ETV Bharat / sukhibhava

Cancer vaccine: ಕ್ಯಾನ್ಸರ್‌ಗೆ ಲಸಿಕೆ ಶೀಘ್ರ! ವೈದ್ಯಕೀಯ ಕ್ಷೇತ್ರದಲ್ಲಿ ಭರದಿಂದ ಸಾಗಿದೆ ಸಂಶೋಧನೆ

ಕ್ಯಾನ್ಸರ್ ರೋಗದ​ ವಿರುದ್ಧ ಹೋರಾಡಲು ಮುಂದಿನ ಐದು ವರ್ಷಗಳಲ್ಲಿ ಅನೇಕ ಲಸಿಕೆಗಳು ಅಭಿವೃದ್ಧಿಯಾಗಲಿವೆ ಎಂದು ಸಂಶೋಧಕರು ಶುಭ ಸುದ್ದಿ ನೀಡಿದ್ದಾರೆ.

A cancer vaccine will actually be closer than thought

author img

By

Published : Jun 26, 2023, 4:28 PM IST

ಬೆಂಗಳೂರು: ಆರೋಗ್ಯ ವಲಯದಲ್ಲಿ ಹಲವಾರು ಐತಿಹಾಸಿಕ ದಾಖಲೆಗಳನ್ನು ಹೊಂದಿರುವ ವೈದ್ಯಕೀಯ ಕ್ಷೇತ್ರವು ಇದೀಗ ಕ್ಯಾನ್ಸರ್​​ ರೋಗ ನಿವಾರಣೆಗಾಗಿ ಸತತ ಪ್ರಯತ್ನ ನಡೆಸುತ್ತಿದೆ. ಭವಿಷ್ಯದಲ್ಲಿ ಮಾರಕ ರೋಗಕ್ಕೆ ಲಸಿಕೆಯ ಮೂಲಕ ಚಿಕಿತ್ಸೆ ನೀಡುವ ಸಂಬಂಧ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಲಸಿಕೆಗಾಗಿ ನಡೆಯುತ್ತಿರುವ ದಶಕಗಳ ಸಂಶೋಧನೆಯ ಬಳಿಕ ಇದೀಗ ಸಂಶೋಧಕರು ಮಹತ್ವದ ಘಟ್ಟಕ್ಕೆ ಬಂದಿದ್ದಾರೆ. ಮುಂದಿನ ಐದು ವರ್ಷದಲ್ಲಿ ಕ್ಯಾನ್ಸರ್​​ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ. ಇದು ರೋಗವನ್ನು ತಡೆಗಟ್ಟುವ ಸಂಪ್ರದಾಯಿಕ ಲಸಿಕೆ ಅಲ್ಲ. ಆದರೆ, ಟ್ಯೂಮರ್​ ಅನ್ನು ಕಿರಿದಾಗಿಸುವ ಲಸಿಕೆಯಾಗಿದ್ದು, ಕ್ಯಾನ್ಸರ್​ ಬಾರದಂತೆ ತಡೆಯುತ್ತದೆ. ಸ್ತನ ಮತ್ತು ಶ್ವಾಸಕೋಶ ಕ್ಯಾನ್ಸರ್​​​ ಸೇರಿದಂತೆ ಹಲವು ಚಿಕಿತ್ಸೆಯ ಪ್ರಯೋಗದ ಗುರಿಯನ್ನು ಇದು ಹೊಂದಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ.

ಕೆಲವು ಕಾರ್ಯಕ್ಕೆ ನಾವು ಸಜ್ಜಾಗಿದ್ದೇವೆಯ ಆದರೆ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚು ಉತ್ತಮವಾದ ಕೆಲಸಗಳನ್ನು ಮಾಡಬೇಕಿದೆ ಎಂದು ಡಾ. ಜೇಮ್ಸ್​ ಗುಲ್ಲೆ ತಿಳಿಸಿದ್ದಾರೆ. ಕ್ಯಾನ್ಸರ್​​ಗಳು ಹೇಗೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಣ್ಮರೆ ಮಾಡುತ್ತವೆ ಎಂಬುದನ್ನು ವಿಜ್ಞಾನಿಗಳು ಅರ್ಥೈಸಿಕೊಳ್ಳಬೇಕಿದೆ. ಇಮ್ಯೂನೋ ಥೆರಪಿಯಂತಹ ಕ್ಯಾನ್ಸರ್​ ಲಸಿಕೆಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಿ, ಕ್ಯಾನ್ಸರ್​ ಕೋಶಗಳನ್ನು ಸಾಯಿಸುತ್ತವೆ. ಕೆಲವು ಹೊಸವುಗಳು ಎಆರ್​ಎನ್​ಎ ಬಳಕೆ ಮಾಡುತ್ತವೆ. ಕೋವಿಡ್​ 19 ಲಸಿಕೆ ಮೊದಲ ಬಳಕೆಯಲ್ಲಿ ಇದು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ.

ಟಿ ಕೋಶದ ವಿರುದ್ದ ಹೋರಾಟ: ಲಸಿಕೆ ಕಾರ್ಯಕ್ಕೆ ಪ್ರತಿರಕ್ಷಣೆಯಲ್ಲಿನ ಟಿ ಕೋಶದ ಬಗ್ಗೆ ಪತ್ತೆ ಮಾಡಬೇಕಿದ್ದು, ಇದು ಕ್ಯಾನ್ಸರ್​ನಷ್ಟೇ ಅಪಾಯಕಾರಿ ಎಂದು ಡಾ. ನೊರಾ ಡೈಸಿಸ್​ ಹೇಳುತ್ತಾರೆ. ಟಿ ಕೋಶಗಳು ದೇಹದ ಯಾವುದೇ ಕಡೆ ಸಂಚರಿಸಬಹುದಾಗಿದ್ದು, ಅಪಾಯಕಾರಿ ಕೂಡಾ. ಕ್ರಿಯಾಶೀಲ ಟಿ ಕೋಶಗಳು ಹೆಚ್ಚಾಗಿ ಪಾದಗಳಲ್ಲಿ ಕಂಡುಬರುತ್ತವೆ. ಇದು ರಕ್ತನಾಳದ ಮೂಲಕ ಟಿಶ್ಯೂಗೆ ಸಂಚರಿಸುತ್ತವೆ ಎಂದಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಸ್ತನ ಕ್ಯಾನ್ಸರ್​​ಗೆ ತುತ್ತಾದ ಕಥ್ಲೀನ್​ ಜೆಡ್ ಎಂಬವರು​​ ಕಳೆದ ವಾರ ತಮ್ಮ ಮೂರನೇ ಪ್ರಯೋಗಿಕ ಲಸಿಕೆಗೆ ಕಾದಿದ್ದರು. ಸರ್ಜರಿಗೆ ಮುನ್ನವೇ ಆಕೆಯ ಟ್ಯೂಮರ್ ಲಸಿಕೆಯಿಂದ​ ಸಂಕುಚಿತಗೊಳ್ಳುತ್ತದೆ ಎಂಬುದನ್ನು ಗಮನಿಸಬೇಕಿದೆ. ಈ ಸಂಬಂಧ ಸ್ವಲ್ಪವಾದರೂ ಸುಧಾರಣೆ ಕಂಡರೆ ಇದು ದೊಡ್ಡ ಅವಕಾಶಕ್ಕೆ ದಾರಿಯಾಗಲಿದೆ. ಈಗಾಗಲೇ ಆಕೆ ಗುಣಮಟ್ಟಣದ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಸಿಕೆ ಚಿಕಿತ್ಸೆಯ ಪ್ರಗತಿ ದೊಡ್ಡ ಸವಾಲುದಾಯಕವಾಗಿದೆ. ಮೊದಲಿಗೆ ಪ್ರೊವೆಂಜ್​​ ಅನ್ನು 2010ರಲ್ಲಿ ಅಮೆರಿಕ ಅನುಮೋದಿಸಿತು. ಇದು ಪ್ರಾಸ್ಟೇಟ್​ ಕ್ಯಾನ್ಸರ್​ ಹರಡುವ ವಿರುದ್ಧದ ಚಿಕಿತ್ಸೆಯಾಗಿದೆ. ಇದಕ್ಕೆ ರೋಗಿಗಳ ಸ್ವತಃ ಪ್ರತಿ ರಕ್ಷಣೆಯ ಕೋಶಗಳು ಪ್ರಯೋಗಾಲಯದಲ್ಲಿ ಬೇಕಾಗುತ್ತದೆ. ಅವುಗಳನ್ನು IV ಮೂಲಕ ಮತ್ತೆ ನೀಡಲಾಗುವುದು. ಈ ಹಿಂದೆ ಆರಂಭಿಕ ಬ್ಲಾಡರ್​ ಕ್ಯಾನ್ಸರ್​ ಮತ್ತು ಸುಧಾರಿತ ಮೆಲೊನೊಮಾಗೆ ಕೂಡ ಲಸಿಕೆ ಚಿಕಿತ್ಸೆ ನೀಡಲಾಗಿದೆ.

ಅನೇಕ ಕ್ಯಾನ್ಸರ್​ಗಳನ್ನು ತಡೆಯುವ ಲಸಿಕೆ ಚಿಕಿತ್ಸೆಗಳು ಭವಿಷ್ಯದಲ್ಲಿ ಬರಬೇಕಿದೆ. ದಶಕದ ಹಿಂದೆ ಹೆಪಟೈಟಿಸ್​ ಬಿ ಲಸಿಕೆಯನ್ನು ಯಕೃತ್​​ ಕ್ಯಾನ್ಸರ್‌ಗೆ​ ನೀಡಲಾಗಿದೆ. 2006ರಲ್ಲಿ ಗರ್ಭಕಂಠ ಕ್ಯಾನ್ಸರ್​​ಗೆ ಎಚ್​ಪಿವಿ ಲಸಿಕೆ ನೀಡಲಾಯಿತು. 11 ವರ್ಷದ ಹಿಂದೆ ಮರ್ಸೆರ್​ ದ್ವೀಪದ ಬಳಿಕ ಜೆಮ್ಮಿ ಕ್ರೆಸ್​​ಗೆ ಅಂಡಾಶಯದ ಕ್ಯಾನ್ಸರ್​​ಗೆ ಮೊದಲ ಬಾರಿಗೆ ಲಸಿಕೆ ನೀಡಲಾಯಿತು. 34 ವರ್ಷದ ಕ್ರೆಸ್​​ನಲ್ಲಿ ಸುಧಾರಿತ ಅಂಡಾಶಯದ ಕ್ಯಾನ್ಸರ್​ ಪತ್ತೆಯಾಯಿತು. ಆಕೆ ಸತ್ತೇ ಹೋಗುತ್ತಾಳೆ ಎಂದು ಸ್ನೇಹಿತರು ನಂಬಿದ್ದರು. ಆದರೆ ಈಗ ಆಕೆಗೆ 50 ವರ್ಷವಾಗಿದ್ದು, ಕ್ಯಾನ್ಸರ್​ ಗೆದ್ದಿದ್ದಾಳೆ. ಆಕೆಗೆ ಲಸಿಕೆ ಸಹಾಯ ಮಾಡಿದ್ಯಾ? ಎಂಬುದು ಆಕೆಗೂ ಗೊತ್ತಿಲ್ಲ. ಆದರೂ ನಾನು ಬದುಕಿದ್ದೇನೆ ಎನ್ನುತ್ತಾಳೆ.

ಇದನ್ನೂ ಓದಿ: ಎಡಭಾಗದ ಯಕೃತ್ತು ಬಲಭಾಗದಲ್ಲಿ! ಕರುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.