ಮೇಲ್ಬೋರ್ನ್: ಶಿಶುಗಳಿಗೆ ಹೆಚ್ಚು ಪ್ರಮಾಣದ ಆ್ಯಂಟಿಬಯೋಟಿಕ್ ಔಷಧ ನೀಡಿದರೆ, ಅವರು ದೊಡ್ಡವರಾಗಿ ಬೆಳೆದ ನಂತರ ಅವರಲ್ಲಿ ಕರುಳಿನ ಆರೋಗ್ಯದ ಸಮಸ್ಯೆಗಳು ಬೆಳೆಯುವ ಅಪಾಯ ಹೆಚ್ಚು ಎಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ.
ಕಡಿಮೆ ತೂಕ ಹೊಂದಿರುವ ಮತ್ತು ಅವಧಿ ಪೂರ್ವ ಜನಿಸಿರುವ ಶಿಶುಗಳಿಗೆ ಸೋಂಕು ತಗುಲದಂತೆ ತಡೆಗಟ್ಟಲು ಮತ್ತು ಸೋಂಕಿನ ನಿವಾರಣೆಗಾಗಿ ಆ್ಯಂಟಿಬಯೋಟಿಕ್ ಔಷಧಗಳನ್ನು ನೀಡುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ.
ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮೇಲೆ ಈ ಔಷಧಗಳ ಪರಿಣಾಮ ಉಂಟಾಗುವುದರಿಂದ ಅವರು ಬೆಳೆದಾಗ, ಅವರ ಕರುಳಿನಲ್ಲಿರುವ ಉಪಯುಕ್ತವಾದ ಸೂಕ್ಷ್ಮಜೀವಿಗಳು ನಾಶವಾಗುತ್ತವೆ ಮತ್ತು ಇದರಿಂದ ಅವರ ಆಹಾರ ಜೀರ್ಣಶಕ್ತಿಯಲ್ಲಿ ವ್ಯತ್ಯಯವಾಗುತ್ತದೆ. ಇದು ಅತಿಸಾರದಂಥ ರೋಗಳಿಗೂ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಬಳಕೆಯಾಗುವ ಶೇ 47ರಷ್ಟು ಆ್ಯಂಟಿಬಯೋಟಿಕ್ ಅನುಮೋದಿತವಲ್ಲ: ಲ್ಯಾನ್ಸೆಟ್ ಅಧ್ಯಯನ