ETV Bharat / sukhibhava

ಫ್ರೈಡ್​ ಚಿಪ್ಸ್​ಗೆ ಪರ್ಯಾಯವಾಗಿ ಸೇವಿಸಿ ಈ ಆರೋಗ್ಯಕರ ಸ್ನಾಕ್ಸ್​ - ರ್ಯಾಯವಾಗಿ ರುಚಿಕರಿಯಾದ ಆಹಾರ

ಬಿಡುವಿಲ್ಲದ ಜೀವನಶೈಲಿಯಿಂದ ಅನೇಕ ಅನಾರೋಗ್ಯಕರ ಆಹಾರ ಸೇವನೆಗೆ ಒಗ್ಗಿರುತ್ತೇವೆ. ಇದರ ಪರ್ಯಾಯವಾಗಿ ರುಚಿಕರವಾದ ಆಹಾರವನ್ನು ಸೇವಿಸುವುದು ಅವಶ್ಯ.

eat-these-healthy-snacks-as-an-alternative-to-fried-chips

author img

By

Published : Mar 6, 2023, 5:29 PM IST

ಬಿಡುವಿಲ್ಲದ ಜೀವನ ಶೈಲಿ, ಕೆಲಸ ಅಥವಾ ಮೂಡ್​ಗಳ ಬದಲಾವಣೆಯಿಂದಾಗಿ ಅನೇಕ ಬಾರಿ ತಿಳಿದು ತಿಳಿಯದೇ ನಾವು ಎಣ್ಣೆಯಲ್ಲಿ ಕರಿದ ರುಚಿಯಾದ ಚಿಪ್ಸ್​ ಸೇವಿಸುತ್ತೇವೆ. ದೀರ್ಘಕಾಲದ ಕೆಲಸದಿಂದಾಗಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗದೇ, ಇಂತಹ ಪದಾರ್ಥಗಳನ್ನು ಬಾಯಾಡಿಸುತ್ತೇವೆ. ಸಣ್ಣ ಹಸಿವನ್ನು ನೀಗಿಸಿಕೊಳ್ಳಲು ಆಯ್ದುಕೊಳ್ಳುವ ಈ ಚಿಪ್ಸ್​​ಗಳು ಅನೇಕ ಬಾರಿ ಆರೋಗ್ಯಕ್ಕೆ ದುಬಾರಿಯಾಗುತ್ತದೆ. ಇದರಿಂದಾಗಿ ಫ್ಯಾಟ್​ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗೆ ಗುರಿಯಾಗುವುದು ಸುಳ್ಳಲ್ಲ. ಈ ಹಿನ್ನೆಲೆ ಇದಕ್ಕೆ ಪರ್ಯಾಯವಾಗಿ ತಿನ್ನಬಹುದಾದ ಸ್ನಾಕ್ಸ್​ಗಳತ್ತ ನಾವು ಗಮನ ಹರಿಸಬಹುದು. ಇವು ಕೇವಲ ಬಾಯಿಚಟಕ್ಕೆ ಮಾತ್ರವಾಗಿರದೇ, ಆರೋಗ್ಯಕರವೂ ಆಗಿರಬೇಕು. ಇಂತಹ ಪರ್ಯಾಯ ಆಹಾರಗಳು ಯಾವುದು ಎಂಬ ಮಾಹಿತಿ ಇಲ್ಲಿದೆ.

ಪಾಪ್​​ ಕಾರ್ನ್​: ಬಹುತೇಕರ ನೆಚ್ಚಿನ ತಿನಿಸಾಗಿರುವ ಇದು ಫ್ರೈಡ್​ ಚಿಪ್ಸ್​ಗೆ ಉತ್ತಮವಾದ ಪರ್ಯಾಯ. ಇದು ಕೂಡ ಚಿಪ್ಸ್​ನಂತೆ ಕರುಂ ಕರುಂ ಅನಿಸುವುದರ ಹಿತೆಗೆ ಇದರಲ್ಲಿ ಕಡಿಮೆ ಪ್ರಮಾಣದ ಫ್ಯಾಟ್​ ಇದ್ದು, ಉತ್ತಮ ಕ್ಯಾಲೋರಿ ಇದೆ. ಇದನ್ನು ಬೆಣ್ಣೆ ಮತ್ತು ಉಪ್ಪಿನಲ್ಲಿ ಮಿಶ್ರಣ ಮಾಡಿರುವುದು ಆರೋಗ್ಯಕರ ಜೊತೆಗೆ ರುಚಿಕರವಾಗಿರುತ್ತದೆ. ಮಕ್ಕಳಿಂದ ದೊಡ್ಡವರ ವರಿಗೂ ಎಲ್ಲರಿಗೂ ಇಷ್ಟವಾಗುತ್ತದೆ ಈ ಪಾಪ್​ಕಾರ್ನ್​ಗಳು.

ಗ್ರಾನೊಲಾ ಬಾರ್​: ತಕ್ಷಣಕ್ಕೆ ನಿಮಗೆ ಶಕ್ತಿ ನೀಡಬಹುದಾದ ಪವರ್​ ಬೂಸ್ಟರ್​ ಆಗಿ ಇದು ಕಾರ್ಯ ನಿರ್ವಹಿಸಲಿದೆ. ಮನೆಯಲ್ಲಿ ನಿರ್ಮಿಸಿದ ಈ​ ಬಾರಿನಲ್ಲಿ ಅತಿ ಕಡಿಮೆ ಪ್ರಮಾಣದ ಸಕ್ಕರೆ ಅಂಶವಿರುತ್ತದೆ. ಓಟ್ಸ್​​, ಬೆರ್ರಿಸ್​​, ಡ್ರೈ ಫ್ರೂಟ್​ ಮತ್ತು ಎಡಿಬಲ್​ ಸೀಡ್​ಗಳಿಂದ ಇದನ್ನು ಮಾಡಿರುವ ಹಿನ್ನೆಲೆ ಇದರಲ್ಲಿ ಫೈಬರ್​ ಮತ್ತು ಪ್ರೋಟಿನ್​ ಯಥೇಚ್ಛವಾಗಿರುತ್ತದೆ.

ಪಿನಟ್​ ಪಫ್​ ಸ್ನಾಕ್​: ಕಡ್ಲೆಬೀಜ ಹೆಚ್ಚು ಉತ್ತಮ ಗುಣಗಳಿಂದ ಸಮೃದ್ಧಿಯಾಗಿರುತ್ತದೆ. ಪ್ರೋಟಿನ್​ ರಿಚ್​ ಕಡ್ಲೆಬೀಜಗಳು, ಶಕ್ತಿ ನೀಡುವುದರ ಜೊತೆಗೆ ಫೈಬರ್​ ಅಂಶವನ್ನು ನೀಡುತ್ತದೆ. ಹಸಿವನ್ನು ನೀಗಿಸಿ, ದೇಹಕ್ಕೆ ಅಗತ್ಯವಾದ ಪೋಷಕಾಂಶ ಕೂಡಾ ಇದು ನೀಡುತ್ತದೆ. ಹಸಿ, ಹುರಿದ ಕಡ್ಲೆಬೀಜಗಳು ಕೂಡ ಆರೋಗ್ಯಕ್ಕೆ ಉತ್ತಮ

ಸೌತೆಕಾಯಿ ಮತ್ತು ಕ್ಯಾರೆಟ್​ ಸ್ಲೈಸ್​​: ತರಕಾರಿಗಳು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಸೌತೆಕಾಯಿ ಮತ್ತು ಕ್ಯಾರೆಟ್​ ಬಾಯಿ ರುಚಿ ಜೊತೆಗೆ ಉತ್ತಮ ಆರೋಗ್ಯ ನೀಡುತ್ತದೆ. ಹೈ ಫೈಬರ್​, ಕಡಿಮೆ ಕ್ಯಾಲೋರಿ ಹೊಂದಿರುವ ಉತ್ತಮ ಸ್ನಾಕ್​ ಇದಾಗಿದೆ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನ ಅಂಶವಿದ್ದು, ಇದು ದೇಹದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಕಾಪಾಡುತ್ತದೆ. ಇದಕ್ಕೆ ನೀವು ಬೇಕಾದರಲ್ಲಿ ಉಪ್ಪಿ, ಆಪಲ್​ ಸಿಂಡರ್​ ವಿನಿಗರ್​ ಅನ್ನು ಬೆರೆಸುವ ಮೂಲಕ ಇನ್ನಷ್ಟು ಅದ್ಭುತ ಸ್ವಾದವನ್ನು ಇದು ನೀಡಲಿದೆ.

ಒಣ ಹಣ್ಣುಗಳ ಮಿಶ್ರಣ: ಒಣ ಹಣ್ಣುಗಳು ಫೈಬರ್​, ಉತ್ತಮ ಗುಣಮಟ್ಟದ ಪ್ರೋಟಿನ್​, ಹಾರ್ಟ್​ ಹೆಲ್ತಿ ಫ್ಯಾಟ್​​​, ವಿಟಮಿನ್​ ಮತ್ತು ಮಿನರಲ್​ಗಳಿಂದ ಕೂಡಿರುತ್ತದೆ. ಇದನ್ನು ಕಚ್ಛಾ ಆಗಿಯೇ ತಿನ್ನಬಹುದು. ಇಲ್ಲ ಇದರ ರುಚಿ ಇನ್ನಷ್ಟು ಹೆಚ್ಚಿಸಲು ಕೊಂಚ ಉಪ್ಪಿನೊಂದಿಗೆ ರೋಸ್ಟ್​ ಮಾಡಬಹುದಾಗಿದೆ.

ಇದನ್ನೂ ಓದಿ: ವಿಶ್ವ ಬೊಜ್ಜು ದಿನ 2023: ಸ್ಥೂಲಕಾಯತೆ ಈಗ ಜಾಗತಿಕ ಆರೋಗ್ಯ ಬಿಕ್ಕಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.