ನ್ಯೂಯಾರ್ಕ್: ಜಾಗತಿಕವಾಗಿ ತಾಪಮಾನ ಏರಿಕೆ ಕಾಣುತ್ತಿದ್ದು, ಈ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಏರಿಕೆಯಾಗುತ್ತಿರುವ ತಾಪಮಾನ ಹೃದಯದ ಆರೋಗ್ಯಕ್ಕೂ ಕುತ್ತು ತರುವ ಸಾಧ್ಯತೆ ಇದೆ ಎಂದು ಇದೀಗ ಹೊಸ ಅಧ್ಯಯನ ತಿಳಿಸಿದೆ. ತಾಪಮಾನ 34 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾದಲ್ಲಿ ಅದು ಹೃದಯ ಬಡಿತದ ಹೆಚ್ಚಳಕ್ಕೆ ಕಾರಣವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಹೃದ್ರೋಗ್ರ ಒತ್ತಡ ಎಂದು ಕರೆಯಲಾಗುವುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಈ ಹಿಂದಿನ ಅಧ್ಯಯನದಲ್ಲಿ ಮಾನವರಲ್ಲಿ ಶಾಖ - ಸಂಬಂಧಿತ ಅಸ್ವಸ್ಥತೆ ಮತ್ತು ಸಾವಿನ ಕುರಿತು ಮಾಹಿತಿ ನೀಡಲಾಗಿತ್ತು. ಇದೀಗ ಜರ್ನಲ್ ಆಫ್ ಅಪ್ಲೈಡ್ ಪಿಸಿಯೊಲಾಜಿಯಲ್ಲಿ ಪ್ರಕಟವಾದ ವರದಿಯಲ್ಲಿ, ಸುಧಾರಿತ ಉಷ್ಣಾಂಶವೂ ಕೂಡ ಮಾನವನ ಹೃದಯಕ್ಕೆ ಅಪಾಯವನ್ನುಂಟು ಮಾಡಲಿದೆ ಎಂಬುದು ಅಧ್ಯಯನದ ವೇಳೆ ಕಂಡು ಬಂದಿದೆ.
ಬಿಸಿಯಾದ ಅಲೆ: ಈ ಅಧ್ಯಯನವೂ ತಾಪಮಾನ ಮತ್ತು ನೀರಿನ ಆವಿಯ ಒತ್ತಡದ ಸಂಯೋಜನೆಯನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಇದರಿಂದ ಹೃದಯ ಬಡಿತದ ಏರಿಕೆ ಸಂಭವಿಸುತ್ತದೆ. ಹೆಚ್ಚುತ್ತಿರುವ ತಾಪಾಮಾನ ಇದೀಗ ಸಾಮಾನ್ಯವಾಗಿದೆ. ಕಳೆದ ವಾರ ಜಾಗತಿಕವಾಗಿ ಸರಾಸರಿ ತಾಪಮಾನ ಏರಿಕೆ ಕಂಡಿದ್ದು, ಎರಡು ದಿನ ದಾಖಲೆ ಸೃಷ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಹೃದಯದ ಅಧ್ಯಯನ ಹೆಚ್ಚು ಪ್ರಸ್ತುತೆಯನ್ನು ಪಡೆದುಕೊಂಡಿದೆ.
ಈ ಅಧ್ಯಯನದ ಸಂಬಂಧ ಪೆನ್ಸಿಲ್ವೆನಿಯಾ ಸ್ಟೇಟ್ ಯುನಿವರ್ಸಿಟಿ ಸಂಶೋಧಕರು 51 ಯುವ ಆರೋಗ್ಯಯುತ ಭಾಗಿದಾರರನ್ನು ಪರಿಸರ ಚೇಂಬರ್ನಲ್ಲಿ ಹಗುರುವಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದೆ. ಈ ಚೇಂಬರ್ ತಾಪಮಾನ ಪ್ರತಿ ಐದು ನಿಮಿಷಕ್ಕೆ ಏರಿಕೆ ಕಾಣುತ್ತಿದೆ.
ಸಾಮಾನ್ಯ ತಾಪಮಾನದಿಂದಲೂ ಪರಿಣಾಮ ಈ ಭಾಗಿದಾರರ ಮೇಲೆ ತಾಪಮಾನ ಹೆಚ್ಚಳದ ಪರಿಣಾಮವನ್ನು ಸೆನ್ಸರ್ ಮೂಲಕ ನಿರ್ವಹಣೆ ಮಾಡಿದೆ. ಈ ವೇಳೆ ಅವರ ಆಂತರಿಕ ಅಂಗಾಂಗಗಳ ಮೇಲೆ ತಾಪಮಾನ ಪರಿಣಾಮವನ್ನು ಅಳೆಯಲಾಗಿದೆ. ಈ ವೇಳೆ ಅಧಿಕ ತಾಪಮಾನಕ್ಕೆ ಹೋಲಿಸಿದರೆ, ಕಡಿಮೆ ತಾಪಮಾನದ ಪರಿಸ್ಥಿತಿಗಳು ಹೃದಯದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂಬ ಅಂಶವು ಗೊತ್ತಾಗಿದೆ.
ವ್ಯಕ್ತಿಯ ಆಂತರಿಕ ಉಷ್ಣತೆಯು ಹೆಚ್ಚಾಗುವ ಮೊದಲು ಹೃದಯ ಬಡಿತದ ಹೆಚ್ಚಳವು ಸಂಭವಿಸುತ್ತದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ ಎಂದು ನೇಚರ್ ವರದಿ ಮಾಡಿದೆ. ಹೆಚ್ಚು ಶಾಖದ ಅಲೆಗೆ ಒಡ್ಡಿಗೊಳ್ಳುವ ಜನರು ಅಪಾಯದ ಸಾಮರ್ಥ್ಯವನ್ನು ಹೆಚ್ಚು ಹೊಂದಿದ್ದಾರೆ ಎಂದು ಸಂಶೋಧಕರ ರಚೆಲ್ ಕೊಟ್ಟ್ಲೆ ತಿಳಿಸಿದ್ದಾರೆ.
ಹೃದಯದ ಅಪಾಯವನ್ನು ಉಂಟು ಮಾಡುವ ತಾಪಮಾನ ಮತ್ತು ತೇವಾಂಶದ ಸಂಯೋಜನೆ ಪತ್ತೆ ಮಾಡುವುದು ಕೂಡ ಹೃದಯದ ಆರೋಗ್ಯವನ್ನು ರಕ್ಷಿಸುವ ತಂತ್ರವಾಗಿದೆ.
ಉಷ್ಣಾಂಶದ ಪರಿಸ್ಥಿತಿಗಳಲ್ಲಿ ಸುಮಾರು 34 ಡಿಗ್ರಿ ಸೆಲ್ಸಿಯಸ್ನಲ್ಲಿ ನಿಧಾನವಾಗಿ ನಡೆಯುತ್ತಿರುವವರು ಹೃದಯ ರಕ್ತನಾಳದ ಒತ್ತಡ ಅನುಭವಿಸುತ್ತಾರೆ ಎಂದು ತೋರಿಸಿದೆ. ಹೃದಯ ಬಡಿತವು ಅವರ ಅಧಿಕ ತಾಪಮಾನವು ಹೆಚ್ಚಾಗಲು ಪ್ರಾರಂಭವಾಗುವ ಸುಮಾರು 20 ನಿಮಿಷಗಳ ಮೊದಲು ಯಾವಾಗಲೂ ಏರುತ್ತದೆ ಎಂದು ತಂಡವು ಕಂಡು ಹಿಡಿದಿದೆ.
ಇದನ್ನೂ ಓದಿ: ಜಡ ಜೀವನಶೈಲಿಯಿಂದ ಕೆಟ್ಟ ಜೀನ್ಗಳವರೆಗೆ; ಹೃದಯದ ವಿಷಯದಲ್ಲಿ ಯಾವುದು ನಿರ್ಲಕ್ಷ್ಯ ಮಾಡುವಂತಿಲ್ಲ!