ಇದು ಮಳೆಗಾಲ. ಮೋಡ ಕವಿದ ವಾತಾವರಣ, ಸದಾ ಜಿನುಗುವ ಮಳೆಯಿಂದ ನಿಮ್ಮ ಸೌಂದರ್ಯಕ್ಕೆ ಯಾವುದೇ ತೊಡಕಾಗದಂತೆ ನೋಡಿಕೊಳ್ಳುವುದು ಅವಶ್ಯಕ. ಮಳೆಗಾಲ ಸರಳ, ಸಹಜ ಮತ್ತು ರೈನ್ಫ್ರೂಪ್ ಉಡುಪುಗಳ ಸಂಗ್ರಹಕ್ಕೆ ಸಜ್ಜಾಗುವಂತೆ ಪ್ರೇರೇಪಿಸುತ್ತದೆ. ಆರೋಗ್ಯ ಕಾಳಜಿಯಂತೆ ಹೊರಗೆ ಹೋಗುವಾಗ ಧಿರಿಸಿನ ವಿಚಾರದಲ್ಲೂ ಗಮನ ಹರಿಸಬೇಕಿದೆ. ಸದಾ ಸುರಿಯುವ ಮಳೆ ನೀರು ನಿಮ್ಮ ಉಡುಪಿನ ಶೈಲಿಗೆ ಯಾವುದೇ ಭಂಗ ತರದಂತೆ ನೋಡಿಕೊಳ್ಳಬೇಕು. ಅದಕ್ಕೆ ಇಲ್ಲಿದೆ ಕೆಲವು ಸರಳ ಸಲಹೆಗಳು..
ಮಳೆಗಾಲದಲ್ಲಿ ಆದಷ್ಟು ಹೀಲ್ಸ್ ಚಪ್ಪಲಿಗಳಿಗೆ ಒತ್ತು ನೀಡಿ. ಇದು ನಿಮ್ಮನ್ನು ಕೇವಲ ಸ್ಟೈಲಿಶ್ ಆಗಿ ಇಡುವುದಲ್ಲದೇ, ಮಳೆ ನೀರಿನಿಂದ ರಕ್ಷಿಸುತ್ತದೆ. ಬೇಸಿಗೆಯಲ್ಲಿನ ಪ್ಲಿಪ್ ಪ್ಲಾಪ್ ಚಪ್ಪಲಿಯಂತಹ ಬೋರಿಂಗ್ ಫ್ಯಾಷನ್ ಬದಲಾವಣೆಗೂ ಮಳೆಗಾಲ ನಿಮಗೆ ಅವಕಾಶ ನೀಡುತ್ತದೆ. ಇದರಿಂದ ಮಳೆ ನೀರಿನಲ್ಲಿ ಯಾವುದೇ ಅಡೆತಡೆ ಇಲ್ಲದೇ ನಡೆಯಬಹುದು. ಇದು ನಿಮ್ಮ ಎತ್ತರವನ್ನು ಮಾತ್ರವಲ್ಲ, ನಿಮ್ಮ ಸ್ಟೈಲ್ ಅನ್ನು ಕೂಡಾ ಹೆಚ್ಚಿಸುತ್ತದೆ.
ಆರಾಮದಾಯಕ ಉಡುಪು: ಆದಷ್ಟು ಸರಳ ಉಡುಪಿಗೆ ಆದ್ಯತೆ ಇರಲಿ. ಆರಾಮದಾಯಕವಾಗುವ ಜೊತೆಗೆ ನಿಮ್ಮ ಸ್ಟೈಲ್ ಹೆಚ್ಚಿಸಬೇಕು. ಇವು ನಿಮ್ಮನ್ನು ಬೆಚ್ಚಗಿರುವಂತೆ ನೋಡಿಕೊಳ್ಳಲು ಸಹಾಯ ಮಾಡಬೇಕು. ಸ್ಕಾರ್ಫ್, ಶ್ರಗ್ಗಳು ರಕ್ಷಿಸುವ ಜೊತೆಗೆ ಸ್ಟೈಲಿಶ್ ಆಗಿ ಕಾಣುವಂತೆಯೂ ಮಾಡುತ್ತದೆ. ಅಧಿಕ ಸಾಂಪ್ರದಾಯಿಕ ಉಡುಗೆಯ ಬದಲಿಗೆ ಮಳೆಯಲ್ಲಿ ನಡೆದಾಡುವಾಗ ನಿರ್ವಹಣೆ ಮಾಡಬಹುದಾದ ಉಡುಪಿಗೆ ಆದ್ಯತೆ ನೀಡಿ.
ಸರಳತೆಗೆ ಒತ್ತು: ಮಳೆಗಾಲದಲ್ಲಿ ಮುಖದ ಸೌಂದರ್ಯಕ್ಕೆ ಸಾಧ್ಯವಾದಷ್ಟು ಸರಳತೆಗೆ ಒತ್ತು ನೀಡಿ. ಅಧಿಕ ಮೇಕಪ್ ಲುಕ್ಗಳಿಗೆ ಬಾಯ್ ಹೇಳಿ, ಸಹಜವಾದ ಹೊಳೆಯುವಂತ ಮೇಕಪ್ ಆಯ್ಕೆ ಮಾಡಿ. ಬಳಕೆ ಮಾಡುವ ಮೇಕಪ್ ಉತ್ಪನ್ನಗಳು ವಾಟರ್ಫ್ರೂ ಇರುವಂತೆ ನೋಡಿಕೊಳ್ಳಿ.
ಆರೈಕೆ ಇರಲಿ: ವಾತಾವರಣದ ಬದಲಾವಣೆ ತ್ವಚೆಯ ಮೇಲೂ ಪರಿಣಾಮ ಬೀರುತ್ತದೆ. ಮಳೆಗಾಲದಲ್ಲಿ ಹೆಚ್ಚಾಗಿ ಕೈ, ಕಾಲುಗಳ ಆರೈಕೆ ಮುಖ್ಯ. ಸದಾ ನೀರಿನಲ್ಲಿ ಪಾದಗಳು ಒದ್ದೆಯಾಗುವುದರಿಂದ ತೇವಾಂಶ ಹೆಚ್ಚಿ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಮೃದುತ್ವದ ಜೊತೆಗೆ ಮಳೆಯಲ್ಲಿ ಕಾಲಿನ ಅಂದಗೆಡದಂತೆ ಕಾಪಾಡುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದ್ದು, ಅದಕ್ಕೆ ತಕ್ಕಂತೆ ಮ್ಯಾನಿಕ್ಯೂರ್, ಪೆಡಿಕ್ಯೂರ್ ಮೊರೆ ಹೋಗಿ. ಪಾದಗಳನ್ನು ಆದಷ್ಟು ತೇವಾಂಶ ಇರದಂತೆ ನೋಡಿಕೊಳ್ಳುವುದರೊಂದಿಗೆ ಮಳೆಗಾಲದಲ್ಲಿ ನೀರು ಸೇವನೆಗೆ ಹೆಚ್ಚು ಆದ್ಯತೆ ನೀಡಿ.
ಆರೋಗ್ಯಯುತ ಆಹಾರಕ್ಕೆ ಇರಲಿ ಒತ್ತು: ಮಳೆಗಾಲದಲ್ಲಿ ಆರೋಗ್ಯಯುತ ಆಹಾರ ಸೇವನೆ ಅತ್ಯವಶ್ಯಕ. ನಾವು ಸೇವಿಸುವ ಆಹಾರ ಕೂಡ ತ್ವಚೆಯ ಮೇಲೆ ಪರಿಣಾಮ ಬೀರುವ ಹಿನ್ನಲೆ ಧಾನ್ಯ, ತೆಳು ಪ್ರೋಟಿನ್, ಪ್ರೊಬಯಾಟಿಕ್ ಆಹಾರಗಳಾದ ಮೊಸರು, ಹಾಲು, ಯೋಗರ್ಟ್ಗೆ ಹೆಚ್ಚು ಸೇವನೆಗೆ ಆದ್ಯತೆ ನೀಡಿ.
ಇದನ್ನೂ ಓದಿ: ಮನ್ಸೂನ್ನಲ್ಲಿ ಕಾಡುತ್ತಿದ್ಯಾ ಕೀಲು ನೋವು; ಇಲ್ಲಿದೆ ಇದಕ್ಕೆ ಪರಿಹಾರ