ಲಂಡನ್: ಸಾಮಾನ್ಯವಾಗಿ ವಿವಿಧ ರೋಗಗಳ ಪರೀಕ್ಷೆ ಹಲವು ರಕ್ತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆದರೆ, ಒಂದೇ ಹನಿ ರಕ್ತದ ಮೂಲಕ ಎಚ್ಐವಿ, ಹೆಪಟೈಟಸ್ ಬಿ ಮತ್ತು ಹೆಪಟೈಟರ್ ಸಿ ರೋಗದ ಪತ್ತೆ ಮಾಡಬಹುದಾಗಿದೆ ಎಂದು ಡ್ಯಾನಿಷ್ ಸಂಶೋಧನೆಯೊಂದು ತಿಳಿಸಿದೆ. ಈ ಹೊಸ ಅಧ್ಯಯನವನ್ನು ಡೆನ್ಮಾರ್ಕ್ನ ಕೂಪನ್ ಹೆಗನ್ ಯುನಿವರ್ಸಿಟಿ ಹಾಸ್ಪಟಿಟಲ್ ಅಭಿವೃದ್ಧಿಪಡಿಸಿದೆ. ರಕ್ತದಲ್ಲಿನ ನ್ಯೂಕ್ಲೆಕ್ ಆಸಿಡ್ ಮೂಲಕ ಈ ಮೂರು ವೈರಸ್ಗಳನ್ನು ಪತ್ತೆ ಮಾಡಬಹುದು. ಆಸ್ಪತ್ರೆಗಳ ಉಪಕರಣ ಬಳಕೆ ಮಾಡಿಕೊಂಡು ಇದನ್ನು ಪತ್ತೆ ಮಾಡಲಾಗಿದೆ. ಒಂದೇ ರಕ್ತದ ಡ್ರಾಪ್ನಲ್ಲಿ ಎಚ್ಐವಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಪತ್ತೆ ಮಾಡಬಹುದು ಎಂದು ಸ್ಟೇಪೆನ್ ನಿಲ್ಸೊನ್-ಮೊಲೆರ್ ತಿಳಿಸಿದ್ದಾರೆ.
ಕೊಣೆಯ ತಾಪಮಾನದಲ್ಲಿ ಆರು ಗಂಟೆಗಳ ಕಾಲ ಇಟ್ಟ ರಕ್ತದ ಮಾದರಿಗಳನ್ನು ವಿಶ್ಲೇಷಣೆ ನಡೆಸಿ ಈ ಬಗ್ಗೆ ವರದಿ ತಯಾರಿಸಲಾಗಿದೆ. ಇನ್ನು ಒಣಗಿದ ರಕ್ತವನ್ನು ಯಾವುದೇ ಶೀತಲೀಕರಣ ನಡೆಸದೇ ಒಂಬತ್ತು ತಿಂಗಳು ಕಾಲ ಬಿಟ್ಟು ಕೂಡ ಪರೀಕ್ಷೆ ನಡೆಸಿ, ಫಲಿತಾಂಶ ಪಡೆಯಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಬೆರಳಿಗೆ ಸೂಚಿ ಚುಚ್ಚುವ ಮೂಲಕ ಅಥವಾ ಫಿಲ್ಟರ್ ಪೇಪರ್ನಲ್ಲಿ ರಕ್ತವನ್ನು ಒಣಗಿಸುವ ಮೂಲಕ ಇದರ ಸೋಂಕನ್ನು ಪರೀಕ್ಷೆ ನಡೆಸಬಹುದು. ಹೊಲೊಜಿಕ್ ಪಂಥರ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ವ್ಯಾಪಕ ಸಾಧನದ ಮೂಲಕ ಇದನ್ನು ಪತ್ತೆ ಮಾಡಬಹುದಾಗಿದ್ದು, ಇದನ್ನು ಟ್ರಾನ್ಸ್ಕ್ರಿಪ್ಶನ್ ಮಿಡಿಯೇಟ್ ಅಂಪ್ಲಿಕೇನ್ ಮೂಲಕ ವಿಶ್ಲೇಷಿಸಬಹುದು.
ಈ ಸಂಶೋಧನೆ ವಿಶ್ಲೇಷಣೆಯಲ್ಲಿ ಸಾಮಾನ್ಯ, ದ್ರವ ಪ್ಲಾಸ್ಮಾ ಅಥವಾ ಸೆರಂ ಅನ್ನು ಪರೀಕ್ಷೆಗೆ ಒಳ ಪಡಿಸಲಾಗಿದ್ದು, ಒಣಗಿದ ಮಾದರಿಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. 20 ಒಣಗಿದ ಮಾದರಿಗಳಲ್ಲಿ ಎಚ್ಐಪಿ, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ ಅನ್ನು ವಿಶ್ಲೇಷಿಸಲಾಗಿದೆ. ಈ ವೈರಸ್ ಎಲ್ಲ ಮಾದರಿಗಳಲ್ಲಿ ಪತ್ತೆಯಾಗಿದೆ. ಪ್ಲಾಸ್ಮಾ ಡೈಲ್ಯೂಟ್ ಕಡಿಮೆ ಮಿತಿ ಹೊಂದಿದೆ. ಚಿಕಿತ್ಸೆ ಪಡೆಯದ ರೋಗಿಗಳಲ್ಲಿ ಕಂಡು ಬರುವುದಕ್ಕಿಂತ ಕಡಿಮೆ ಮಟ್ಟದ ವೈರಸ್ ಪತ್ತೆಮಾಡಬಹುದು.
ಸೂಜಿಗಳಲ್ಲಿ ಬಳಸಲಾಗದ ಸ್ಥಳಗಳಲ್ಲಿ ಜೈಲು, ಮಾದಕ ಪುನರ್ವಸತಿ ಕೇಂದ್ರ ಮತ್ತು ನಿರಾಶ್ರಿತ ತಾಣಗಳಲ್ಲಿ ಒಣಗಿದ ರಕ್ತದ ಮಾದರಿಗಳಲ್ಲಿ ಬಳಕೆ ಮಾಡಲಾಗುವುದು. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇದನ್ನು ಸೂಕ್ತವಾಗಿದೆ ಎಂದಿದ್ದಾರೆ.
ಏಪ್ರಿಲ್ 15ರಿಂದ 18ರವರೆಗೆ ಯುರೋಪಿಯನ್ ಕಾಂಗ್ರೆಸ್ ಆಫ್ ಕ್ಲಿನಿಕಲ್ ಮೈಕ್ರೋಬಯೋಲೊಜಿ ಅಂಡ್ ಇನ್ಫೆಕ್ಷಸ್ ಡಿಸೀಸ್ ಇದನ್ನು ಪ್ರಸ್ತುತ ಪಡಿಸಲಾಗಿದೆ. ಹೆಪಟೈಟಸ್ ಬಿ ಅಥವಾ ಹೆಪಟೈಟಸ್ ಸಿ ರೋಗದಿಂದ ಒಂದು ಮಿಲಿಯನ್ಗೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ವಾರ್ಷಿಕವಾಗಿ ಎಚ್ಐವಿ ಸಂಬಂಧಿತ 6,50,000 ಜನರು ಸಾವನ್ನಪ್ಪಿದ್ದಾರೆ. 1.5 ಮಿಲಿಯನ್ ಜನರು ಎಚ್ಐವಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ 2030ರೊಳಗೆ ಈ ಮೂರು ಸೋಂಕು ತೊಡೆದು ಹಾಕುವ ಗುರಿ ಹೊಂದಿದೆ. ಈ ಸಂಖ್ಯೆ ಕಡಿಮೆಯಾಗಬೇಕು ಎಂದರೆ ಇದರ ಪತ್ತೆ ಕ್ರಮಕ್ಕೆ ಹೊಸ ಮಾದರಿ ಅನುಸರಿಸುವುದು ಅವಶ್ಯಕವಾಗಿದೆ.
ಇದನ್ನೂ ಓದಿ: ಸ್ತನ ಕ್ಯಾನ್ಸರ್ ಅಪಾಯ ಪತ್ತೆಗೆ ಆಳವಾದ ಕಲಿಕೆ ಮಾದರಿ ಅಧ್ಯಯನ