ETV Bharat / state

ಕಳ್ಳತನ ಆರೋಪ: ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

author img

By

Published : Sep 12, 2019, 6:29 PM IST

ಹಾಸ್ಟೆಲ್​ ಅಡುಗೆ ಸಹಾಯಕಿಯ ಮೊಬೈಲ್ ಕಳ್ಳತನವಾಗಿದ್ದ ಹಿನ್ನೆಲೆ ಆರೋಪ ಎದುರಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮನೆ ಮುಂದೆ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಜಿಲ್ಲೆಯ ಶಹಾಪುರ ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳ್ಳತನ ಆರೋಪಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಯಾದಗಿರಿ: ಸ್ನೇಹಿತರ ಎದುರು ಕಳ್ಳತನ ಆರೋಪ ಎದುರಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮನೆ ಮುಂದೆ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಶಹಾಪುರ ತಾಲೂಕಿನ ಅರಳಹಳ್ಳಿ ಗ್ರಾಮದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವಳು ಎನ್ನಲಾಗಿದೆ.

ಕಳ್ಳತನ ಆರೋಪ: ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಕಲಬುರಗಿ ನಗರದ ಎನ್.ವಿ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಾಸವಿದ್ದಳು. ಹಾಸ್ಟೆಲ್​ ಅಡುಗೆ ಸಹಾಯಕಿಯೊಬ್ಬರ ಮೊಬೈಲ್ ಕಳ್ಳತನವಾಗಿತ್ತು. ಈ ವಿದ್ಯಾರ್ಥಿನಿಯೇ ಮೊಬೈಲ್ ಕದ್ದಿದ್ದಾಳೆ ಎಂದು ವಿದ್ಯಾರ್ಥಿಗಳ ಬಳಗದಲ್ಲಿ ಆರೋಪ ಕೇಳಿಬಂದಿತ್ತು. ನಾನು ಕಳ್ಳತನ ಮಾಡಿಲ್ಲ ಎಂದು ಆಕೆ ಹೇಳಿದ್ದಾಳೆ. ಆದ್ರೆ ಆಕೆಯ ಬ್ಯಾಗ್​​ನಲ್ಲಿ ಮೊಬೈಲ್​ ಪತ್ತೆಯಾಗಿತ್ತು ಎನ್ನಲಾಗಿದೆ.

ಬಳಿಕ ಈ ವಿಷಯವನ್ನ ಆಕೆ ಮನೆಗೆ ಹಿಂತಿರುಗಿ ತಂದೆಗೆ ತಿಳಿಸಿದ್ದಾಳೆ. ತಂದೆ ವಸತಿ ನಿಲಯದ ಮೇಲ್ವಿಚಾರಕರ ಜೊತೆ ಮಾತನಾಡಿ, ನಾನು ಮಗಳ ಜೊತೆ ಬಂದು ಸಮಸ್ಯೆ ಬಗೆಹರಿಸುವೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಮನೆ ಮುಂದಿರುವ ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಯಾದಗಿರಿ : ಕಳ್ಳತನದ ಆರೋಪದಡಿ ಸ್ವಾಭಿಮಾನಕ್ಕೆ ಬೆದರಿ ಶಾಲಾ ವಿದ್ಯಾರ್ಥಿನಿ ಮನೆ ಮುಂದೆಯಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಅರಳಹಳ್ಳಿ ಗ್ರಾಮದ ವಿದ್ಯಾರ್ಥಿನಿ ಲಕ್ಷ್ಮಿ ಟಣಕೆದಾರ ಕಳ್ಳತನದ ಆರೋಪಕ್ಕೆ ಅಂಜಿ ಸ್ನೇಹಿತರ ಸಮ್ಮುಖದಲ್ಲಿ ಮುಜಗರಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಲಬುರಗಿ ನಗರದ ಎನ್ ವಿ ಶಾಲೆಯಲ್ಲಿ ಲಕ್ಷ್ಮಿ ಟಣಕೆದಾರ ಒಂಬತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಸತಿ ನಿಲಯದಲ್ಲಿ ಲಕ್ಷ್ಮಿ ವಾಸವಿದ್ದಳು. ವಸತಿ ನಿಲಯಯದ ಅಡುಗೆ ಸಹಾಯಕಿ ಲಕ್ಷ್ಮಿ ನಾಗೆಂದ್ರನ ಮೊಬೈಲ್ ನಿಲಯದಲ್ಲಿ ಕಳ್ಳತನವಾಗಿತ್ತು. ವಿದ್ಯಾರ್ಥಿನಿ ಲಕ್ಷ್ಮಿ ಟಣಕೆದಾರ ಮೊಬೈಲ್ ಕಳ್ಳತನ ಮಾಡಲಾಗಿದೆ ಎಂದು ವಿದ್ಯಾರ್ಥಿಗಳ ಬಳಗದಲ್ಲಿ ಆರೋಪ ಕೇಳಿಬಂದಿತ್ತು. ವಿದ್ಯಾರ್ಥಿನಿ ಲಕ್ಷ್ಮಿ ನಾನು ಕಳ್ಳತನ ಮಾಡಿಲ್ಲ ಎಂದು ಸಮಜಾಯಿಸಿರುತ್ತಾಳೆ . ಆದ್ರೆ ಅದೆ ಸಂದರ್ಭದಲ್ಲಿ ಲಕ್ಷ್ಮೀ ಬ್ಯಾಗನಲ್ಲಿ ಮೊಬೈಲ ಪತ್ತೆ ಮಾಡಲಾಗಿತ್ತು.

Body:ಸ್ವಾಭಿಮಾನಕ್ಕೆ ಬೆದರಿ ಅಪಮಾನಕೊಂಡ ವಿದ್ಯಾರ್ಥಿನಿ ಶಹಾಪರ ತಾಲೂಕಿನ ಅರಳಹಳ್ಳಿ ಗ್ರಾಮದ ಮನೆಗೆ ಹಿಂತಿರುಗಿ ತಂದೆಗೆ ಮಲ್ಲಪ್ಪನಿಗೆ ತಿಳಿಸಿರುತ್ತಾಳೆ. ತಂದೆ ಮಲ್ಲಪ್ಪ ವಸತಿ ನಿಲಯದ ಮೇಲ್ವಿಚಾರಕ ಜೊತೆ ಮಾತನಾಡಿ ನಾನು ಮಗಳ ಜೊತೆ ಬಂದು ಸಮಸ್ಯೆ ಬಗೆಹರಿಸುವೆನು ಎಂದು ಹೇಳಿರುತ್ತಾನೆ.

Conclusion:ಆದ್ರೆ ಲಕ್ಷ್ಮಿ ಸ್ವಾಭಿಮಾನಕ್ಕೆ ಬೆದರಿ ಮನೆಯ ಮುಂದಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೋಗಿ ಪೊಲೀಸ್ ಠಾಣೆಯಲ್ಲಿಬಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.