ETV Bharat / sukhibhava

ಮರೆವು ಖಾಯಿಲೆ ಇರುವವರ ಮೇಲೆ ಕೋವಿಡ್​ ಪರಿಣಾಮವೇನು? - ನೆನಪನ್ನು ಮಸುಕಾಗಿಸುತ್ತದೆಯಾ ಎಂಬುದರ ಕುರಿತು

ಈಗಾಗಲೇ ಮರೆವಿನ ಸಮಸ್ಯೆಗೆ ತುತ್ತಾಗಿರುವ ರೋಗಿಗಳಲ್ಲಿ ಕೋವಿಡ್​ ಮತ್ತೆ ನೆನಪನ್ನು ಮಸುಕಾಗಿಸುತ್ತದೆಯೇ ಎಂಬುದರ ಕುರಿತು ಪಶ್ಚಿಮ ಬಂಗಾಳ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

How will covid infection affect dementia patients

author img

By

Published : Apr 5, 2023, 2:54 PM IST

ನವದೆಹಲಿ: ಕೋವಿಡ್​ ಸೋಂಕಿನ ಪರಿಣಾಮ ಕುರಿತು ಈಗಾಗಲೇ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಇದೀಗ ಕೋವಿಡ್​ನ ಸಾರ್ಸ್​ ಕೋವ್​ 2 ಸೋಂಕು ಮರೆವಿನ ಕಾಯಿಲೆಯಾದ ಡೆಮನ್ಶಿಯಾ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಡೆಮನ್ಶಿಯಾ ರೋಗಿಯ ಅರಿವಿನ ವ್ಯವಸ್ಥೆ ಮೇಲೆ ಸಾರ್ಸ್​ ಕೋವ್​-2 ಸೋಂಕು ಗಣನೀಯ ಪರಿಣಾಮ ಬೀರಲಿದೆ ಎಂದು ತಿಳಿಸಲಾಗಿದೆ.

ಈ ಸಂಬಂಧ ಪಶ್ಚಿಮ ಬಂಗಾಳದ ಸಂಶೋಧಕರ ತಂಡ ಅಧ್ಯಯನ ನಡೆಸಿದೆ. ಕೋವಿಡ್​ ಮೊದಲ ಅಲೆಯಲ್ಲಿ ನರರೋಗ ತಜ್ಞರು ನರಗಳ ಮೇಲೆ ಕಡಿಮೆ ಮತ್ತು ದೀರ್ಘ ಪರಿಣಾಮವನ್ನು ಕಂಡಿದ್ದಾರೆ. ಆದಾಗ್ಯೂ ಮಾನವ ಅರಿವಿನ ಮೇಲೆ ಕೋವಿಡ್​ ಸೋಂಕಿನ ಎಫೆಕ್ಟ್‌ ಅಸ್ಪಷ್ಟವಾಗಿದೆ. ನರ ರೋಗಶಾಸ್ತ್ರಜ್ಞರು ಇದನ್ನು ಬ್ರೇನ್​ ಫಾಗ್​ ಎಂದು ಹೇಳುತ್ತಿದ್ದಾರೆ.

ಅರಿವಿನ ಮೇಲಿನ ಪರಿಣಾಮದ ಉತ್ತಮ ವಿವರಣೆಗೆ ತಂಡ ಹೊಸ ಪದವನ್ನು ಪ್ರಸ್ತಾಪಿಸಿದೆ. ಆ ಪದವೇ ಫೇಡ್​ ಇನ್​ ಮೆಮೊರಿ. (ಆಯಾಸ, ಏಕಾಗ್ರತೆ, ಒತ್ತಡ, ಸ್ಮರಣ ಶಕ್ತಿ, ಮಾಹಿತಿ ಪ್ರಕ್ರಿಯೆ ವೇಗ ನಿಧಾನ). ಈಗಾಗಲೇ ಡೆಮನ್ಶಿಯಾ ಹೊಂದಿರುವ 14 ರೋಗಿಗಳ ಮೇಲೆ ಕೋವಿಡ್​ ಪರಿಣಾಮದ ಕುರಿತಾಗಿ ತನಿಖೆ ನಡೆಸಲಾಗಿದೆ. ಸೋಂಕು ನಂತರ ಅವರಲ್ಲಿ ಅರಿವಿನ ಕೊರತೆ ಸಮಸ್ಯೆ ಹೆಚ್ಚಿದೆ.

ಆಲ್ಜೆಮೈರಾ ಸಮಸ್ಯೆ ವರದಿಯಲ್ಲಿ ಈ ಜರ್ನಲ್​ ಅನ್ನು ಪ್ರಕಟಿಸಲಾಗಿದೆ. ಇದರಲ್ಲಿ ರೋಗಿಯಲ್ಲಿನ ಡೆಮನ್ಶಿಯಾ ಸಾರ್ಸ್​ ಕೋವ್​-2 ಸೋಂಕಿನ ಬಳಿಕ ಗಣನೀಯವಾಗಿ ಹೆಚ್ಚಾಗಿರುವುದು ಕಂಡು ಬಂದಿದೆ. ವಯಸ್ಸಾದವ ಜನಸಂಖ್ಯೆ ಮತ್ತು ಡೆಮನ್ಶಿಯಾ ಜಾಗತಿಕವಾಗಿ ಏರುತ್ತಿದೆ. ಕೋವಿಡ್​ ಡೆಮನ್ಶಿಯಾ ರೋಗಿಗಳ ಮೇಲೆ ಪರಿಣಾಮ ಬೀರುತ್ತಿದೆಯೇ ಅಥವಾ ಡೆಮನ್ಶಿಯಾದ ಇತರೆ ವಿಧವು ಅರಿವಿನ ಮೇಲೆ ಪರಿಣಾಮ ಹೊಂದಿದೆಯೇ ಎಂಬುದರ ಕುರಿತ ಸಂಬಂಧವನ್ನು ನಾವು ಕಾಣಬೇಕಿದೆ ಎಂದು ಡಾ.ಸೌವಿಕ್​ ಡುಬೆ ತಿಳಿಸಿದ್ದಾರೆ.

ಇದರ ಅರ್ಥೈಸಿಕೊಳ್ಳುವಿಕೆಯಿಂದ ಭವಿಷ್ಯದಲ್ಲಿ ಡೆಮನ್ಶಿಯಾ ಸಂಶೋಧನೆ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ತಂಡ ಕೂಡ ಈ ಹಿಂದಿನ ಡೆಮನ್ಶಿಯಾ ರೋಗಿಗಳಿಗೆ ಹೋಲಿಕೆ ಮಾಡಿದರೆ, ರೋಗಿಗಳ ಹಿಂದಿನ ಬುದ್ಧಿಮಾಂದ್ಯತೆಯ ಪ್ರಕಾರಗಳನ್ನು ಲೆಕ್ಕಿಸದೆಯೇ, ವಿವಿಧ ರೀತಿಯ ಬುದ್ಧಿಮಾಂದ್ಯತೆಯ ನಡುವಿನ ಗಡಿರೇಖೆಯು ಕೋವಿಡ್ ನಂತರ ಗಮನಾರ್ಹವಾಗಿ ಮಸುಕಾಗಿದೆ ಎಂದು ಕಂಡುಹಿಡಿದಿದೆ. ನಿರ್ದಿಷ್ಟ ವಿಧದ ಡೆಮನ್ಶಿಯಾ ಕೋವಿಡ್​ನಿಂದ ಬದಲಾಗಿದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಕ್ಷೀಣಗೊಳ್ಳುವ ಮತ್ತು ಭವಿಷ್ಯದ ಡೆಮನ್ಶಿಯಾ ಕ್ಲಿನಿಕಲಿ ಮತ್ತು ರೆಡಿಯಾಲಾಜಿಕಲಿ ಮಿಶ್ರವಾಗಿ ಪ್ರಾರಂಭವಾಗುತ್ತದೆ.

ಶೀಘ್ರ ಆಕ್ರಮಣ, ನಿಧಾನವಾಗಿ ಪ್ರಗತಿಶೀಲ ಡಿಮನ್ಸಿಯಾದ ಹಿಂದೆ ಅರಿವಿನ ಸ್ಥಿರತೆ ಹೊಂದಿರುವ ರೋಗಿಗಳಲ್ಲಿ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಕ್ಷೀಣಿಸುತ್ತಿರುವ ಕೋರ್ಸ್ ಅನ್ನು ಗಮನಿಸಲಾಗಿದೆ. ಡೆಮನ್ಶಿಯಾ ತ್ವರಿತ ಪ್ರಗತಿ, ಅರಿವಿನ ಸಾಮರ್ಥ್ಯಗಳ ಮತ್ತಷ್ಟು ದುರ್ಬಲತೆಗಳು, ಕ್ಷೀಣಿಸುವಿಕೆ ಹೊಸ ಆಕ್ರಮಣವನ್ನು ತಡೆದುಕೊಳ್ಳಲು ಕಡಿಮೆ ರಕ್ಷಣೆಯನ್ನು ಹೊಂದಿವೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: ಮರೆವಿನ ಕಾಯಿಲೆಗೆ D-Vitamin ಮದ್ದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.