ETV Bharat / sukhibhava

ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ತಡೆಯಬಹುದು ನ್ಯುಮೋನಿಯಾ.. ಅದು ಹೇಗೆ? - ನ್ಯುಮೋನಿಯಾಕ್ಕೆ ಕಾರಣ

ನ್ಯುಮೋನಿಯಾಗೂ ಹಲ್ಲುಜ್ಜುವುದಕ್ಕೆ ನಂಟೇನು. ಇದು ಹೇಗೆ ನ್ಯುಮೋನಿಯ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

brushing-teeth-can-protect-you-from-pneumonia

author img

By ETV Bharat Karnataka Team

Published : Dec 26, 2023, 1:16 PM IST

ಹೈದರಾಬಾದ್​: ನ್ಯಮೋನಿಯಾ ಸಾಮಾನ್ಯ ವೈರಸ್​ನಿಂದ ಉಂಟಾಗುವ ಸೋಂಕು ಆಗಿದ್ದು, ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಸಂಭವ 100ಕ್ಕೆ 100ರಷ್ಟು ಇದೆ. ನ್ಯುಮೋನಿಯಾ ಎಂಬುದು ಕೆಲವರಲ್ಲಿ ಮಾರಣಾಂತಿಕವಾಗಬಹುದು. ಇನ್ನು ಈ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದಾಗ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ನ್ಯುಮೋನಿಯಾ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎನ್ನುತ್ತದೆ ಹೊಸ ಅಧ್ಯಯನ.

ಅದರಲ್ಲೂ ಈ ರೀತಿ ಹಲ್ಲುಜ್ಜುವ ಕ್ರಮ ಅನುಸರಿಸುವುದರಿಂದ ನ್ಯುಮೋನಿಯಾದಿಂದ ತುರ್ತು ನಿಗಾ ಘಟಕದಲ್ಲಿ ದಾಖಲಾಗುವ ಮತ್ತು ಐಸಿಯಯುನಲ್ಲಿ ಸಾಯುವ ಅಪಾಯ ಕಡಿಮೆಯಾಗುತ್ತದೆ ಎಂದು ತಿಳಿಸಿದೆ. ಇನ್ನು ಈ ಪರಿಹಾರ ಮಾರ್ಗವೂ ವೆಂಟಿಲೇಟರ್​ಗೆ ಒಳಗಾದವರಿಗಿಂತ ಹೊರಗಿನಿಂದ ಆಮ್ಲಜನಕ ತೆಗೆದುಕೊಳ್ಳುತ್ತಿರುವವರಿಗೆ ಪ್ರಯೋಜನವಾಗಲಿದೆ. ನ್ಯುಮೋನಿಯಾಗೂ ಹಲ್ಲುಜ್ಜುವುದಕ್ಕೆ ನಂಟೇನು. ಇದು ಹೇಗೆ ನ್ಯುಮೋನಿಯ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ನ್ಯುಮೋನಿಯಾ ತಡೆಗಟ್ಟುವ ಸುಲಭ ಉಪಾಯ: ನ್ಯುಮೋನಿಯಾವೂ ಸಾಮಾನ್ಯ ಆದರೂ ಅದು ಶ್ವಾಸಕೋಶ ಸೋಂಕು ಆಗಿದೆ. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಲ್ಲಿ ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ. ಬಾಯಿಯಲ್ಲಿನ ಬ್ಯಾಕ್ಟಿರೀಯಾಗಳಿಂದಾಗಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹೆಚ್ಚುತ್ತದೆ. ಬಾಯಲ್ಲಿ ಇರುವ ನ್ಯುಮೋನಿಯಾ ಬ್ಯಾಕ್ಟೀರಿಯಾಗಳು ಸಲೈವಾ ಜೊತೆಗೆ ಅಚಾನಕ್​ ಆಗಿ ಉಸಿರಾಡುವ ಮೂಲಕ ಶ್ವಾಸಕೋಶ ಪ್ರವೇಶ ಮಾಡುತ್ತದೆ. ಅಲ್ಲಿ ಈ ವೈರಸ್​ಗಳು ಹರಡಿ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಇದೇ ಕಾರಣ ಹಲ್ಲುಜ್ಜುವುದರಿಂದ ಅನೇಕ ರೋಗಿಗಳಲ್ಲಿ ಈ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. 12 ವೆಂಟಿಲೇಟೆಡ್​ ರೋಗಿಗಳಲ್ಲಿ ಒಂದು ಪ್ರಕರಣವನ್ನು ಹಲ್ಲುಜ್ಜುವ ಕ್ರಮದಿಂದ ಸೋಂಕಿನ ದರ ಕಡಿಮೆ ಮಾಡಬಹುದಾಗಿದೆ. ಈ ಸಂಶೋಧನೆಯ ಫಲಿತಾಂಶ ತಿಳಿಸುವಂತೆ ಹಲ್ಲುಜ್ಜುವ ಮೂಲಕ ನ್ಯೂಮೋನಿಯಾವನ್ನು ಕಡಿಮೆ ಮಾಡಬಹುದಾಗಿದೆ. ಸಂಶೋಧಕರು ಹೇಳುವಂತೆ ಇದು ಸಾವಿನ ದರವನ್ನು ಕೂಡ ಕಡಿಮೆ ಮಾಡುತ್ತದೆ. ನ್ಯುಮೋನಿಯಾವನ್ನು ತಡೆಗಟ್ಟುವ ಸುಲಭವ ಮತ್ತು ಕಡಿಮೆ ವೆಚ್ಚದ ಚಿಕಿತ್ಸೆ ಇದಾಗಿದೆ.

ಬೋಸ್ಟನ್​ ಮಹಿಳಾ ಆಸ್ಪತ್ರೆ ಮತ್ತು ಬ್ರಿಗಮ್ ಸಂಶೋಧಕರು ನಡೆಸಿದ 15 ಕ್ಲಿನಿಯಲ್​ ಟ್ರಯಲ್​ನಲ್ಲಿ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಪ್ರಕ್ರಿಯೆ ಸಾಕಷ್ಟು ಪ್ರಯೋಜನ ನೀಡಿದೆ. 15 ಕ್ಲಿನಿಕಲ್​ ಟ್ರಯಲ್​ನಲ್ಲಿ 2,786 ರೋಗಿಗಳ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. ಈ ವೇಳೆ ದಿನಕ್ಕೆ ಎರಡು ಬಾರಿ ಹಲ್ಲುವುದರಿಂದ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಲ್ಲಿ ನ್ಯುಮೋನಿಯಾ ದರವನ್ನು ಕಡಿಮೆ ಮಾಡಿದೆ ಎಂದು ಅಧ್ಯಯನ ಕಂಡುಕೊಂಡಿದೆ.

ಇದನ್ನೂ ಓದಿ: ಶ್ವಾಸಕೋಶ ಸಂಬಂಧಿ ಅನಾರೋಗ್ಯ ಹೆಚ್ಚಳ; ದೆಹಲಿ ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.