ನವದೆಹಲಿ: ಮಂಡಿ ನೋವು ಹೆಚ್ಚು ತ್ರಾಸದಾಯಕ ಜೊತೆಗೆ ದೀರ್ಘ ಕಾಲ ಕಾಡುವ ನೋವಾಗಿದೆ. ಇದರಿಂದ ಓಡಾಡುವುದು ಕಷ್ಟವಾಗುವುದರ ಜೊತೆಗೆ ಮಾನಸಿಕ ಸ್ಥಿತಿ ಮೇಲೆ ಕೂಡ ಪರಿಣಾಮ ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಈ ನೋವು ನಿಯಂತ್ರಣ ಹೆಚ್ಚು ಕಷ್ಟಕರವಾಗಿರಲಿದೆ. ವಾತಾವರಣದಲ್ಲಿ ವಾಯುಭಾರ ಕುಸಿತದಿಂದ ಕೀಲು ನೋವಿನ ಸಮಸ್ಯೆ ಹೆಚ್ಚುವುದರ ಜೊತೆಗೆ ಊತಕ್ಕೆ ಕೂಡ ಕಾರಣವಾಗುತ್ತದೆ. ಈ ಕೀಲು ನೋವು ಅಸಾಧ್ಯವಾದ ಮಂಡಿ ನೋವಿಗೆ ಕಾರಣವಾಗುತ್ತದೆ.
ಮಂಡಿ ನೋವು ನಿಮ್ಮ ದೈನಂದಿನ ಚಟುವಟಿಕೆಗೆ ಅಡ್ಡಿ ಮಾಡುತ್ತಿದ್ದರೆ, ಇದರಿಂದ ನಿಮ್ಮ ದೈನಂದಿನ ಚಟುವಟಿಕೆ ಮಾಡಲು ಸಾಧ್ಯವಾ ಎಂಬುದನ್ನು ಮೊದಲು ಪರಿಶೀಲನೆ ನಡೆಸಬೇಕು. ಮಂಡಿ ಕಾಲಿನ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಹೊರತಾದ ಚಿಕಿತ್ಸೆಗಳನ್ನು ಕೂಡ ಪರಿಶೀಲನೆ ನಡೆಸಬೇಕಾಗುತ್ತಿದೆ. ವೈದ್ಯರು ನೀವು ಶಸ್ತ್ರ ಚಿಕಿತ್ಸೆಗೆ ಒಳಗಾಗುವುದರಿಂದ ಇದರಿಂದ ಉಪಶಮನ ಪಡೆಯಬಹುದು ಎಂದರೆ, ಅದರ ಮೊರೆ ಹೋಗುವುದು ಅನಿವಾರ್ಯ ಮತ್ತು ಅವಶ್ಯವಾಗಿರುತ್ತದೆ. ಇನ್ನು ಶಸ್ತ್ರ ಚಿಕಿತ್ಸೆ ಇಲ್ಲದೇ, ಈ ಮಂಡಿ ಕಾಲಿನ ನೋವನ್ನು ಉಪ ಶಮನ ಮಾಡುವುದು ಹೇಗೆ ಎಂದು ಚಿಂತಿಸುತ್ತಿದ್ದರೆ, ಅದಕ್ಕೆ ಸರಳ ಉಪಾಯಗಳು ಇಲ್ಲಿವೆ.
ಎನ್ಎಸ್ಎಐಡಿ: ನಾನ್ ಸ್ಟಿರಾಯ್ಡ್ ಆ್ಯಂಟಿ ಇನ್ಫ್ಲಾಮೆಟರಿ ಡ್ರಗ್ಸ್ ಅಂದರೆ ಸ್ಟಿರಾಯ್ಡ್ ಹೊರತಾದ ನೋವಿನ ಔಷಧಗಳು ಕೆಲವೊಮ್ಮೆ ಈ ಮಂಡಿ ನೋವಿನಿಂದ ನಿಮ್ಮನ್ನು ಪಾರು ಮಾಡಬಹುದಾದ ಮೊದಲ ಹಂತವಾಗಿದೆ. ಪ್ರಿಸಕ್ಷಿಪ್ನಲ್ಲಿ ಸೂಚಿಸಿದಂತಹ ಎನ್ಎಸ್ಎಐಡಿಗಳು ಈ ಮಂಡಿಕಾಲಿನ ಸಮಸ್ಯೆಗೆ ಪರಿಹಾರ ನೀಡಬಲ್ಲದು. ದೀರ್ಘಾವಧಿಯ ಹಾಗೂ ಚೇತರಿಸಿಕೊಳ್ಳುವಾಗ ಅಥವಾ ಇತರ ಚಿಕಿತ್ಸಾ ಆಯ್ಕೆಗಳನ್ನು ಮಾಡುವಾಗ ಇದು ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುತ್ತದೆ.
ಚುಚ್ಚುಮದ್ದು: ಮಂಡಿ ನೋವಿನ ಸಮಸ್ಯೆ ನಿವಾರಣೆಗೆ ಮತ್ತೊಂದು ಪರಿಣಾಮಕಾರಿ ಚಿಕಿತ್ಸೆ ಎಂದರೆ ಚುಚ್ಚುಮದ್ದು. ಈ ಚುಚ್ಚುಮದ್ದುಗಳಲ್ಲಿ ಸ್ಟಿರಾಯ್ಡ್ ಅಥವಾ ಆ್ಯಂಟಿ ಇನ್ಫ್ಲಾಮಟರಿ ಡ್ರಗ್ ಇದ್ದು, ಇದು ತಾತ್ಕಾಲಿಕವಾಗಿ ನಿಮ್ಮ ನೋವನ್ನು ಕಡಿಮೆ ಮಾಡುತ್ತದೆ.
ಸ್ಟಿರಾಯ್ಡ್ ಇಂಜೆಕ್ಷನ್ ತಕ್ಷಣಕ್ಕೆ ನಿಮ್ಮ ಕಾರ್ಯ ನಿರ್ವಹಿಸುವುದರಿಂದ ನೋವಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಹೈಲುರಾನಿಕ್ ಆ್ಯಸಿಡ್, ಲೂಬ್ರಿಕಂಟ್ಗಳು ಮತ್ತು ಆ್ಯಂಟಿ- ಇನ್ಫ್ಲಾಮೆಟರಿ ಔಷಧಗಳನ್ನು ಆಗಾಗ್ಗೆ ಇನ್ಫ್ಲಾಮೆಟರಿ ಚುಚ್ಚುಮದ್ದುಗಳಲ್ಲಿ ಸಂಯೋಜಿಸಲಾಗುತ್ತದೆ.
ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮ (ಪಿಆರ್ಪಿ): ಕ್ರೀಡಾ ಗಾಯಗಳು ಮತ್ತು ಕೀಲು ನೋವು ಸಮಸ್ಯೆಗಳಿಗೆ ಅತಿ ಹೆಚ್ಚು ಪ್ರಖ್ಯಾತಿ ಪಡೆದ ಚಿಕಿತ್ಸಾ ವಿಧಾನ ಇದಾಗಿದೆ. ಗಾಯವಾದ ಜಾಗದಲ್ಲಿ ಪ್ಲೇಟ್‌ಲೆಟ್ ರಿಚ್ ಪ್ಲಾಸ್ಮಾವನ್ನು ಚುಚ್ಚಲು ರೋಗಿಯ ರಕ್ತವನ್ನು ಬಳಸಲಾಗುತ್ತದೆ. ಪ್ಲೇಟ್‌ಲೆಟ್‌ಗಳು ಎಂದು ಕರೆಯಲ್ಪಡುವ ರಕ್ತದ ಕಣಗಳು ಹೆಪ್ಪುಗಟ್ಟುವಿಕೆ ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ಕಾರಣವಾಗಿವೆ. ಇದು ದೇಹದ ನೈಸರ್ಗಿಕ ಚಿಕಿತ್ಸೆ ಪ್ರಕ್ರಿಯೆಗಳನ್ನು ತಮ್ಮ ಮ್ಯಾಜಿಕ್ ರೀತಿ ಕೆಲಸ ಮಾಡಲು ಮತ್ತು ನೋವನ್ನು ಗುಣಪಡಿಸಲು ಬಳಸಲಾಗುತ್ತದೆ.
ಬ್ರೇಸಿಂಗ್: ಮೊಣಕಾಲಿನ ಸ್ನಾಯುಗಳನ್ನು ಬಲಪಡಿಸಲು, ಕೀಲನ್ನು ಸ್ಥಿರಗೊಳಿಸಲು ಮತ್ತು ಅಸ್ವಸ್ಥತೆ ಮತ್ತು ಉರಿಯೂತವನ್ನು ನಿವಾರಿಸಲು ಪಟ್ಟಿಗಳನ್ನು ತಯಾರಿಸಲಾಗುತ್ತದೆ. ಈ ಪಟ್ಟಿಗಳು ಮೂಳೆ ಮೇಲ್ಮೈಗಳ ನಡುವಿನ ಘರ್ಷಣೆಯನ್ನು ಕಡಿಮೆ ಮಾಡುತ್ತದೆ, ನೋವನ್ನು ಕಡಿಮೆ ಮಾಡುತ್ತದೆ
ಫಿಸಿಕಲ್ ಥೆರಪಿ: ಫಿಸಿಕಲ್ ಥೆರಪಿಸ್ಟ್ ಸಹಾಯದಿಂದಾಗಿ ಮೊಣಕಾಲು ನೋವು ಶಮನ ಮಾಡಬಹುದಾಗಿದೆ. ಸ್ಟ್ರೇಚ್ ಮತ್ತು ವ್ಯಾಯಾಮದಿಂದ ಮೊಣಕಾಲು ಮತ್ತು ಸುತ್ತಲಿನ ಸ್ನಾಯುವನ್ನು ಬಲಗೊಳಿಸಲಾಗುವುದು. ಅನೇಕ ವಿಧದ ಸ್ಟ್ರೇಚ್ ಮತ್ತು ವ್ಯಾಯಾಮ ಮಸಾಜ್ ಥೆರಪಿ ಪಡೆದು ನೋವಿನ ಶಮನ ಮಾಡುತ್ತದೆ. ಜೊತೆಗೆ ಸ್ನಾಯುವನ್ನು ಬಲಗೊಳಿಸಿ, ಸುಲಭತೆ ಹೆಚ್ಚುಸಿ, ಚಲನಶೀಲತೆ ಸಹಾಯ ಮಾಡುತ್ತದೆ.
ಜೀವನ ಶೈಲಿ ಮಾರ್ಪಡು: ನಿಮ್ಮ ದೈನಂದಿನ ಜೀವನದ ಕ್ರಮದಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಕೂಡ ಮೊಣಕಾಲು ನೋವಿನಿಂದ ಮುಕ್ತಿ ಪಡೆಯಬಹುದು. ನಿಮ್ಮ ತೂಕವನ್ನು ಕಳೆದುಕೊಳ್ಳುವುದು. ಓಟದಂತಹ ಶ್ರಮದಾಯಕ ಚಟುವಟಿಕೆಯಿಂದ ದೂರವಿರುವುದು ಜೊತೆಗೆ ಕಡಿಮೆ ಪರಿಣಾಮ ಬೀರುವ ವ್ಯಾಯಮದಲ್ಲಿ ತೊಡಗಿಸಿಕೊಳ್ಳುವುದರಿಂದ ನೋವು ಕಡಿಮೆಯಾಗಲಿದೆ. ನೋವಿನ ನಿವಾರಣೆಗೆ ನೀವು ಕೆಲವು ಡಯಟ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ
ಇವುಗಳ ಹೊರತಾಗಿ ಕೆಲವರಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಉಂಟಾಗುತ್ತದೆ. ಎಂತಹ ಸಂದರ್ಭದಲ್ಲಿ ಇದರ ಮೊರೆ ಹೋಗಬೇಕು ಎಂಬುದಕ್ಕೆ ಇಲ್ಲಿದೆ ಮಾಹಿತಿ
ಸಂಪೂರ್ಣ ಮಂಡಿ ಚಿಪ್ಪಿನ ಶಸ್ತ್ರ ಚಿಕಿತ್ಸೆ: ಶಸ್ತ್ರ ಚಿಕಿತ್ಸೆಗಳು ನಿಮಗೆ ಉಪಯೋಗವಾಗುತ್ತಿಲ್ಲ ಎಂದರೆ ಆಗ ವೈದ್ಯರು ಸಂಪೂರ್ಣವಾಗಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಅನಿವಾರ್ಯ ಎನ್ನುತ್ತಾರೆ. ಮೊಣಕಾಲಿನ ಕೀಲು ಹಾನಿಗೊಳಗಾಗಿದ್ದರೆ ಇದು ಅನಿವಾರ್ಯವಾಗುತ್ತದೆ.
ಭಾಗಶಃ ಮೊಣಕಾಲು ಶಸ್ತ್ರ ಚಿಕಿತ್ಸೆ: ಯುನಿಕಾಪಾರ್ಟ್ಮೆಂಟಲ್ ಮೊಣಕಾಲು ಆರ್ತ್ರೋಪ್ಲ್ಯಾಸ್ಟಿ ಎಂದೂ ಕರೆಯಲ್ಪಡುವ ಈ ವಿಧಾನವು ಮೊಣಕಾಲಿನ ಮೂರು ವಿಭಾಗಗಳಲ್ಲಿ ಒಂದನ್ನು ಬದಲಾಯಿಸುತ್ತದೆ. ಇವುಗಳು ಪ್ಯಾಟೆಲೊಫೆಮೊರಲ್, ಮಧ್ಯದ ಮತ್ತು ಪಾರ್ಶ್ವದ ಪ್ರದೇಶಗಳಾಗಿರಬಹುದು. ಈ ಚಿಕಿತ್ಸೆಯಲ್ಲಿ ಸಂಧಿವಾತ ಹಾನಿಗೊಳಗಾದ ಕಂಪಾರ್ಟ್‌ಮೆಂಟ್‌ಗೆ ಚಿಕಿತ್ಸೆ ನೀಡಲಾಗುತ್ತದೆ.
ಆರ್ಥೋಸ್ಕೋಪಿಕ್ ಕಾರ್ಯವಿಧಾನ: ಶಸ್ತ್ರ ಚಿಕಿತ್ಸೆ ಮತ್ತು ಪತ್ತೆ ಕಾರ್ಯ ವಿಧಾನ ಈ ಆರ್ಥೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಆಗಿದೆ. ಇದು ಮೊಣಕಾಲಿನ ಅಸ್ವಸ್ಥತೆಯನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷಮತೆ ಕುಂದುತ್ತಿದೆಯೇ? ಕಾರಣ ಇಲ್ಲಿದೆ, ಪರಿಹಾರ ಹೀಗಿದೆ..