ಸ್ಯಾನ್ಫ್ರಾನ್ಸಿಸ್ಕೋ: ಕೋವಿಡ್ 19 ಲಾಕ್ಡೌನ್ ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರಿದ್ದು ಸುಳ್ಳಲ್ಲ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಿತು. ಇದೀಗ ಹೊಸ ಅಧ್ಯಯನದಲ್ಲಿ ತಿಳಿದು ಬಂದ ವಿಷಯ ಎಂದರೆ ಕೋವಿಡ್ 19 ಲಾಕ್ಡೌನ್ 10 ವರ್ಷದೊಳಗಿನ ಮಕ್ಕಳಲ್ಲಿ ಎಡಿಎಚ್ಡಿ ಅಂದರೆ (ಅಟೆನ್ಷನ್ ಡಿಫಿಸಿಯೆಟ್ ಹೈಪರ್ಆಕ್ಟಿವಿಟಿ ಡಿಸಾರ್ಡರ್- ಗಮನ ಕೊರತೆ ಸಕ್ರಿಯ ಸಮಸ್ಯೆ) ಅಪಾಯ ಹೊಂದಿದೆ ಎಂದು ತಿಳಿಸಿದೆ.
ಕೂಪನ್ಹೇಗನ್ ಯುನಿವರ್ಸಿಟಿ ಅಧ್ಯಯನ ಅನುಸಾರ, ಕೋವಿಡ್ ನಂತರ 10 ವರ್ಷದ ಮಕ್ಕಳ ಗುಂಪಿನಲ್ಲಿ ಎಡಿಎಚ್‌ಡಿಯನ್ನು ಅಭಿವೃದ್ಧಿಪಡಿಸುವ ಆನುವಂಶಿಕ ಅಪಾಯದ ರೋಗ ನಿರ್ಣಯ ಗಮನಾರ್ಹ ಹೆಚ್ಚಳ ಕಂಡಿದೆ.
ಇದಕ್ಕಾಗಿ 2020 ರಿಂದ 2021ರ ವರೆಗೆ ಎರಡು ಗುಂಪಿನ ಒಟ್ಟು 593 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ನಡುವಳಿಕೆ ಮತ್ತು ಏಕಾಗ್ರತೆಯ ಸಮಸ್ಯೆ ಹೊಂದಿರುವ ಮಕ್ಕಳಲ್ಲಿ ಲಾಕ್ಡೌನ್ ನಂತರ ಎಡಿಎಚ್ಡಿ ಸಮಸ್ಯೆ ಗಮಹಾರ್ಯವಾಗಿ ಹೆಚ್ಚಾಗಿದೆ. ಕಡಿಮೆ ಪಿಆರ್ಎಸ್ ಹೊಂದಿರುವವರಲ್ಲಿ ಇದರ ಹೆಚ್ಚಳ ಕಂಡು ಬಂದಿಲ್ಲ.
ಡೆನ್ಮಾರ್ಕ್ನ ನಮ್ಮ ಅಧ್ಯಯನಕ್ಕೆ ಸಂಬಂಧಿಸಿದಂತೆ ಈ ದತ್ತಾಂಶದ ಮಾದರಿಗಳಿಂದ ಫಲಿತಾಂಶ ಬಂದಿದ್ದು, ಇದು ಈಗಾಗಲೇ ಅನೇಕ ಅಧ್ಯಯನದ ವರದಿಗಳಿಂದ ಪುನರಾವರ್ತಿತವಾಗಿದೆ ಎಂಬುದು ಪತ್ತೆಯಾಗಿದೆ.
ಅಧ್ಯಯನದಲ್ಲಿ ಹೆಚ್ಚಿನ ಅನುವಂಶಿಕ ಅಪಾಯ ಹೊಂದಿರುವ ಮಕ್ಕಳಲ್ಲಿ ಮಾತ್ರ ಎಡಿಎಚ್ಡಿ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ನಮ್ಮ ಅಧ್ಯಯನವು ಅನುವಂಶಿಕತೆಯು ಮಾನಸಿಕ ಆರೋಗ್ಯವನ್ನು ಹೆಚ್ಚಾಗಿ ಪ್ರಭಾವಿಸುತ್ತದೆ ಎಂದು ತೋರಿಸಿದೆ.
ಈ ಅಧ್ಯಯನವು ಕೆಲವು ಮಿತಿಯನ್ನು ಹೊಂದಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾದ ಕೂಪನ್ಹೇಗನ್ ಯುನಿವರ್ಸಿಟಿಯ ಸಂಶೋಧಕರಾದ ಮಾರಿಯಾ ಹೆರ್ನಂಡೇಜ್ ಲೊರ್ಕಾ ತಿಳಿಸಿದ್ದಾರೆ.
ಲಾಕ್ಡೌನ್ಗೆ ಮುಂಚೆ ಮತ್ತು ನಂತರದಲ್ಲಿ ಅಧ್ಯಯನ ಮಾಡಿದ ಮಕ್ಕಳು ಒಂದೇ ಅಲ್ಲ. ಈ ಹಿನ್ನೆಲೆ ಮಕ್ಕಳ ಮಾನಸಿಕ ಸಮಸ್ಯೆ ಹೆಚ್ಚಳ ಸಂಬಂಧ ಕುರಿತು ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ಇದರ ಹೊರತಾಗಿ ನಾವು ಮಾನಸಿಕ ಆರೋಗ್ಯ ಸಮಸ್ಯೆ ಗಮನಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಸಾಮರ್ಥ್ಯದ ಮಿತಿ ಎಂದರೆ, ಮಕ್ಕಳನ್ನು ಎದುರಿಗೆ ಕೂರಿಸಿಕೊಂಡು ಮುಖಾಮುಖಿಯಾಗಿ ಮನೋರೋಗಶಾಸ್ತ್ರದ ಪರೀಕ್ಷೆ ನಡೆಸಲಾಗಿದೆ. ಆದರೂ ಇದು ಪೋಷಕರ ಪ್ರಶ್ನಾವಳಿಗಳ ಮೇಲೆ ಅವಲಂಬಿತವಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಪೋಷಕರು ಹೆಚ್ಚಾಗಿ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ. ಅವರಿಗೆ ಈ ಸಮಸ್ಯೆ ಮುಂಚೆಯೇ ಅಸ್ತಿತ್ವದಲ್ಲಿತ್ತು ಎಂಬ ಬಗ್ಗೆ ಅರಿವು ಇದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ವಿಟಮಿನ್ ಡಿ ಪೂರಕಗಳು ಮಕ್ಕಳಲ್ಲಿ ಅಸ್ತಮಾ ತಡೆಯುವಲ್ಲಿ ಸಹಾಯಕವಾಗಬಲ್ಲವಾ?