ಷೆ ಮಾಡಿದ್ದಾರೆ. ಈ ವೇಳೆ 10 ನಿಮಿಷದಲ್ಲಿ ಅಗತ್ಯವಿರುವ ಬೆಳಕು ಪತ್ತೆಯಾಗಿದೆ.
ಇದಕ್ಕೆ ವಾಣಿಜ್ಯವಾಗಿ ಲಭ್ಯವಿರುವ ಲೂಮಿಸೆನ್ಸ್ ರಿಡೀಂಗ್ ಸಾಧಾನವೂ ಅವಶ್ಯವಿದೆ. ಈ ಬೆಳಕು ಬರೀಗಣ್ಣಿನಲ್ಲಿ ಕಾಣುವುದಿಲ್ಲ. ಹೆಚ್ಚುವರಿ ಪ್ರಯೋಗವೂ ಐಪಿಟಿ ಲೂಸಿಫರೇಸ್ ಆಯ್ಕೆಯಾಗಿದೆ. ಕಾರಣ ಇದು ಲಾಲಾರಸದನಲ್ಲಿ ಆರು ಪ್ರೋಟಿನ್ಗೆ ತೆರೆದುಕೊಂಡಾಗ ಹೊಳೆಯುವುದಿಲ್ಲ ಎಂದು ಸೂಚಿಸಿದೆ.
ಅಂತಿಮವಾಗಿ ತಂಡವೂ ಲಸಿಕೆ ಅಭಿವೃದ್ಧಿಯಲ್ಲಿ ಪ್ರಸ್ತುತ ಬಳಸಲಾಗುವ ತಂತ್ರದಂತೆಯೇ ಅದೇ ನಿಖರತೆಯೊಂದಿಗೆ ಲಾಲಾರಸದಲ್ಲಿನ ಸ್ಪೈಕ್ ಪ್ರೋಟೀನ್ ಪ್ರಮಾಣವನ್ನು ಪತ್ತೆ ಮಾಡಿದೆ. (ಐಎಎನ್ಎಸ್)
ಇದನ್ನೂ ಓದಿ: ಮಾರಣಾಂತಿಕ ನಿಫಾ ವೈರಸ್: ಮಾನವರ ಮೇಲೆ ಲಸಿಕೆ ಪ್ರಯೋಗ ಆರಂಭ