ETV Bharat / sukhibhava

ಋತುಚಕ್ರದ ಸಮಯದಲ್ಲಿ ವರ್ಕ್​ಔಟ್ ಮಾಡಬಹುದೇ?​ ಇಲ್ಲಿದೆ ಉತ್ತರ - ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತು ಕೇಳಿರುತ್ತೇವೆ

ಮಾಸಿಕ ಋತುಚಕ್ರದ ಸಮಯದಲ್ಲಿ ನಿಮ್ಮ ದೇಹದ ಅನುಸಾರ ವ್ಯಾಯಾಮ ಮಾಡುವುದರಿಂದ ಶಕ್ತಿ ಹೆಚ್ಚಲಿದೆ.

Exercise comfortably even during menstruation

author img

By

Published : Mar 13, 2023, 12:56 PM IST

ಮಾಸಿಕ ಋತುಚಕ್ರದ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಅನಾನುಕೂಲ ಎಂಬ ಕಲ್ಪನೆ ನಮ್ಮಲ್ಲಿದೆ. ಈ ಸಮಯದಲ್ಲಿ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹ ಬಳಲುತ್ತದೆ. ಶಕ್ತಿ ಇರುವುದಿಲ್ಲ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತುಗಳಿವೆ. ಆದರೆ, ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಲಾಭವಿದೆ.

ವರ್ಕ್​ಔಟ್​ ಪ್ಲಾನ್​ ಹೀಗಿರಲಿ: ಋತುಚಕ್ರದ ಮೊದಲ ದಿನ ದೇಹದಲ್ಲಿ ಈಸ್ಟ್ರೋಜೆನ್​ ಮತ್ತು ಪ್ರಜೋಸ್ಟ್ರನ್​ ಮಟ್ಟ ಕಡಿಮೆ ಇರುತ್ತದೆ. ಇದರಿಂದ ಬಳಲಿಕೆ, ಹೊಟ್ಟೆ ನೋವು, ಆಯಾಸ ಆಗುತ್ತದೆ. ಈ ದಿನ ವ್ಯಾಯಾಮಕ್ಕೆ ಬಿಡುವು ನೀಡಬಹುದು. ಆದರೆ, ನಿಮ್ಮ ಮೂಡ್​ ಮೇಲೆ ವ್ಯಾಯಾಮ ಕೂಡ ಅವಲಂಬಿತವಾಗುತ್ತದೆ. ಯೋಗ, ಕಡಿಮೆ ಮಟ್ಟದ ವ್ಯಾಯಾಮಗಳ ಆಯ್ಕೆ ಮಾಡಬಹುದು. ಈ ದಿನದಲ್ಲಿ ದೇಹ ಒತ್ತಡದಿಂದ ಬಳಲುವ ಹಿನ್ನೆಲೆಯಲ್ಲಿ ಹೆಚ್ಚಿನ ವ್ಯಾಯಾಮ ಮಾಡದಿರುವುದು ಒಳಿತು.

ಋತುಚಕ್ರದ ಎರಡನೇ ದಿನದಿಂದ 14 ದಿನಗಳವರೆಗೆ ಫೊಲಿಕ್ಯೂಲರ್​ ಫೇಸ್​ ಎಂದು ಕರೆಯಲಾಗುವುದು. ಈ ಸಂದರ್ಭದಲ್ಲಿ ದೇಹದಲ್ಲಿ ಹಾರ್ಮೋನ್​ ಮಟ್ಟ ಹೆಚ್ಚುತ್ತದೆ. ಋತುಚಕ್ರದ ದಿನ ಮುಗಿಯುತ್ತಿದ್ದಂತೆ ಶಕ್ತಿಯ ಮಟ್ಟ ಕೂಡ ಹೆಚ್ಚುತ್ತದೆ. ಇದನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದ ವರ್ಕ್​ಔಟ್​ನಲ್ಲಿ ತೊಡಗಬಹುದು. ಲಿಫ್ಟಿಂಗ್​, ಕಾರ್ಡಿಯೋ ಸೇರಿದಂತೆ ಎಲ್ಲಾ ವ್ಯಾಯಾಮಗಳನ್ನೂ ಮಾಡಬಹುದಾಗಿದೆ.

ಲ್ಯೂಟೆಲ್​ ಹಂತ: 15 ದಿನದಿಂದ 28 ನೇ ದಿನದ ಹಂತವಿದು. ದೇಹದಲ್ಲಿ ಶಕ್ತಿಯ ಮಟ್ಟ ಕೆಳಗಿಳಿಯುತ್ತಾ ಬರುತ್ತದೆ. ಮನೆಗೆಲಸವೂ ಕೂಡ ಈಗ ಕಷ್ಟವಾಗುತ್ತದೆ. ವರ್ಕೌಔಟ್​ ಕೊಂಚ ಕಷ್ಟಕರ ಎನ್ನಿಸುವಂತೆ ಭಾಸವಾಗುತ್ತದೆ. ಇದರಿಂದ ವ್ಯಾಯಾಮದ ತೀವ್ರತೆ ಕಡಿಮೆ ಮಾಡಬಹುದಾಗಿದೆ. ಆದರೆ, ವ್ಯಾಯಾಮ ಮುಂದುವರೆಸುವುದು ಅವಶ್ಯಕ.

ಮೂಡ್​ ಸ್ವಿಂಗ್​: ಮೂಡ್​ ಸ್ವಿಂಗ್​ ಎಂಬುದು ನೋವಿನ ಸಂಗತಿ. ಮನಸ್ಸಿನಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಇಂಥ ಸಮಯದಲ್ಲಿ ನಿಮಗೆ ಬೇಡ ಎನಿಸಿದರೂ, ನಿಮಗೆ ಇಷ್ಟವಾಗದಿದ್ದರೂ ವ್ಯಾಯಾಮ ಮಾಡುವುದರಿಂದ ಪ್ರಯೋಜನವಿದೆ.

ಉತ್ತಮ ಮೂಡ್​: ವ್ಯಾಯಾಮದಿಂದಾಗಿ ದೇಹದಲ್ಲಿ ಹ್ಯಾಪಿ ಹಾರ್ಮೋನ್​ಗಳಾದ ಡೊಪಮೈನ್​​, ಸೆರೊಟನಿನ್​ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್​ಗಳು ನಿಮ್ಮ ಮೂಡ್​ ಹೊಡೆದೋಡಿಸಿ, ಉತ್ತಮವಾಗಲು ಸಹಾಯ ಮಾಡುತ್ತದೆ. ಹಾರ್ಮೋನ್​ಗಳು ನೈಸರ್ಗಿಕ ನೋವು ನಿವಾರಕಗಳಂತೆ ಕೆಲಸ ಮಾಡುತ್ತವೆ.

ಸಹಿಸಬಹುದಾದ ನೋವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ. ಕೆಲವರಿಗೆ ಸಹಿಸಲು ಅಸಾಧ್ಯವಾದರೆ, ಕೆಲವರಿಗೆ ಗಣನೆಗೆ ಬರುವುದಿಲ್ಲ. ನೈಸರ್ಗಿಕ ನೋವು ನಿವಾರಕದಂತೆ ವ್ಯಾಯಾಮ ಕೆಲಸ ಮಾಡುತ್ತದೆ. ಸಣ್ಣ ವ್ಯಾಯಾಮ ಕೂಡ ನೋವು ಕಡಿಮೆ ಮಾಡಲು ಸಾಧ್ಯ. ಅನೇಕರು ವಾಕ್​, ಸಣ್ಣ ವ್ಯಾಯಾಮ ಮಾತ್ರ ಸೂಕ್ತ ಎನ್ನುತ್ತಾರೆ. ಆದರೆ, ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿದೆ. ನಿಮ್ಮ ದೇಹಕ್ಕೆ ಅನುಗುಣವಾಗಿ ನೀವು ವ್ಯಾಯಾಮದ ಲಾಭ ಪಡೆಯಬಹುದು.

ಶಕ್ತಿ ಸಂಪೂರ್ಣ ಕಡಿಮೆ ಎಂದರೆ, ರಜೆ ಹಾಕಿ: ಎನರ್ಜಿ ಸಿಕ್ಕಾಪಟ್ಟೆ ಇದೆ ಎಂದರೆ, ಲಿಫ್ಟಿಂಗ್​, ವೇಗದ ಓಟ, ಬಿರುಸಿನ ವ್ಯಾಯಮ ಮಾಡಬಹುದು. ನಿಮ್ಮ ಶಕ್ತಿ ಸಾಮಾನ್ಯ ಎನಿಸಿದರೆ, ಯೋಗ, ವಾಕಿಂಗ್​​ ಅಥವಾ ಡ್ಯಾನ್ಸ್​​ಗೆ ಸೀಮಿತಗೊಳಿಸಿ. ಮತ್ತಷ್ಟು ಶಕ್ತಿ ಕುಗ್ಗಿದೆ ಎಂದರೆ ಧ್ಯಾನ ಅಥವಾ ಕೆಲವು ಯೋಗ ಮಾಡಿ. ಯಾವುದೇ ಮಾಡಲು ಮನಸ್ಸಿಲ್ಲ ಎಂದರೆ, ಯಾವುದೇ ವರ್ಕ್​ಔಟ್​ ಮಾಡದೇ ಆ ದಿನ ವಿಶ್ರಾಂತಿ ಪಡೆಯುವುದು ಉತ್ತಮ.

ಇದನ್ನೂ ಓದಿ: ಪಿಸಿಒಡಿ, ಪಿಸಿಒಸಿ ಸಮಸ್ಯೆಗೆ ರಾಮಬಾಣವಂತೆ ಈ ಜ್ಯೂಸ್​ಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.