ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರಿಂದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ,ಪೊಲೀಸ್ ಸಿಬ್ಬಂದಿಗೆ ಪುಷ್ಪವನ್ನು ಹಾಕಿ ಗೌರವ ಸಲ್ಲಿಸಲಾಯಿತು.
ಲಾಕ್ಡೌನ್ ಆರಂಭವಾದ ದಿನದಿಂದ ಈವರೆಗೆ ಜೀವದ ಹಂಗು ತೊರೆದು ಕೊವೀಡ್-19 ವಿರುದ್ಧ ಹಗಲಿರುಳು ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ಪುಷ್ಪ ಅರ್ಪಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕರು, ಬೆಂಗಳೂರು ಹಾಗೂ ಮೊದಲಾದ ಭಾಗದಿಂದ ಊರಿಗೆ ಬಂದ ಜನರ ಬಗ್ಗೆ ಎಚ್ಚರದಿಂದ ಇರಬೇಕು, ಇಂತವರ ಬಗ್ಗೆ ಆಶಾಕಾರ್ಯಕರ್ತೆಯರಿಗೆ ಗ್ರಾಮಸ್ಥರು ಮಾಹಿತಿ ನೀಡಬೇಕು, ಹಳ್ಳಿಯಲ್ಲಿ ಗುಂಪು ಗುಂಪಾಗಿ ಕುಳಿತುಕೊಳ್ಳದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದರು.