ETV Bharat / state

ಇದ್ದ ಪುಡಿಗಾಸು ಪ್ರವಾಹದ ಪಾಲಾಯ್ತು, ಬದುಕು ಬೀದಿಗೆ ಬಂತು: ಗರ್ಭಿಣಿಯ ಕಣ್ಣೀರ ಕಥೆ..!

ಮುದ್ದಾದ ಕಂದನ ನಿರೀಕ್ಷೆಯಲ್ಲಿರುವ ಗರ್ಭಿಣಿವೋರ್ವಳು ಪ್ರವಾಹದಿಂದ ತಮ್ಮ ಬದುಕಿನಲ್ಲಾದ ಕರಾಳತೆಯನ್ನು ಈಟಿವಿ ಭಾರತ ಎದುರು ಬಿಚ್ಚಿದ್ದಾಲೆ. ಹೆರಿಗೆ ಸಮಯಕ್ಕೆಂದು ಕೂಡಿಟ್ಟಿದ್ದ ಪುಡಿಗಾಸು ಮಳೆ ನೀರಲ್ಲಿ ಕೊಚ್ಚಿ ಹೋಗಿದೆ ಎನ್ನುತ್ತಲೇ ಮಹಿಳೆಯ ಕಣ್ಣಾಲೆಗಳು ತುಂಬಿಬಂದವು.

ತುಂಬು ಗರ್ಭಿಣಿಯ ಕಣ್ಣೀರು
author img

By

Published : Aug 16, 2019, 10:54 AM IST

ಯಾದಗಿರಿ: 'ನಾನು ತುಂಬು ಗರ್ಭಿಣಿ ಅದೇನ್ರಿ ಸರ್​, ಆಸ್ಪತ್ರೆಗೆ ಹೋಗಾಕ್​ ದುಡ್ಡಿಲ್ಲ. ಇದ್ದ ಹಣವೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗೈತಿ. ಈಗ ನಾನು ಏನ್​ ಮಾಡ್ಬೇಕು? ನನಗ್ಯಾರು ದಿಕ್ಕು?' ಹೀಗೆ ಪ್ರವಾಹದ ಭೀಕರತೆಯನ್ನು ತೆರೆದಿಟ್ಟ ತುಂಬು ಗರ್ಭಿಣಿ ಕವಿತಾರ ಕಣ್ಣೀರಿನ ಕಥೆ ಎಂತ ಕಲ್ಲು ಹೃದಯದವರನ್ನು ಕರಗಿಸುವಂತಿದೆ.

ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸಿದ ಹಿನ್ನೆಲೆ ಗೆದ್ದಲಮರಿ ತಾಂಡ ಜಲದಿಗ್ಭಂಧನಕ್ಕೆ ಒಳಗಾಗಿತ್ತು. ತಾಂಡದ ಜನರನ್ನು ಸ್ಥಳಾಂತರಿಸಲಾಗಿತ್ತಾದರೂ, ಮನೆಗಳು-ಗುಡಿಸಲುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇದರಲ್ಲಿ ಗರ್ಭಿಣಿ ಕವಿತಾ ಸಹ ಸೂರು ಕಳೆದುಕೊಂಡಿದ್ದಾರೆ.

ತುಂಬು ಗರ್ಭಿಣಿಯ ಕಣ್ಣೀರ ಕಥೆ

ನಿರಾಶ್ರಿತರ ಕೇಂದ್ರದಲ್ಲಿ ನಮಗೆ ಊಟ, ಬಟ್ಟೆ ಕೊಡ್ತೀರಿ. ಸ್ವಲ್ಪ ದಿನದ ನಂತರ ನಮ್ಮನ್ನು ಮನೆಗೆ ಕಳಿಸ್ತೀರಿ. ಆದ್ರೆ ನಮಗೆ ಮನೆಯಿಲ್ಲ, ಇದ್ದ ಗುಡಿಸಲು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಜಮೀನು ಸಹ ಪ್ರವಾಹಕ್ಕೆ ಸಿಲುಕಿದೆ. ತಂದೆ-ತಾಯಿ ಇಲ್ಲದ ನನಗೆ ಹೆರಿಗೆ ನೋವು ಕಾಣಿಸಿಕೊಂಡರೆ ಯಾರು ದಿಕ್ಕು ಎಂದು ಕವಿತಾ ಕಣ್ಣೀರಿಡುತ್ತಿದ್ದಾಳೆ.

ಇನ್ನು ಗ್ರಾಮ ಪಂಚಾಯತ್​ನವರು ಮನೆ ನೀಡಿಲ್ಲ. ಜಾಗ ಕೂಡ ಕೊಟ್ಟಿಲ್ಲ. ಅಧಿಕಾರಿಗಳು ಲಂಚಕ್ಕಾಗಿ ಸತಾಯಿಸುತ್ತಿದ್ದಾರೆ ಎಂದು ಸಂತ್ರಸ್ತೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಯಾದಗಿರಿ : ನಾನು ತುಂಬು ಗರ್ಭಿಣಿಯಾದ್ರೂ ಕೂಡ ಹಾಸ್ಪಿಟಲ್ಗೆ ತೋರಿಸಿಕೊಳ್ಳಕ್ಕೆ ದುಡ್ಡು ಇಲ್ಲ, ಇರೋ ದುಡ್ಡು ನೀರಲ್ಲಿ ಕೊಚ್ಚಿ ಹೋಗಿದೆ .ಈಗ ನಾನು ಏನು ಮಾಡಬೇಕು ? ಹೇಗೆ ತೋರಿಸಿಕೊಬೇಕು? ಎಂದು ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ ಸಂತ್ರಸ್ಥೆ ತುಂಬು ಗರ್ಭಿಣಿ ಕವಿತಾ ಸರಕಾರಕ್ಕೆ ಪ್ರಶ್ನಿಸಿದ್ದಾಳೆ.

ಜಿಲ್ಲೆಯ ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ ಕೃಷ್ಣ ನದಿಗೆ ನೀರು ಹರಿಸಿದ ಹಿನ್ನಲೆ ಗೆದ್ದಲಮರಿ ತಾಂಡವು ಸಂಪೂರ್ಣವಾಗಿ ಜಲದಿಗ್ಭಂಧನವಾಗಿತ್ತು. ಈ ಹಿನ್ನಲೆ ತಾಂಡ ಜನರು ಅಪಾರ‌ಪ್ರಮಾಣದ ಆಸ್ತಿ ಪಾಸ್ತಿ ಕಳೆದುಕೊಂಡಿದ್ದಾರೆ.

ಈ ಮಧ್ಯೆ ಪ್ರವಾಹ ಪೀಡಿತ ಸಂತ್ರಸ್ಥೆ ತುಂಬು ಗರ್ಭಿಣಿ ಸರಕಾರಕ್ಕೆ ಚಾಟಿ ಬೀಸಿ, ನಮಗೆ ಊಟ ಬಟ್ಟೆ ಕೊಡುತ್ತಿರಿ. ಸ್ವಲ್ಪ ದಿನವಾದ ನಂತ್ರ ನಮ್ಮನ್ನು ಮನೆಗೆ ಕಳಿಸುತ್ತಿರಿ. ಆದ್ರೆ ನನ್ಗೆ ಮನೆಯಿಲ್ಲ , ಗುಡಿಸಲೆ ನನ್ನ ಮನೆಯಾಗಿತ್ತು, ಈಗ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.

Body:ದುಡಿಯಲಿಕೆ ಎರಡು ಎಕ್ರ ಜಮೀನು ನನ್ಗೆ ಆಸರೆಯಾಗಿತ್ತು. ಅದೂ ಕೂಡ ನೀರಲ್ಲಿ ಕೊಚ್ಚಿ ಹೋಗಿದೆ. ಅದೂ ಬೇರೆ ನಾನು ಗರ್ಭಿಣಿ , ನನ್ನಗೆ ನೋವು ಪ್ರಾರಂಭವಾದ್ರೆ ಇರಲಿಕೆ ಮನೆಯಿಲ್ಲ , ನನಗೆ ತಂದೆ ತಾಯಿ ಇಲ್ಲ. ನಾನು ಏನು ಮಾಡ್ಲಿ ಎಂದು ಕಣ್ಣಿರಿಡುತ್ತಾ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.

Conclusion:ಪಂಚಾಯತಿಯವರು ಒಂದು ಮನೆ ಕೋಡ ನೀಡಿಲ್ಲ. ಜಾಗ ಕೂಡ ಕೊಟ್ಟಿಲ್ಲ. ಅಧಿಕಾರಿ ದುಡ್ಡು ಕೊಡಿ ಕೋಡಿತ್ತಿನ ಅಂತ ಹೇಳ್ತಾನೆ ಆದ್ರೆ ನನ್ನ ಹತ್ತಿರ ದುಡ್ಡಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸುತ್ತಾಳ ಸಂತ್ರಸ್ಥೆ ಕವಿತಾ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.