ETV Bharat / sukhibhava

Health: ಕಂಟೈನರ್‌ಸಮೇತ ಆಹಾರವನ್ನು ಮೈಕ್ರೋವೇವ್​ನಲ್ಲಿಟ್ಟು ಬಿಸಿ ಮಾಡುವಿರಾ? ಆರೋಗ್ಯಕ್ಕೆ ಅಪಾಯ! - ಇದು ಸುರಕ್ಷಿತಾ

ಕಂಟೈನರ್​ಗಳು ಸುರಕ್ಷಿತ ಎಂದು ಹೇಳಿದರೂ ಇವು ಬಿಸಿಯಾದಾಗ ಹಾನಿಕಾರಕ ಅಂಶಗಳನ್ನು ಬಿಡುಗಡೆ ಮಾಡುತ್ತವೆ.

Food containers heated in  Microwave is Dangerous

author img

By

Published : Jul 21, 2023, 10:26 AM IST

ಅನೇಕ ಬಾರಿ ಆಹಾರಗಳನ್ನು ಅವುಗಳ ಕಂಟೈನರ್​​ಗಳಸಮೇತ ಮೈಕ್ರೋವೇವ್​ನಲ್ಲಿಟ್ಟು ಬಿಸಿ ಮಾಡುತ್ತೇವೆ. ಇದು ಸುರಕ್ಷಿತವೇ ಎಂದು ಯೋಚಿಸುವುದಿಲ್ಲ. ಇನ್ನುಮುಂದೆ, ಇದೇ ರೀತಿ ಮಕ್ಕಳ ಆಹಾರದ ಕಂಟೈನರ್​ ಅನ್ನು ಮೈಕ್ರೋವೇವ್​ನಲ್ಲಿ ಬಿಸಿ ಮಾಡುವ ಮುನ್ನ ಒಮ್ಮೆ ಯೋಚಿಸಿ. ಇದು ಅಪಾಯಕಾರಿಯಾಗಬಹುದು ಎಂದು ಹೊಸ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

ನೆಬ್ರಸ್ಕಾ-ಲಿನ್ಕೊನ್​ ಯೂನಿವರ್ಸಿಯ ಸಂಶೋಧಕರು ಪ್ರಯೋಗ ನಡೆಸಿದ್ದಾರೆ. ಪ್ಲಾಸ್ಟಿಕ್​ನಲ್ಲಿರುವ ಮಕ್ಕಳ ಆಹಾರ ಪದಾರ್ಥಗಳು ಮೈಕ್ರೋವೇವ್​ನಲ್ಲಿ ಬಿಸಿ ಮಾಡಿದಾಗ ಅದು ಪ್ಲಾಸ್ಟಿಕ್​ ಪಾರ್ಟಿಕಲ್ಸ್​ ಬಿಡುಗಡೆ ಮಾಡುವುದು ಕಂಡುಬಂದಿದೆ. ಕೆಲವು ಪ್ರಕರಣದಲ್ಲಿ ಪ್ಲಾಸ್ಟಿಕ್​ ಕಂಟೈನರ್​ನ ಪ್ರತಿ ಚೌಕದಲ್ಲಿ 2 ಬಿಲಿಯನ್​ ನ್ಯಾನೋಪ್ಲಾಸ್ಟಿಕ್ಸ್​​ ಮತ್ತು 4 ಮಿಲಿಯನ್​ ಮೈಕ್ರೋಪ್ಲಾಸ್ಟಿಕ್ಸ್​ ಬಿಡುಗಡೆಯಾಗಿದೆ. ಮೈಕ್ರೋ ಮತ್ತು ನ್ಯಾನಾ ಪ್ಲಾಸ್ಟಿಕ್ಸ್​​ ಸೇವನೆ ಆರೋಗ್ಯದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತವೆ ಎಂಬುದು ಸದ್ಯಕ್ಕೆ ಅಸ್ಪಷ್ಟವಾಗಿದೆ.

ಜೀವಕೋಶಗಳಿಗೆ ಹಾನಿ: ಈ ಕಣಗಳಿಂದಾಗಿ ಎರಡು ದಿನಗಳ ನಂತರ ಮುಕ್ಕಾಲು ಭಾಗದಷ್ಟು ಕಲ್ಚರ್ಡ್​​ ಎಂಬ್ರೋನಿಕ್ ಮೂತ್ರ ಪಿಂಡದ ಜೀವಕೋಶಗಳು ಸತ್ತಿವೆ ಎಂದು ಸಂಶೋಧನೆ ತಿಳಿಸಿದೆ. 2022ರ ವರದಿಯಲ್ಲಿ ವಿಶ್ವ ಆರೋಗ್ಯ ಸಂಘಟನೆ ಈ ರೀತಿ ಕಣಗಳಿಗೆ ಒಡ್ಡಿಗೊಳ್ಳುವುದನ್ನು ಸೀಮಿತಗೊಳಿಸಲು ಶಿಫಾರಸು ಮಾಡಿದೆ. ನಾವು ಎಷ್ಟು ಪ್ರಮಾಣದ ಮೈಕ್ರೋ ಮತ್ತು ನ್ಯಾನೋಪ್ಲಾಸ್ಟಿಕ್ಸ್​​ ಅನ್ನು ತೆಗೆದುಕೊಳ್ಳಬೇಕು ಎಂಬುದು ಕೂಡ ಪ್ರಮುಖವಾಗುತ್ತದೆ ಎಂದು ಲೇಖಕ ಕಾಜಿ ಆಲ್ಬಾಬ್​​ ಹುಸೇನ್​ ತಿಳಿಸಿದ್ದಾರೆ. ಕೆಲವು ನಿರ್ದಿಷ್ಟ ಆಹಾರ ಸೇವಿಸಿದಾಗ ಕ್ಯಾಲೋರಿ, ಸಕ್ಕರೆ ಮಟ್ಟ ಮತ್ತು ಇತರೆ ಪೋಷಕಾಂಶಗಳ ಬಗ್ಗೆ ನಾವು ಸಾಮಾನ್ಯ ಜ್ಞಾನ ಹೊಂದಿರುತ್ತೇವೆ. ಅದೇ ರೀತಿ ಆಹಾರದಲ್ಲಿನ ಪ್ಲಾಸ್ಟಿಕ್​ ಕಣಗಳ ಬಗ್ಗೆಯೂ ಕೂಡ ಅರಿವು ಹೊಂದಿರಲೇಬೇಕಿದೆ.

ಪಾಲಿಥೀನ್​ ಚೀಲದ ಬಳಕೆ: ಹುಸೇನ್​ ಮತ್ತವರ ತಂಡ ಈ ಕುರಿತಾಗಿ ಎರಡು ಮಕ್ಕಳ ಆಹಾರದ ಕಂಟೈನ್​ರ್​ ಅನ್ನು ಪರೀಕ್ಷೆಗೆ ಒಳಪಡಿಸಿತು. ಮರು ಬಳಕೆಯ ಪಾಲಿಥಿಲೀನ್‌ನಿಂದ ಮರುಬಳಕೆ ಮಾಡಬಹುದಾದ ಚೀಲದೊಂದಿಗೆ ಪ್ರಯೋಗಗಳನ್ನು ನಡೆಸಿದ್ದಾರೆ. ಆದರೆ, ಈ ಪ್ಲಾಸ್ಟಿಕ್​ ಅನ್ನು ಅಮೆರಿಕದ ಫುಡ್​ ಆ್ಯಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್​ ಅನುಮೋದಿಸಿದೆ. ಪ್ಲಾಸ್ಟಿಕ್​ ಕಂಟೈನರ್​ ಅನ್ನು ಪ್ರಯೋಗಕ್ಕೆ ಒಳಪಡಿಸಿದಾಗ ಪ್ಲಾಸ್ಟಿಕ್​ ಕಣಗಳು ಎಂಬ್ರೋನಿಕ್​ ಮೂತ್ರಪಿಂಡದ ಕೋಶಗಳನ್ನು ಬೆಳೆಸಿದೆ. ಇದರಿಂದ ಬಿಡುಗಡೆಯಾದ ಕಣಗಳ ಸಂಖ್ಯೆಯನ್ನು ಪರಿಚಯಿಸುವ ಬದಲು ಸಂಶೋಧಕರು ಜೀವಕೋಶಗಳ ಕಣಗಳ ಸಾಂದ್ರತೆಗೆ ಒಡ್ಡಿದ್ದರು. ಇದು ಮಕ್ಕಳ ದೇಹದಲ್ಲಿ ಹಲವು ದಿನಗಳ ಬಳಿಕ ಬಹು ಮೂಲವಾಗಿ ಸಂಗ್ರಹವಾಗಬಹುದು.

ಎರಡು ದಿನದ ಬಳಿಕ ಕೇವಲ ಶೇ 23ರಷ್ಟು ಕಿಡ್ನಿ ಕೋಶಗಳು ಅತ್ಯಧಿಕ ಸಾಂದ್ರತೆ ಮೂಲಕ ಬದುಕಲು ನಿರ್ವಹಿಸಿದವು. ಹಿಂದಿನ ಸಂಶೋಧನೆಯಲ್ಲಿ ಪರೀಕ್ಷಿಸಿದ ಇತರ ಜೀವಕೋಶದ ಪ್ರಕಾರಗಳಿಗಿಂತ ಮೂತ್ರಪಿಂಡದ ಜೀವಕೋಶಗಳು ಕಣಗಳಿಗೆ ಹೆಚ್ಚು ಒಳಗಾಗಬಹುದು ಎಂದು ಸಂಶೋಧಕರ ತಂಡ ತಿಳಿಸಿದೆ.

ಇದನ್ನೂ ಓದಿ: ನಮಗೆ ಅಲರ್ಜಿ ಉಂಟು ಮಾಡುವ ಆಹಾರವನ್ನು ಮೆದುಳೇ ತಡೆಯುತ್ತದೆ; ಹೇಗೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.