ನ್ಯೂಯಾರ್ಕ್: ಅಲ್ಕೈನ್ ನೀರಿನ (ಕ್ಷಾರೀಯ ನೀರು) ಸೇವನೆಯು ಮರುಕಳಿಸುವ ಮೂತ್ರಕೋಶದಲ್ಲಿನ ಕಲ್ಲುಗಳನ್ನು ತಡೆಯುವಲ್ಲಿ ಸಹಾಯಕವಾಗದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಕ್ಷಾರೀಯ ನೀರನ್ನು ಅನೇಕ ಬಾರಿ ಅಧಿಕ ಪಿಎಚ್ ನೀರು ಎಂದು ಕರೆಯಲಾಗುವುದು. ಬಾಟಲ್ ವರ್ಗದಲ್ಲಿ ಇದು ಹೆಚ್ಚು ಪ್ರಖ್ಯಾತಿ ಹೊಂದಿದೆ. ಟ್ಯಾಪ್ ನೀರಿನಲ್ಲಿ ಸರಿ ಸುಮಾರು 7.5ರಷ್ಟು ಪಿಎಚ್ ಇದ್ದರೆ ಅಲ್ಕೈನ್ ನೀರು ಉತ್ಪಾದನೆಯಲ್ಲಿ ಪಿಎಚ್ 8 ರಿಂದ 10ರಷ್ಟು ಇರುತ್ತದೆ.
ಈ ಅಲ್ಕೈನ್ ವಾಟರ್ ಸೇವನೆ ಮತ್ತು ಮಾರಾಟವೂ ಇತ್ತೀಚಿನ ವರ್ಷದಲ್ಲಿ ಹೆಚ್ಚಾಗಿದೆ. ಈ ನೀರು ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದ್ದು, ಇವುಗಳ ಸೇವನೆಯಿಂದ ದೇಹವೂ ಹೈಡ್ರೆಷನ್ ಮತ್ತು ಮೂತ್ರದಲ್ಲಿ ಪಿಎಚ್ ಸುಧಾರಣೆ ಕಂಡು ಬರುತ್ತದೆ.
ಪೋಟ್ಯಾಶಿಯಂ ಸಿಟ್ರೆಡ್ ಮಾತ್ರೆಗಳನ್ನು ಸಾಮಾನ್ಯವಾಗಿ ಮೂತ್ರಕೋಶದಲ್ಲಿನ ಕಲ್ಲುಗಳನ್ನು ತಡೆಯಲು ಶಿಫಾರಸು ಮಾಡಲಾಗಿದೆ. ಆದಾಗ್ಯೂ, ಅನೇಕ ರೋಗಿಗಳು ಶಿಫಾರಸು ಮಾಡಿದ ಚಿಕಿತ್ಸೆಯನ್ನು ಪಾಲಿಸುವುದಿಲ್ಲ. ಅಲ್ಕೈನ್ ನೀರು ಮೂತ್ರದಲ್ಲಿನ ಪಿಎಚ್ ಏರಿಕೆ ಮಾಡುವುದರಿಂದ ಇದು ಮೂತ್ರ ಕಲ್ಲಿಗೆ ಪರ್ಯಾಯ ಎಂದು ನಂಬಲಾಗಿದೆ.
ಜರ್ನಲ್ ಆಫ್ ಯುರೊಲಾಜಿಯಲ್ಲಿ ಪ್ರಕಟವಾದ ಲೇಖನದ ಅನುಸಾರ, ಅಲ್ಕೈನ್ ನೀರು ಕಿಡ್ನಿ ಕಲ್ಲು ತಡೆಗೆ ಶಿಫಾರಸು ಮಾಡಲಾದ ಔಷಧಕ್ಕೆ ಪರ್ಯಾಯವಲ್ಲ. ಇದರಿಂದ ಮೂತ್ರದ ಕಲ್ಲನ್ನು ತಡೆಯಲು ಸಾಧ್ಯವಿಲ್ಲ.
ಸಾಮಾನ್ಯ ನೀರಿಗಿಂತ ಹೆಚ್ಚಿನ ಪಿಎಚ್ ಅಲ್ಕೈನ್ ನೀರಿನಲ್ಲಿರುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಅಲ್ಕೈನ್ ಅಂಶವೂ ಇರುತ್ತದೆ. ಇದು ಮೂತ್ರದ ಪಿಎಚ್ ಏರಿಕೆ ಮಾಡುತ್ತಿದಿಲ್ಲ. ಇದು ಕಿಡ್ನಿ ಅಥವಾ ಮೂತ್ರ ಸೋಕಿನ ಅಭಿವೃದ್ಧಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ರೋಶನ್ ಎಂ ಪಟೇಲ್ ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಸಮಾನ ಪಿಎಚ್ ಹೊಂದಿರುವ ಐದು ಬ್ರಾಂಡ್ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಒಂದು ಉತ್ಪನ್ನವೂ ಸಣ್ಣ ಪ್ರಮಾಣ ಸಿಟ್ರಸ್ ಹೊಂದಿದ್ದು, ಇದನ್ನು ಉತ್ಪನ್ನದ ಲೇಬಲ್ನಲ್ಲಿ ಪರಿಗಣಿಸಿಲ್ಲ. ಇತರೆ ಅಲ್ಕೈನ್ ನೀರು ಪೊಟ್ಯಾಸಿಯಂ ಸಿಟ್ರೇಟ್ ಮಾತ್ರೆಗಳಿಂದ ಪೂರೈಕೆಯಾಗುವ ದೇಹದಿಂದ ಕ್ಷಾರಕ್ಕೆ ಚಯಾಪಚಯಗೊಳ್ಳುವ ಯಾವುದೇ ಸಾವಯವ ಅಯಾನುಗಳನ್ನು ಹೊಂದಿಲ್ಲ.
ನಮ್ಮ ಅಧ್ಯಯನವು ಮರುಕಳಿಸುವ ಕಿಡ್ನಿ ಕಲ್ಲುಗಳನ್ನು ತಡೆಗಟ್ಟಲು ಪಾನೀಯಗಳು ಮತ್ತು ಪ್ರತ್ಯಕ್ಷವಾದ ಉತ್ಪನ್ನಗಳನ್ನು ಒಳಗೊಂಡಂತೆ ಇತರೆ ಚಿಕಿತ್ಸೆಗಳ ಆಯ್ಕೆಗೆ ಮಾರ್ಗದರ್ಶನ ನೀಡಲು ಸಹಾಯ ಮಾಡಬಹುದು. ಇದು ಪ್ರಯೋಗಾಲಯದ ಅಧ್ಯಯನಕ್ಕೆ ಸೀಮಿತವಾಗಿದ್ದು, ಹೆಚ್ಚಿನ ಕ್ಲಿನಿಕಲ್ ಟ್ರಯಲ್ ಅವಶ್ಯಕತೆ ಇದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಸುರಕ್ಷಿತ ಎಂದು ಕುಡಿಯುವ ನೀರಿನ ಬಾಟಲ್ನಲ್ಲಿ ಪತ್ತೆಯಾಯ್ತು ನ್ಯಾನೋಪ್ಲಾಸ್ಟಿಕ್