ನವದೆಹಲಿ: ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಇತ್ತೀಚಿಗೆ ನಡೆಸಿದ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಆಧಾರ್ ದೃಢೀಕರಣದ ಸೈನ್ ಅಪ್ ಮೂಲಕ ವೆಬ್ಸೈಟ್ನಲ್ಲಿ ಅಂಗಾಂಗ ದಾನ ಪ್ರಕ್ರಿಯೆಗೆ ನೋಂದಣಿ ನಡೆಸಬಹುದಾಗಿದೆ.
ಸೆಪ್ಟೆಂಬರ್ 16ರಿಂದ ಆರಂಭದಾದ ಈ ನೋಂದಣಿಯಲ್ಲಿ 82 ಸಾವಿರ ಮಂದಿ ಅಂಗಾಂಗ ದಾನ ಮಾಡುವ ಪ್ರತಿಜ್ಞೆ ಮಾಡಿದ್ದು, 30 ರಿಂದ 44 ವರ್ಷದ ಗುಂಪಿನ ಈ ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ ಎಂದು ಎನ್ಒಟಿಟಿಒ ವೆಬ್ಸೈಟ್ ದತ್ತಾಂಶ ತಿಳಿಸಿದೆ.
ವೆಬ್ಸೈಟ್ನಲ್ಲಿ ಅಪ್ಡೇಟ್ ಆದ ದತ್ತಾಂಶದ ಪ್ರಕಾರ, 30 - 44 ವರ್ಷದ 40, 320 ಮಂದಿ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿದ್ದಾರೆ. ಇದರಲ್ಲಿ 18-29 ವರ್ಷದ 18,160 ಮಂದಿ ಈ ಪ್ರತಿಜ್ಞೆ ಮಾಡಿದರೆ 45 ರಿಂದ 59 ವರ್ಷದ ಗುಂಪಿದ 2,592 ಅಂಗಾಂದ ದಾನಕ್ಕೆ ಮುಂದಾಗಿದ್ದಾರೆ. ಇನ್ನು ಇದರಲ್ಲಿ 47,094 ಮಂದಿ ಮಹಿಳೆಯರಾದರೆ, 35,726 ಮಂದಿ ಪುರುಷರಾಗಿದ್ದು, 12 ಮಂದು ತೃತೀಯ ಲಿಂಗಿಗಳು ಅಂಗಾಂಗದಾನಕ್ಕೆ ಪೋರ್ಟಲ್ ಮೂಲಕ ಹೆಸರು ಖಾತ್ರಿಗೊಳಿಸಿದ್ದಾರೆ.
ಈ ಅಂಗಾಂಗ ದಾನ: ಈ ದಾನ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ 23,369 ಮಂದಿ ಹೆಸರು ನೋಂದಾಯಿಸಿದ್ದು, ನಂತರದ ಸ್ಥಾನದಲ್ಲಿ 18,847 ಮತ್ತು ತೆಲಂಗಾಣದಲ್ಲಿ 11,564 ಮಂದಿ ಪ್ರತಿಜ್ಞೆ ಮಾಡಿದ್ದಾರೆ. ಇದರಲ್ಲಿ ಹೆಚ್ಚಿನ ಮಂದಿ ಕಿಡ್ನಿ, ಹೃದಯ, ಯಕೃತ್, ಶ್ವಾಸಕೋಶ, ಮೇದೋಜೀರಕ ಗ್ರಂಥಿ, ಕರುಳು ದಾನ ಮಾಡುವುದಾಗಿ ತಿಳಿಸಿದ್ದಾರೆ.
ಇದರ ಹೊರತಾಗಿ ಅನೇಕ ಮಂದಿ ಕಾರ್ನಿಯಾದಂತಹ ಟಿಶ್ಯೂ, ಚರ್ಮ, ಮೂಳೆ, ಹೃದಯದ ಕವಾಟ, ರಕ್ತ ನಾಳ ಮತ್ತು ಕಾರ್ಟಿಲೆಜ್ ದಾನ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಈ ಕುರಿತು ಮಾತನಾಡಿರುವ ಎನ್ಒಟಿಟಿಒ ನಿರ್ದೇಶಕ ಡಾ ಅನಿಲ್ ಕುಮಾರ್, ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರ ಜೀವ ಉಳಿಸಲು ಅಂಗಾಂಗಗಳ ಅವಶ್ಯಕತೆ ಬಹಳಷ್ಟಿದೆ ಎಂದಿದ್ದಾರೆ.
2022ರಲ್ಲಿ ಜಗತ್ತಿನಲ್ಲಿ ಒಟ್ಟಾರೆ ಅಂಗಾಂಗ ಶಸ್ತ್ರ ಚಿಕಿತ್ಸೆಯಲ್ಲಿ ಭಾರತವೂ ಮೂರನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೇ, ಭಾರತದಲ್ಲಿ ಶ್ವಾಸಕೋಸ, ಮೆದೋಜೀರಕ ಗ್ರಂಥಿ, ಕೈ ಮುಂತಾದ ಬಹು ಅಂಗಾಂಗ ಮತ್ತು ಅಪರೂಪದ ಕಸಿ ಚಿಕಿತ್ಸೆಯ ಸಾಮರ್ಥ್ಯ ಅಭಿವೃದ್ಧಿ ಮಾಡುತ್ತಿದೆ. ಆದಾಗ್ಯೂ ಅಂಗಾದ ಲಭ್ಯತೆ ಮತ್ತು ಅಂಗಾಂಗ ಬೇಡಿಕೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣುತ್ತಿದ್ದೇವೆ. ಭಾರತದ ಅಂಗಾಂಗ ದಾನ ದರವು ಪ್ರತಿ ಮಿಲಿಯನ್ ಜನಸಂಖ್ಯೆಯಲ್ಲಿ ಸಾವನ್ನಪ್ಪಿದ ದಾನಿಗಳ ಸಂಖ್ಯೆಯಾಗಿ ಇದು ಕಡಿಮೆಯಾಗಿದೆ. ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ದೇಶಗಳಲ್ಲಿ ಅಂಗಾಂಗದಾನ ಹೆಚ್ಚಿನ ದರ ಹೊಂದಿದೆ ಎಂದರು.
ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದ ಸೇವ ಪಕ್ವಾಡ್ (ಹದಿನೈದು ದಿನಗಳ ಸೇವೆ) ಎಂಬ ಹೆಸರಿನಲ್ಲಿ ಈ ಅಂಗಾಂಗ ದಾನ ಪ್ರತಿಜ್ಞೆಯ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್ 2ರವರೆಗೆ ಸಾಗಿತು. ಪ್ರತಿಯೊಬ್ಬರಿಗೆ ಆರೋಗ್ಯ ಸೇವೆ ಒದಗಿಸುವ ಆಯುಷ್ಮಾನ್ ಭಾವ ಅಭಿಯಾನವನ್ನ ವಿಸ್ತರಿಸಲಾಯಿತು.
ಇದನ್ನೂ ಓದಿ: ದೇಶದಲ್ಲಿ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾದ ಅಂಗಾಂಗ ದಾನ