ಯಾದಗಿರಿ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಗೆ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿದು ಬರುತ್ತಿದ್ದು ಜಿಲ್ಲಾಡಳಿತ ಕೃಷ್ಣ ನದಿಯ ಮೇಲೆ ಹದ್ದಿನ ಕಣ್ಣಿಟ್ಟಿದೆ. ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ 4,74,240 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಕೃಷ್ಣ ನದಿಗೆ ನೀರು ಹರಿದು ಬರುತ್ತಿರುವ ಹಿನ್ನಲೆ ಸರಪೂರ ವಿಧಾನಸಭಾ ಕ್ಷೇತ್ರದ ನದಿ ಪಾತ್ರದ ಗ್ರಾಮಗಳಾದ ನೀಲಕಂಠರಾಯನ ಗಡ್ಡಿ, ಶೆಳ್ಳಗಿ , ಸೂಗುರು, ಹೆಮ್ಮಡಗಿ, ಚೌಡಾಪುರ, ಹಾವಿನಾಳ, ಹೇಮನೂರ, ದೇವಾಪುರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕೃಷ್ಣ ನದಿಯು ಉಕ್ಕಿ ಹರಿಯುವ ಹಿನ್ನೆಲೆ ಜಿಲ್ಲಾಡಳಿತ ವತಿಯಿಂದ ಸುರಪೂರ ಎಪಿಎಂಸಿ ಆವರಣದಲ್ಲಿ ಪರಿಹಾರ ಕೆಂದ್ರ ತೆರೆಯಲಾಗಿದೆ. ಇನ್ನೂ ಈ ಮಧ್ಯೆ ಸುರಪುರ ತಾಲೂಕ ನ್ಯಾಯಧೀಶ ತಿಂತಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳವಂತೆ ಸಹಾಯಕ ಆಯುಕ್ತ ಶಂಕರ ಗೌಡಗೆ ಸೂಚನೆ ನೀಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಭೇಟಿ:
ಯಾದಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಹಳ್ಳಿಗಳಿಗೆ ಭೇಟಿ ನೀಡಿದ ಶಾಸಕ ವೆಂಕಟರೆಡ್ಡಿ, ಕೃಷ್ಣ ನದಿಯ ಪ್ರವಾಹದ ಬಗ್ಗೆ ಪರಿಶೀಲನೆ ನಡೆಸಿ, ಸಂತ್ರಸ್ಥರ ಜೊತೆ ಕುಶಲೋಪರಿ ವಿಚಾರಿಸಿದರು. ಈ ವೇಳೆ ಶಹಾಪುರ ತಹಸೀಲ್ದಾರ್ ಸಂಗಮೇಶ ಜಿಡಗ ಅವರಿಗೆ ಸೂಕ್ತ ನಿರ್ದೇಶನ ನೀಡಿದ ಶಾಸಕ ವೆಂಕಟರೆಡ್ಡಿ, ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಇನ್ನೂ ಜಿಲ್ಲಾಡಳಿತದಿಂದ ಪ್ರವಾಹ ಸಂತ್ರಸ್ತರಿಗೆ ಗಂಜಿ ಕೆಂದ್ರಗಳನ್ನು ತೆರಯಲಾಗಿದ್ದು, ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಶಾಸಕ ವೆಂಕಟರೆಡ್ಡಿಯವರಿಗೆ ಶಹಾಪುರ ತಹಸೀಲ್ದಾರ್ ಸಂಗಮೇಶ ತಿಳಿಸಿದರು.