ಸ್ಥೂಲಕಾಯತೆ ಎನ್ನುವುದು ಅನೇಕ ರೋಗಗಳಿಗೆ ಕಾರಣವಾಗುವ ಅಪಾಯವನ್ನು ಹೊಂದಿದೆ. ಅದರಲ್ಲಿ ಒಂದು ಕೊಲೊರೆಕ್ಟಲ್ ಕ್ಯಾನ್ಸರ್ ಸಹ ಒಂದು. ಇದನ್ನು ಇಲ್ಲಿಯವರೆಗೆ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ, ಜರ್ಮನ್ ಕ್ಯಾನ್ಸರ್ ರಿಸರ್ಚ್ ಸೆಂಟರ್ (ಡಿಕೆಎಫ್ಜೆಡ್) ಸಂಶೋಧನೆ ಅನುಸಾರ, ಈ ಸಮಸ್ಯೆಯಿಂದಾಗಿ ಕ್ಯಾನ್ಸರ್ ಪತ್ತೆಯಾಗುವ ಮೊದಲೇ ಜನರು ದಿಢೀರ್ ಎಂದು ತೂಕ ನಷ್ಟಕ್ಕೆ ಒಳಗಾಗುತ್ತಾರೆ ಎಂಬ ಅಂಶವನ್ನು ಬಹಿರಂಗ ಪಡಿಸಿದ್ದಾರೆ.
ಅಪಾಯ ಹೊಂದಿರುವ ಸ್ಥೂಲಕಾಯತೆ: ಇನ್ನು ಈ ಕುರಿತು ಸರಳ ಅಧ್ಯಯನಕ್ಕೆ ಸಮಸ್ಯೆ ಪತ್ತಯಾಗುವ ಸಮಯದಲ್ಲಿ ದೇಹದ ತೂಕವನ್ನು ಗಣನೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ, ಸ್ಥೂಲಕಾಯ ಮತ್ತು ಕೊಲರೆಕ್ಟಲ್ ಕ್ಯಾನ್ಸರ್ ನಡುವಿನ ಸಂಬಂಧ ಅಸ್ಪಷ್ಟವಾಗಿ ಗೋಚರಗೊಂಡಿದೆ. ಹೊಸ ಅಧ್ಯಯನ ಅಕಾಲಿಕವಾಗಿ ತತ್ಕ್ಷಣವೇ ದೇಹದ ತೂಕ ನಷ್ಟ ಅನುಭವಿಸುವಿಕೆ ಈ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯದ ತೀವ್ರತೆ ಹೊಂದಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಸ್ಥೂಲಕಾಯ ಮಾರಾಣಾಂತಿಕ ಕಾಯಿಲೆಗಳ ಅಪಾಯವನ್ನು ಹೊಂದಿದೆ. ಅಲ್ಲದೇ ಈ ಸ್ಥೂಲಕಾಯ ಕೊಲೊರೆಕ್ಟಲ್, ಮೂತ್ರಪಿಂಡ, ಎಂಡೋಮೆಟಿರಿಯಲ್ ಕ್ಯಾನ್ಸರ್ಗಳಿಗೆ ಕಾರಣವಾಗುಬಹುದು ಎಂಬುದಕ್ಕೆ ಆಧಾರಗಳನ್ನು ಒದಗಿಸಿದೆ. ಈ ಕೊಲೊನೊ ಕ್ಯಾನ್ಸರ್ ಸಾಮಾನ್ಯ ತೂಕ ಹೊಂದಿರುವವರಿಗೆ ಹೋಲಿಕೆ ಮಾಡಿದರೆ, ಸ್ಥೂಲಕಾಯ ಹೊಂದಿರುವವರಲ್ಲಿ ಹೆಚ್ಚಿದೆ ಎಂಬುದನ್ನು ಈ ಹಿಂದಿನ ಅಂದಾಜುಗಳು ಅಧ್ಯಯನದಿಂದ ಸಾಬೀತು ಪಡಿಸಿವೆ.
ಆದಾಗ್ಯೂ ಈ ಅಧ್ಯಯನ ಹೆಚ್ಚಿನ ಗಣನೆಗೆ ತೆಗೆದುಕೊಳ್ಳಲಾಗದಿದ್ದರೂ, ಒಂದೇ ವರ್ಷದಲ್ಲಿ ದಿಢೀರ್ ತೂಕ ಕಳೆದುಕೊಂಡ ಅನೇಕ ಮಂದಿಯಲ್ಲಿ ಈ ಕೊಲೊರೆಕ್ಟಲ್ ಕ್ಯಾನ್ಸರ್ ಪತ್ತೆಯಾಗಿದೆ ಎನ್ನುತ್ತಾರೆ ಹರ್ಮನ್ ಬ್ರೆನ್ನರ್. ಇದು ಅನೇಕ ಮರೆಮಾಚಿದ ಸ್ಥೂಲಕಾಯದ ಅಪಾಯದಗಳ ಕುರಿತು ತಿಳಿಯಲು ಕೊಡುಗೆ ನೀಡಲಿದೆ ಎಂದಿದ್ದಾರೆ.
10 ವರ್ಷ ಅಧ್ಯಯನ: ಈ ಕುರಿತು ಅಧ್ಯಯನಕ್ಕಾಗಿ ಬ್ರೆನ್ನರ್, ಡಿಎಸಿಎಚ್ಎಸ್ ದತ್ತಾಂಶದ ಮೌಲ್ಯಮಾಪನ ನಡೆಸಿದ್ದಾರೆ. ಅಲ್ಲದೇ, ಕೊಲೊರೆಕ್ಟಲ್ ಕ್ಯಾನ್ಸರ್ ಪತ್ತೆ ಸಮಯದಲ್ಲಿನ ದೇಹ ತೂಕ ಮತ್ತು ಇದು ಪತ್ತೆಯಾಗುವ ವರ್ಷಕ್ಕಿಂತ ಮುಂಚಿನ ದೇಹದ ತೂಕವನ್ನು ಎರಡನ್ನು ಸುಮಾರು 10 ವರ್ಷಗಳ ಕಾಲ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ 12 ಸಾವಿರ ಮಂದಿ ಭಾಗಿಯಾಗಿದ್ದಾರೆ.
ಇದು ಪತ್ತೆಯಾಗುವ ಸಮಯದಲ್ಲಿನ ದೇಹ ತೂಕದ ಆಧಾರದ ಮೇಲೆ ಕೊಲೊರೆಕ್ಟನ್ ಕ್ಯಾನ್ಸರ್ ಮತ್ತು ದೇಹ ತೂಕದೊಂದಿಗೆ ಸಂಬಂದ ಹೊಂದಿದೆ ಎಂಬುದಕ್ಕೆ ಬರಲು ಸಾಧ್ಯವಿಲ್ಲ. ಆದರೆ, ಚಿತ್ರಣ ಕೊಂಚ ಭಿನ್ನವಾಗಿದೆ. ಆದಾಗ್ಯೂ, ಸಂಶೋಧಕರು, ಭಾಗಿದಾರರ ಮುಂಚಿನ ತೂಕವನ್ನು ವಿಶ್ಲೇಷಣೆ ನಡೆಸಿದಾಗ ಅಧಿಕ ತೂಕ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಭಿವೃದ್ಧಿಯ ಸಾಧ್ಯತೆ ಪತ್ತೆಯಾಗಿದೆ.
ಅಧ್ಯಯನದಲ್ಲಿ ಭಾಗಿಯಾದ ಅಧಿಕ ತೂಕ ಹೊಂದಿರುವ ಭಾಗಿದಾರರನ್ನು ಬೊಜ್ಜು ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೇ ಕೊಲೊರೆಕ್ಟಲ್ ಕ್ಯಾನ್ಸರ್ ಹೊಂದಿದ ಸಮಯದಲ್ಲಿ ಹೊಂದಿದ್ದ ದುಪ್ಪಟ್ಟು ತೂಕವನ್ನು ಅವರು ಈ ಹಿಂದೆ ಹೊಂದಿದ್ದರು. . ನಾವು ಕೇವಲ ತೂಕದ ಆಧಾರದ ಮೇಲೆ ನೋಡುವುದಾದರೆ, ಸ್ಥೂಲಕಾಯ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯದ ಕೊಂಡಿಯನ್ನು ಮಿಸ್ ಮಾಡುತ್ತಿದ್ದೇವೆ ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಟರ್ನ್ಯಾಷನಲ್ ನೋ ಡಯಟ್ ಡೇ 2023: ದೇಹಾಕೃತಿ ಬಗ್ಗೆ ಬೇಡ ಕೀಳರಿಮೆ, ನಿಮ್ಮನ್ನು ನೀವು ಪ್ರೀತಿಸಿ