ETV Bharat / sukhibhava

ಕೋವಿಡ್​​ ವೈರಸ್ ಬದುಕುಳಿಯಲು ತನ್ನ ಆಕಾರವನ್ನು ಬದಲಾಯಿಸಬಹುದು: ಅಧ್ಯಯನ

ಕಾಲಕ್ರಮೇಣ ಪ್ರಬಲವಾಗುತ್ತಿರುವ ಕೋವಿಡ್​​ ವಿರುದ್ಧ ಹೋರಾಡಲು ಇಡೀ ಜಗತ್ತು ಒಂದಾಗಿದೆ. ಆದರೂ ಇತ್ತೀಚಿನ ಅಧ್ಯಯನವೊಂದು ಕೋವಿಡ್ -19 ವೈರಸ್ ತಾನು ಬದುಕುಳಿಯಲು ತನ್ನ ಆಕಾರ ಮತ್ತು ರಚನೆಯನ್ನು ಬದಲಾಯಿಸಬಹುದು ಎಂದು ಹೇಳುತ್ತದೆ.

covid virus
ಕೋವಿಡ್​​ ವೈರಸ್
author img

By

Published : Aug 29, 2021, 4:48 PM IST

SARS-CoV-2 ನ ಆನುವಂಶಿಕವಾದುದು. ಇದು ಕೋವಿಡ್ -19 ಗೆ ಕಾರಣವಾಗುವ ವೈರಸ್, ಅದರ ಬದುಕುಳಿಯುವಿಕೆಯನ್ನು ಹೆಚ್ಚಿಸಲು ಆಕಾರ ಮತ್ತು ರಚನೆಯನ್ನು ಬದಲಾಯಿಸಬಹುದು ಎಂಬುದನ್ನು ಕಂಡುಕೊಂಡರೆ, ಸಂಶೋಧಕರು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ನೀಡಲು ಹೆಚ್ಚು ಪರಿಣಾಮಕಾರಿ ಔಷಧಿಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಡ್ಯೂಕ್-ಎನ್‌ಯುಎಸ್ ಮೆಡಿಕಲ್ ಸ್ಕೂಲ್, ಜಿನೋಮ್ ಇನ್‌ಸ್ಟಿಟ್ಯೂಟ್ ಆಫ್ ಸಿಂಗಾಪುರ್ (ಜಿಐಎಸ್) ಮತ್ತು ಬಯೋಇನ್ಫಾರ್ಮ್ಯಾಟಿಕ್ಸ್ ಇನ್‌ಸ್ಟಿಟ್ಯೂಟ್ (ಬಿಐಐ)ನ ಸಂಶೋಧಕರ ನೇತೃತ್ವದ ಅಧ್ಯಯನವು ವೈರಸ್‌ನ ರಿಬೊನ್ಯೂಕ್ಲಿಯಿಕ್ ಆಸಿಡ್ (ಆರ್‌ಎನ್‌ಎ) ಅದರ ಬೆಳವಣಿಗೆ ಮತ್ತು ಉಳಿವಿಗಾಗಿ ಸೋಂಕಿತ ಕೋಶಗಳ ಒಳಗೆ ಇದ್ದಾಗ ಸಂಕೀರ್ಣ ಮತ್ತು ಕ್ರಿಯಾತ್ಮಕ ಆಕಾರಗಳಾಗಿ ಮಡಚಿಕೊಳ್ಳಬಹುದು ಎಂದು ತೋರಿಸಿದೆ ಎಂದು ಸ್ಟ್ರೈಟ್ ಟೈಮ್ಸ್ ವರದಿ ಮಾಡಿದೆ.

ಅಷ್ಟೇ ಅಲ್ಲ, ಆರ್‌ಎನ್‌ಎ ವೈರಸ್ ಮಾನವ ಜೀವಕೋಶದ ಆರ್‌ಎನ್‌ಎಯೊಂದಿಗೆ ತನ್ನ ಉಳಿವಿಗಾಗಿ ಇಂಟರ್‌ಆ್ಯಕ್ಟ್ ಮಾಡಬಹುದು​ ಎಂದು ಸಂಶೋಧಕರ ತಂಡವು ಕಂಡುಹಿಡಿದಿದೆ.

"ಮಾನವ ಜೀವಕೋಶಗಳ ಒಳಗೆ ವೈರಸ್ ತೆಗೆದುಕೊಳ್ಳುವ ಆಕಾರವನ್ನು ಅರ್ಥಮಾಡಿಕೊಳ್ಳುವುದರ ಹೊರತಾಗಿಯೂ, ಇತ್ತೀಚಿನ ಸಂಶೋಧನೆಯು ಅದರ ಆಕಾರಗಳು RNA ಅನ್ನು ಗುರಿಯಾಗಿಸುವ ಔಷಧಿಗಳಿಗೆ ಬಹಳ ಮುಖ್ಯವೆಂದು ತೋರಿಸಿದೆ, ಇದು ಈ ಯೋಜನೆಯನ್ನು ಪ್ರಾರಂಭಿಸಲು ನಮ್ಮನ್ನು ಪ್ರೇರೇಪಿಸಿತು" ಎಂದು ಆರ್‌ಎನ್‌ಎ ಜಿನೊಮಿಕ್ಸ್ ಮತ್ತು ಸ್ಟ್ರಕ್ಚರ್‌ನ ಪ್ರಯೋಗಾಲಯದ ಸಂಶೋಧನಾ ಟೀಮ್​ ಲೀಡರ್​​ ಡಾ. ವಾನ್ ಯು ತಿಳಿಸಿದ್ದಾರೆ. ಈ ಕುರಿತ ಸಂಶೋಧನೆಗಳನ್ನು ನೇಚರ್ ಕಮ್ಯುನಿಕೇಷನ್ಸ್ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ಪ್ರತಿಕಾಯಗಳು ವೈರಸ್ ಪ್ರೊಟೀನ್‌ಗಳು ಮತ್ತು ಅದರ ಜಿನೊಮ್‌ಗಳೊಂದಿಗೆ ಹೇಗೆ ಸಂವಹನ ನಡೆಸುತ್ತವೆ ಎಂಬುದರ ಕುರಿತು ಬಹಳಷ್ಟು ಸಂಶೋಧನೆಗಳು ನಡೆದಿವೆ. ಆದರೆ, ವೈರಸ್ ಜೀವಕೋಶಕ್ಕೆ ಸೋಂಕು ತಗುಲಿದ ನಂತರ ಮಾನವ ಆರ್‌ಎನ್‌ಎಯೊಂದಿಗೆ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಕುರಿತು ಸ್ವಲ್ಪವೂ ತಿಳಿದಿಲ್ಲ.

ಈಗಿನ ಹೊಸ ಅಧ್ಯಯನದಲ್ಲಿ, ವೈರಸ್ ತನ್ನ ನ್ಯೂಕ್ಲಿಯೊಲಾರ್ RNA ಅಥವಾ snoRNA ಯೊಂದಿಗೆ ಅದರ ಮಾರ್ಪಾಡು ಸಾಮರ್ಥ್ಯಗಳನ್ನು ಕದಿಯಲು ಬಂಧಿಸುತ್ತದೆ ಎಂದು ತಂಡವು ಕಂಡುಕೊಂಡಿದೆ. ಇದು ವೈರಸ್ ಅನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ, ಆತಿಥೇಯ ಕೋಶಗಳಿಗೆ ಸೋಂಕು ತಗುಲಿಸುವಲ್ಲಿ ಇದು ಹೆಚ್ಚು ಯಶಸ್ವಿಯಾಗುತ್ತದೆ.

ದೇಹವು ಪ್ರೊಟೀನ್ ಅನ್ನು ಸರಿಯಾಗಿ ಉತ್ಪಾದಿಸಲು ಶಕ್ತಗೊಳಿಸಲು snoRNA ದೇಹದ ಟ್ರಾನ್ಸ್​ಲೇಶನ್ ಮಷಿನ್​ ಅನ್ನು ಮಾರ್ಪಡಿಸುತ್ತದೆ. ಆವಿಷ್ಕಾರಗಳು ಔಷಧದ ಅಭಿವೃದ್ಧಿಗೆ ಗುರಿಯಾಗಬಹುದಾದ ವೈರಸ್ ಆರ್​​ರನ್​​ಎಯ ಪ್ರದೇಶಗಳ ಬಗ್ಗೆ ಇತರ ಸಂಶೋಧಕರಿಗೆ ತಿಳಿಸಲು ಸಹಾಯ ಮಾಡುತ್ತದೆ ಎಂದು ಯು ಹೇಳಿದರು. ಅಲ್ಲದೇ ಸಂಶೋಧಕರು ಈಗಾಗಲೇ ಕೊರೊನಾದ ವೈಲ್ಡ್​​ ಮತ್ತು ರೂಪಾಂತರದ ನಡುವಿನ ಆಕಾರ ವ್ಯತ್ಯಾಸಗಳನ್ನು ಕಂಡುಕೊಂಡಿದ್ದಾರೆ ಎಂದು ಯು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.