ETV Bharat / sukhibhava

ಭಾರತೀಯ ರೈಲ್ವೆಯ ಈ 7 ನಿಯಮದ ಬಗ್ಗೆ ತಿಳಿದಿದ್ಯಾ? - ಭಾರತೀಯ ರೈಲ್ವೆಗೆ 177 ವರ್ಷದ ಇತಿಹಾಸವಿದೆ

ರೈಲಿನಲ್ಲಿ ಸಾಮಾನ್ಯವಾಗಿ ಪ್ರಯಾಣಿಸುವ ನಮಗೆ ಅದರ ನಿಯಮದ ಬಗ್ಗೆ ಅನೇಕ ವೇಳೆ ತಿಳಿದಿರುವುದಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

Do you know about these 7 Indian rules
Do you know about these 7 Indian rules
author img

By

Published : Mar 29, 2023, 3:37 PM IST

Updated : Mar 29, 2023, 4:05 PM IST

ನವದೆಹಲಿ: ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ರೈಲ್ವೆ ಸಂಪರ್ಕಹೊಂದಿರುವ ದೇಶ ಭಾರತವಾಗಿದೆ. ಭಾರತೀಯ ರೈಲ್ವೆಗೆ 177 ವರ್ಷದ ಇತಿಹಾಸವಿದೆ. ಭಾರತದಾದ್ಯಂತ ಸಂಪರ್ಕ ಹೊಂದಿರುವ ಈ ರೈಲ್ವೆ ಉದ್ದ 68 ಸಾವಿರ ಕಿ.ಮೀ ಎಂದು ಅಂದಾಜಿಸಲಾಗಿದೆ. ಸುಲಭ ಮತ್ತು ರಿಯಾಯಿತಿ ದರದ ಪ್ರಯಾಣವನ್ನು ಈ ರೈಲ್ವೆ ಒದಗಿಸುತ್ತಿದ್ದು, ಭಾರತೀಯರ ಮೆಚ್ಚಿನ ಸಾರಿಗೆ ಸೇವೆ ಇದಾಗಿದೆ.

ಪ್ರತಿ ನಿತ್ಯ ಸುಮಾರು 23 ಲಕ್ಷ ಮಂದಿ ಭಾರತೀಯ ರೈಲ್ವೆಯಲ್ಲಿ ಪ್ರಯಾಣ ನಡೆಸುತ್ತಾರೆ. ಸಂಪರ್ಕ ಸಾಧನೆಗೆ ಪ್ರಮುಖವಾಗಿ ಈ ರೈಲ್ವೆ ಬಳಕೆ ಮಾಡುತ್ತಾರೆ. ಈ ಪ್ರಯಾಣದವನ್ನು ಇನ್ನಷ್ಟು ಸುಗುಮಗೊಳಸಬೇಕಾದರೆ ಭಾರತೀಯ ರೈಲ್ವೆ ಬಗ್ಗೆ ಇರುವ ಕೆಲವು ನಿಯಮಗಳನ್ನು ತಿಳಿಯುವುದು ಅವಶ್ಯವಾಗಿದೆ ಎಂದಿದ್ದಾರೆ ಕನ್ಫರ್ಮ್​​ ಟಿಕೆಟಿ ಸಹ ಸಂಸ್ಥಾಪಕ ಮತ್ತು ಸಿಒಒ ಶ್ರೀಪಾದ್​ ವೈದ್ಯ.

ಓಡುವ ರೈಲಿನಲ್ಲಿ ಆಲರಾಂ ಎಳೆಯುವುದು: ಭಾರತದಲ್ಲಿ ರೈಲಿನಲ್ಲಿ ನೀವು ಪ್ರಯಾಣ ಮಾಡುವಾಗ ಪ್ರತಿ ಕೋಚ್​ನಲ್ಲಿ ಈ ಆಲರಾಂ ಅನ್ನು ಕಾಣಬಹುದು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ರೈಲ್ವೆ ಆಲರಾಂ ಅನ್ನು ಯಾರು ಬೇಕಾದರೂ ಎಳೆಯಬಹುದಾಗಿದೆ. ವೈದ್ಯಕೀಯ ತುರ್ತ ಸ್ಥಿತಿ ಅಥವಾ ಪ್ರಯಾಣಿಕರ ಸುರಕ್ಷೆ, ಅಪಘಾತ ಸೇರಿದಂತೆ ಇನ್ನಿತರ ಸಕಾರಣಗಳಿಂದ ಓಡುವ ರೈಲನ್ನು ನಿಲ್ಲಿಸಬಹುದಾಗಿದೆ.

ಪ್ರಯಾಣದ ವೇಳೆಯೇ ನಿಮ್ಮ ಪ್ರಯಾಣ ವಿಸ್ತರಿಸಬಹುದು: ಕೆಲವು ಪ್ರಯಾಣದ ಋತುಮಾನದಲ್ಲಿ ನೀವು ತಲುಪುವ ಸ್ಥಳಕ್ಕೆ ಕಾಯ್ದಿರಿಸುವ ಟಿಕೆಟ್​ ಸಿಗುವುದಿಲ್ಲ. ಇದರಿಂದ ನಿಮ್ಮ ಪ್ರಯಾಣಕ್ಕೆ ಅಡಚಣೆ ಆಗಬಾರದು ಎಂಬ ಕಾರಣಕ್ಕೆ ವಿಶೇಷ ನಿಯಮವನ್ನು ರೈಲ್ವೆ ಹೊಂದಿದೆ. ನೀವು ತಲುಪುವ ಸ್ಥಳಕ್ಕೆ ಮುನ್ನದ ಸ್ಥಳಕ್ಕೆ ಬೇಕಾದಲ್ಲಿ ನೀವು ಟಿಕೆಟ್​ ಕಾಯ್ದರಿಸಿ ಪ್ರಯಾಣಿಸಬಹುದು. ಈ ಪ್ರಯಾಣದಲ್ಲಿ ಟಿಟಿಇ ಸಂಪರ್ಕಿಸಿ, ಮುಂದಿನ ನಿಲ್ದಾನದ ಟಿಕೆಟ್​ ಪಡೆಯುವ ಮೂಲಕ ಪ್ರಯಾಣ ಮುಂದುವರೆಸಬಹುದು. ಆದರೆ, ಈ ವೇಳೆ ನಿಮಗೆ ಬೇರೆ ಆಸನ ಲಭ್ಯವಾಗುತ್ತದೆ.

ಮಿಡಲ್​ ಬರ್ತ್​ ನಿಯಮ: ಭಾರತೀಯ ರೈಲ್ವೆಯ ಮಧ್ಯದ ಕುಳಿತು ಕೊಳ್ಳುವ ಆಸನದ ಕುರಿತು ವಿಶೇಷ ನಿಯಮವಿದೆ. ಬೋಗಿಗಳಲ್ಲಿರುವ ಮಧ್ಯದ ಬರ್ತ್​ನ್ನು ರಾತ್ರಿ 10ರಿಂದ ಬೆಳಗ್ಗೆ 6ವರೆಗೆ ಮಾತ್ರ ಮಲಗಲು ಸಾಧ್ಯ. ದಿನದ ಪ್ರಯಾಣದಲ್ಲಿ ಈ ಬರ್ತನ್​ ಅನ್ನು ಮಡಚಿಟ್ಟು ಕುಳಿತು ಪ್ರಯಾಣಿಸುವ ಪ್ರಯಾಣಿಕರಿಗೆ ಅವಕಾಶ ಮಾಡಬೇಕು. ಒಂದು ವೇಳೆ ಮಧ್ಯದ ಬರ್ತ್​ ಅನ್ನು ಬಳಕೆ ಮಾಡಿದಲ್ಲಿ ಅದನ್ನು ಪ್ರಶ್ನಿಸುವ ಅಧಿಕಾರ ಪ್ರಯಾಣಿಕರಿಗಿದೆ.

ರೈಲು ತಪ್ಪಿದರೆ ಎರಡು ನಿಲ್ದಾಣದ ನಿಯಮ: ಅನೇಕ ಬಾರಿ ನಾವು ಸಮಯಕ್ಕೆ ಸರಿಯಾಗಿ ರೈಲನ್ನು ಹಿಡಿಯುವಲ್ಲಿ ವಿಫಲರಾಗುತ್ತೇವೆ. ಈ ಪ್ರಯಾಣದಿಂದ ತಪ್ಪಿಸಿಕೊಳ್ಳದಿರಲು ಅವರಿಗೆ ಈ ಎರಡು ನಿಲ್ದಾಣದ ನಿಯಮ ಜಾರಿಗೆ ತರಲಾಗಿದೆ. ಪ್ರಯಾಣಿಕರು ಅವರಿಗೆ ಮುಂದಿನ ನಿಲ್ದಾಣದಲ್ಲಿ ಹತ್ತಿಕೊಳ್ಳುವ ಅವಕಾಶ ನೀಡಲಾಗಿದೆ. ರೈಲು ಚಾಲನೆ ಆರಂಭವಾಗಿ ಪ್ರಯಾಣಿಕರು ಬಾರದಿದ್ದಾಗ ಒಂದು ಗಂಟೆ ಅಥವಾ ಎರಡು ನಿಲ್ದಾಣದವರೆಗೆ ಕಾದು ಆ ಸೀಟನ್ನು ಟಿಟಿಇಗಳು ಬೇರೆಯವರಿಗೆ ನೀಡಬಹುದು

10ಗಂಟೆ ಬಳಿಕ ಪ್ರಯಾಣಿಕರಿಗೆ ತೊಂದರೆ ನೀಡಬಾರದು: ರೈಲು ಪ್ರಯಾಣಗಳು ದೀರ್ಘವಾಗಿರುತ್ತದೆ. ಈ ಪ್ರಯಾಣವನ್ನು ಅವರು ಅನುಭವಿಸಬೇಕಾಗಿರುವ ಹಿನ್ನಲೆ ಅವರಿಗೆ ಯಾವುದೇ ರೀತಿಯ ಅಡಚಣೆಗಳನ್ನು ಮಾಡಬಾರದಯ. ಸಾಮಾನ್ಯವಾಗಿ 10 ಗಂಟೆ ಬಳಿಕ ಟಿಟಿಇ ಸೇರಿದಂತೆ ಯಾರು ಕೂಡ ಪ್ರಯಾಣಿಕರನ್ನು ತೊಂದರೆಗೆ ಒಳಪಡಿಸಬಾರದು.

ಊಟಕ್ಕೆ ನಿಗದಿತ ಬೆಲೆ: ರೈಲಿನಲ್ಲಿನ ಊಟ ಸೇರಿದಂತೆ ಸ್ನಾಕ್ಸ್​, ಪಾನೀಯಗಳಿಗೆ ಸರ್ಕಾರದ ಮಂಡಳಿಗಳೇ ನಿರ್ದಿಷ್ಟ ದರ ನಿಗದಿಸಿರುತ್ತದೆ. ಈ ಬೆಲೆಗೆ ಅಧಿಕವಾಗಿ ಯಾವುದೇ ರೀತಿಯಲ್ಲಿ ವ್ಯಾಪಾರ ಮಾಡುವಂತಿಲ್ಲ. ದುಬಾರಿ ಬೆಲೆ ವ್ಯಾಪಾರ ಮಾಡಿದರೆ ವ್ಯಾಪಾರಿಗಳಿಗೆ ದಂಡ ಅಥವಾ ವ್ಯಾಪಾರದ ಲೈಸೆನ್ಸ್​ ರದ್ದು ಮಾಡಬಹುದು.

ಜೋರು ಸದ್ದು ಮಾಡುವಂತಿಲ್ಲ: ಜೋರು ಶಬ್ಧಗಳ ಬಳಕೆಯನ್ನು ರೈಲಿನಲ್ಲಿ ಮಾಡಬಾರದು ಎಂಬ ಗಂಭೀರ ಸೂಚನೆ ಇದೆ. ಪ್ರಯಾಣಿಕರಿಗೆ ಕಿರಿಕಿರಿಯಾಗುವ, ಮಾಲಿನ್ಯ ಮಟ್ಟದ ಅತಿ ಹೆಚ್ಚಿನ ಬಳಕೆ ಶಬ್ದವನ್ನು ಯಾರು ಬಳಕೆ ಮಾಡುವಂತಿಲ್ಲ. ಗ್ಯಾಜೆಡ್​ಗಳಲ್ಲಿ ಅತಿಯಾಗಿ ಶಬ್ಧ ಇಡುವಂತಿಲ್ಲ. ಇಂದು ವೇಳೆ ಈ ರೀತಿ ಶಬ್ಧ ಇಟ್ಟರೆ ಈ ಸಂಬಂದ ಟಿಟಿಇಗೆ ದೂರು ಸಲ್ಲಿಸಬಹುದು.

ಇದನ್ನೂ ಓದಿ: ಆನೆಗಳ ಸಾವು ತಡೆಗೆ ರೈಲ್ವೆಯಿಂದ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆ ಒಪ್ಪಂದ

Last Updated : Mar 29, 2023, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.