ETV Bharat / sukhibhava

ಔಷಧೀಯ ಗುಣಗಳ ಆಗರ ವೀಳ್ಯದೆಲೆ..ಇದರ ಮಹತ್ವಗಳೇನು? - ವೀಳ್ಯದೆಲೆಯ ಮಹತ್ವ

ವೀಳ್ಯದೆಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ನೀರು, ಪ್ರೋಟೀನ್, ಕೊಬ್ಬು, ಖನಿಜ, ಫೈಬರ್, ಕ್ಲೋರೊಫಿಲ್, ಕಾರ್ಬೋಹೈಡ್ರೇಟ್, ನಿಕೋಟಿನ್ ಆಮ್ಲ, ವಿಟಮಿನ್ ಸಿ, ವಿಟಮಿನ್ ಎ, ರಿಬೋಫ್ಲಾವಿನ್, ಸಾರಜನಕ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಅಯೋಡಿನ್, ಕ್ಯಾಲೊರಿಗಳು, ಇತ್ಯಾದಿ ಪೋಷಕಾಂಶಗಳನ್ನು ವೀಳ್ಯದೆಲೆ ಹೊಂದಿದೆ.

10-amazing-health-benefits-of-betel-leaf

author img

By

Published : May 27, 2021, 5:09 PM IST

ಹೈದರಾಬಾದ್: ಊಟದ ನಂತರ ಪಾನ್ ಅಥವಾ ವೀಳ್ಯದೆಲೆ ತಿನ್ನುವುದು ಭಾರತೀಯ ಪದ್ಧತಿಗಳಲ್ಲೊಂದು. ಪ್ರತಿ ಭಾರತೀಯ ವಿವಾಹ ಅಥವಾ ಅದ್ದೂರಿ ಭೋಜನ ಕೂಟದಲ್ಲಿ ಎಲೆ ಅಡಕೆ ಅತ್ಯಗತ್ಯವಾಗಿರುತ್ತದೆ. ಏಕೆಂದರೆ ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುತ್ತದೆ ಎಂಬ ಕಾರಣಕ್ಕೆ ಪಾನ್​ ಹಾಕುವುದು ರೂಢಿಯಲ್ಲಿದೆ.

ಪಾನ್​ನ ಮುಖ್ಯ ಘಟಕಾಂಶವಾಗಿರುವ ವೀಳ್ಯದೆಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ವೀಳ್ಯದೆಲೆ ಪಿಪೆರೇಸಿ (Piperaceae) ಕುಟುಂಬಕ್ಕೆ ಸೇರಿದ್ದು, ಇದನ್ನು ಸಸ್ಯಶಾಸ್ತ್ರೀಯವಾಗಿ ಪೈಪರ್ ಬೆಟೆಲ್ ಎಂದು ಕರೆಯಲಾಗುತ್ತದೆ. ಇದು ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿ ಇದು ಕಾರ್ಯನಿರ್ವಹಿಸುತ್ತದೆ.

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್​ನ (ಎನ್‌ಸಿಬಿಐ) ಸಂಶೋಧನಾ ಲೇಖನದ ಪ್ರಕಾರ, ವಿಳ್ಯದೆಲೆಗಳು ಡಿಟಾಕ್ಸಿಫೈಯರ್ ಆಗಿ ಕಾರ್ಯನಿರ್ವಹಿಸುತ್ತವೆ. ಅಂದರೆ ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ, ನಿಯಮಿತವಾಗಿ ಇವುಗಳನ್ನು ಸೇವಿಸುವುದು ಬಾಯಿಯ ಕಾಯಿಲೆಗಳನ್ನು ನಿವಾರಿಸಲು ಮತ್ತು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ರೋಗ ನಿರೋಧಕ ಶಕ್ತಿ ವೃದ್ಧಿಸಲು ಮತ್ತು ಹೃದಯದ ಆರೋಗ್ಯಕ್ಕೂ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಇದರ ಜೊತೆಗೆ, ವಿಳ್ಯದೆಲೆ ಉತ್ಕರ್ಷಣ ನಿರೋಧಕ, ಆಂಟಿಡಿಯಾಬೆಟಿಕ್, ಉರಿಯೂತ ನಿವಾರಕ, ಆಂಟಿಕ್ಯಾನ್ಸರ್ ಮತ್ತು ಆಂಟಿಅಲ್ಸರ್ ಗುಣಗಳನ್ನು ಹೊಂದಿವೆ. ತಲೆನೋವು, ಕಣ್ಣಿನ ಸಮಸ್ಯೆ, ಕಿವಿ, ಬಾಯಿ ರೋಗಗಳು ಮತ್ತು ಮಕ್ಕಳಲ್ಲಿ ಶೀತ ನಿವಾರಣೆಗೆ ವೀಳ್ಯದೆಲೆಯ ಬಳಕೆಯು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಇದು ಕೆಮ್ಮು, ಶೀತ, ಹೃದಯದ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ವೀಳ್ಯದೆಲೆಯಲ್ಲಿರುವ ಪೋಷಕಾಂಶಗಳೆಂದರೆ, ನೀರು, ಪ್ರೋಟೀನ್, ಕೊಬ್ಬು, ಖನಿಜ, ಫೈಬರ್, ಕ್ಲೋರೊಫಿಲ್, ಕಾರ್ಬೋಹೈಡ್ರೇಟ್, ನಿಕೋಟಿನ್ ಆಮ್ಲ, ವಿಟಮಿನ್ ಸಿ, ವಿಟಮಿನ್ ಎ, ರಿಬೋಫ್ಲಾವಿನ್, ಸಾರಜನಕ, ರಂಜಕ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಅಯೋಡಿನ್, ಕ್ಯಾಲೊರಿಗಳು, ಇತ್ಯಾದಿ. ಇವುಗಳ ಸೇವನೆಯು ಅನೇಕ ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ:

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ವೀಳ್ಯದೆಲೆಯನ್ನು ಅಗಿಯುವುದರಿಂದ ನಮ್ಮ ಲಾಲಾರಸ ಗ್ರಂಥಿಗಳು ಹೆಚ್ಚು ಸಕ್ರಿಯವಾಗುತ್ತವೆ, ಇದು ಜೀರ್ಣಕ್ಕೆ ಸಹಾಯ ಮಾಡುವ ಹೆಚ್ಚಿನ ಸಂಖ್ಯೆಯ ಕಿಣ್ವಗಳನ್ನು ಉತ್ಪಾದಿಸುತ್ತದೆ. ಈ ಎಲೆಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಇದು ಜೀರ್ಣಾಂಗ ವ್ಯವಸ್ಥೆಯಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್ ಮತ್ತು ವಿಷವನ್ನು ತೆಗೆದುಹಾಕುತ್ತದೆ. ಇದು ಹೊಟ್ಟೆಯಲ್ಲಿ ಪಿಹೆಚ್ ಅಸಮತೋಲನದಿಂದ ಉಂಟಾಗುವ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಯಂತ್ರಿಸುತ್ತದೆ. ಜೊತೆಗೆ ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದು ಹಸಿವನ್ನು ಹೆಚ್ಚಿಸಲು ಕೂಡಾ ಸಹಾಯ ಮಾಡುತ್ತದೆ.

ದಂತ ಆರೋಗ್ಯಕ್ಕೆ ಪ್ರಯೋಜನಕಾರಿ:

ಪಾನ್ ಅನ್ನು ಸಾಮಾನ್ಯವಾಗಿ ಮೌತ್ ಫ್ರೆಶ್ನರ್ ಎಂದು ಕರೆಯಲಾಗುತ್ತದೆ. ಇದು ಬಾಯಿಯ ಕೆಟ್ಟ ವಾಸನೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಆದಾಗ್ಯೂ, ವೀಳ್ಯದೆಲೆಯ ಔಷಧೀಯ ಗುಣಗಳು ರೋಗಾಣುಗಳು, ಬ್ಯಾಕ್ಟೀರಿಯಾಗಳು ಮತ್ತು ಬಾಯಿಯಲ್ಲಿ ರೋಗಗಳನ್ನು ಉಂಟುಮಾಡುವ ಇತರ ರೋಗಕಾರಕಗಳಿಂದ ರಕ್ಷಿಸುತ್ತವೆ. ವೀಳ್ಯದೆಲೆಯನ್ನು ಅಗಿಯುವುದರಿಂದ ಹಲ್ಲಿನ ಕೊಳೆತ ಸಮಸ್ಯೆಗಳಿಗೂ ಪರಿಹಾರವಾಗುತ್ತದೆ ಮತ್ತು ಒಸಡುಗಳು ಹಾಗೂ ಹಲ್ಲುಗಳನ್ನು ಬಲಪಡಿಸುತ್ತದೆ. ಇದು ಬಾಯಿಯಲ್ಲಿ ರಕ್ತಸ್ರಾವವಾಗುವುದಕ್ಕೂ ಪರಿಹಾರ ನೀಡುತ್ತದೆ.

ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ:

ಕೆಲವು ಉಸಿರಾಟದ ತೊಂದರೆಗಳನ್ನು ನಿವಾರಿಸಲು ವೀಳ್ಯದೆಲೆ ಸಹಾಯ ಮಾಡುತ್ತವೆ. ಕೆಮ್ಮು, ಎದೆ ಅಥವಾ ಶ್ವಾಸಕೋಶದ ಸೋಂಕು ಮತ್ತು ಆಸ್ತಮಾದಂತಹ ಸಮಸ್ಯೆಗಳಿಗೆ ಇದು ತುಂಬಾ ಸಹಾಯಕವಾಗಿದೆ. ಕಫವನ್ನು ನಿವಾರಿಸಲು ಸಹಾಯ ಮಾಡುತ್ತದೆ. ವೀಳ್ಯದೆಲೆ ಹಾಕಿ ಕುದಿಸಿದ ನೀರಿನಿಂದ ಬಾಯಿಯನ್ನು ಗಾರ್ಗಿಲ್ ಮಾಡುವುದು ಗಂಟಲಿನ ಸಮಸ್ಯೆಗಳಿಗೆ ಒಳ್ಳೆಯದು.

ಉತ್ತಮ ಮೂತ್ರವರ್ಧಕ:

ವೀಳ್ಯದೆಲೆಯನ್ನು ಉತ್ತಮ ಮೂತ್ರವರ್ಧಕ ಎಂದು ಪರಿಗಣಿಸಲಾಗುತ್ತದೆ. ಇದರ ಸೇವನೆಯು ಕಡಿಮೆ ಮೂತ್ರ ವಿಸರ್ಜನೆ ಮತ್ತು ಇತರ ಮೂತ್ರದ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಪರಿಹಾರ ನೀಡುತ್ತದೆ.

ತೂಕ ಕಡಿಮೆ ಮಾಡುತ್ತದೆ:

ವೀಳ್ಯದೆಲೆ ನಾರಿನಂಶ ಹೊಂದಿರುವುದರಿಂದ ಬೊಜ್ಜು ಕಡಿಮೆ ಮಾಡಲು ಸಹಕಾರಿಯಾಗಿದೆ. ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ:

ವೀಳ್ಯದೆಲೆಯ ಸಾರವು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಕ್ಯಾನ್ಸರ್ ಬೆಳವಣಿಗೆಯಾಗದಂತೆ ತಡೆಯುತ್ತದೆ ಮತ್ತು ದೇಹದಲ್ಲಿ ಗೆಡ್ಡೆಗಳು ಬೆಳೆಯದಂತೆ ತಡೆಯುತ್ತದೆ.

ದೇಹದ ವಾಸನೆಯನ್ನು ತಡೆಯುತ್ತದೆ:

ಬಾಯಿಯಿಂದ ದುರ್ವಾಸನೆ ಮಾತ್ರವಲ್ಲ, ವೀಳ್ಯದೆಲೆಯ ರಸವು ದೇಹದ ವಾಸನೆಯ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುತ್ತದೆ. ದೇಹದ ವಾಸನೆಯನ್ನು ತೊಡೆದುಹಾಕಲು ವೀಳ್ಯದೆಲೆಯನ್ನು ನೀರನ್ನು ಕುದಿಸಿ, ತಣ್ಣಗಾದ ಬಳಿಕ ಅದರಲ್ಲಿ ಸ್ನಾನ ಮಾಡಬೇಕು. ಅಥವಾ ಸ್ನಾನ ಮಾಡುವ ಮೊದಲು ನೀವು ವೀಳ್ಯದೆಲೆಗಳನ್ನು ನೀರಿನಲ್ಲಿ ನೆನೆಸಬಹುದು. ಇದು ದೇಹದ ವಾಸನೆಯನ್ನು ತಡೆಗಟ್ಟುತ್ತದೆ.

ಬಾಯಿ ಹುಣ್ಣು ನಿವಾರಣೆ:

ವೀಳ್ಯದೆಲೆಯಲ್ಲಿ ಆಂಟಿಅಲ್ಸರ್ ಗುಣಲಕ್ಷಣಗಳಿವೆ ಎಂದು ಸಂಶೋಧನೆಗಳು ತೋರಿಸಿವೆ. ಇದು ಬಾಯಿಯ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

ಊತದಿಂದ ಪರಿಹಾರ ನೀಡುತ್ತದೆ:

ವೀಳ್ಯದೆಲೆಯಿಂದ ತೆಗೆದ ಎಣ್ಣೆಯಲ್ಲಿ ಫೆನಾಲ್ ಎಂಬ ರಾಸಾಯನಿಕ ಕಂಡು ಬರುತ್ತದೆ. ಇದನ್ನು ಮೀಥೈಲ್ ಎಂದೂ ಕರೆಯುತ್ತಾರೆ ಮತ್ತು ಇದು ನಂಜುನಿರೋಧಕ ಗುಣಗಳನ್ನು ಹೊಂದಿರುತ್ತದೆ. ಸಂಧಿವಾತದಿಂದ ಉಂಟಾಗುವ ಕೀಲುಗಳಲ್ಲಿನ ಉರಿಯೂತ ಅಥವಾ ಊತವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.

ಮಧುಮೇಹಿಗಳಿಗೆ ಪ್ರಯೋಜನಕಾರಿ:

ಆಂಟಿಡಯಾಬೆಟಿಕ್ ಗುಣಲಕ್ಷಣಗಳನ್ನು ವೀಳ್ಯದೆಲೆಯಲ್ಲಿ ಕಾಣಬಹುದು. ಅದಕ್ಕಾಗಿಯೇ ಅವುಗಳನ್ನು ಮಧುಮೇಹ ಎದುರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.