ETV Bharat / sukhibhava

ಕೊರೊನಾ ಸೋಂಕಿತರಲ್ಲಿ ಹೆಚ್ಚಾಗಿ ಕಂಡುಬರುವ ಚರ್ಮರೋಗ: ವರದಿಯಲ್ಲಿ ಬಹಿರಂಗ

ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಅನೇಕರಿಗೆ ಚರ್ಮರೋಗದ ಸಮಸ್ಯೆ ಕಂಡುಬಂದಿದೆ ಯುಕೆಯ ಕಿಂಗ್ಸ್ ಕಾಲೇಜ್ ಲಂಡನ್​ನ ಸಂಶೋಧಕ ಮಾರಿಯೋ ಫಾಲ್ಚಿ ಹೇಳಿದ್ದಾರೆ.

skin rashes to Covid
ಕೊರೊನಾ
author img

By

Published : Mar 16, 2021, 6:42 PM IST

ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಅನೇಕರಿಗೆ ಚರ್ಮರೋಗದ ಸಮಸ್ಯೆ ಕಂಡುಬಂದಿದೆ ಎಂದು ಸಂಶೋಧಕರ ತಂಡ ಕಂಡುಹಿಡಿದಿದೆ. ಆನ್‌ಲೈನ್ ಮೂಲಕ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಶೇ. 17ರಷ್ಟು ಮಂದಿಗೆ ಚರ್ಮದ ದದ್ದುಗಳು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಇನ್ನು ಶೇ.21 ರಷ್ಟು ಮಂದಿಯಲ್ಲಿ ಕೊರೊನಾ ಸಂಬಂಧಿತ ಲಕ್ಷಣಗಳು ಮಾತ್ರ ಕಂಡುಬಂದಿದೆ.

"ಕೋವಿಡ್ -19ರ ಕ್ಯುಟೇನಿಯಸ್​ ಮ್ಯಾನಿಫೆಸ್ಟೇಶನ್​ಗಳು ಕೆಲವೊಮ್ಮೆ ಸೋಂಕಿನ ಮೊದಲ ಅಥವಾ ಏಕೈಕ ಚಿಹ್ನೆ" ಎಂದು ಯುಕೆಯ ಕಿಂಗ್ಸ್ ಕಾಲೇಜ್ ಲಂಡನ್​ನ ಸಂಶೋಧಕ ಮಾರಿಯೋ ಫಾಲ್ಚಿ ಹೇಳಿದ್ದಾರೆ.

"ಕೊರೊನಾದ ಇಂತಹ ಆರಂಭಿಕ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸುವ ಮೂಲಕ ಮುಖ್ಯ ಲಕ್ಷಣಗಳ ಮೇಲೆ ಅವಲಂಬಿತವ ಪ್ರಕರಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಸೋಂಕಿನ ಮತ್ತಷ್ಟು ಹರಡುವಿಕೆಯನ್ನು ಕಡಿಮೆ ಮಾಡಲು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ" ಎಂದು ಫಾಲ್ಚಿ ಹೇಳಿದ್ದಾರೆ.

ಸಂಶೋಧಕರ ಪ್ರಕಾರ, ಆಸ್ಪತ್ರೆಗಳಲ್ಲಿ ನಡೆಸಿದ ಹಿಂದಿನ ಅಧ್ಯಯನಗಳಲ್ಲಿ ಕೋವಿಡ್ -19 ರೋಗಿಗಳ ಮೇಲೆ ಅಸಾಮಾನ್ಯ ರೀತಿಯ ಚರ್ಮದ ದದ್ದುಗಳು ಕಂಡುಬಂದಿದೆ ಎಂದು ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.