ಯಾದಗಿರಿ: ಹಾಸ್ಟಲ್ನಲ್ಲಿ ಚಪಾತಿ ತಿನ್ನುವ ವಿಚಾರಕ್ಕೆ ಆರಂಭವಾದ ಗಲಾಟೆಯು ವಿದ್ಯಾರ್ಥಿ ಸಹೋದರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಗುರುಮಠಕಲ್ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ.
ಬೋರಬಂಡ ತಾಂಡದ ನಿವಾಸಿ ಮೋಹನ್ ಎಂಬುವವರು ಕೊಲೆಯಾದ ಯುವಕ. ಈತ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಆಗಿದ್ದಾನೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಚಾಕುವಿನಿಮದ ಹಿರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಗೆ ನಡೆಸಲಾಗುತ್ತಿದೆ.
ಘಟನೆ ವಿವರ:
ಕೊಲೆಯಾದ ಮೋಹನ್ ತಮ್ಮ ರಾಜು, ಸರ್ಕಾರಿ ಪದವಿಪೂರ್ವ ಬಾಲಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ನಿಲಯದ ವಿದ್ಯಾರ್ಥಿ. ಕಳೆದ ರಾತ್ರಿ ರಾಜು ಮತ್ತು ಹಾಸ್ಟೆಲ್ನ ಕೆಲ ವಿದ್ಯಾರ್ಥಿಗಳ ನಡುವೆ ಚಪಾತಿ ತಿನ್ನುವ ವಿಚಾರದಲ್ಲಿ ಜಗಳ ಆಗಿದೆಯಂತೆ.
ಇದೇ ವಿಷಯವಾಗಿ ಮೋಹನ್ ಹಾಸ್ಟೆಲ್ಗೆ ಹೋಗಿ ಜಗಳ ಮಾಡಿದ್ದಾನೆ. ಮೋಹನ್ ಜೊತೆ ಜಗಳವಾಡಿದ ವಿದ್ಯಾರ್ಥಿಗಳು ತಮ್ಮ ಹೊರಗಿನ ಸ್ನೇಹಿತರಿಗೆ ತಿಳಿಸಿದ್ದಾರೆ. ಇವರು ಮಧ್ಯಾಹ್ನ ಮೋಹನ್ನ್ನು ಕರೆದು ನಿನ್ನೆಯ ವಿಚಾರವಾಗಿ ಜಗಳ ಮಾಡಿಕೊಂಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಗಲಾಡ ಮಾಡಿದವರೇ ಚಾಕುನಿಂದ ಹಿರಿದು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.