ETV Bharat / state

ಪುಟಪಾಕ-ಚಿತ್ತಪೂರ ರಾಜ್ಯ ಹೆದ್ದಾರಿ ದುರಸ್ತಿ ಮಾಡದ ಅಧಿಕಾರಿಗಳು: ಗ್ರಾಮಸ್ಥರಿಂದ ಹಿಡಿಶಾಪ - ಚಪೆಟ್ಲಾ ಗ್ರಾಮದ ಬಳಿಯ ರಸ್ತೆ

ಮಳೆಗಾಲ ಬಂದರೆ ರಸ್ತೆ ಸಂಚಾರವೇ ಬೇಡ ಎನ್ನುವಂತಾಗಿದ್ದು, ಈ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಕ್ರಮ ಜರುಗಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Puppaka- Chittapura State Highway Disaster Officer People's Suffer
ಪುಟಪಾಕ- ಚಿತ್ತಪೂರ ರಾಜ್ಯ ಹೆದ್ದಾರಿ ದುರಸ್ಥಿ ಮಾಡದ ಅಧಿಕಾರಿಗಳು, ಗ್ರಾಮಸ್ಥರಿಂದ ಹಿಡಿಶಾಪ..!
author img

By

Published : Sep 5, 2020, 12:06 PM IST

Updated : Sep 5, 2020, 5:57 PM IST

ಗುರುಮಠಕಲ್: ತಾಲೂಕಿನಲ್ಲಿ ಕಳೆದ ಎರಡು ವರ್ಷದ ಹಿಂದೆ ನಿರ್ಮಾಣಗೊಂಡಿರುವ ರಾಜ್ಯ ಹೆದ್ದಾರಿಗಳು ಎಲ್ಲೆಂದರಲ್ಲಿ ಹಾಳಾಗುತ್ತಿವೆ. ಚಪೆಟ್ಲಾ ಗ್ರಾಮದ ಬಳಿಯ ರಸ್ತೆ ಅಷ್ಟೇ ಅಲ್ಲದೆ ಇದೀಗ ಗಾಜರಕೋಟ ಹತ್ತಿರದ ರಸ್ತೆಯೂ ಹಾಳಾಗಿ ಹೋಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಪುಟಪಾಕ-ಚಿತ್ತಪೂರ ರಾಜ್ಯ ಹೆದ್ದಾರಿ ದುರಸ್ತಿ ಮಾಡದ ಅಧಿಕಾರಿಗಳು: ಗ್ರಾಮಸ್ಥರಿಂದ ಹಿಡಿಶಾಪ

ಕೋಟಿಗಟ್ಟಲೆ ಅನುದಾನದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡದೆ ಕೊಕ್ಕೆ ಹಾಕಲಾಗಿದೆ. ಅನುದಾನ ರಸ್ತೆಗೋ ಅಥವಾ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಜೇಬಿಗೋ ಎಂಬ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದು ಅಪಸ್ವರಕ್ಕೆ ಕಾರಣವಾಗಿದೆ. ಒಂದರ ಹಿಂದೆ ಒಂದರಂತೆ ಹೆದ್ದಾರಿ ರಸ್ತೆಗಳು ಹಾಳಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಹಿಮಾಲಪೂರ, ಹಿಮಾಲಪೂರ ತಾಂಡಾ, ಚಿಂತನಪಲ್ಲಿ, ಯದ್ಲಾಪೂರ ರಾಂಪೂರ, ಶಿವಪೂರ, ಕೋಟಗೇರಾ, ಗಾಜರಕೋಟ, ಹೊಸಳ್ಳಿ, ಮೋಟನಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ಯಾರೊಬ್ಬರೂ ರಸ್ತೆ ದುರಸ್ತಿಗೆ ಬಗ್ಗೆ ಯೋಚಿಸಿಲ್ಲ. ಯಾವ ಪ್ರದೇಶಕ್ಕೆ ಉತ್ತಮ ಸಾರಿಗೆ ಸಂಪರ್ಕ ಸಾಧ್ಯವಿಲ್ಲವೋ ಅಂತಹ ಪ್ರದೇಶಗಳು ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿಯುವುದು ಬಹುತೇಕ ಖಚಿತ. ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಬೇಕು ಎನ್ನುತ್ತಾರೆ ಸ್ಥಳೀಯರು.

5 ಕಿ.ಮೀ. ರಸ್ತೆಯನ್ನು ಕ್ರಮಿಸಲು ಸಾಮಾನ್ಯವಾಗಿ 10ರಿಂದ 15 ನಿಮಿಷದ ಸಮಯ ತಗುಲುತ್ತದೆ. ಆದರೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ನಮ್ಮೂರಿಂದ 5 ಕಿ.ಮೀ. ದೂರದ ಗುರುಮಠಕಲ್ ಪಟ್ಟಣಕ್ಕೆ ಬರಲು ಬರೋಬ್ಬರಿ 30 ನಿಮಿಷ ಬೇಕಾಗುತ್ತದೆ ಎನ್ನುತ್ತಾರೆ ಸವಾರ ಮಲ್ಲಿಕಾರ್ಜುನ.

ಮಳೆಗಾಲ ಬಂದರೆ ರಸ್ತೆ ಸಂಚಾರವೇ ಬೇಡ ಎನ್ನುವಂತಾಗಿದ್ದು, ಈ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ. ಅಪಘಾತದ ಸ್ಥಳಕ್ಕೆ ಆಂಬ್ಯುಲೆನ್ಸ್ ಬರುವುದು ಕಷ್ಟಕರವಾಗಿದೆ. ಗರ್ಭಿಣಿಯರನ್ನು, ರೋಗಿಗಳನ್ನು, ಮುದುಕರನ್ನು ಹಳ್ಳಿಗಳಿಂದ ಪಟ್ಟಣಕ್ಕೆ ತರುವುದು ಸಾಹಸದ ಕೆಲಸದಂತಾಗಿದೆ. ರಾಜ್ಯ ಹೆದ್ದಾರಿಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಕ್ರಮ ಜರುಗಿಸದಿದ್ದರೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹೆದ್ದಾರಿಯೂ ಹೊರತಾಗಿಲ್ಲ: ವಿಜಯಪುರ-ಹೈದರಾಬಾದ್ ರಾಜ್ಯ ಹೆದ್ದಾರಿಯೂ ಗುಂಡಿಗಳಿಂದ ಮುಕ್ತವಾಗಿಲ್ಲ. ಬೋರಬಂಡಾ, ಧರ್ಮಾಪೂರ, ಬೆಟ್ಟದಹಳ್ಳಿ, ಚಿನ್ನಾಕರ ಗುಜನುರ, ಕಂದಕೂರ, ಅರಕೇರಾ(ಕೆ) ಗ್ರಾಮಗಳ ಹತ್ತಿರದಲ್ಲಿ ಗುಂಡಿಗಳು ಬಿದ್ದಿದ್ದು, ಹೆದ್ದಾರಿಯೂ ಸುಗಮ ಸಂಚಾರಕ್ಕೆ ಅನುಕೂಲವಾಗಿಲ್ಲ.

Last Updated : Sep 5, 2020, 5:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.