ETV Bharat / sukhibhava

ವ್ಯಾಯಾಮದಿಂದ ವಯಸ್ಸಾದವರಲ್ಲಿ ಜ್ಞಾಪಕ ಶಕ್ತಿ ಹೆಚ್ಚಳ: ಅಧ್ಯಯನ

author img

By

Published : Feb 21, 2022, 9:25 PM IST

ವ್ಯಾಯಾಮದ ಪ್ರಯೋಜನಗಳು ಅಸಂಖ್ಯಾತವಾಗಿವೆ. 50 ವರ್ಷಕ್ಕಿಂತ ಮೇಲ್ಪಟ್ಟವರು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮ ಮಾಡುವುದು ಉತ್ತಮ. ವಾರಕ್ಕೆ ಮೂರು ಬಾರಿ ದೈಹಿಕ ವ್ಯಾಯಾಮ ಮಾಡುವುದರಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೊಸ ಅಧ್ಯಯನವೊಂದು ವಿವರಿಸಿದೆ.

ವ್ಯಾಯಾಮ
ವ್ಯಾಯಾಮ

ನಿಯಮಿತವಾಗಿ ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ಸ್ನಾಯು ನೋವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ವಯಸ್ಸಾದಂತೆ ನಮ್ಮ ಶಕ್ತಿಯನ್ನು ಸಹ ಕಾಪಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೇ ನಮ್ಮ ಸ್ಮರಣೆಯನ್ನು ಹಾಗೆಯೇ ಇರಿಸಿಕೊಳ್ಳಲು ಅತ್ಯಗತ್ಯವಾಗಿದೆ.

ವಯಸ್ಸಾದವರಿಗೆ ಮರೆವು ಸಹಜವಾದ ಕಾಯಿಲೆಯಾಗಿದೆ. ಇದು ಅವರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಆಲ್ಝೈಮರ್ನ ಕಾಯಿಲೆಯಾಗಿ ಉಲ್ಬಣಗೊಳ್ಳುವ ಸಾಧ್ಯತೆ ಇದೆ. 50 ರಿಂದ 60ನೇ ವಯಸ್ಸಿನಲ್ಲಿ ವಾರಕ್ಕೆ ಮೂರು ಬಾರಿ ಸೈಕ್ಲಿಂಗ್, ವಾಕಿಂಗ್ ಅಥವಾ ಜಾಗಿಂಗ್‌ನಂತಹ ಏರೋಬಿಕ್ ವ್ಯಾಯಾಮಗಳನ್ನು ಮಾಡುವುದರಿಂದ ಮೆಮೊರಿ ಲಾಸ್​ನನ್ನು ತಡೆಯಬಹುದಾಗಿದೆ ಎಂದು ಹೊಸ ಅಧ್ಯಯನವೊಂದು ವಿವರಿಸಿದೆ.

ಎಲ್ಲರೂ ಯಾವಾಗಲೂ ಕೇಳುತ್ತಾರೆ, 'ನಾನು ಎಷ್ಟು ವ್ಯಾಯಾಮ ಮಾಡಬೇಕು? ಸುಧಾರಣೆಯನ್ನು ಕಾಣಲು ಕನಿಷ್ಠ ಎಷ್ಟು ಬಾರಿ?' ಎಂದು ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಕೆನ್ನೆತ್ ಪಿ. ಡೈಟ್ರಿಚ್ ಸ್ಕೂಲ್ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ಪ್ರಮುಖ ಲೇಖಕಿ ಸಾರಾ ಅಘಜಯನ್ ಹೇಳಿದ್ದಾರೆ. " ಕನಿಷ್ಠ ನಾಲ್ಕು ತಿಂಗಳ ಕಾಲ ವಾರಕ್ಕೆ ಮೂರು ಬಾರಿ ವ್ಯಾಯಾಮ ಮಾಡುವುದರಿಂದ ಎಪಿಸೋಡಿಕ್ ಸ್ಮರಣೆಯಲ್ಲಿ ನೀವು ಎಷ್ಟು ಪ್ರಯೋಜನಗಳನ್ನು ಪಡೆಯಬೇಕು ಎಂದು ನಮ್ಮ ಅಧ್ಯಯನವು ತೋರಿಸುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ನೀವು ಈ ಕಿರಿಕಿರಿಯಿಂದ ದೂರ ಇರಬೇಕಾ?.. ಪುರುಷರ ಚರ್ಮದ ಆರೈಕೆಗೆ ಇಲ್ಲಿವೆ ಕೆಲ ಸಲಹೆಗಳು..!

ಎಪಿಸೋಡಿಕ್ ಮೆಮೊರಿಯು ನಿಮಗೆ ಹಿಂದೆ ಸಂಭವಿಸಿದ ಘಟನೆಗಳೊಂದಿಗೆ ವ್ಯವಹರಿಸುವ ಪ್ರಕಾರವಾಗಿದೆ. ಹೃದಯವನ್ನು ಪಂಪ್ ಮಾಡುವ ವ್ಯಾಯಾಮವು ಮೆದುಳಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಭರವಸೆಯನ್ನು ತೋರಿಸಿದೆ ಮತ್ತು ಇಲಿಗಳ ಮೇಲೆ ಪ್ರಯೋಗ ಮಾಡಿದಾಗ ಅದರಲ್ಲಿ ಸ್ಮರಣೆ ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ಮಾನವರಲ್ಲಿ ಅದೇ ಲಿಂಕ್​ನನ್ನು ನೋಡುವ ಅಧ್ಯಯನಗಳು ಮಿಶ್ರಿತವಾಗಿವೆ. ಇದನ್ನು ಅರ್ಥಮಾಡಿಕೊಳ್ಳಲು ತಂಡವು 3,000 ಕ್ಕೂ ಹೆಚ್ಚು ಭಾಗವಹಿಸುವವರೊಂದಿಗೆ 36 ಅಧ್ಯಯನಗಳನ್ನು ನಡೆಸಿದೆ.

69 ರಿಂದ 85 ವರ್ಷ ವಯಸ್ಸಿನವರಿಗೆ ಹೋಲಿಸಿದರೆ 55 ರಿಂದ 68 ವರ್ಷ ವಯಸ್ಸಿನವರ ಸ್ಮರಣಾ ಶಕ್ತಿಯಲ್ಲಿ ಹೆಚ್ಚಿನ ಸುಧಾರಣೆಗಳಿವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ ಮುಂಚಿತವಾಗಿ ಮಧ್ಯಸ್ಥಿಕೆ ವಹಿಸುವುದು ಉತ್ತಮ ಎಂದು ಅಘಜಯನ್ ಹೇಳಿದರು.

ಸಂಶೋಧನೆಗಳು ಜರ್ನಲ್ ಕಮ್ಯುನಿಕೇಷನ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾಗಿವೆ. ವ್ಯಾಯಾಮವು ಮೆಮೊರಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಂಡಕ್ಕೆ ಉತ್ತರಿಸಲು ಸಾಧ್ಯವಾಗಿಲ್ಲ. ಆದರೆ ವಯಸ್ಸಾದವರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು ಸ್ಪಷ್ಟವಾಗಿವೆ. ವಯಸ್ಸಾದವರು ಸ್ಮರಣಶಕ್ತಿಯ ಕುಸಿತವನ್ನು ತಡೆಯಲು ವ್ಯಾಯಾಮ ಒಂದು ಉತ್ತಮ ಮಾರ್ಗವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.