ETV Bharat / sukhibhava

ಕೋವಿಡ್​ ಸೋಂಕಿತ ವ್ಯಕ್ತಿ ವಾಸನೆ, ರುಚಿ ಕಳೆದುಕೊಳ್ಳುವುದೇಕೆ? - ಕೋವಿಡ್​ 19ನ ಸಾರ್ಸ್​ ಕೋವ್​ 2 ವೈರಸ್​ ಸೋಂಕಿತ

ಕೋವಿಡ್​ ಸೋಂಕಿನ ಪ್ರಾಥಮಿಕ ಲಕ್ಷಣವೇ ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು. ಈ ಬೆಳವಣಿಗೆಗೆ ಹೊಸ ಅಧ್ಯಯನ ಕಾರಣ ಕಂಡುಕೊಂಡಿದೆ.

Covid virus affects smell and taste reason behind this

author img

By ETV Bharat Karnataka Team

Published : Sep 8, 2023, 12:35 PM IST

ನ್ಯೂಯಾರ್ಕ್​: ಕೋವಿಡ್​ 19ನ ಸಾರ್ಸ್​ ಕೋವ್​ 2 ವೈರಸ್​ ಸೋಂಕಿತ ವ್ಯಕ್ತಿ, ವಾಸನೆ ಗ್ರಹಣೆ ಮತ್ತು ರುಚಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಈ ವೈರಸ್​ ಸಂವೇದನಾ ನರಕೋಶಕ್ಕೂ ಸೋಂಕು ತಗುಲಿಸಬಹುದು ಎಂದು ಹೊಸ ಅಧ್ಯಯನ ಹೇಳುತ್ತಿದೆ.

2020ರಲ್ಲಿ ಕೋವಿಡ್​ ಸೋಂಕು ಆರಂಭವಾದಾಗ ಬಹುತೇಕ ಮಂದಿಯಲ್ಲಿ ಬಾಹ್ಯ ನರಮಂಡಲದ ಮೇಲೆ ಪರಿಣಾಮ ಕಂಡುಬಂದಿತ್ತು. ಇದು ಮಿದುಳು ಮತ್ತು ದೇಹದ ಇತರೆ ಭಾಗಗಳಿಗೆ ಸಂವಹನ ನಡೆಸುವ ನರಜಾಲಗಳು. ಮನುಷ್ಯನ ವಾಸನೆ ಮತ್ತು ರುಚಿಯ ಇಂದ್ರಿಯಗಳು ಬಾಹ್ಯ ನರಮಂಡಲದ ಸಂವೇದಾನ ನರಕೋಶಗಳನ್ನು ಒಳಗೊಂಡಿದೆ. ಈ ಮುಂಚಿನ ಅಧ್ಯಯನವು ವೈರಸ್​​, ನರಗಳಿಗೆ ಹಾನಿ ಮಾಡುವುದಿಲ್ಲ ಅಥವಾ ಅಪರೂಪವಾಗಿ ಸೋಂಕಿಗೆ ಕಾರಣವಾಗಬಹುದು ಎಂಬುದನ್ನು ತೋರಿಸಿತ್ತು.

ಅಮೆರಿಕದ ವೈಟ್​ಹೆಡ್​​ ಇನ್ಸುಟಿಟ್ಯೂಟ್​ ಫಾರ್​ ಬಯೋಮೆಡಿಕಲ್​ ರಿಸರ್ಚ್​ ತಂಡ, ಸಾರ್ಸ್​ ಕೋವ್​​ 2 ಸಂವೇದನಾ ನರಕೋಶಗಳಿಗೆ ಸೋಂಕು ತಗುಲಿಸಿ, ಅದರಿಂದ ಕೋಶದ ವಂಶವಾಹಿನಿಯ ಅಭಿವ್ಯಕ್ತಿಗಳನ್ನು ಬದಲಾಯಿಸುತ್ತದೆ ಎಂದು ಪತ್ತೆ ಮಾಡಿದೆ. ಈ ಫಲಿತಾಂಶವು ವೈರಸ್​​ ಬಾಹ್ಯ ನರಕೋಶ ಮಂಡಲದ ಮೇಲೆ ಹೇಗೆ ಲಕ್ಷಣ ಮೂಡುತ್ತದೆ ಎಂದು ವಿವರಿಸಲು ಸಹಾಯ ಮಾಡಿದ್ದು, ಚಿಕಿತ್ಸೆ ಅಭಿವೃದ್ಧಿಯ ಸಂಶೋಧನೆಗೆ ಅಡಿಗಲ್ಲು ಹಾಕಿದೆ.

ಸಾರ್ಸ್​ ಕೋವ್​ 2 ಸೋಂಕು ರುಚಿ ಮತ್ತು ವಾಸನೆ ಕಳೆದುಕೊಳ್ಳುವ ಮೂಲಕ ಬಾಹ್ಯ ನರಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೆ ಕಾರಣವೇನು ಎಂಬುದು ನಮಗೆ ಗೊತ್ತಿಲ್ಲ ಎಂದು ವೈಟ್​ಹೆಡ್​ ಇನ್ಸುಟಿಟ್ಯೂಟ್​ ಸದಸ್ಯ ರುಡೊಲ್ಫ್​​ ಜೇನಿಶ್ ತಿಳಿಸಿದ್ದಾರೆ. ವೈರಸ್​ ಸೋಂಕಿಗೆ ಒಳಗಾಗಬಹುದು. ಜೀವಕೋಶಗಳ ಕಾರ್ಯವನ್ನು ಬದಲಾಯಿಸಬಹುದು ಎಂದು ತಿಳಿದುಕೊಳ್ಳುವುದರಿಂದ ಇದರ ಕಾರಣದ ಕುರಿತು ಸುಳಿವು ಲಭ್ಯವಾಗಲಿದೆ ಎಂದು ಜೇನಿಶ್ ಹೇಳಿದ್ದಾರೆ.

ಈ ಅಧ್ಯಯನವನ್ನು ಜರ್ನಲ್​ ಐಸೈನ್ಸ್​ನಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರ ತಂಡವು ಪ್ಲುರಿಪೊಟೆಂಟ್ ಕಾಂಡಕೋಶಗಳಿಂದ ಮಾನವ ಸಂವೇದನಾ ನರಕೋಶವನ್ನು ಪ್ರತ್ಯೇಕಿಸಿದ್ದರೆ, ಕೋಶಗಳು ಇಂದ್ರಿಯ ನರಕೋಶವನ್ನು ಪ್ರತ್ಯೇಕಿಸುವುದು ದೃಢಪಟ್ಟಿದೆ. ಅವುಗಳು ನಿರ್ದಿಷ್ಟವಾದ ಜೀನ್​ಗಳನ್ನು ವ್ಯಕ್ತಪಡಿಸಿದೆ ಎಂಬುದನ್ನು ಪತ್ತೆ ಮಾಡಬೇಕಿದೆ.

ಮುಂದಿನ ಹಂತದಲ್ಲಿ ಸಂವೇದನಾ ನರಕೋಶಗಳು ಎಸಿಇ2 ವ್ಯಕ್ತಪಡಿಸುತ್ತದೆಯಾ ಎಂಬುದನ್ನು ಸಂಶೋಧಕರು ಪರೀಕ್ಷಿಸಿದ್ದಾರೆ. ಈ ವೇಳೆ ಸಂವೇದನಾ ನ್ಯೂರಾನ್​ಗಳಿ ಸೋಂಕಿಗೆ ಒಳಗಾಗಬಹುದು ಎಂದು ಸೂಚನೆ ನೀಡಿದೆ.

ಸಂಶೋಧಕರು ಸಂವೇದನಾ ನರಕೋಶಗಳನ್ನು ಸಾರ್ಸ್​​ ಕೋವ್​ 2ನ ಮೂರು ತಳಿಗಳೊಂದಿಗೆ ಅಭಿವ್ಯಕ್ತಿಪಡಿಸಿದ್ದಾರೆ. ಅದು ಕೋವಿಡ್​ ಉಲ್ಬಣಕ್ಕೆ ಕಾರಣವಾದ ಮೂಲದ WA1/2020 ತಳಿ ಮತ್ತು ಡೆಲ್ಟಾ ಹಾಗೂ ಓಮ್ರಿಕಾನ್​ ತಳಿಯಾಗಿದೆ.

ಓಮ್ರಿಕಾನ್​ ಕಡಿಮೆ ಮಟ್ಟದಲ್ಲಿ ಕೋಶವನ್ನು ಅದೇ ಸಮಯ ಚೌಕಟ್ಟಿನಲ್ಲಿ ಸೋಂಕಿಗೆ ಒಳಗಾಗಿಸಿದೆ. ಇದು ಇತರೆ ತಳಿಗಿಂತ ನಿಧಾನವಾಗಿ ಸಂವೇದನಾ ನರಕೋಶಗಳ ಮೇಲೆ ಪರಿಣಾಮ ಬೀರಿದೆ ಎಂದು ಸಲಹೆ ನೀಡಿದೆ. ಫಲಿತಾಂಶವೂ ಓಮಿಕ್ರಾನ್​ ಹಿಂದಿನ ತಳಿಗಿಂತ ಕಡಿಮೆ ಮಟ್ಟದಲ್ಲಿ ರುಚಿ ಮತ್ತು ವಾಸನೆ ಕಳೆದುಕೊಳ್ಳುತ್ತದೆ ಯಾಕೆ ಎಂದು ವಿವರಿಸಿದ್ದು, ಈ ಸಂಬಂಧ ಸಾಬೀತಿಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ.

ಇದನ್ನೂ ಓದಿ: Wight Lose: ತೂಕ ಕಳೆದುಕೊಳ್ಳಬೇಕಾ, ಈ ವಿಷಯದ ಬಗ್ಗೆ ಇರಲಿ ಎಚ್ಚರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.