ನವದೆಹಲಿ: ಕೃತಕ ಸಿಹಿಕಾರಕವಾದ ಆಸ್ಪರ್ಟೇಮ್ ಅಲ್ಲಿ ಸಂಭಾವ್ಯ ಕಾರ್ಸಿನೋಜೆನ್ ಇದ್ದು, ಇದನ್ನು ಕ್ಯಾನ್ಸರ್ಕಾರಕ ಏಜೆಂಟ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಲೇಬಲ್ ಮಾಡಿದೆ. ಅಸ್ಪರ್ಟೇಮ್ ಅನ್ನು ಪಾನೀಯ, ಚೂಯಿಂಗ್ ಗಮನ್, ಜಿಲಾಟಿನ್, ಐಸ್ಕ್ರೀಂ ಮತ್ತು ಡೈರಿ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಿಹಿಕಾರಕ ಆಸ್ಪರ್ಟೇಮ್ ಆರೋಗ್ಯದ ಪರಿಣಾಮಗಳ ಮೌಲ್ಯಮಾಪನ ಕುರಿತು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ ತಜ್ಞರು ವರದಿ ಬಿಡುಗಡೆ ಮಾಡಿದೆ.
ಆಸ್ಪರ್ಟೇಮ್ನಲ್ಲಿರುವ ಕಾರ್ಸಿನೋಜೆನಿಸಿಟಿ ಹೇಗೆ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂಬುದರ ಕುರಿತು ಪುರಾವೆ ಇಲ್ಲ. ಇದು ಕ್ಯಾನ್ಸರ್ಗೆ ಕಾರಣವಾಗುವ ಸಾಧ್ಯತೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಆಸ್ಪರ್ಟೇಮ್ನಲ್ಲಿ ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳಲ್ಲಿ 300 ವಿವಿಧ ವರ್ಗದಲ್ಲಿ ಒಂದಾಗಿದೆ. ಇದರಲ್ಲಿ ಆಲೋವೆರಾ ತಿರುಳು, ಏಷ್ಯಾನ್ ಮಾದರಿ ಉಪ್ಪಿನಕಾಯಿ, ಮರಗೆಲಸದಲ್ಲೂ ಈ ಅಂಶಗಳು ಇದೆ ಎಂದಿದ್ದಾರೆ.
ನಾವು ಗ್ರಾಹಕರಿಗೆ ಆಸ್ಪರ್ಟೇಮ್ ಅನ್ನು ಸೇವಿಸುವುದು ನಿಲ್ಲಿಸುವುದು ಬೇಡ ಎಂದು ಸಲಹೆ ನೀಡುವುದಿಲ್ಲ. ಅವರಿಗೆ ಅದನ್ನು ಸುಧಾರಿತ ಪ್ರಮಾಣದಲ್ಲಿ ಸೇವನೆ ಮಾಡುವಂತೆ ಸಲಹೆ ನೀಡುತ್ತೇವೆ ಎಂದು ಡಾ.ಪ್ರಾನ್ಸೆಸ್ಕೊ ಬ್ರಾನ್ಕಾ ತಿಳಿಸಿದ್ದಾರೆ.
ಏನಿದು ಆಸ್ಪರ್ಟೇಮ್: ಕಡಿಮೆ ಕ್ಯಾಲೋರಿಯ ಕೃತಕ ಸಿಹಿಕಾರಕ ಇದಾಗಿದ್ದು, ಸಕ್ಕರೆಗಿಂತ 200ರಷ್ಟು ಸಿಹಿ ಇದರಲ್ಲಿ ಹೆಚ್ಚಿರುತ್ತದೆ. ಇದು ಬಿಳಿ ಬಣ್ಣದ ಪುಡಿಯಾಗಿದ್ದು, ವಿಶ್ವಾದ್ಯಂತ ಕೃತಕ ಸಿಹಿಕಾರಕವಾಗಿ ಇದನ್ನು ಬಳಸಲಾಗುತ್ತದೆ. ಅಮೆರಿಕ ಮತ್ತು ಯುರೋಪ್ನಲ್ಲಿ ಅನೇಕ ಆಹಾರ, ಪಾನೀಯಗಳಿಗೆ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಅಷ್ಠೇ ಅಲ್ಲದೇ, ಕೆಮ್ಮಿನ ಡ್ರಾಪ್ಪ್ನಲ್ಲೂ ಬಳಕೆ ಮಾಡಲಾಗುತ್ತಿದೆ. ಇದು ತೂಕದ ನಷ್ಟಕ್ಕೆ ಕೂಡ ಸಹಾಯವಾಗುವುದಿಲ್ಲ.
ಜಾಗತಿಕವಾಗಿ ಇಂದು ಹೆಚ್ಚು ಜನರ ಸಾವಿಗೆ ಕ್ಯಾನ್ಸರ್ ಕಾರಣವಾಗಿದೆ. ಪ್ರತಿ ವರ್ಷ ಆರರಲ್ಲಿ ಒಬ್ಬರು ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಿದ್ದಾರೆ. ಕ್ಯಾನ್ಸರ್ಗೆ ಕಾರಣವಾಗಿವ ಅಂಶಗಳ ಕುರಿತು ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ಅಧ್ಯಯನ ನಡೆಯುತ್ತಿದೆ. ಈ ಮೂಲಕ ಇದರ ಸಂಖ್ಯೆ ತಗ್ಗಿಸುವ ಪ್ರಯತ್ನ ಸಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ.ಪ್ರಾನ್ಸೆಸ್ಕೋ ಬ್ರಾನ್ಸ್ ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ದಿನಕ್ಕೆ 200 ಅಥವಾ 300 ಮಿ. ಗ್ರಾಂ ಅಸ್ಪರ್ಟೇಮ್ ಹೊಂದಿರುವ ಪಾನೀಯವನ್ನು ಸೇವಿಸಬಹುದಾಗಿದೆ. ವ್ಯಕ್ತಿಯೊಬ್ಬ ಪ್ರತಿನಿತ್ಯ ನಿಗದಿತ ಮಿತಿಯಲ್ಲಿ ಇದನ್ನು ಸೇವಿಸುವುದರಿಂದ ಯಾವುದೇ ಹಾನಿ ಇಲ್ಲ. ಇದು ಸುರಕ್ಷಿತ ಎಂದು ಕೂಡ ಸಮಿತಿ ತಿಳಿಸಿದೆ. ಈ ಕ್ಯಾನ್ಸರ್ಕಾರಕ ಅಂಶಗಳು ಆಸ್ಪರ್ಟೇಮ್ ಡೋಸ್ಗಳ ಬಳಕೆಯ ಸುರಕ್ಷತೆ ಪ್ರಮುಖ ಕಾಳಜಿ ಇಲ್ಲದಿದ್ದರೂ, ಅವುಗಳ ಪರಿಣಾಮ ಕುರಿತು ಹೆಚ್ಚಿನ ಅಧ್ಯಯನ ಮಾಡಬೇಕಿದೆ. ಮಾನವರಲ್ಲಿ ಕ್ಯಾನ್ಸರ್ಗೆ ಸೀಮಿತ ಪುರಾವೆ ಇದ್ದು, ಇದನ್ನು ಪ್ರಾಯಶಃ, ಕ್ಯಾನ್ಸರ್ ಜನಕ ಎಂದು ವರ್ಗೀಕರಿಸಿದೆ. ಆಸ್ಪರ್ಟೇಮ್ ಸೇವನೆಯು ಕ್ಯಾನ್ಸರ್ ಅಪಾಯವನ್ನುಂಟುಮಾಡುತ್ತದೆ ಎಂಬುದರ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯ ಇದೆ ಎಂದು ತಿಳಿಸಿದೆ.
ಇದನ್ನೂ ಓದಿ: ಸ್ವಯಂ ನಿರೋಧಕ ಕಾಯಿಲೆಯ ಚಿಕಿತ್ಸಾ ಗುಣಹೊಂದಿದೆ ಕೃತಕ ಸಿಹಿಕಾರಕಗಳು