ನವದೆಹಲಿ: ಭಾರತದಲ್ಲಿ ಮಹಿಳೆಯರ ಮುಟ್ಟಿನ ಕುರಿತಾಗಿ Gynoveda.com ದೊಡ್ಡ ಮಟ್ಟದಲ್ಲಿ ಆರೋಗ್ಯ ಅಧ್ಯಯನ ನಡೆಸಿದೆ. ಈ ಸಮೀಕ್ಷೆಯಲ್ಲಿ 18 ರಿಂದ 45 ವರ್ಷದ ವಯೋಮಾನದ ದೇಶಾದ್ಯಂತ 3 ಲಕ್ಷ ಮಹಿಳೆಯರು ಭಾಗಿಯಾಗಿದ್ದರು. ಅವರನ್ನು ಮೂರು ಗುಂಪುಗಳಾಗಿ ಹರಡುವಿಕೆ, ತೀವ್ರತೆ ಮತ್ತು ದೈಹಿಕ ಬದಲಾವಣೆ ಮೂರು ಭಾಗವಾಗಿ ಅಧ್ಯಯನ ನಡೆಸಲಾಗಿದೆ.
ಮೊದಲ ಗುಂಪಿನಲ್ಲಿ ಋತುಚಕ್ರ ಸಮಸ್ಯೆ ಹೊಂದಿರುವವರ ಗುಂಪಾಗಿದೆ. ಇದರಲ್ಲಿ ಶೇ 70ರಷ್ಟು ಮಹಿಳೆಯರು ಉತ್ತರಿಸಿದ್ದಾರೆ. ಎರಡನೇ ಗುಂಪಿನಲ್ಲಿ ಯೋನಿ ಸಮಸ್ಯೆ (ಶೆ 26ರಷ್ಟು) ಹೊಂದಿದ್ದು, ಇವರು ತಮ್ಮ ಯೋನಿಯ ಆರೋಗ್ಯ ಕಾಪಾಡುವುದು ಸವಾಲಾಗಿದೆ ಎಂದಿದ್ದಾರೆ. ಕಾರಣ ಇವರಲ್ಲಿ ಸೋಂಕು ಅಥವಾ ಅನಾನುಕೂಲತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಮೂರನೇ ಗುಂಪಿನಲ್ಲಿ ಶೇ 4ರಷ್ಟು ಮಂದಿ ಯಾವುದೇ ಸಮಸ್ಯೆಯನ್ನು ಹೊಂದಿಲ್ಲ.
ಈ ಪ್ಯಾನ್ ಇಂಡಿಯಾ ಸಮೀಕ್ಷೆಯಲ್ಲಿ ವಯಸ್ಸು ಮತ್ತು ಪಿಸಿಒಎಸ್ಗೆ ಅನುಗುಣವಾಗಿ ಫಲಿತಾಂಶವನ್ನು ಹೊಂದಿದ್ದು, ಇದರಲ್ಲಿ ಅನಿಯಮಿತ ಋತುಚಕ್ರ, ಋತುಚಕ್ರದ ಸಮಯದಲ್ಲಿ ಭಾರಿ ನೋವು, ದೈಹಿಕ ಬದಲಾವಣೆ ಅನುಭವಿಸಿದ್ದಾಗಿ ತಿಳಿಸಿದ್ದಾರೆ.
ವಯಸ್ಸಿನ ಗುಂಪು ಮತ್ತು ಪಿಸಿಒಎಸ್ ಘಟನೆಗಳು.. ಪಿಸಿಒಎಸ್ ಸಮಸ್ಯೆಯನ್ನು ಎಲ್ಲ ವಯೋಮಾನದ ಮಹಿಳೆಯರಲ್ಲಿ ಕಾಣಬಹುದಾಗಿದೆ. ಸಮೀಕ್ಷೆ ಪ್ರಕಾರ 25 ರಿಂದ 34 ವರ್ಷದ ಶೇ 60ರಷ್ಟು ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಹೆಚ್ಚಿದೆ. ಶೇ 51ರಷ್ಟು 24 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಇದೆ. ಆದಾಗ್ಯೂ ಪಿಸಿಒಎಸ್ ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ ಪಿಸಿಒಎಸ್ ಸಮಸ್ಯೆಯಿಂದ ಶೇ 70-80ರಷ್ಟು ಮಹಿಳೆಯರಲ್ಲಿ ಸಂತಾನೋತ್ಪತ್ತಿ ತೊಂದರೆ ಇದೆ.
ಪಿಸಿಒಎಸ್ ಮತ್ತಿತರ ಹಾರ್ಮೋನ್ ಸಮಸ್ಯೆ.. ಪಿಸಿಒಎಸ್ ಒಂದೇ ಸ್ತ್ರೀರೋಗ ಸಮಸ್ಯೆ ದೇಶದ ಮಹಿಳೆಯರನ್ನು ಕಾಡುತ್ತಿಲ್ಲ. ದತ್ತಾಂಶದ ಪ್ರಕಾರ, ಶೇ 54ರಷ್ಟು ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಕಂಡು ಬಂದರೆ, ಋತುಚಕ್ರದ ಎರಡನೇ ಅತಿ ದೊಡ್ಡ ಸಮಸ್ಯೆ ಪಿಐಡಿ ಆಗಿದೆ. ಇದರಿಂದ ಶೇ 17ರಷ್ಟು ಮಹಿಳೆ ತೊಂದರೆ ಅನುಭವಿಸುತ್ತಿದ್ದಾರೆ.
ಋತುಚಕ್ರದ ಸಂದರ್ಭದಲ್ಲಿನ ಅನಿಯಮಿತತೆ ಮತ್ತು ನೋವಿನ ತೀವ್ರತೆ.. ಶೇ 83ರಷ್ಟು ಮಹಿಳೆಯರಿಗೆ ಮುಟ್ಟು ನೋವುದಾಯಕ ಆಗಿರುತ್ತದೆ. ಇದರಿಂದ ಅವರು ಪ್ರತಿ ತಿಂಗಳು ಮಾತ್ರೆ ನುಂಗಬೇಕಾಗಿದೆ. ಶೇ 58ರಷ್ಟು ಮಹಿಳೆಯರಲ್ಲಿ ಸಾಮಾನ್ಯ ಮತ್ತು ತಡೆಯಬಹುದಾದ ನೋವು ಕಾಣಿಸಿಕೊಳ್ಳುತ್ತದೆ. ಶೇ 25ರಷ್ಟು ಮಹಿಳೆಯರು ಹೆಚ್ಚಿನ ನೋವು ಅನುಭವಿಸಿದರೆ ಶೇ 17ರಷ್ಟು ಮಹಿಳೆಯರಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ.
ಅನಿಯಮಿತ ಋತುಚಕ್ರದ ಅಧಿಕ ಸ್ರಾವವನ್ನು ಶೇ 76ರಷ್ಟು ಮಹಿಳೆಯರು ಅನುಭವಿಸಿದ್ದಾರೆ. ಶೇ. ಅರ್ಧದಷ್ಟು ಮಹಿಳೆಯರು ಕಡಿಮೆ ಸ್ರಾವ ಹೊಂದಿದ್ದು, ತಮ್ಮ ಈ ಚಕ್ರದಲ್ಲಿ ಕೇವಲ 5 ಪ್ಯಾಡ್ ಬಳಕೆ ಮಾಡುತ್ತಾರೆ. ಸಾಮಾನ್ಯವಾಗಿ 10 ರಿಂದ 12 ಪ್ಯಾಡ್ ಬಳಕೆ ಆರೋಗ್ಯಯುತ ಋತುಚಕ್ರದ ಲಕ್ಷಣವಾಗಿದೆ.
ಪಿಸಿಒಎಸ್ ಮಹಿಳೆಯರಲ್ಲಿ ದೈಹಿಕ ಬದಲಾವಣೆ.. ಪಿಸಿಒಎಸ್ ಎಂಬುದು ಗಂಭೀರ ದೇಹದ ಸಮಸ್ಯೆಯಾಗಿದೆ, ಇದರಿಂದ ಶೇ 60ರಷ್ಟು ಮಹಿಳೆಯರು ತೂಕವನ್ನು ಹೊಂದಿರುತ್ತಾರೆ. ಶೇ 60ರಷ್ಟು ಮಂದಿ ಹೆಚ್ಚಿನ ತೂಕ ಹೊಂದಿದ್ದರೆ, ಶೇ 59ರಷ್ಟು ಮಹಿಳೆಯರು ಕೂದಲು ಉದುರುವ ಸಮಸ್ಯೆ ಹೊಂದಿದ್ದಾರೆ. ಮೊಡವೆಯಂತಹ ಚರ್ಮದ ಸಮಸ್ಯೆ 55ರಷ್ಟು ಮಹಿಳೆಯರಲ್ಲಿದೆ. (ಐಎಎನ್ಎಸ್)
ಇದನ್ನೂ ಓದಿ: Menstrual Hygiene Policy: ಋತುಚಕ್ರ ನೈರ್ಮಲ್ಯ ನೀತಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ