ETV Bharat / sukhibhava

ಕೋವಿಡ್ ಲಸಿಕೆ ಪಡೆದ ನಂತರ ಹೃದಯದ ಉರಿಯೂತ ಕಡಿಮೆ: ಲ್ಯಾನ್ಸೆಟ್ ಅಧ್ಯಯನ - ಮಯೋಪೆರಿಕಾರ್ಡಿಟಿಸ್ ಅಪಾಯವನ್ನು ಹೋಲಿಸಲು ಅಧ್ಯಯನ

ದಿ ಲ್ಯಾನ್ಸೆಟ್ ರೆಸ್ಪಿರೇಟರಿ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಮಯೋಪೆರಿಕಾರ್ಡಿಟಿಸ್‌ನ ಒಟ್ಟಾರೆ ಅಪಾಯವು ಹೃದಯ ಸ್ನಾಯುಗಳ ಉರಿಯೂತವನ್ನು ಉಂಟು ಮಾಡುವ ಸ್ಥಿತಿ ಕೋವಿಡ್ ವ್ಯಾಕ್ಸಿನೇಷನ್ನಿನ ನಂತರ ಬಹಳ ಕಡಿಮೆ. ಪ್ರತಿ ಮಿಲಿಯನ್ ಲಸಿಕೆ ಡೋಸ್‌ಗಳಿಗೆ 18 ಜನರ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಅಧ್ಯಯನ ವರದಿ ಹೇಳುತ್ತದೆ.

ಕೋವಿಡ್ ವ್ಯಾಕ್ಸಿನೇಷನ್
ಕೋವಿಡ್ ವ್ಯಾಕ್ಸಿನೇಷನ್
author img

By

Published : Apr 12, 2022, 8:14 PM IST

ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರಿದೆ. ಈ ಸೋಂಕನ್ನು ತಡೆಯಲು ಲಸಿಕೆ ಸಹ ಕಂಡು ಹಿಡಿಯಲಾಗಿದೆ. ಈ ಕೋವಿಡ್​ ವಿರುದ್ಧದ ಲಸಿಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಕೋವಿಡ್​ ಲಸಿಕೆ ಹಾಕಿಸಿಕೊಂಡವರಲ್ಲಿ ಹೃದಯದ ಉರಿಯೂತ ಕಾಣಿಸಿಕೊಂಡಿದ್ದು, ಲಸಿಕೆ ಹಾಕಿಸಿಕೊಳ್ಳದಿದ್ದವರಲ್ಲಿ ಇದರ ಅಪಾಯ ಕಡಿಮೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ಇನ್ಫ್ಲುಯೆನ್ಸ ಮತ್ತು ಸಿಡುಬುಗಳಂತಹ ಇತರ ಕಾಯಿಲೆಗಳ ವಿರುದ್ಧದ ವ್ಯಾಕ್ಸಿನೇಷನ್ ಪಡೆದ ನಂತರ ಉಂಟಾಗುವ ಮಯೋಪೆರಿಕಾರ್ಡಿಟಿಸ್ ಅಪಾಯವನ್ನು ಹೋಲಿಸಲು ಅಧ್ಯಯನ ತಂಡವು 400 ಮಿಲಿಯನ್ ವ್ಯಾಕ್ಸಿನೇಷನ್ ಡೋಸ್‌ಗಳನ್ನು ಬಳಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಸಿದೆ. ಕೋವಿಡ್ ವ್ಯಾಕ್ಸಿನೇಷನ್ ಪಡೆದ ನಂತರ ಮಯೋಪೆರಿಕಾರ್ಡಿಟಿಸ್ ಸಂಭವಿಸುವ ಅಪಾಯ ಕಡಿಮೆ. ಆದರೆ ಸಂಶೋಧಕರು ಇತರ ವ್ಯಾಕ್ಸಿನೇಷನ್‌ಗಳು ಮತ್ತು ಕೊರೊನಾ ಲಸಿಕೆ ನಡುವೆ ಹೆಚ್ಚಿನ ವ್ಯತ್ಯಾಸವನ್ನು ಕಂಡುಕೊಂಡಿಲ್ಲ. ಪ್ರತಿ ಮಿಲಿಯನ್ ಡೋಸ್‌ಗಳಲ್ಲಿ ಹೃದಯದ ಉರಿಯೂತ ಇರುವ 56 ಪ್ರಕರಣಗಳು ಪತ್ತೆಯಾಗಿವೆ.

ಇತರ ರೋಗಗಳಿಗೆ ನೀಡುವ ಲಸಿಕೆಗಳಿಗೆ ಹೋಲಿಸಿದರೆ, ಕೋವಿಡ್ ವಿರುದ್ಧ ನೀಡಲಾಗುವ ಲಸಿಕೆಗಳಲ್ಲಿ ಮಯೋಪೆರಿಕಾರ್ಡಿಟಿಸ್‌ನ ಅಪಾಯ ಭಿನ್ನವಾಗಿಲ್ಲ ಎಂದು ಸಂಶೋಧನೆ ಸೂಚಿಸುತ್ತದೆ ಎಂದು ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಯ ಕೊಲ್ಲಂಗೋಡ್ ರಾಮನಾಥನ್ ಹೇಳಿದರು. ಸೋಂಕಿನಿಂದ ಉಂಟಾಗುವ ಮಯೋಪೆರಿಕಾರ್ಡಿಟಿಸ್ ಅಪಾಯವನ್ನು ಸಮತೋಲನಗೊಳಿಸಬೇಕು ಮತ್ತು ಈ ಸಂಶೋಧನೆಗಳು ಕೋವಿಡ್ ಲಸಿಕೆಗಳ ಸುರಕ್ಷತೆಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ವ್ಯಕ್ತಿತ್ವದ ಗುಣಲಕ್ಷಣಗಳು ವೃದ್ಧಾಪ್ಯದಲ್ಲಿ ನೆನಪಿನ ಶಕ್ತಿ ಕುಂಠಿತವನ್ನು ಹೆಚ್ಚಿಸಬಹುದೇ?

ಮಯೋಪೆರಿಕಾರ್ಡಿಟಿಸ್ ಕೆಲವು ಸಂದರ್ಭಗಳಲ್ಲಿ ಹೃದಯಕ್ಕೆ ಹಾನಿಯನ್ನು ಉಂಟುಮಾಡಬಹುದು. ಇದು ಹೆಚ್ಚಾಗಿ ವೈರಸ್‌ಗಳಿಂದ ಉಂಟಾಗುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ವ್ಯಾಕ್ಸಿನೇಷನ್ ನಂತರವೂ ಸಂಭವಿಸಬಹುದು. mRNA ಆಧಾರಿತ COVID-19 ವ್ಯಾಕ್ಸಿನೇಷನ್ ಪಡೆದ ನಂತರ ಮಯೋಪೆರಿಕಾರ್ಡಿಟಿಸ್ ಉಂಟಾದ ವರದಿಗಳಿವೆ. ವಿಶೇಷವಾಗಿ ಹದಿಹರೆಯದವರು ಮತ್ತು ಯುವ ವಯಸ್ಕರಲ್ಲಿ ಇದು ಕಂಡುಬಂದಿದೆ.

COVID-19 ವ್ಯಾಕ್ಸಿನೇಷನ್‌ಗಳಲ್ಲಿ, mRNA ಅಲ್ಲದ ಲಸಿಕೆಗಳಿಗೆ (ಪ್ರತಿ ಮಿಲಿಯನ್ ಡೋಸ್‌ಗಳಿಗೆ 7.9 ಪ್ರಕರಣಗಳು) ಹೋಲಿಸಿದರೆ mRNA ಲಸಿಕೆಗಳನ್ನು (ಪ್ರತಿ ಮಿಲಿಯನ್ ಡೋಸ್‌ಗಳಿಗೆ 22.6 ಪ್ರಕರಣಗಳು) ಪಡೆದವರಿಗೆ ಮಯೋಪೆರಿಕಾರ್ಡಿಟಿಸ್ ಅಪಾಯವು ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಲ್ಲಿ ಪ್ರಕರಣಗಳು ವರದಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.