ನವದೆಹಲಿ: ಕಣ್ಣಿನ ಯಾವುದೇ ಸಮಸ್ಯೆ ಇಲ್ಲದವರ ಕಣ್ಣೀರಿನಲ್ಲಿ ಕೋವಿಡ್ನ ಸಾರ್ಸ್ ಕೋವ್ 2 ವೈರಸ್ ಪತ್ತೆಯಾಗಿರುವ ಅಪರೂಪದ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಇತ್ತೀಚೆಗೆ ಏಮ್ಸ್ ನಡೆಸಿದ ಸಂಶೋಧನೆಯಲ್ಲಿ ತಿಳಿಸಿದೆ. ಈ ಅಧ್ಯಯನ ವರದಿಯನ್ನು ಕ್ಯೂರಿಯನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಈ ಸಂಬಂಧ 40 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಮೂರು ಗುಂಪುಗಳಲ್ಲಿ ನಡೆಸಿದ ಅಧ್ಯಯನದಲ್ಲಿ 26 ಜನರನ್ನು ಅಂದರೆ, ಶೇ 65ರಷ್ಟು ಮಧ್ಯ ಕೋವಿಡ್ ಹೊಂದಿದ್ದು, ಶೇ 15 ರಷ್ಟು ಅಂದರೆ ಆರು ಮಂದಿ ತೀವ್ರ ಕೋವಿಡ್ ಹಾಗೂ ಉಳಿದ ಮಂದಿಯನ್ನು ಸೌಮ್ಯ ಕೋವಿಡ್ ಹೊಂದಿರುವವರು ಎಂದು ವರ್ಗೀಕರಿಸಲಾಗಿದೆ.
40 ರೋಗಿಗಳಲ್ಲಿ ಐದು ಮಂದಿಯ ಆರ್‌ಟಿ-ಪಿಸಿಆರ್ ವರದಿ ಬಳಸಿಕೊಂಡು ಕಣ್ಣೀರಿನ ಮಾದರಿ ಪರೀಕ್ಷಿಸಿದಾಗ ಕೋವಿಡ್ ಇರುವುದು ತಿಳಿದು ಬಂದಿದೆ. ಕೋವಿಡ್ ಸೋಂಕಿತ ಪ್ರಕರಣದಲ್ಲಿ ಶೇ 20ರಷ್ಟು ಮಂದಿಯಲ್ಲಿ ಕಣ್ಣಿನ ಸಮಸ್ಯೆ ಕಂಡುಬಂದರೆ, ಉಳಿದವರಲ್ಲಿ ಯಾವುದೇ ಕಣ್ಣಿನ ರೋಗ ಪತ್ತೆ ಆಗಿಲ್ಲ.
ಏಳು ರೋಗಿಗಳಲ್ಲಿ ಕಣ್ಣಿನ ರೋಗ ಲಕ್ಷಣಗಳಾದ ಕಾಂಜಕ್ಟಿವಲ್ ಹೈಪರ್ಮಿಯಾ, ಎಪಿಫೊರಾ, ತುರಿಕೆಯಂತಹ ಲಕ್ಷಣಗಳು ಗೋಚರಿಸಿವೆ. ಇದರಲ್ಲಿ ಶೇ 14ಷ್ಟು ಮಂದಿಯಲ್ಲಿ ಕಣ್ಣೀರಿನ ಆರ್‌ಟಿ-ಪಿಸಿಆರ್ನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಉಳಿದ ಆರು ಮಂದಿ ಕಣ್ಣೀರಿನ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಕಂಡುಬಂದಿದೆ.
ಕಣ್ಣಿನ ರೋಗ ಲಕ್ಷಣಗಳನ್ನು ಹೊಂದಿರುವ ಮತ್ತು ಇಲ್ಲದ ರೋಗಿಗಳ ಕಣ್ಣೀರಿನ ಮಾದರಿಯಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ ಎಂದು ಏಮ್ಸ್ನ ಕನಿಷ್ಕ್ ಸಿಂಗ್ ತಿಳಿಸಿದ್ದಾರೆ. ಕಣ್ಣಿನ ಕುರಿತಾದ ಕೋವಿಡ್ 19 ರೋಗಿಗಳ ಒಳಗೊಳ್ಳುವಿಕೆ ಸೀಮಿತ ವರದಿ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಕೋವಿಡ್ ದೃಢಪಟ್ಟ ರೋಗಿಗಳಲ್ಲಿ ಕಾಂಜೆಕ್ಟಿವಿಲ್ ಸ್ವ್ಯಾಬ್ಗಳ ಮೂಲಕ ಸಾರ್ಸ್ ಕೋವ್ 2 ಪತ್ತೆ ಹಚ್ಚುವಿಕೆಯನ್ನು ಅಧ್ಯಯನ ತೋರಿಸುತ್ತದೆ. ಆದರೂ ಇದರ ಪಾಸಿಟಿವಿಟಿ ದರ ಕಡಿಮೆ ಇದೆ ಎಂದಿದ್ದಾರೆ.
ಕಣ್ಣೀರಿನಲ್ಲಿ ಕಂಡುಬರುವ ವೈರಸ್ ಕಡಿಮೆ ಹರಡುವಿಕೆ ಹೊಂದಿದೆ. ಆದರೆ ಕಣ್ಣಿನ ಮೂಲಕ ಹರಡುವ ಅಪಾಯವಿದೆ. ಈ ಸಂಬಂಧ ವೈದ್ಯಕೀಯ ಸಿಬ್ಬಂದಿ ಸಮಯದಲ್ಲಿ ಎಚ್ಚರಿಕೆಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೋವಿಡ್ ಪತ್ತೆಯಾದ ರೋಗಿಗಳ ಹರಡುವಿಕೆ ಅಪಾಯವನ್ನು ಕಡಿಮೆ ಮಾಡಬೇಕು ಎಂದು ಸಂಶೋಧಕರು ಹೇಳಿದ್ದಾರೆ.
ಕಣ್ಣಿನ ರೋಗ ಲಕ್ಷಣ ಇಲ್ಲದಿದ್ದರೂ ಕಣ್ಣೀರಿನ ಮಾದರಿ ಮೂಲಕ ರೋಗದ ಹರಡುವಿಕೆ ಆತಂಕ ಮೂಡಿಸಿದೆ. ಕೋವಿಡ್-19 ರೋಗನಿರ್ಣಯಕ್ಕಾಗಿ ಕಣ್ಣೀರಿನ ಮಾದರಿಗಳನ್ನು ಮಾತ್ರ ಅವಲಂಬಿಸುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 28 ಅಪಾಯಕಾರಿ ಕೋವಿಡ್ ತಳಿಗಳನ್ನು ಪತ್ತೆ ಮಾಡಿದ ಜರ್ಮನ್ ವಿಜ್ಞಾನಿಗಳು