ನವದೆಹಲಿ: ಹೆಡ್ಫೋನ್ ಅಥವಾ ಇಯರ್ಫೋನ್ ಅನ್ನು ಬಳಕೆ ಮಾಡುವವರ ಸಂಖ್ಯೆ ಇಂದು ಹೆಚ್ಚುತ್ತಿದೆ. ಇದರಲ್ಲಿ ಯಾವುದೇ ವಯಸ್ಸಿನ ತಾರತಮ್ಯ ಇಲ್ಲದಂತೆ ಎಲ್ಲರೂ ಹೆಡ್ಫೋನ್ ಕೊಳ್ಳುತ್ತಿದ್ದಾರೆ. ಆದರೆ, ಅತಿಯಾದ ಹೆಡ್ಫೋನ್ ಬಳಕೆ ಮಾಡುವುದು ಕೇಳುವಿಕೆ ಅಥವಾ ಮಾತಿನ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಇಂಡಿಯನ್ ಸ್ಪೀಚ್ ಅಥವಾ ಇಯರಿಂಗ್ ಅಸೋಸಿಯೇಷನ್ (ದೆಹಲಿ ಬ್ರಾಂಚ್) ಈ ಬಗ್ಗೆ ವರದಿಯೊಂದನ್ನು ನೀಡಿದೆ. ಈ ಅಧ್ಯಯನಕ್ಕಾಗಿ ದೆಹಲಿಯ ಎನ್ಸಿಆರ್ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಮನೆ - ಮನೆ ಸಮೀಕ್ಷೆ ನಡೆಸಿದ್ದು, ಇದು ಸಂವಹನ ಸಮಸ್ಯೆಗೆ ಕಾರಣವಾಗುವ ಕುರಿತು ಅಧ್ಯಯನ ನಡೆಸಲಾಗಿದೆ.
ಸಂವಹನ ಸಮಸ್ಯೆಗಳ ಹರಡುವಿಕೆ ಶೇ 3ರಷ್ಟು ಹೆಚ್ಚಿದೆ. ಜೊತೆಗೆ ಈ ಕುರಿತು ಅರಿವಿನ ಮಟ್ಟ ಶೇ 11ರಷ್ಟು ಕಡಿಮೆ ಇದೆ. 19 ರಿಂದ 25 ವರ್ಷದವರಲ್ಲಿ 41. 2ರಷ್ಟು ಈ ಕೇಳುವಿಕೆ ಸಮಸ್ಯೆ ಹೆಚ್ಚಿಸಿದೆ. 26 ರಿಂದ 60 ವರ್ಷದವರಲ್ಲಿ ಶೇ 69.4ರಷ್ಟು ಕೇಳುವಿಕೆ ಸಮಸ್ಯೆ ಕಂಡು ಬಂದಿದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞ ಮತ್ತು ಕೇಂದ್ರ ಆರೋಗ್ಯ ಸಚಿವರ ಸಲಹೆಗಾರರಾದ ಡಾ ರಾಜೇಂದ್ರ ಪ್ರತಾಪ್ ಗುಪ್ತಾ ತಿಳಿಸಿದ್ದಾರೆ.
ಮೊಬೈಲ್ ಪೀಳಿಗೆಯ ಕಾಲದಲ್ಲಿ ಇದೊಂದು ಎಚ್ಚರಿಕೆ ಗಂಟೆಯಾಗಿದೆ. ಇದು ವಿವೇಚನಾರಹಿತವಾಗಿ ಬಳಕೆ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದೆ. ಇಲ್ಲದೇ ಹೋದಲ್ಲಿ ಹೆಡ್ಫೋನ್ ಬದಲಾಗಿ ಇಯರಿಂಗ್ ಹೆಡ್ಸ್ ಬಳಸುವ ಸಮಯ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೇಯಿಂದ ಜೂನ್ನವರೆಗೆ ದೆಹಲಿಯ ಎನ್ಸಿಆರ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 53,801 ಜನರನ್ನು ಈ ಕುರಿತಂತೆ ಸಮೀಕ್ಷೆ ನಡೆಸಲಾಗಿದೆ. ದೆಹಲಿಯ ಎನ್ಸಿಆರ್ನಲ್ಲಿ 10, 228 ಕುಟುಂಬ ಮತ್ತು 53, 801 ಮಂದಿಯನ್ನು ಸಮೀಕ್ಷೆ ನಡೆಸಲಾಗಿದೆ. ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 1,257 ಕುಟುಂಬಗಳ 6,000 ಜನರನ್ನು ಸಮೀಕ್ಷೆ ನಡೆಸಲಾಗಿದೆ.
ಸಮೀಕ್ಷೆಯಲ್ಲಿ ಸಂವಹನದ ಸಮಸ್ಯೆ ಹರಡುವಿಕೆ ಶೇ 3.05ರಷ್ಟಿದೆ. ದೆಹಲಿ - ಎನ್ಸಿಆರ್ನಲ್ಲಿ ಶೇ 6.17ರಷ್ಟು ಮತ್ತು ಕಾಶ್ಮೀರದಲ್ಲಿ 2.4ರಷ್ಟು ಸಮಸ್ಯೆ ಕಂಡು ಬಂದಿದೆ.
ದೆಹಲಿ - ಎನ್ಸಿಆರ್ನಲ್ಲಿ ಮಾತು ಶಬ್ಧ ಸಮಸ್ಯೆ(ಎಸ್ಎಸ್ಡಿ) ಸಮಸ್ಯೆ 6 ರಿಂದ 12 ವರ್ಷದವರಲ್ಲಿ ಅತಿ ಹೆಚ್ಚು ಅಂದರೆ 42.4ರಷ್ಟು ಕಂಡು ಬಂದಿದೆ. 13-18 ವರ್ಷದವರಲ್ಲಿ ಶೇ 31.1ರಷ್ಟು ದಾಖಲಾಗಿದೆ. ಮಾತಿನ ಸರಾಗ ಸಮಸ್ಯೆ 6 ರಿಂದ 12 ವರ್ಷದಲ್ಲಿ ಶೇ 20.7ರಷ್ಟು ಮತ್ತು 13 ರಿಂದ 18 ವರ್ಷದವರಲ್ಲಿ ಶೇ 17.1ರಷ್ಟಿದೆ. ಮಾತಿನ ಸಮಸ್ಯೆ 0-5ವರ್ಷದವರಲ್ಲಿ ಶೇ 69ರಷ್ಟು ಮತ್ತು 13-18ರಲ್ಲಿ ಶೇ 48.2ರಷ್ಟಿದೆ.
ಧ್ವನಿ ಸಮಸ್ಯೆ ಹರಡುವಿಕೆ ವಿವಿಧ ವಯೋಮಾನದವರಲ್ಲಿ ವಿಭಿನ್ನವಾಗಿದೆ. ಇದರಲ್ಲಿ ಶೇ 19-25 ವರ್ಷದವರಲ್ಲಿ ಶೇ 17ರಷ್ಟು ಮತ್ತು 13 ರಿಂದ 18ವರ್ಷದವರಲ್ಲಿ ಶೇ 11.6ರಷ್ಟು ಪತ್ತೆಯಾಗಿದೆ.
ಈ ಸಮಸ್ಯೆಗಳ ಕುರಿತು ತರಬೇತಿ ಪಡೆದ ವೃತ್ತಿಪರರು ಈ ಕುರಿತು ಜನರಲ್ಲಿ ತಿಳಿ ಹೇಳುವ ಪ್ರಯತ್ನ ನಡೆಸಬೇಕಿದೆ. ಜೊತೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್ಎಚ್ಎಸ್) ಈ ಕುರಿತು ಅರಿವು ಮೂಡಿಸಲು ರಾಷ್ಟ್ರಾದ್ಯಂತ ಪ್ರಚಾರ ನಡೆಸಬೇಕಿದೆ.
ಡಿಜಿಟಲ್ ಕಾಲದಲ್ಲಿ ಗೆಜೆಡ್ ಸಂಬಂಧಿಸಿದಂತೆ ಅಪಾಯವೂ ಹೆಚ್ಚಿದೆ. ಇದು ಮಾತು ಮತ್ತು ಕೇಳುವಿಕೆ ಸಮಸ್ಯೆಗೆ ಕಾರಣವಾಗುತ್ತದೆ. ಜೊತೆಗೆ ಈ ಸಂಬಂಧ ಸಮಸ್ಯೆಗಳ ಕುರಿತು ಅರಿವು ಮೂಡಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ವೃದ್ಧರಲ್ಲಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ ಡಿಜಿಟಲ್ ಒಗಟಿನ ಆಟಗಳು