ಲಂಡನ್ : ಕೋವಿಡ್-19 ಪ್ರಪಂಚದಾದ್ಯಂತ ಸರಾಸರಿ ಜೀವಿತಾವಧಿಯಲ್ಲಿ ದೀರ್ಘಾವಧಿಯ ಕಡಿತವನ್ನು ಉಂಟುಮಾಡಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹೀಗಾಗಿ ಕಳೆದ 70 ವರ್ಷಗಳ ಅವಧಿಯಲ್ಲಿ ಕಾಣದ ರೀತಿಯಲ್ಲಿ ಮರಣ ಪ್ರಮಾಣ ಹೆಚ್ಚಾಗಿವೆ. ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಈ ಸಂಶೋಧನೆ ನಡೆಸಿದ್ದಾರೆ.
ಇದಕ್ಕಾಗಿ ಅವರು 29 ದೇಶಗಳ ಡೇಟಾ ವಿಶ್ಲೇಷಿಸಿದ್ದಾರೆ. ಬಲ್ಗೇರಿಯಾ, ಚಿಲಿ, ಜರ್ಮನಿ, ಗ್ರೀಸ್ ಮತ್ತು ಪೋಲೆಂಡ್‌ನಂತಹ ದೇಶಗಳಲ್ಲಿ ಸರಾಸರಿ ಜೀವಿತಾವಧಿ 2020 ಕ್ಕೆ ಹೋಲಿಸಿದರೆ 2021 ರಲ್ಲಿ ಕಡಿಮೆಯಾಗಿದೆ. 2020 ರಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾದವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ ಮತ್ತು ಅದರ ಮುಂದಿನ ವರ್ಷ ಈ ಪರಿಸ್ಥಿತಿ ಬದಲಾಯಿತು ಎಂದು ತಿಳಿಯಲಾಗಿದೆ.
ಕೋವಿಡ್ ಲಸಿಕೆಯಿಂದ ಒದಗಿಸಲಾದ ರಕ್ಷಣೆಯಿಂದ ವಯಸ್ಸಾದವರಲ್ಲಿ ಸಾವು ಕಡಿಮೆಯಾಗಿದೆ, ಆದರೆ, ಯುವಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ: ಪುರುಷರಿಗಿಂತ ಮಹಿಳೆಯರ ಜೀವಿತಾವಧಿ ಹೆಚ್ಚು : ಯಾಕೆಂದು, ತಜ್ಞರೇ ಹೇಳಿದಾರೆ ಓದಿ