ETV Bharat / sukhibhava

ಲೈಂಗಿಕಾಸಕ್ತಿ ಕುಗ್ಗಿಸುತ್ತವೆ 7 ಔಷಧಿಗಳು.. ಸೇವಿಸುವಾಗ ಜಾಗ್ರತೆ - ಲೈಂಗಿಕಾಸಕ್ತಿ ಕುಗ್ಗಿಸುತ್ತವೆ 7 ಔಷಧಿಗಳು

ಸೆಕ್ಸ್​ ಜೀವನಕ್ಕೆ ಹಾನಿ ಮಾಡುವ ಕೆಲ ಔಷಧಿಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅನಾರೋಗ್ಯವಿದ್ದಾಗ ನಾವು ತೆಗೆದುಕೊಳ್ಳುವ ಕೆಲವೊಂದು ಔಷಧಿಗಳು ಲೈಂಗಿಕ ನಿರಾಸಕ್ತಿಗೆ ಕಾರಣವಾಗುತ್ತವೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಲೈಂಗಿಕಾಸಕ್ತಿ ಕುಗ್ಗಿಸುವ 7 ಔಷಧಿಗಳು
7 drugs that reduce sexual desire
author img

By

Published : Aug 22, 2022, 6:05 PM IST

ನವದೆಹಲಿ: ಸೆಕ್ಸ್​ ಎಂಬ ಪದ ಕೇಳಿದರೆ ಸಾಕು, ಅದೆಷ್ಟೋ ಭಾವನೆಗಳು ಮನದಲ್ಲಿ ಚಿಮ್ಮುತ್ತವೆ. ಇದರ ಬಗ್ಗೆ ಮಾತನಾಡುವುದೆಂದರೆ ಬಹಳ ಜನರಿಗೆ ಇಷ್ಟ. ಅದರ ಬಗ್ಗೆ ಮಾತನಾಡುವುದು ಇಷ್ಟ. ಇನ್ನು ಅದರ ಸಿಹಿಯನ್ನು ಸ್ವತಃ ಅನುಭವಿಸುವುದು ಇನ್ನೂ ಸುಖಾನುಭವ ಮತ್ತು ಹಿತಾನುಭವ. ಸಂಗಾತಿಗಳಿಬ್ಬರು ಲೈಂಗಿಕ ಸುಖದ ಉಚ್ಛ್ರಾಯ ಸ್ಥಿತಿಯನ್ನು ತಲುಪಲು ಇಬ್ಬರೂ ಪ್ರೀತಿಯಿಂದ ಸೆಕ್ಸ್​ನಲ್ಲಿ ಮುಳುಗಬೇಕಾಗುತ್ತದೆ. ಆದಾಗ್ಯೂ ಸೆಕ್ಸ್​ ಬಗ್ಗೆ ಮಾತನಾಡುವುದು ಈಗಲೂ ಸಮಾಜದ ಕೆಲ ವರ್ಗಗಳಲ್ಲಿ ನಿಷಿದ್ಧವಾಗಿದೆ.

ಆದರೆ ಕೆಲವೊಮ್ಮೆ ಸಂಗಾತಿಗಳಲ್ಲಿ ಯಾರೋ ಒಬ್ಬರಿಗೆ ಲೈಂಗಿಕ ಆಸಕ್ತಿ ಕಡಿಮೆಯಾದಾಗ ಜೀವನದಲ್ಲಿ ಸಮಸ್ಯೆಯಾಗುತ್ತದೆ. ಇದಕ್ಕೆ ಹಲವಾರು ಆಂತರಿಕ ಮತ್ತು ಬಾಹ್ಯ ಕಾರಣಗಳಿರಬಹುದು. ಅದರಲ್ಲೂ ಇತ್ತೀಚೆಗೆ ಸೇವಿಸುವ ಔಷಧಿಗಳಿಂದ ಲೈಂಗಿಕ ನಿರಾಸಕ್ತಿ ಮೂಡುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಲೈಂಗಿಕ ನಿರಾಸಕ್ತಿ ಮೂಡಿಸುವ 7 ಔಷಧಿಗಳು ಇಲ್ಲಿವೆ.

ನೋವು ನಿವಾರಕಗಳು: ಯಾವುದೇ ಅಪಾಯವಿಲ್ಲದ ನೋವು ನಿವಾರಕಗಳು ನೋವನ್ನು ಮಾತ್ರ ಕಡಿಮೆ ಮಾಡಲ್ಲ, ಲೈಂಗಿಕ ಉತ್ಸಾಹವನ್ನು ಸಹ ನಿಧಾನವಾಗಿ ಕುಗ್ಗಿಸುತ್ತವೆ. ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಪ್ರಚೋದನೆಗೆ ಅಗತ್ಯವಾದ ಟೆಸ್ಟೋಸ್ಟಿರಾನ್ ಮತ್ತು ವಿಭಿನ್ನ ಹಾರ್ಮೋನುಗಳ ಉತ್ಪಾದನೆಯನ್ನು ಕಡಿಮೆ ಮಾಡುವಲ್ಲಿ ನೋವು ನಿವಾರಕಗಳ ಪಾತ್ರ ಮುಖ್ಯವಾಗಿದೆ ಎನ್ನಲಾಗ್ತಿದೆ.

ಖಿನ್ನತೆ ಶಮನಕಾರಕಗಳು: ಈ ಔಷಧಿಗಳನ್ನು ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಮತ್ತು ಅವುಗಳನ್ನು ಲಿಬಿಡೋ ಕಿಲ್ಲರ್ಸ್ ಎಂದು ಕರೆಯಲಾಗುತ್ತದೆ. ಕಾಮಾಸಕ್ತಿಯ ನಷ್ಟ, ಪರಾಕಾಷ್ಠೆ ತಲುಪುವಲ್ಲಿ ವಿಳಂಬ, ವಿಳಂಬ ಸ್ಖಲನ ಅಥವಾ ಯಾವುದೇ ಪರಾಕಾಷ್ಠೆ ಸ್ಖಲನವಿಲ್ಲದಿರುವಿಕೆ ಮತ್ತು ಪುರುಷರಲ್ಲಿ ನಿಮಿರುವಿಕೆಯ ಸಮಸ್ಯೆಗಳು ಈ ಖಿನ್ನತೆ ಶಮನಕಾರಕಗಳಿಂದ ಕಾಣಿಸಿಕೊಳ್ಳಬಹುದು.

ಗರ್ಭ ನಿರೋಧಕ ಮಾತ್ರೆಗಳು: ಮಹಿಳೆಯರು ಮೌಖಿಕ ಗರ್ಭನಿರೋಧಕಗಳು ಅಥವಾ ಜನನ ನಿಯಂತ್ರಣ ಮಾತ್ರೆಗಳನ್ನು ಬಳಸಿದಾಗ, ಅವರಲ್ಲಿ ಕಾಮಾಸಕ್ತಿ ಮತ್ತು ಲೈಂಗಿಕ ಬಯಕೆಯ ಮೇಲೆ ಪರಿಣಾಮ ಬೀರುವ ಲೈಂಗಿಕ ಹಾರ್ಮೋನುಗಳ ಮಟ್ಟ ಕಡಿಮೆಯಾಗಬಹುದು. ಹೀಗಾಗಿ ಗರ್ಭ ನಿರೋಧಕ ಮಾತ್ರೆಗಳು ಆರೋಗ್ಯಕರ ಲೈಂಗಿಕ ಜೀವನಕ್ಕೆ ಸೂಕ್ತವಾಗಿಲ್ಲ.

ಸ್ಟ್ಯಾಟಿನ್‌ಗಳು ಮತ್ತು ಫೈಬ್ರೇಟ್‌ಗಳು: ಇವನ್ನು ಪ್ರಾಥಮಿಕವಾಗಿ ಹೆಚ್ಚಿನ ಕೊಲೆಸ್ಟ್ರಾಲ್‌ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಆದಾಗ್ಯೂ, ಈ ಔಷಧಿಗಳು ಟೆಸ್ಟೋಸ್ಟಿರಾನ್, ಈಸ್ಟ್ರೊಜೆನ್ ಮತ್ತು ಇತರ ಲೈಂಗಿಕ ಹಾರ್ಮೋನುಗಳ ಉತ್ಪಾದನೆಯಲ್ಲಿ ಪ್ರಮುಖವಾಗಿ ಪರಿಣಾಮ ಬೀರಬಹುದು. ಸ್ಟ್ಯಾಟಿನ್‌ಗಳು ಮತ್ತು ಫೈಬ್ರೇಟ್‌ಗಳ ಅಡ್ಡಪರಿಣಾಮಗಳ ಕೆಲವು ಅಧ್ಯಯನಗಳಲ್ಲಿ ಎರಡೂ ವರ್ಗದ ಔಷಧಗಳು ನಿಮಿರುವಿಕೆಯ ಅಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.

ಬೆಂಜೊಡಿಯಜೆಪೈನ್ಸ್-ಟ್ರ್ಯಾಂಕ್ವಿಲೈಜರ್‌ಗಳು: ಬೆಂಜೊಡಿಯಜೆಪೈನ್‌ಗಳನ್ನು ಸಾಮಾನ್ಯವಾಗಿ ನಿದ್ರಾಜನಕ ಎಂದು ಕರೆಯಲಾಗುತ್ತದೆ. ಆತಂಕ, ನಿದ್ರಾಹೀನತೆ ಮತ್ತು ಸ್ನಾಯು ಸೆಳೆತಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಬೆಂಜೊಡಿಯಜೆಪೈನ್‌ಗಳ ನಿದ್ರಾಜನಕ ಗುಣಲಕ್ಷಣಗಳು ಲೈಂಗಿಕ ಆಸಕ್ತಿ, ಪ್ರಚೋದನೆ ಮತ್ತು ಸಂವೇದನೆಯ ಮೇಲೆ ಪರಿಣಾಮ ಬೀರುತ್ತವೆ. ದುರ್ಬಲಗೊಂಡ ಪರಾಕಾಷ್ಠೆ, ನೋವಿನ ಸಂಭೋಗ, ಸ್ಖಲನ ಸಮಸ್ಯೆಗಳು ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಂತಹ ಅಡ್ಡಪರಿಣಾಮಗಳೊಂದಿಗೆ ಈ ಔಷಧಗಳು ಟೆಸ್ಟೋಸ್ಟಿರಾನ್ ಉತ್ಪಾದನೆಗೆ ಅಡ್ಡಿಪಡಿಸಬಹುದು.

ರಕ್ತದೊತ್ತಡದ ಔಷಧಿಗಳು: ಅಧಿಕ ರಕ್ತದೊತ್ತಡದ ಬಂದಾಗ ಲೈಂಗಿಕ ಆಸಕ್ತಿಯಲ್ಲೂ ಸಮಸ್ಯೆ ಎದುರಾಗಬಹುದು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳು ಲೈಂಗಿಕ ಸಮಸ್ಯೆಗಳನ್ನು ಹೆಚ್ಚಿಸಬಹುದು. ಔಷಧಿಗಳನ್ನು ಬಳಸುವುದರಿಂದ, ಪುರುಷರು ಲೈಂಗಿಕ ಬಯಕೆಯಲ್ಲಿ ಇಳಿಕೆ ಕಾಣುತ್ತಾರೆ. ನಿಮಿರುವಿಕೆ ಮತ್ತು ಸ್ಖಲನದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ, ಇದು ಯೋನಿ ಶುಷ್ಕತೆ, ಬಯಕೆ ಕಡಿಮೆಯಾಗುವುದು ಮತ್ತು ಪರಾಕಾಷ್ಠೆಯನ್ನು ಹೊಂದುವಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.

ಆಂಟಿಹಿಸ್ಟಮೈನ್‌ಗಳು: ಎಡೆಬಿಡದ ಸೀನುವಿಕೆ ಮತ್ತು ಹರಿಯುವ ಮೂಗು ಮುಂತಾದ ಅಲರ್ಜಿ-ಸಂಬಂಧಿತ ರೋಗಲಕ್ಷಣಗಳನ್ನು ನಿಯಂತ್ರಿಸಲು ಮುಖ್ಯವಾಗಿ ಇವನ್ನು ಬಳಸಲಾಗುತ್ತದೆ. ಇವು ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ಸ್ಖಲನ ಸಮಸ್ಯೆಗಳಂತಹ ಭೀಕರ ಪರಿಣಾಮಗಳನ್ನು ಉಂಟುಮಾಡಬಹುದು. ಇನ್ನು ಮಹಿಳೆಯರಲ್ಲಿ ಇವುಗಳಿಂದ ಯೋನಿ ಶುಷ್ಕತೆ ಸಮಸ್ಯೆ ಎದುರಾಗಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.