ಯಾದಗಿರಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪುತ್ರ ಶರಣಗೌಡ ಕಂದಕೂರ ಸ್ಪರ್ಧಿಸಲಿದ್ದಾರೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು. ಜೆಡಿಎಸ್ ಯುವನಾಯಕ ಶರಣಗೌಡ ಕಂದಕೂರ ಯಾದಗಿರಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಇದೆ. ಈ ಕುರಿತು ಸ್ವಷ್ಟೀಕರಣ ನೀಡಿ ಎಂದು ಶಾಸಕರಿಗೆ ಸುದ್ದಿಗಾರರು ಪ್ರಶ್ನಿಸಿದಾಗ, ನನ್ನ ಪುತ್ರ ಶರಣಗೌಡ ಕಂದಕೂರ ಯಾದಗಿರಿ ಮತಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿ ಸುಳ್ಳು. ನನ್ನ ಆರೋಗ್ಯ ಹಿತ ದೃಷ್ಟಿಯಿಂದ ಹಾಗೂ ಗುರುಮಠಕಲ್ ಮತಕ್ಷೇತ್ರದ ಅಭಿಮಾನ ಬಳಗಕ್ಕಾಗಿ ಗುರುಮಠಕಲ್ ಮತಕ್ಷೇತ್ರದಿಂದಲೇ ಸ್ಪರ್ಧಿಸುವರು, ಈ ಬಗ್ಗೆ ಸತ್ಯವನ್ನೇ ಹೇಳುತ್ತಿದ್ದೇನೆ ಎಂದಿದ್ದಾರೆ.
ಶರಣಗೌಡ ಕಂದಕೂರ ಗುರುಮಠಕಲ್ ಮತಕ್ಷೇತ್ರ ಅಭಿವೃದ್ಧಿ ಮಾಡಲು ಪಣತೋಟ್ಟಿದ್ದಾನೆ. ಇದಕ್ಕಾಗಿಯೇ ಹುಚ್ಚು ಹಿಡಿದು ಪ್ರತಿ ಗುರುವಾರ ಪಟ್ಟಣದ ನಿವಾಸದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾನೆ. ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಜನರಿಂದಲೇ ಕೇಳಿಕೊಂಡು ತಕ್ಷಣ ನಿವಾರಣೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಉತ್ತಮ ನಾಯಕನಾಗಿ ಈ ಕ್ಷೇತ್ರದ ಮತದಾರರು ಅವರಿಗೆ ಆಶೀರ್ವಾದ ನೀಡುತ್ತಾರೆ ಎಂಬ ಭರವಸೆ ಇದೆ ಎಂದರು.
ಶರಣಗೌಡ ಕಂದಕೂರ ಅವರು ಬೇರೆ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿದ ಶಾಸಕರು, ರಾಜಕೀಯದಲ್ಲಿ ಏನುಬೇಕಾದರೂ ಸಂಭವಿಸಬಹುದು. ಆದರೆ, ನಾವು ಜೆಡಿಎಸ್ ಪಕ್ಷದಲ್ಲಿಯೇ ಉಳಿಯುತ್ತೇವೆ. ದೇವೇಗೌಡರ ಕುಟುಂಬಕ್ಕೆ ಆತ್ಮೀಯರಾಗಿದ್ದೇವೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಉಗ್ರ ಯಾಸಿನ್ ಮಲಿಕ್ಗೆ ಜೀವಾವಧಿ ಶಿಕ್ಷೆ, ₹10 ಲಕ್ಷ ದಂಡ: ದೆಹಲಿ ಎನ್ಐಎ ಕೋರ್ಟ್ನಿಂದ ಮಹತ್ವದ ತೀರ್ಪು