ಸಿಡ್ನಿ: ಇನ್ಫ್ಲುಯೆಂಜಾ ಬಿ ವಿರುದ್ಧ ಹೋರಾಡಲು ಪ್ರತಿಕಾಯ ಆಧಾರಿತ ಚಿಕಿತ್ಸೆ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ. ಜೇಮ್ಸ್ ಕುಕ್ ಯುನಿವರ್ಸಿಟಿಯ ಡಾ ಹಿಲ್ಲರಿ ವಂದೆರ್ವೆನ್ ಹೇಳುವಂತೆ, ಶ್ವಾಸಕೋಶದ ಸೋಂಕಿಗೆ ಪ್ರತಿಕಾಯ ಆಧಾರಿತ ಚಿಕಿತ್ಸೆಗಳು ಪರಿಣಾಮಕಾರಿ. ಇದು ಗಂಭೀರ ಉಸಿರಾಟದ ಸೋಂಕಿನ ವಿರುದ್ಧ ಅದರಲ್ಲೂ ಅಧಿಕ ಅಪಾಯ ಹೊಂದಿರುವ ಗುಂಪಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಎಂದಿದ್ದಾರೆ.
ಪ್ರತಿಕಾಯ ಚಿಕಿತ್ಸೆ ರೋಗಕಾರಕಗಳ ಮೇಲೆ ನಿರ್ದಿಷ್ಟ ಅಣುಗಳನ್ನು ಗುರಿಯಾಗಿಸುವ ಪ್ರತಿರಕ್ಷಣಾ ವ್ಯವಸ್ಥೆಯಿಂದ ಆಗಿರುವ ಪ್ರೋಟೀನ್ಗಳಾಗಿವೆ ಎಂದು ಡಾ ವಂದೆರ್ವೆನ್ ತಿಳಿಸಿದ್ದಾರೆ.
ಪ್ರತಿಕಾಯಗಳ ಚಿಕಿತ್ಸೆ ಸುರಕ್ಷಿತವಾಗಿದೆ. ಆದರೆ, ಕ್ಲಿನಿಕಲ್ ಟ್ರಯಲ್ಗಳು ಇನ್ಫ್ಲುಯೆಂಜಾ ಎ ಮೇಲೆ ಸಾಮಾನ್ಯ ಅಥವಾ ಯಾವುದೇ ಪರಿಣಾಮವನ್ನು ಹೊಂದಿಲ್ಲ ಎಂದು ತೋರಿಸಿವೆ. ಪ್ರಸ್ತುತ ಮಾನವ ಇನ್ಫ್ಲುಯೆಂಜಾ ಚಿಕಿತ್ಸೆಗೆ ಪ್ರತಿಕಾಯ ಆಧಾರಿತ ಚಿಕಿತ್ಸೆಗೆ ಯಾವುದೇ ಅನುಮೋದನೆ ಸಿಕ್ಕಿಲ್ಲ ಎಂದರು.
ಈ ರೀತಿಯಾಗಿ ಪ್ರತಿಕಾಯ ಪತ್ತೆ: ಇತ್ತೀಚಿನ ಪ್ರಯೋಗಗಳಲ್ಲಿ ಹೈಪರ್ಇಮ್ಯೂನ್ ಇಂಟರ್ವೆನಸ್ ಇಮ್ಮುನೊಗ್ಲೊಬುಲಿನ್ (Flu-IVIG) ಅನ್ನು ಜ್ವರದಿಂದ ಚೇತರಿಕೆ ಅಥವಾ ಲಸಿಕೆ ಪಡೆದ ದಾನಿಗಳಿಂದ ಶೋಧಿಸಲಾಗಿದೆ. ಇದು ಜ್ವರದ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಹೊಂದಿದೆ. ಗಂಭೀರ ಇನ್ಫ್ಲುಯೆಂಜಾ ಎ ಮತ್ತು ಬಿಯಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದ 308 ರೋಗಿಗಳ ಮೇಲೆ ಈ ಹೊಸ ಚಿಕಿತ್ಸೆಯನ್ನು ಪರೀಕ್ಷಿಸಲಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕರು ತಿಳಿಸಿದ್ದಾರೆ.
ಫ್ಲು ಐವಿಐಜಿ ಚಿಕಿತ್ಸೆ ಇನ್ಫ್ಲುಯೆಂಜಾ ಬಿ ಹೊಂದಿರುವ ರೋಗಿಗಳಲ್ಲೂ ಉತ್ತಮ ಅಭಿವೃದ್ಧಿ ಕಂಡಿದೆ. ಆದರೆ, ಇನ್ಫ್ಲುಯೆಂಜಾ ಎ ಹೊಂದಿರುವವರಲ್ಲಿ ಯಾವುದೇ ಪ್ರಯೋಜನ ಕಂಡುಬಂದಿಲ್ಲ. ಈ ಅಧ್ಯಯನದಲ್ಲಿ ಸಂಶೋಧಕರು ಯಾಕೆ ಫ್ಲು ಐವಿಐಜಿ ಚಿಕಿತ್ಸೆ ಕೇವಲ ಇನ್ಫ್ಲುಯೆಂಜಾ ಬಿ ಗೆ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆ.
ಇನ್ಫ್ಲುಯೆಂಜಾ ಎ ಗೆ ಪರಿಣಾಮಕಾರಿಯಲ್ಲ: ಈ ಕುರಿತು ತಿಳಿಸಿರುವ ಡಾ ವಂದೆರ್ವೆನ್, ಕೆಲವು ಮಾದರಿಯ ಇನ್ಫ್ಲುಯೆಂಜಾ ಪ್ರತಿಕಾಯಗಳು ಮಾತ್ರ ಸೋಂಕಿನ ಕೋಶವನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿವೆ. ಇದು ಇನ್ಫ್ಲುಯೆಂಜಾ ಬಿ ರೋಗಿಗಳಲ್ಲಿ ಉಪಶಮನಕಾರಿಯಾಗಿದೆ ಹೊರತು ಇನ್ಫ್ಲುಯೆಂಜಾ ಎ ಅವರಲ್ಲಿ ಅಲ್ಲ ಎಂದಿದ್ದಾರೆ.
ಇನ್ನು, ಶ್ವಾಸಕೋಶದ ವೈರಸ್ ಗುರಿಯಾಗಿಸಿಕೊಂಡು ಪ್ರತಿಕಾಯ ಆಧಾರಿತ ಚಿಕಿತ್ಸೆಯನ್ನು ಹೆಚ್ಚಿಸುವ ತುರ್ತು ಇದೆ ಎಂದು ಇದೆ ವೇಳೆ ಅವರು ತಿಳಿಸಿದ್ದಾರೆ. ತೀವ್ರವಾದ ಶ್ವಾಸಕೋಶ ಸೋಂಕಿನ ಚಿಕಿತ್ಸೆಗೆ ಆ್ಯಂಟಿವೈರಲ್ ಚಿಕಿತ್ಸೆ ಸಂಯೋಜನೆ ಹೆಚ್ಚಿಸಬೇಕಿದ್ದು, ಇದು ಬೇಡಿಕೆ ಹೊಂದಿದೆ. ಇನ್ಫ್ಲುಯೆಂಜಾ ಸೋಂಕು ಕೋವಿಡ್ 19 ಮತ್ತು ಆರ್ಎಸ್ವಿ ಸಮುದಾಯಕ್ಕೆ ಸೇರಿದೆ.
ನಮ್ಮ ಸಮಗ್ರ ಪರಿಶೀಲನೆಯೂ ಇನ್ಫ್ಲುಯೆಂಜಾ ಸೋಂಕಿನ ವಿರುದ್ಧ ಪರಿಣಾಮಕಾರಿ ಪ್ರತಿಕಾಯ ಲಕ್ಷಣ ಮತ್ತು ಯಾಂತ್ರಿಕತೆ ಹೊಂದಿದೆ ಎಂಬ ಮೌಲ್ಯಯುತ ಒಳನೋಟವನ್ನು ನೀಡಿದೆ. ಈ ಜ್ಞಾನವು ಹೊಸ ಮತ್ತು ಸುಧಾರಿತ ಪ್ರತಿಕಾಯ ಆಧಾರಿತ ಚಿಕಿತ್ಸೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಋತುಮಾನದ ಇನ್ಫ್ಲುಯೆಂಜಾ ಸೋಂಕಿಗಿಂತ ಓಮ್ರಿಕಾನ್ ಮಾರಾಣಾಂತಿಕ