ಮಹಿಳೆಯರ ಯಶಸ್ಸು, ಸವಾಲು, ಹಿನ್ನೆಲೆಯೂ ಸೇರಿದಂತೆ ಅವರ ಆನ್ಲೈನ್ ಡೇಟಿಂಗ್ ವಿಚಾರಗಳ ಕುರಿತು ಭಾರತದ ಸ್ವದೇಶಿ ಡೇಟಿಂಗ್ ಅಪ್ಲಿಕೇಶನ್ ಕ್ವಾಕ್ಕ್ವಾಕ್ ವಿಶೇಷ ಅಧ್ಯಯನ ನಡೆಸಿದೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಂಬಂಧ ಈ ಸಮೀಕ್ಷೆ ಮಾಡಲಾಗಿದ್ದು, 1,200 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಮಹಾನಗರ ಮತ್ತು ಸಣ್ಣ ನಗರದ 22ರಿಂದ 35 ವರ್ಷದ ವಯೋಮಿತಿಯೊಳಗಿನ ಮಹಿಳೆಯರನ್ನು ಅಧ್ಯಯನದಲ್ಲಿ ತೊಡಗಿಸಲಾಗಿದೆ.
ಅಧ್ಯಯನದಲ್ಲಿ ಆನ್ಲೈನ್ ಮತ್ತಿತರೆ ಕಡೆ ಲಿಂಗ ತಾರತಮ್ಯ ಎದುರಿಸಿರುವ ಕುರಿತು ಪ್ರಶ್ನಿಸಲಾಗಿದೆ. ಈ ವೇಳೆ ಶೇ 33ರಷ್ಟು ಮಹಿಳೆಯರು ವೃತ್ತಿ ಜೀವನದ ಬೆಳವಣಿಗೆ ಕುರಿತು ಪ್ರಸ್ತಾಪಿಸಿದ್ದಾರೆ. ಸಂಗಾತಿಗಳಿಬ್ಬರು ಕೆಲಸದಲ್ಲಿದ್ದಾಗ ಅವರ ಪ್ರಣಯ ಸಂಬಂಧದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಕುರಿತು ಅಧ್ಯಯನ ನಡೆದಿದೆ. 11 ರಲ್ಲಿ 4 ಮಹಿಳೆಯರು ಈ ಕುರಿತು ಮಾತನಾಡಿದ್ದಾರೆ.
ಕ್ವಾಕ್ಕ್ವಾಕ್ ಸಂಸ್ಥಾಪಕ ಮತ್ತು ಸಿಇಒ ರವಿ ಮಿತ್ತಲ್ ಮಾತನಾಡಿ, ಮಹಿಳೆಯರ ಕಾಳಜಿಯನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಅಪ್ಲಿಕೇಶನ್ ಅನ್ನು ಮಹಿಳಾ ಸ್ನೇಹಿಯನ್ನಾಗಿ ಮಾಡುವುದು ನಮ್ಮ ಪ್ರಮುಖ ಅಜೆಂಡ. ನಮ್ಮ ಆ್ಯಪ್ನಲ್ಲಿ ಶೇ 11ರಷ್ಟು ಮಹಿಳಾ ಬಳಕೆದಾರರ ಏರಿಕೆಯನ್ನು ನಾವು ನೋಡಿದ್ದೇನೆ. ತಿಂಗಳಿಗೆ ಸುಮಾರು 2.60 ಮಿಲಿಯನ್ ಚಾಟ್ಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಮಹಿಳೆ ಮೊದಲ ಸಂದೇಶ ಹಂಚಿಕೊಂಡಾಗ ಸಕಾರಾತ್ಮಕತೆ ಹೆಚ್ಚಿರುವುದನ್ನು ನಾವು ನೋಡಿದ್ದೇವೆ ಎಂದರು.
ಇಗೋ ಸಂಘರ್ಷ: 28ರಿಂದ 35ನೇ ವಯೋಮಾನದ ಮಹಿಳೆಯರು ಉನ್ನತ ಕಂಪನಿಗಳಲ್ಲಿ ಉತ್ತಮ ಸ್ಥಾನದಲ್ಲಿ ಕೆಲಸ ಮಾಡುವುದು ಅನೇಕ ಬಾರಿ ಪುರಷರ ಸ್ವಪ್ರತಿಷ್ಠೆಗೆ ಹಾನಿ ಮಾಡುತ್ತದೆ. ಸಂಬಂಧದಲ್ಲಿ ಈ ಇಗೋ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಮಹಿಳೆಯರು ಅಹಂಕಾರದ ನಿರ್ವಹಣೆ ಮಾಡುವ ಬದಲಾಗಿ ತಮ್ಮ ಸಂತೋಷ ಮತ್ತು ಮನಸ್ಸಿನ ಶಾಂತಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.
ವೃತ್ತಿ ಘರ್ಷಣೆ: ಟೈರ್ 1 ಮತ್ತು ಟೈರ್ 2 ನಗರಲ್ಲಿ ಕಚೇರಿಯ ಸಮಯ ಮತ್ತು ಬಿಡುವಿಲ್ಲದ ಕಾರ್ಯಗಳು ಸಂಬಂಧಗಳಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು 12ರಲ್ಲಿ 4 ಮಹಿಳೆಯರು ಒಪ್ಪುತ್ತಾರೆ. ಪುರುಷರು ತಮ್ಮ ಕನಸಿನ ಈಡೇರಿಕೆಗೆ ಕಷ್ಟಪಟ್ಟು ದುಡಿಯಬಹುದು. ಆದರೆ, ಮಹಿಳೆಯರ ವಿಷಯದಲ್ಲಿ ಇದನ್ನವರು ಬಯಸುವುದಿಲ್ಲ.
ಮೆಟ್ರೋಪಾಲಿಟನ್ ನಗರಗಳಲ್ಲಿ 9-5ರವರೆಗೆ ಕೆಲಸ ಮಾಡುವ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸೌಕರ್ಯ ಹೊಂದಿರುವುದಾಗಿ ತಿಳಿಸುತ್ತಾರೆ. ಇಲ್ಲಿ ತಾರತಮ್ಯ ಕಡಿಮೆ ಇದೆ. ಅಲ್ಲದೇ ಅವರು ಮನೆಯಲ್ಲಿ ಹೆಚ್ಚಿನ ಸಮಯ ಹೊಂದಿರುತ್ತಾರೆ. ದೀರ್ಘ ಅವಧಿಗೆ ಕೆಲಸ ಇರುವುದಿಲ್ಲ. ಕಾರಣ ಅವರು ಕಚೇರಿಗೆ ಹೊರಡುವ ಮುನ್ನ ಮತ್ತು ಬಳಿಕ ಮನೆ ಕೆಲಸಗಳನ್ನು ಮುಗಿಸುತ್ತಾರೆ. ಆದರೆ, ಅದೇ ಸ್ಥಾನದಲ್ಲಿರುವ ಹೆಚ್ಚಿನ ಪುರುಷರು ಅದೇ ರೀತಿ ಮಾಡಲು ಬಾಧ್ಯತೆ ಹೊಂದಿಲ್ಲ.
30 ವರ್ಷಕ್ಕಿಂತ ಮೇಲ್ಪಟ್ಟ ಟೈರ್ 1 ಮತ್ತು ಟೈರ್ 2 ನಗರದ ಶೇ 33ರಷ್ಟು ಮಹಿಳೆಯರು ತಮ್ಮ ಆರಾಮದಾಯಕ ವಲಯದಿಂದ ಹೊರಬಂದು, ಅಪಾಯದಲ್ಲೂ ಆನ್ಲೈನ್ನಲ್ಲಿ ಮೊದಲ ಹೆಜ್ಜೆ ಇಡಲು ಮುಂದಾಗುತ್ತದೆ. ಕಳೆದೆರಡು ವರ್ಷಗಳಲ್ಲಿ ಈ ವಿಷಯಗಳಲ್ಲಿ ಬಹಳ ಬದಲಾವಣೆ ಆಗಿದೆ. ಅದರಲ್ಲೂ ವರ್ಚುವಲ್ ಡೇಟಿಂಗ್ನಲ್ಲಿ ಮಹಿಳೆಯರು ಪುರುಷರೊಂದಿಗೆ ಧೈರ್ಯವಾಗಿ ಮಾತನಾಡುವ, ಆಸಕ್ತಿ ತೋರಿಸುವ ಕೆಲಸ ಮಾಡುತ್ತಾರೆ.
ಟೈರ್ 1 ಮತ್ತು ಟೈರ್ 2 ನಗರಗಳಲ್ಲಿ ಶೇ 26ರಷ್ಟು ಮಹಿಳೆಯರು ಆನ್ಲೈನ್ ಮೂಲಕ ಸಂಗಾತಿಯನ್ನು ಪಡೆದಿದ್ದಾರೆ. ಇವು ಹೆಚ್ಚಿನ ನಿರಾಕರಣೆ ಮತ್ತು ಸವಾಲು ಹೊಂದಿಲ್ಲ. 30 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಶೇ 13ರಷ್ಟು ಮಹಿಳೆಯರು ತಮಗಿಂತ ಹಿರಿಯ ಪುರಷರಿಂದ ನಿರಾಕರಣೆ ಮತ್ತು ಸವಾಲನ್ನು ಅನುಭವಿಸಿದ್ದಾರೆ ಎಂದು ಅಧ್ಯಯನ ಹೇಳುತ್ತದೆ.
22ರಿಂದ 33 ವಯೋಮಾನದ ಶೇ 39ರಷ್ಟು ಮಹಿಳೆಯರು ಆನ್ಲೈನ್ ಡೇಟಿಂಗ್ ತಾಣಗಳು ಮಹಿಳಾ ಸ್ನೇಹಿಯಾಗಿದೆ ಎಂದಿದ್ದಾರೆ. ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಆನ್ಲೈನ್ನಲ್ಲಿ ಸುರಕ್ಷತಾ ವೈಶಿಷ್ಟ ಮತ್ತು ಅಪ್ಗ್ರೇಡ್ ಸೌಲಭ್ಯ ಹೊಂದಿದ್ದಾರೆ.
ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಆ್ಯಪ್ಗಳಿಂದ 15 ನಿಮಿಷ ದೂರವಿದ್ರೆ ಆರೋಗ್ಯ ವೃದ್ಧಿ!