ETV Bharat / sukhibhava

ಇರಿಟೇಬಲ್ ಬೋವೆಲ್ ಸಿಂಡ್ರೋಮ್​ಗೆ ಏನು ಕಾರಣ?: ರೋಗಲಕ್ಷಣ ನಿಯಂತ್ರಿಸಲು ಆಹಾರ ಪದ್ಧತಿ ಹೀಗಿರಲಿ! - ಐಬಿಎಸ್

ಆಹಾರ, ಜೀವನಶೈಲಿ ಮತ್ತು ಒತ್ತಡ ನಿರ್ವಹಿಸುವ ಮೂಲಕ ಇರಿಟೇಬಲ್ ಬೋವೆಲ್ ಸಿಂಡ್ರೋಮ್​ನ (ಐಬಿಎಸ್) ರೋಗಲಕ್ಷಣಗಳನ್ನು ನಿಯಂತ್ರಿಸಬಹುದು. ಐಬಿಎಸ್ ಹೊಟ್ಟೆಯಲ್ಲಿ ನೋವು, ಹೊಟ್ಟ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ಅತಿಸಾರ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.

ibs
ibs
author img

By

Published : Sep 30, 2020, 5:59 PM IST

ಹೈದರಾಬಾದ್: ಇರಿಟೇಬಲ್ ಬೋವೆಲ್ ಸಿಂಡ್ರೋಮ್ (ಐಬಿಎಸ್) ಇರುವವರು ಹೊಟ್ಟೆಯಲ್ಲಿ ನೋವು, ಹೊಟ್ಟ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ, ಅತಿಸಾರ ಮತ್ತು ಮಲಬದ್ಧತೆಯ ಸಮಸ್ಯೆ ಅನುಭವಿಸುತ್ತಾರೆ . ಕೆಲವರು ತಮ್ಮ ಆಹಾರ, ಜೀವನಶೈಲಿ ಮತ್ತು ಒತ್ತಡವನ್ನು ನಿರ್ವಹಿಸುವ ಮೂಲಕ ರೋಗಲಕ್ಷಣಗಳನ್ನು ನಿಯಂತ್ರಿಸಬಹುದು. ಈಟಿವಿ ಭಾರತ ಸುಖೀಭವ ವಿಭಾಗವು ಶ್ರೀಮತಿ ವಂದನಾ ಕಾಕೋಡ್ಕರ್ ಅವರೊಂದಿಗೆ ಸಂವಾದ ನಡೆಸಿದೆ.

ಐಬಿಎಸ್ ರೋಗಲಕ್ಷಣಗಳಿಗೆ ಕಾರಣಗಳು:

ಆಹಾರ: ಗೋಧಿ, ಡೈರಿ ಉತ್ಪನ್ನಗಳು, ಸಿಟ್ರಸ್ ಹಣ್ಣುಗಳು, ಬೀನ್ಸ್, ಎಲೆಕೋಸು, ಹಾಲು ಮತ್ತು ಕಾರ್ಬೊನೇಟೆಡ್ ಪಾನೀಯಗಳು ಸೇರಿದಂತೆ ಕೆಲವು ಆಹಾರ ಅಥವಾ ಪಾನೀಯಗಳನ್ನು ತಿನ್ನುವಾಗ ಅಥವಾ ಕುಡಿಯುವಾಗ ಅನೇಕ ಜನರು ಐಬಿಎಸ್ ರೋಗಲಕ್ಷಣಗಳನ್ನು ಹೊಂದಿರುತ್ತಾರೆ.

ಒತ್ತಡ: ಹೆಚ್ಚಿದ ಒತ್ತಡದ ಅವಧಿಯಲ್ಲಿ ಐಬಿಎಸ್ ಹೊಂದಿರುವ ಹೆಚ್ಚಿನ ಜನರು ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಆದರೆ ಒತ್ತಡವು ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದೇ ಹೊರತು ರೋಗಕ್ಕೆ ಕಾರಣವಾಗುವುದಿಲ್ಲ.

ಹಾರ್ಮೋನ್​ಗಳು: ಹಾರ್ಮೋನ್​ಗಳ ಬದಲಾವಣೆ ಐಬಿಎಸ್​​ನಲ್ಲಿ ಮುಖ್ಯ ಪಾತ್ರವಹಿಸುವುದರಿಂದ ಮಹಿಳೆಯರಿಗೆ ಐಬಿಎಸ್ ಇರುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದೆ. ಅನೇಕ ಮಹಿಳೆಯರು ತಮ್ಮ ಮುಟ್ಟಿನ ಅವಧಿಯಲ್ಲಿ ಐಬಿಎಸ್ ಲಕ್ಷಣಗಳನ್ನು ಹೊಂದುವ ಸಾಧ್ಯತೆ ಇದೆ.

ಪೋಷಣೆ: ಐಬಿಎಸ್ ನಿರ್ವಹಣೆಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಬಹಳಷ್ಟು ಜನರು ತಮ್ಮ ಆಹಾರದಿಂದ ಲ್ಯಾಕ್ಟೋಸ್, ಹೆಚ್ಚಿನ ಫ್ರಕ್ಟೋಸ್, ಗ್ಲುಟನ್ (ಗೋಧಿ ಅಧಿಕ ಗ್ಲುಟನ್ ಹೊಂದಿದೆ) ತೆಗೆದುಹಾಕುವ ಅಗತ್ಯವಿದೆ. ಇದು ಕೆಲವು ಪೌಷ್ಠಿಕಾಂಶದ ಕೊರತೆಗಳಿಗೆ ಕಾರಣವಾಗಬಹುದು. ಕೆಲವು ಜನರಲ್ಲಿ ಸೇಬು, ಮಾವು, ಪೇರಳೆ, ಕಲ್ಲಂಗಡಿ ಅಥವಾ ಎಲೆಕೋಸು, ಹೂಕೋಸು ಮುಂತಾದ ತರಕಾರಿಗಳು ರೋಗಲಕ್ಷಣಗಳನ್ನು ಪ್ರಚೋದಿಸುತ್ತವೆ. ಆದ್ದರಿಂದ ಕೆಲವು ಆಹಾರಗಳನ್ನು ತೆಗೆದುಹಾಕುವಾಗ ಹೆಚ್ಚಿನ ಕಾಳಜಿ ವಹಿಸಬೇಕು.

ಕಾರ್ಬೋಹೈಡ್ರೇಟ್‌ಗಳು: ಅಕ್ಕಿ, ಓಟ್ಸ್, ಕ್ವಿನೋವಾ, ಕಾರ್ನ್, ರಾಗಿ, ಜೋವರ್ ಸೇವಿಸಬಹುದು. ಆದರೆ ಗೋಧಿ, ಬಾರ್ಲಿಯಿಂದ ಐಬಿಎಸ್ ರೋಗಲಕ್ಷಣಗಳು ಬರಬಹುದು. ಆದ್ದರಿಂದ ಅವಯಗಳನ್ನು ತಪ್ಪಿಸುವುದು ಒಳಿತು.

ಪ್ರೋಟೀನ್​ಗಳು: ಮಾಂಸದ ಆಹಾರಗಳಾದ ಮೊಟ್ಟೆ, ಕೋಳಿ, ಮೀನು, ದ್ವಿದಳ ಧಾನ್ಯಗಳಾದ ಮೂಂಗ್ ದಾಲ್, ತುರ್ ದಾಲ್, ಹಸಿರು ಗ್ರಾಂ, ಬಟಾಣಿ ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು. ಮೊಸರು ಮತ್ತು ಮಜ್ಜಿಗೆ ಒಳ್ಳೆಯದು. ಕೆಂಪು ಮಾಂಸ, ಸಂಸ್ಕರಿಸಿದ ಮಾಂಸ, ಕಡಲೆಬೇಳೆ, ಮಸೂರ, ಬೀನ್ಸ್ ಮತ್ತು ಹಾಲಿನಂತಹ ಲ್ಯಾಕ್ಟೋಸ್ ಆಹಾರಗ ಐಬಿಎಸ್ ಲಕ್ಷಣಗಳಿಗೆ ಕಾರಣವಾಗಹುದು.

ಕೊಬ್ಬು: ತೈಲ ಹಾಗೂ ತುಪ್ಪದಲ್ಲಿ ಕೊಬ್ಬು ಸೀಮಿತ ಪ್ರಮಾಣದಲ್ಲಿರುತ್ತದೆ. ಆದರೆ ಆವಕಾಡೊ, ಬಾದಾಮಿ ಮತ್ತು ಪಿಸ್ತಾ ಸೇವನೆ ತಪ್ಪಿಸಿ.

ಜೀವಸತ್ವಗಳು ಮತ್ತು ಖನಿಜಗಳು: ಎಲೆಕೋಸು, ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಬಲವಾದ ವಾಸನೆಯನ್ನು ಹೊಂದಿರುವ ಬೀನ್ಸ್ ರೋಗಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ. ಇವುಗಳನ್ನು ತಪ್ಪಿಸಿ. ಆದರೆ, ಇತರ ತರಕಾರಿಗಳಾದ ಕ್ಯಾರೆಟ್, ಟೊಮ್ಯಾಟೊ, ಲೇಡಿ ಫಿಂಗರ್, ಹಸಿರು ಸೊಪ್ಪು ತರಕಾರಿಗಳು, ಆಲೂಗಡ್ಡೆ, ಸಿಹಿ ಆಲೂಗಡ್ಡೆ ಇತ್ಯಾದಿಗಳನ್ನು ಸೂಕ್ಷ್ಮ ಪೋಷಕಾಂಶಗಳ ಪೂರೈಕೆಗಾಗಿ ತಿನ್ನಬಹುದು. ದ್ರಾಕ್ಷಿ, ಸ್ಟ್ರಾಬೆರಿ, ಅನಾನಸ್, ಪಪ್ಪಾಯಿ, ಬಾಳೆಹಣ್ಣುಗಳಂತಹ ಹಣ್ಣುಗಳನ್ನು ಧಾರಾಳವಾಗಿ ತಿನ್ನಬಹುದು. ಆದರೆ ಸೇಬು, ಪೇರಳೆ, ಮಾವು, ಕಲ್ಲಂಗಡಿಗಳನ್ನು ನಿರ್ಬಂಧಿತ ಪ್ರಮಾಣದಲ್ಲಿ ತಿನ್ನಬಹುದು.

ಫೈಬರ್: ಕರುಳಿನ ಕಾಯಿಲೆ ಇರುವ ಜನರಿಗೆ ಫೈಬರ್ ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಫೈಬರ್ ಮಲಬದ್ಧತೆಯನ್ನು ನಿವಾರಿಸಿದರೆ, ಹೆಚ್ಚಿನ ಫೈಬರ್ ಇರುವ ಆಹಾರಗಳು ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆ ಉಬ್ಬರವನ್ನು ಹೆಚ್ಚಿಸಬಹುದು.

ಕರಗುವ ಫೈಬರ್: ಇದು ನೀರು ಹೀರಿಕೊಳ್ಳುತ್ತದೆ. ಈ ನಾರುಗಳು ಕರುಳಿನಲ್ಲಿ ಸ್ಪಂಜಿನಂತೆ ಕಾರ್ಯನಿರ್ವಹಿಸುತ್ತವೆ. ಇದು ಆಹಾರದ ಜೀರ್ಣಕ್ರಿಯೆಯ ಪ್ರಮಾಣವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ ಮತ್ತು ಗ್ಲೂಕೋಸ್ ಹೀರಿಕೊಳ್ಳುವುದನ್ನು ವಿಳಂಬಗೊಳಿಸುತ್ತದೆ. ಈ ಆಹಾರವು ಹೆಚ್ಚು ಕಾಲ ಹೊಟ್ಟೆಯಲ್ಲಿಯೇ ಉಳಿಯುತ್ತದೆ ಮತ್ತು ಇದರಿಂದಾಗಿ ಹೊಟ್ಟೆ ತಂಬಿರುವಂತೆ ಭಾಸವಾಗುತ್ತದೆ. ಇವು ಹಣ್ಣುಗಳು ಮತ್ತು ತರಕಾರಿ ತಿರುಳು, ಓಟ್ಸ್, ದ್ವಿದಳ ಧಾನ್ಯಗಳು, ಬೇಳೆಕಾಳುಗಳು, ದಾಲ್, ಮೊಗ್ಗುಗಳು, ಚಿಯಾ ಬೀಜಗಳು, ಅಗಸೆಬೀಜಗಳು, ಇಸಾಬ್ಗೋಲ್​ಗಳಲ್ಲಿ ಕಂಡುಬರುತ್ತವೆ. ಐಬಿಎಸ್ ಹೊಂದಿರುವ ವ್ಯಕ್ತಿಯು ಇವುಗಳನ್ನು ತಪ್ಪಿಸಬೇಕಾಗುತ್ತದೆ.

ಕರಗದ ಫೈಬರ್: ಈ ನಾರುಗಳು ನೀರಿನಲ್ಲಿ ಕರಗದೇ ಕರುಳನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ, ನೀರನ್ನು ಹೀರಿಕೊಳ್ಳುತ್ತದೆ ಮತ್ತು ತ್ಯಾಜ್ಯ ವಸ್ತುಗಳನ್ನು ಮಲದ ಮೂಲಕ ಸುಲಭವಾಗಿ ತೆಗೆದುಹಾಕುತ್ತದೆ. ಆ ಮೂಲಕ ಮಲಬದ್ಧತೆ ಮತ್ತು ಕರುಳಿನ ಕ್ಯಾನ್ಸರನ್ನು ತಡೆಯುತ್ತದೆ. ಕರಗದ ನಾರುಗಳು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ರಾಗಿ ಮತ್ತು ಕಾಯಿಗಳ ಸಿಪ್ಪೆಗಳಲ್ಲಿ ಕಂಡು ಬರುತ್ತವೆ.

ವ್ಯಕ್ತಿಯು ಮಲಬದ್ಧತೆ ಅಥವಾ ಅತಿಸಾರ ಹೊಂದಿದ್ದಾರೆಯೇ ಎಂಬಂತಹ ರೋಗಲಕ್ಷಣಗಳನ್ನು ಅವಲಂಬಿಸಿ, ವ್ಯಕ್ತಿಯು ತನ್ನ ಫೈಬರ್ ಆರಿಸಬೇಕಾಗುತ್ತದೆ. ಫುಡ್ ಡಯಟ್ ಪ್ಲಾನ್​​​ ಮಾಡಲು ಆಹಾರ ತಜ್ಞರನ್ನು ಭೇಟಿಯಾಗಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.