ಹೈದರಾಬಾದ್: ಹೃದಯಾಘಾತ ಮತ್ತು ಹೃದಯಸ್ತಂಭನ ಇಂದು ಚಿಕ್ಕಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವೇ ಕ್ಷಣಗಳಲ್ಲಿ ಪ್ರಾಣಕ್ಕೆ ಎರವಾಗುತ್ತಿರುವ ಈ ಕಾಯಿಲೆ ದಿಢೀರ್ ಜೀವ ತೆಗೆಯುತ್ತಿರುವುದು ಆತಂಕದ ವಿಷಯವಾಗಿದೆ. ಅದರಲ್ಲೂ ಯುವ ಜನತೆಯಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚುತ್ತಿವೆ. ಉತ್ತರ ಪ್ರದೇಶದಲ್ಲಿ ನಿನ್ನೆ 9ನೇ ತರಗತಿ ಬಾಲಕ ತರಗತಿಯಲ್ಲಿಯೇ ಹೃದಯಾಘಾತಕ್ಕೆ ಬಲಿಯಾದ ಘಟನೆ ಮಾಸುವ ಮುನ್ನವೇ ನಾಲ್ವರು ಯುವಕರ ಪ್ರಾಣಪಕ್ಷಿ ಹಾರಿಹೋಗಿದೆ.
ರಾಜ್ ಕೋಟ್ನಲ್ಲಿ ಮೂವರ ಸಾವು: ಗುಜರಾತ್ನ ರಾಜ್ಕೋಟ್ನಲ್ಲಿ ಹೃದಯಘಾತಕ್ಕೆ 45 ವರ್ಷದೊಳಗಿನ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಎಚ್ಡಿಎಫ್ಸಿ ಬ್ಯಾಂಕ್ ಉದ್ಯೋಗಿ 26 ವರ್ಷದ ಕಿಶನ್ ಧಬಲಿಯಾಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣಕ್ಕೆ ಆತನನ್ನು ರಾಜ್ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ವೇಳೆ ಕಾರ್ಡಿಯಾಕ್ ಅರೆಸ್ಟ್(ಹೃದಯಸ್ತಂಭನ) ಎಂದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇಬ್ಬರು ಹೆಣ್ಣುಮಕ್ಕಳ ತಂದೆ 40 ವರ್ಷದ ರಾಜೆಂದ್ರಸಿನ್ಹಾ ವಾಲಾ ಸಾವನ್ನಪ್ಪಿದ್ದಾರೆ. ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದ ಇವರಿಗೆ ತಕ್ಷಣಕ್ಕೆ ಎದೆನೋವು ಕಾಣಿಸಿಕೊಂಡಿದ್ದು, ಖಾಸಗಿ ಕ್ಲಿನಿಕ್ಗೆ ಕರೆ ತರಲಾಗಿದೆ. ಅವರ ಆರೋಗ್ಯ ತಕ್ಷಣಕ್ಕೆ ಕ್ಷೀಣಿಸಿದ್ದು, ರಾಜ್ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಈ ವೇಳೆ ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂರನೇ ಪ್ರಕರಣದಲ್ಲಿ ಮಹೇಂದ್ರ ಎಂಬುವವರು ತೀವ್ರ ಎದೆ ನೋವಿನಿಂದ ತಕ್ಷಣಕ್ಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣಕ್ಕೆ ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೂ ಅವರು ಬದುಕಿ ಉಳಿಯಲಿಲ್ಲ.
ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತ: ಆಂದ್ರಪ್ರದೇಶ ಧರ್ಮಾವರಂ ನಗರದಲ್ಲಿ ಗಣೇಶ ಮಂಟಪದಲ್ಲಿ ನೃತ್ಯ ಮಾಡುತ್ತಿದ್ದ 26 ವರ್ಷ ಪ್ರಸಾದ್ ಎಂಬ ಯುವಕ ತಕ್ಷಣಕ್ಕೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಧರ್ಮಾವರಂನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.
ಇನ್ನು ಯುವಕ ಗಣೇಶ ಮಂಟಪದಲ್ಲಿ ಸ್ನೇಹಿತರ ಜೊತೆ ಖುಷಿಯಿಂದ ನೃತ್ಯ ಮಾಡುತ್ತಿದ್ದಾಗ ನಡೆದ ಈ ಅನಾಹುತದ ವಿಡಿಯೋಗಳು ಇದೀಗ ಸಾಮಾಹಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಸಾಂಕ್ರಾಮಿಕತೆ ಬಳಿಕ ಯುವ ಜನತೆಯಲ್ಲಿ ಈ ರೀತಿಯ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇದು ವೈದ್ಯಕೀಯ ತಜ್ಞರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದೆ. ಆರೋಗ್ಯಕರ ಜೀವನಶೈಲಿ ನಿರ್ವಹಣೆ ಮಾಡದಿರುವುದು, ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 9ನೇ ತರಗತಿ ಬಾಲಕನಿಗೆ ಹೃದಯಾಘಾತ! ತರಗತಿಯಲ್ಲೇ ಕುಸಿದು ಬಿದ್ದು ಸಾವು