ETV Bharat / sukhibhava

ವೈರಲ್​ ಸೋಂಕಿನಿಂದ ಬಳಲುತ್ತಿದ್ದೀರಾ? ಮನೆಯಲ್ಲೇ ಇದೆ ಮದ್ದು! ಇದರಿಂದ ಜ್ವರ, ನೆಗಡಿ ಮಾಯ - ಋತುಮಾನಗಳು ಬದಲಾದಂತೆ ಗಾಳಿಯ ಸೋಂಕುಗಳು

ಚಳಿಗಾಲದಲ್ಲಿ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ ಜ್ವರ, ನೆಗಡಿ, ಕೆಮ್ಮು. ಇಂತಹ ಸೋಂಕುಗಳಿಗೆ ಮನೆಯಲ್ಲೇ ಮದ್ದಿದೆ. ಇವು ಅತ್ಯಂತ ಪರಿಣಾಮಕಾರಿ ಕೂಡಾ.

ವೈರಲ್​ ಸೋಂಕಿನಿಂದ ಬಳಲುತ್ತಿದ್ದರೆ ಮನೆಯಲ್ಲೇ ಇದೆ ಮದ್ದು; ಇದರಿಂದ ಜ್ವರ, ನೆಗಡಿ ಮಾಯ
home-remedies-for-viral-infection-in-winter
author img

By

Published : Jan 23, 2023, 10:42 AM IST

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ವಯಸ್ಕರು, ಮಕ್ಕಳಲ್ಲಿ ಜ್ವರ (ವೈರಲ್​ ಫೀವರ್)​ ಕಂಡು ಬರುವುದು ಸಹಜವಾಗಿದೆ. ಋತುಮಾನ ಬದಲಾದಂತೆ ಗಾಳಿಯಲ್ಲಿ ಹರಡುವ ಸೋಂಕುಗಳು ಜ್ವರಕ್ಕೆ ಕಾರಣವಾಗುತ್ತವೆ. ನಾವು ಉಸಿರಾಡುವ ಗಾಳಿಯೂ ಸಾಮಾನ್ಯ ಜ್ವರ, ನೆಗಡಿ ಮತ್ತು ಕೆಮ್ಮಿಗೆ ಕಾರಣವಾಗುತ್ತದೆ. ಸಾಮಾನ್ಯ ಜ್ವರಕ್ಕೆ ಉತ್ತಮ ಆಹಾರ ಸೇವನೆ, ವಿಶ್ರಾಂತಿ ಅವಶ್ಯಕ. ಇನ್ನು ಮನೆಯಲ್ಲೇ ಸಿಗುವ ಔಷಧಗಳ ಮೂಲಕ ಈ ಸಾಮಾನ್ಯ ಜ್ವರ ನಿವಾರಣೆ ಮಾಡಬಹುದಾಗಿದ್ದು, ಅಂತಹ ಕೆಲವು ಮನೆ ಮದ್ದುಗಳು ಇಲ್ಲಿವೆ.

ಶುಂಠಿ ಚಹಾ: ನೋವು ಶಮನ ಮತ್ತು ಜ್ವರದ ಸೋಂಕಿನ ಕಡಿಮೆ ಮಾಡುವಲ್ಲಿ ಶುಂಠಿ ಅದ್ಭುತ ಪ್ರಭಾವ ಬೀರುತ್ತದೆ. ಇದು ಆ್ಯಂಟಿ ಇನ್ಫಾಮೆಟರಿ, ರೋಗ ನಿರೋಧಕ ಮತ್ತು ನೋವು ನಿರೋಧಕರ ಸಾಮರ್ಥ್ಯ ಹೊಂದಿದೆ. ಶುಂಠಿ ಚಹಾದೊಂದಿಗೆ ಜೇನು ತುಪ್ಪ ಸೇವಿಸುವುದು ಒಳ್ಳೆಯದು. ಜೇನು ತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಕೆಮ್ಮು ಮತ್ತು ಸೋಂಕುಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜ್ವರದಿಂದ ಮುಕ್ತಿ ಹೊಂದಲು ಪ್ರತಿನಿತ್ಯ ಕನಿಷ್ಟ ಐದು ಬಾರಿ ಶುಂಠಿ ಮಿಶ್ರಿತ ಬಿಸಿನೀರು ಸೇವನೆ ಉತ್ತಮ. ಇದರಲ್ಲಿ ತುಪ್ಪ ಸೇವಿಸುವುದನ್ನು ಮರೆಯಬೇಡಿ.

ಕರಿ ಮೆಣಸು: ನೋವು ಶಮನ ಮತ್ತು ಸಮತೋಲನತೆಯ ಪರಿಣಾಮವನ್ನು ಈ ಕರಿ ಮೆಣಸು ಹೊಂದಿದೆ. ಆಯುರ್ವೇದದಲ್ಲಿ ಕರಿ ಮೆಣಸು ಬಹು ಉಪಯುಕ್ತ ಪದಾರ್ಥವಾಗಿ ಬಳಕೆ ಮಾಡಲಾಗುವುದು. ಜೀವವಿರೋಧಿ ಮತ್ತು ಪ್ರತಿಜೀವಕ ಗುಣಲಕ್ಷಣಗಳ ವಿರುದ್ದ ಹೋರಾಡಿ ನಿಮ್ಮ ಉಸಿರಾಟದ ವ್ಯವಸ್ಥೆಯನ್ನಿದು ಸಾರಾಗವಾಗುವಂತೆ ಮಾಡುತ್ತದೆ. ಅಲ್ಲದೇ, ಇದರಲ್ಲಿನ ಅತಿ ಹೆಚ್ಚಿನ ವಿಟಮಿನ್​ ಸಿ ಗುಣ ಬಲವಾದ ರೋಗ ನಿರೋಧಕ ಶಕ್ತಿ ಮತ್ತು ರೋಗದ ವಿರುದ್ಧ ಹೋರಾಡಲು ಸಹಕಾರಿ.

ಅಜ್ವನಿ: ಭಾರತೀಯ ಸಂಪ್ರದಾಯಿಕ ಔಷಧಿ ಇದು. ಇದು ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಸಾಮಾನ್ಯವಾಗಿ ನೆಗಡಿ ಮತ್ತು ಉಸಿರಾಟದ ಸೋಂಕಿನ ವಿರುದ್ಧ ಹೋರಾಡುತ್ತದೆ. ಇದರಲ್ಲಿ ಅತಿ ಹೆಚ್ಚಿನ ಫೈಬರ್​, ವಿಟಮಿನ್​ ಮತ್ತು ಮಿನರಲ್​ ಇದೆ.

ಜೀರಿಗೆ: ಭಾರತೀಯ ಅಡುಗೆ ಮನೆಯಲ್ಲಿರುವ ಪರಿಣಾಮಕಾರಿ ಔಷಧಗಳಲ್ಲಿ ಇದೂ ಒಂದು. ಉಸಿರಾಟದ ಸೋಂಕು ಮತ್ತು ದೀರ್ಘಕಾಲದ ಜ್ವರಕ್ಕೆ ಇದು ಪರಿಣಾಮಕಾರಿ. ಇದರಲ್ಲಿರುವ ಜೀವ ವಿರೋಧಕ ಶಕ್ತಿ ನಿಮ್ಮ ದೇಹದಲ್ಲಿನ ರೋಗ ನಿರೋಧಕವನ್ನು ಬಲಪಡಿಸುವ ಜೊತೆಗೆ ಬೇಗ ಹುಷಾರಾಗುವಂತೆ ಮಾಡುತ್ತದೆ.

ತುಳಸಿ ಚಹಾ: ಧಾರ್ಮಿಕ ಮಾನ್ಯತೆ ಹೊಂದಿರುವ ತುಳಸಿ ಪರಿಣಾಮಕಾರಿ ಮನೆ ಮದ್ದು ಕೂಡ. ಯುಜೆನಾಲ್, ಸಿಟ್ರೊನೆಲ್ಲೋಲ್ ಮತ್ತು ಲಿನೂಲ್ ಸೇರಿದಂತೆ ಬಾಷ್ಪಶೀಲ ತೈಲಗಳು ತುಳಸಿಯಲ್ಲಿ ಕಂಡು ಬರುತ್ತದೆ. ಇದು ಊರಿಯುತ ಶಮನಕ್ಕೆ ಸಹಕಾರಿ. ಇದರಲ್ಲಿ ಜೀವ ವಿರೋಧಿ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರನಾಶಕದ ಗುಣಗಳು ಜ್ವರದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಮ್ಮು, ಜ್ವರ ಅಥವಾ ಗಂಟಲು ನೋವು ಕಾಡುತ್ತಿದ್ದರೆ, ತುಳಸಿ ನೀರನ್ನು ಕುಡಿಯಬೇಕು. ಇಲ್ಲವೇ ತುಳಸಿ ಎಲೆಗಳನ್ನು ಅಗೆಯಬೇಕು.

ಇದನ್ನೂ ಓದಿ: ಚಳಿಗಾಲದಲ್ಲಿ ಬಾಯಾರಿಕೆ ಆಗಲ್ಲ ಅಂತ ನೀರು ಕಡಿಮೆ ಕುಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.