ETV Bharat / sukhibhava

ಬ್ರಕ್ಸಿಸಮ್​ನಿಂದ ಹಲ್ಲುಗಳಿಗೆ ಹಾನಿ: ಹಲ್ಲು ಕಡಿಯುವುದನ್ನು ತಡೆಯಲು ಇಲ್ಲಿವೆ ಉಪಯುಕ್ತ ಟಿಪ್ಸ್​..

author img

By

Published : Jan 31, 2023, 11:02 PM IST

ದೈಹಿಕ ಸ್ಥಿತಿ ಅಥವಾ ರೋಗಗಳು, ಮಾನಸಿಕ ಅಸ್ವಸ್ಥತೆ, ಜೀವನಶೈಲಿ ಮತ್ತು ಅನುವಂಶಿಕತೆ ಹಲ್ಲು ಕಡಿತಕ್ಕೆ ಕಾರಣ - ಅನೇಕ ಸಮಸ್ಯೆಗಳನ್ನು ಉಂಟುಮಾಡುವ ಹಲ್ಲು ಕಡಿಯುವುದನ್ನು ತಡೆಯಲು ಈ ಪರಿಹಾರ ಬಳಸಿ.

Bruxism: Teeth Grinding Condition which Damages teeth
ಬ್ರಕ್ಸಿಸಮ್​ನಿಂದ ಹಲ್ಲುಗಳಿಗೆ ಹಾನಿ: ಹಲ್ಲು ಕಡಿಯುವುದನ್ನು ತಡೆಯಲು ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್​..

ಹೈದರಾಬಾದ್: ಅನೇಕ ಜನರು, ವಿಶೇಷವಾಗಿ ಮಕ್ಕಳು ರಾತ್ರಿ ಮಲಗುವಾಗ ಹಲ್ಲು ಕಡಿಯುವ ಅಭ್ಯಾಸವನ್ನು ಹೊಂದಿದ್ದಾರೆ. ಕೋಪಗೊಂಡಾಗ ಹಲ್ಲುಗಳನ್ನು ಕಡಿಯುವುದು ಸಾಮಾನ್ಯ, ಆದರೆ ಮಕ್ಕಳು ಭಯಭೀತರಾದಾಗ ಅಥವಾ ಕೆಟ್ಟ ಕನಸುಗಳು ಬಿದ್ದಾಗ ಮತ್ತು ಹೊಟ್ಟೆಯಲ್ಲಿ ಹುಳುಗಳು ಇದ್ದಾಗ ಮಕ್ಕಳು ಹಲ್ಲುಗಳನ್ನು ಕಡಿಯುತ್ತಾರೆ ಎಂದು ಸಾಮಾನ್ಯವಾಗಿ ಜನರು ತಿಳಿದಿದ್ದಾರೆ. ಇವುಗಳಲ್ಲಿ ಹೆಚ್ಚಿನವು ತಪ್ಪುಗ್ರಹಿಕೆಗಳಾಗಿವೆ, ಹಲ್ಲು ಕಡಿಯುವಿಕೆ(ಬ್ರಕ್ಸಿಸಮ್‌)ಗೆ, ದೈಹಿಕ ಸ್ಥಿತಿ ಅಥವಾ ರೋಗಗಳು, ಮಾನಸಿಕ ಅಸ್ವಸ್ಥತೆ, ಜೀವನಶೈಲಿ ಅಂಶಗಳು ಮತ್ತು ಅನುವಂಶಿಕತೆ ಸಮಸ್ಯೆಗಳು ಇದಕ್ಕೆ ಕಾರಣವಾಗಿರಬಹುದು. ಈ ಸಮಸ್ಯೆಯಿಂದಾಗಿ ಹಲ್ಲುಗಳು ತೀವ್ರವಾಗಿ ಹಾನಿಯಾಗುತ್ತವೆ.

ಬ್ರಕ್ಸಿಸಮ್​ನಲ್ಲಿ (ಹಲ್ಲು ಕಡಿಯುವುದು) ರೋಗಿಯು ನಿದ್ದೆ ಮಾಡುವಾಗ ಅಥವಾ ಎಚ್ಚರವಾಗಿರುವಾಗ ಹಲವಾರು ಬಾರಿ ಹಲ್ಲುಗಳನ್ನು ಕಡಿಯಲು ಪ್ರಾರಂಭಿಸುತ್ತಾನೆ. ಈ ಸಮಸ್ಯೆ ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿರಂತರವಾಗಿ ಇಗೆ ಮಾಡುವುದರಿಂದ ದಂತಕವಚ ಅಥವಾ ಹಲ್ಲುಗಳ ಮೇಲಿನ ಪದರದ ಕ್ಷೀಣತೆಗೆ ಕಾರಣವಾಗುತ್ತದೆ.

ಬ್ರಕ್ಸಿಸಮ್​ನ ಎರಡು ವಿಧಗಳು:

ಅವೇಕ್ ಬ್ರಕ್ಸಿಸಮ್: ಈ ಸ್ಥಿತಿಯಲ್ಲಿ, ಹಗಲಿನಲ್ಲಿ ಎಚ್ಚರವಾಗಿರುವಾಗಲೂ ಹಲ್ಲು ಕಡಿಯುವ ಅಭ್ಯಾಸವು ವ್ಯಕ್ತಿಯಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ, ಮಾನಸಿಕ ಅಸ್ವಸ್ಥತೆಗಳು, ಮಾನಸಿಕ ಒತ್ತಡ ಅಥವಾ ಕೋಪ, ಆತಂಕ ಇತ್ಯಾದಿ ಭಾವನಾತ್ಮಕ ಸಮಸ್ಯೆಗಳು ಇದಕ್ಕೆ ಕಾರಣವೆಂದು ಪರಿಗಣಿಸಲಾಗುತ್ತದೆ.

ಸ್ಲೀಪ್ ಬ್ರಕ್ಸಿಸಮ್: ಈ ಪ್ರಕಾರವು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಸ್ಥಿತಿಯಲ್ಲಿ, ರೋಗಿಯು ನಿದ್ದೆ ಮಾಡುವಾಗ ಹಲ್ಲುಗಳನ್ನು ಕಡಿಯುತ್ತಿರುತ್ತಾನೆ. ಸ್ಲೀಪ್ ಬ್ರಕ್ಸಿಸಮ್ ಅನ್ನು ನಿದ್ರಾಹೀನತೆ ಎಂದು ಪರಿಗಣಿಸಲಾಗುತ್ತದೆ. ಈ ಸಮಸ್ಯೆಯಿಂದ ಸಾಮಾನ್ಯವಾಗಿ ವಯಸ್ಕರಲ್ಲಿ ನಿದ್ರೆಗೆ ಸಂಬಂಧಿಸಿದ ಇತರ ಸಮಸ್ಯೆಗಳಾದ ಗೊರಕೆ ಅಥವಾ ನಿದ್ದೆ ಮಾಡುವಾಗ ಉಸಿರಾಟದ ಅಡಚಣೆಯನ್ನು ಸಹ ಕಾಣಬಹುದು.

ದೆಹಲಿಯ ಮನಶಾಸ್ತ್ರಜ್ಞರಾದ ಡಾ ರೀನಾ ದತ್ತಾ, ಕೆಲವೊಮ್ಮೆ ಮಾನಸಿಕ ಅಸ್ವಸ್ಥತೆ ಅಥವಾ ಪ್ರಜ್ಞಾಹೀನ ನರಸ್ನಾಯುಕ ಚಟುವಟಿಕೆಯು ಬ್ರಕ್ಸಿಸಮ್‌ಗೆ ಕಾರಣವಾಗಬಹುದು ಎಂದು ಹೇಳುತ್ತಾರೆ. ಇದು ಕೆಲವು ಮಾನಸಿಕ ಅಸ್ವಸ್ಥತೆ ಮತ್ತು ನರಮಂಡಲಕ್ಕೆ ಸಂಬಂಧಿಸಿದ ರೋಗಗಳ ಲಕ್ಷಣಗಳಲ್ಲಿ ಒಂದಾಗಿದೆ ಎಂದು ತಿಳಿಸುತ್ತಾರೆ. ಉದಾಹರಣೆಗೆ ಎಡಿಎಚ್‌ಡಿ, ಆತಂಕದ ಅಸ್ವಸ್ಥತೆ, ಅತಿಯಾದ ಒತ್ತಡ ಅಥವಾ ಕೋಪ, ದೀರ್ಘಕಾಲದ ಅಥವಾ ತೀವ್ರವಾದ ಆಘಾತ, ಬುದ್ಧಿಮಾಂದ್ಯತೆ ಇತ್ಯಾದಿ.

ಇದಲ್ಲದೆ, ಕೆಲವೊಮ್ಮೆ ಈ ಸಮಸ್ಯೆಯು ಡೌನ್ ಸಿಂಡ್ರೋಮ್ ಅಥವಾ ಅಸ್ವಸ್ಥತೆಯಿಂದ ಬಳಲುತ್ತಿರುವವರಲ್ಲಿಯೂ ಕಂಡುಬರುತ್ತದೆ. ಕೆಲವೊಮ್ಮೆ ಅತಿಯಾದ ಧೂಮಪಾನ ಮತ್ತು ಆಲ್ಕೋಹಾಲ್, ಕೆಫೀನ್ ಸೇವನೆಯು ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ಅನೇಕ ಬಾರಿ ಜೀವನಶೈಲಿ ಇದಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ, ವಯಸ್ಕರು ಮತ್ತು ಮಕ್ಕಳು ಉತ್ತಮವಾಗಿ ನಿದ್ರೆ ಮಾಡದಿರುವುದು, ಜಡ ಜೀವನಶೈಲಿಯನ್ನು ನಡೆಸುವುದು ಈ ಸಮಸ್ಯೆಗೆ ಕಾರಣವಾಗಿದೆ.

ಬ್ರಕ್ಸಿಸಮ್ ಹಲ್ಲುಗಳಿಗೆ ಗರಿಷ್ಠ ಹಾನಿಯನ್ನುಂಟು ಮಾಡುತ್ತದೆ: ಕೆಲವೊಮ್ಮೆ ಆನುವಂಶಿಕತೆ, ಔಷಧದ ಅಡ್ಡ ಪರಿಣಾಮ, ಕೆಲವು ರೀತಿಯ ಹಲ್ಲಿನ ಚಿಕಿತ್ಸೆಯ ಅಡ್ಡ ಪರಿಣಾಮ ಅಥವಾ ಗಾಯ ಕೂಡ ಈ ಸ್ಥಿತಿಗೆ ಕಾರಣವಾಗಬಹುದು. ಬ್ರಕ್ಸಿಸಮ್ ಹಲ್ಲುಗಳಿಗೆ ಗರಿಷ್ಠ ಹಾನಿಯನ್ನುಂಟುಮಾಡುತ್ತದೆ. ಈ ಸಮಸ್ಯೆಯಿಂದಾಗಿ ಹಲ್ಲುಗಳು ಮತ್ತು ದವಡೆಗಳಿಗೆ ಜೋಡಿಸಲಾದ ಸ್ನಾಯುಗಳ ಮೇಳೆ ಪರಿಣಾಮ ಬೀರುತ್ತವೆ.

ಬೆಂಗಳೂರಿನ ದಂತವೈದ್ಯ ಡಾ.ಆರ್.ಎಸ್.ಶಿವ, ಬ್ರಕ್ಸಿಸಮ್​ನಲ್ಲಿ, ವಿಶೇಷವಾಗಿ ಮಕ್ಕಳಲ್ಲಿ, ನಿದ್ರೆಯ ಸಮಯದಲ್ಲಿ ಹಲ್ಲುಗಳನ್ನು ಬಲವಾಗಿ ಕಡಿಯುವುದರಿಂದ ಹಲ್ಲುಗಳ ದಂತಕವಚದ ಪದರವು ಸವೆದು, ಅವು ವಕ್ರವಾಗುತ್ತವೆ ಮತ್ತು ದುರ್ಬಲಗೊಳ್ಳುತ್ತವೆ. ಇದು ಹಲ್ಲು ಕೊಳೆಯುವುದಕ್ಕೆ ಕಾರಣವಾಗುತ್ತದೆ ಎಂದು ವಿವರಿಸುತ್ತಾರೆ. ಕೆಲವೊಮ್ಮೆ ಆಹಾರವನ್ನು ಅಗಿಯುವ ಅವರ ಸಾಮರ್ಥ್ಯದ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಇದಲ್ಲದೆ, ಬ್ರಕ್ಸಿಸಮ್‌ನಿಂದಾಗಿ, ರೋಗಿಯ ಮಾಸ್ಟಿಕೇಟರಿ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ದವಡೆಗೆ ಹಾನಿಯಾಗುತ್ತದೆ, ಇದು ತಲೆನೋವುಗೆ ಕಾರಣವಾಗಬಹುದು. ಈ ಸ್ಥಿತಿಯನ್ನು ಅನುಭವಿಸುತ್ತಿರುವ ಜನರು ತಮ್ಮ ಹಲ್ಲುಗಳನ್ನು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು ಎಂದು ಡಾ ಶಿವ ಹೇಳುತ್ತಾರೆ.

ಸಮಸ್ಯೆಯಿಂದ ಬಳಲುತ್ತಿರುವ ಜನರು ನಿದ್ರೆಯನ್ನು ಸರಿಯಾಗಿ ಮಾಡಬೇಕು: ಸಾಮಾನ್ಯವಾಗಿ ಬ್ರಕ್ಸಿಸಮ್​ಗೆ ಯಾವುದೇ ವಿಶೇಷ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಡಾ ರೀನಾ ದತ್ತಾ ಹೇಳುತ್ತಾರೆ. ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಉತ್ತಮ ನಿದ್ರೆಯು ಈ ಸ್ಥಿತಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಈ ಸಮಸ್ಯೆಯು ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ. ನಿದ್ರೆಯ ಬ್ರಕ್ಸಿಸಮ್ ಅನ್ನು ನಿದ್ರಾಹೀನತೆ ಎಂದು ಪರಿಗಣಿಸುವುದರಿಂದ, ಈ ಸಮಸ್ಯೆಯಿಂದ ಬಳಲುತ್ತಿರುವ ಜನರು ನಿದ್ರೆಯನ್ನು ಸರಿಯಾಗಿ ಮಾಡಬೇಕು, ಜೂತೆಗೆ ಶಿಸ್ತುಬದ್ಧ ಜೀವನಶೈಲಿ ಮತ್ತು ವ್ಯಾಯಾಮ ಕೂಡ ಇದಕ್ಕೆ ಪರಿಹಾರವಾಗಿದೆ.

ಇದನ್ನೂ ಓದಿ:ಅತಿ ರುಚಿಕರವಾದ ಆಹಾರಗಳ ಪರಿಣಾಮಗಳೇನು?: ಹೊಸ ಅಧ್ಯಯನ ಹೇಳುವುದಿಷ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.